ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿ:ಗೋವರ್ಧನ ಹೆಗ್ಡೆಪ್ರಾಯ:45ವರ್ಷತಂದೆ: ಕಮಲಾಕ್ಷ ಹೆಗ್ಡೆ, ವಾಸ:ಆರ್ಯ ದುರ್ಗಾ ಮನೆ, ಕಪ್ಪೆಟ್ಟು, ಗರಡಿರೋಡ್ ಕಿದಿಯೂರು ಗ್ರಾಮ ಇವರು ತನ್ನ ಬಾಬ್ತು ಸ್ಕೂಟಿ ನಂಬ್ರ KA 20 ET 3378 ನೇದರಲ್ಲಿ  ತನ್ನ ಹೆಂಡತಿ ಚಂದ್ರಿಕಾ ಹೆಗ್ಡೆ (38) ಹಾಗೂ ಮಗ ಆರ್ಯನ್ ಹೆಗ್ಡೆ (3) ಎಂಬರನ್ನು ಹಿಂಬದಿ ಸಹ ಸವಾರರನ್ನಾಗಿ ಕೂರಿಸಿಕೊಂಡು ಅಂಬಲಪಾಡಿ ಕಡೆಯಿಂದ ನಿಟ್ಟೂರು ಕಡೆಗೆ ರಾ.ಹೆ 66 ರ ರಸ್ತೆಯ ಎಡಬದಿಯಲ್ಲಿ ಸವಾರಿ ಮಾಡಿಕೊಂಡು ಬರುತ್ತಿರುವಾಗ ಸಂಜೆ ಸಮಯ ಸುಮಾರು 7:00 ಗಂಟೆಗೆ ಅಂಬಲಪಾಡಿ ಗ್ರಾಮದ ಕರಾವಳಿ ಬಳಿ ಇರುವ ಹಳೆ ಫಾರೆಸ್ಟ್ ಕಛೇರಿ ಬಳಿ ತಲುಪುವಾಗ KA05MH5977ನೇ ಕಾರು ಚಾಲಕ ಶರಣಯ್ಯ ರವರು ತನ್ನ ಕಾರನ್ನು ದುಡುಕುತನ ಮತ್ತು ನಿರ್ಲಕ್ಷತದಿಂದ ಅಂಬಲಪಾಡಿ ಕಡೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರ್ ನ್ನು ಓವರ್ ಟೆಕ್ ಮಾಡಿ ಯಾವುದೇ ಸೂಚನೆ ನೀಡದೇ ಒಮ್ಮೆಲೇ ಎಡಕ್ಕೆ ತಿರುಗಿಸಿ ಸ್ಕೂಟರಿಗೆ ಡಿಕ್ಕಿ ಹೊಡೆದ  ಪರಿಣಾಮ  ಪಿರ್ಯಾದುದಾರರು ಹಾಗೂ ಹೆಂಡತಿ ಚಂದ್ರಿಕಾ ಹೆಗ್ಡೆ (38) ಹಾಗೂ ಮಗ ಆರ್ಯನ್ ಹೆಗ್ಡೆ (3) ಸ್ಕೂಟರ್ ಸಮೇತ ರಸ್ತೆಗೆ ಬಿದ್ದು,  ಪಿರ್ಯಾದಿದಾರರ   ಕಾಲಿಗೆ ಗುದ್ದಿದ್ದ ಒಳನೋವು ಹಾಗೂ ಕೈಗಳಿಗೆ ತರಚಿದ ಗಾಯ ಸದ್ರಿಯವರ ಮಗ ಆರ್ಯನ್ ಹೆಗ್ಡೆಗೆ ಹಣೆಗೆ, ಮೂಗಿಗೆ ಕೈ ಕಾಲುಗಳಿಗೆ ತರಚಿದ ಗಾಯ ಮತ್ತು ಚಂದ್ರಿಕಾ ಹೆಗ್ಡೆರವರಿಗೆ ತಲೆಗೆ ಗಂಭೀರ ಸ್ವರೂಪದ ಗಾಯವಾಗಿ ಹೈಟೆಕ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ . ಈ ಬಗ್ಗೆಉಡುಪಿ ಸಂಚಾರ ಠಾಣೆ ಅಪರಾಧ ಕ್ರಮಾಂಕ: 03/2023 ಕಲಂ: 279, 337 338  ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಗಂಗೊಳ್ಳಿ: ಪಿರ್ಯಾದಿ:ಭಾಸ್ಕರ ಶೆಟ್ಟಿ ಪ್ರಾಯ 32 ವರ್ಷ ತಂದೆ: ಆನಂದ ಶೆಟ್ಟಿ ವಾಸ: ಹುಂತನಮಕ್ಕಿ ಆಲೂರು ಅಂಚೆ ಮತ್ತು ಗ್ರಾಮ ಇವರು ದಿನಾಂಕ: 18/01/2023 ರಂದು ಮನೆಗೆ ಸಾಮಾನು ತರುವರೇ ಮುಳ್ಳಿಕಟ್ಟೆಗೆ ಬಂದಿದ್ದು ವಾಪಾಸು ಮನೆಗೆ ತಮ್ಮ ಮೋಟಾರ್‌ ಸೈಕಲ್ಲಿನಲ್ಲಿ ಮುಳ್ಳಿಕಟ್ಟೆಯಿಂದ ಕಟ್ಟಿನಮಕ್ಕಿಯಾಗಿ ಕಟ್ಟಿನಮಕ್ಕಿ-ನೂಜಾಡಿ ರಸ್ತೆಯಲ್ಲಿ ಹೋಗುತ್ತಿರುವಾಗ ಸಮಯ ಸುಮಾರು ಬೆಳಗ್ಗೆ 08-30 ಗಂಟೆಗೆ ಹಕ್ಲಾಡಿ ಗ್ರಾಮದ ಭಾಸ್ಕರಶೆಟ್ಟಿಯವರ ಮನೆಯ ಬಳಿ ತಲುಪುವಾಗ  ಪಿರ್ಯಾದುದಾರರ ಎದುರಿನಿಂದ ಅಂದರೆ ಕಟ್ಟಿನಮಕ್ಕಿ ಕಡೆಯಿಂದ ನೂಜಾಡಿ ಕಡೆಗೆ ಓರ್ವ ಮೋಟಾರ್‌ ಸೈಕಲ್‌ ಸವಾರನು ಆತನ ಬಾಬ್ತು ಮೋಟಾರ್‌ ಸೈಕಲ್‌ ನಂ KA-19 Y-5611 ನೇದರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ನೂಜಾಡಿ ಕಡೆಯಿಂದ ಕಟ್ಟಿನಮಕ್ಕಿ ಕಡೆಗೆ ಒಂದು ಜೆಸಿಬಿ ಚಾಲಕ ಉದಯ ಶೆಟ್ಟಿ ಎಂಬುವವರು ಆತನ ಬಾಬ್ತು KA-20 MC-4169 ನೇ ಜೆಸಿಬಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ರಸ್ತೆಯ ತೀರಾ ಬಲಭಾಗಕ್ಕೆ ಬಂದು ಪಿರ್ಯಾದಿದಾರರ ಎದುರು ಹೋಗುತ್ತಿದ್ದ ಮೋಟಾರ್‌ ಸೈಕಲ್‌ ಗೆ  ಢಿಕ್ಕಿ ಹೊಡೆದಿದ್ದು ಆಗ ಮೋಟಾರ್‌ ಸೈಕಲ್‌ ಸವಾರ ರಸ್ತೆಗೆ  ಬಿದ್ದ ಪರಿಣಾಮ ಮೋಟಾರ್‌ ಸೈಕಲ್‌ ಸವಾರ ಮನೋಜ ಶೆಟ್ಟಿ ಎಂಬುವವರ ಎಡಕಾಲಿಗೆ ತೀವ್ರ ಸ್ವರೂಪದ ಒಳಜಖಂ ಹಾಗೂ ತಲೆಗೆ, ಮುಖಕ್ಕೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ  07/2023 ಕಲಂ: 279, 338 IPC   ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಗಂಗೊಳ್ಳಿ:ಪಿರ್ಯಾದಿ: ದಿನೇಶ ಪ್ರಾಯ 24 ವರ್ಷ ತಂದೆ: ಸೂರ ಪೂಜಾರಿ ವಾಸ: ಪಡುಕೋಣೆ ನಾಡಾ ಗ್ರಾಮ ಬೈಂದೂರು ಇವರು ದಿನಾಂಕ: 19/01/2023 ರಂದು ಕಲಸದ ನಿಮಿತ್ತ ಮರವಂತೆ ಗ್ರಾಮದ ಮರವಂತೆ ಬೀಚ್‌ ಬಳಿ ಬಂದು ಸಮಯ ಸುಮಾರು 07-45 ಗಂಟೆಗೆ ಮೂತ್ರ ವಿಸರ್ಜನೆ ಬಗ್ಗೆ ಸಮುದ್ರ ತೀರಕ್ಕೆ ಹೋಗಿದ್ದು ಆಗ ಸಮುದ್ರ ತೀರದಲ್ಲಿರುವ  ಚಾರ್ಮಕ್ಕಿ ನಾರಾಯಣ ಶೆಟ್ಟಿಯವರ ಜಾಗದ ಬಳಿ ಇರುವ ಕಬ್ಬಿಣದ ಶೀಟ್‌ನ ಮಾಡಿನ ಒಳಗೆ ಒಂದು ಮೃತದೇಹವು ಕುತ್ತಿಗೆಗೆ ನೇಣು ಬಿಗಿದ ಸ್ಥಿತಿಯಲ್ಲಿದ್ದು ಹೋಗಿ ನೋಡಲಾಗಿ ಸುಮಾರು 60-65 ವರ್ಷ ಗಂಡಸು ಆಗಿದ್ದು ಆತನು ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ:18/01/2023 ರಂದು ರಾತ್ರಿ 09-00 ಗಂಟೆಯಿಂದ ಈ ದಿನ ದಿನಾಂಕ:19/01/2023ರ ಬೆಳಗ್ಗೆ 07-45 ಗಂಟೆಯ ಮಧ್ಯಾವಧಿಯಲ್ಲಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆಗಂಗೊಳ್ಳಿ ಠಾಣಾ ಯು.ಡಿ.ಆರ್‌ ನಂಬ್ರ 01/2023ಕಲಂ:174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ. 
  • ಅಜೆಕಾರು: ಪಿರ್ಯಾದಿ:ಕರುಣಾಕರ ಪೂಜಾರಿ (34)  ತಂದೆ : ಕರಿಯ ಪೂಜಾರಿವಾಸ: ಬೈತ್ರಬೈಲು ಜಾರ್ಕಳ-ಮುಂಡ್ಲಿ ಗ್ರಾಮ ಇವರ ಭಾವನಾದ ಜಯ ಪೂಜಾರಿ (48) ರವರು ಜಾರ್ಕಳ-ಮುಂಡ್ಲಿಯ ನಾರಾಯಣ ಗುರು ಕಾಲೋನಿಯಲ್ಲಿ ವಾಸವಾಗಿದ್ದು ದಿನಾಂಕ: 18/01/2023 ರಂದು ಬೆಳಿಗ್ಗೆ 11:15 ಗಂಟೆಗೆ ಮನೆಯಿಂದ ಅಂಗಡಿಗೆ ಹೋಗಿ ವಿಳ್ಯದೆಲೆ ಖರೀದಿಸಿಕೊಂಡು ಬರುತ್ತೇನೆಂದು ಹೇಳಿ ಹೋದವರು ವಾಪಾಸ್‌ ಮಧ್ಯಾಹ್ನ 2:30 ರ ತನಕ ಬರಲಿಲ್ಲವೆಂದು ಪಿರ್ಯಾದಿದಾರರ ಅಕ್ಕ ರಮಣಿರವರು ಪೋನ್‌ ಮಾಡಿ ತಿಳಿಸಿದ್ದು ಪಿರ್ಯಾದಿದಾರರು ಅವರೊಂದಿಗೆ ಸೇರಿ ಹುಡುಕಾಡಿದಾಗ ದಿನಾಂಕ: 19/01/2023 ರಂದು ಬೆಳಿಗ್ಗೆ ಸುಮಾರು 11:10 ಗಂಟೆಗೆ ಬೆಳ್ಸಾರ್‌ ಬೆಟ್ಟು ನರ್ಸರಿ ಎಂಬಲ್ಲಿ ಕುಂಟಾಲ್‌ ಕಾಡು ಜಾತಿಯ ಮರಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ನೇತಾಡುತ್ತಿರುವುದು ಕಂಡು ನೋಡಲಾಗಿ ಮೃತ ಪಟ್ಟಿದ್ದರು. ಇವರು ವಿಪರೀತ ಸಾರಾಯಿ ಕುಡಿಯುವ ಅಭ್ಯಾಸವಿದ್ದು ಕಳೆದು ಏಳು ತಿಂಗಳಿಂದ ಸರಾಯಿ ಕುಡಿಯುವುದನ್ನು ಬಿಟ್ಟಿದ್ದರಿಂದ ಮಾನಸಿಕವಾಗಿ ನೊಂದು ದಿನಾಂಕ: 18/01/2023 ರಂಧು ಬೆಳಿಗ್ಗೆ 11:15 ರಿಂದ ದಿನಾಂಕ; 19/01/2023 ರಂದು 11:10 ರ ಮಧ್ಯಾವಾದಿಯಲ್ಲಿ ಬೆಳ್ಸಾರ್‌ ಬೆಟ್ಟು ನರ್ಸರಿ ಎಂಬಲ್ಲಿ ಕುಂಟಾಲ್‌ ಕಾಡು ಜಾತಿಯ ಮರಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿದೆ. ಈ ಬಗ್ಗೆ ಅಜೆಕಾರು ಠಾಣಾ  ಯು.ಡಿ.ಆರ್‌ ನಂಬ್ರ: 04/2023 U/s 174 .ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ. 
  • ಕಾರ್ಕಳ: ಪಿರ್ಯಾದಿ: ಜಗದೀಶ್ ಪ್ರಾಯ: 60  ವರ್ಷ, ತಂದೆ: ಕೃಷ್ಣಪ್ಪ ವಾಸ: ಆರ್ ಎಸ್ ನಿಲಯ, ರಾಘವೇಂದ್ರ ಮಠದ ಬಳಿ ತೆಳ್ಳಾರ್ ರಸ್ತೆ, ಕಾರ್ಕಳ ಕಸಬಾ ಗ್ರಾಮ ದಾರರ ಮಗಳು ಪ್ರೀತಿಕಾ ಪ್ರಾಯ: 34 ವರ್ಷ  ಈಕೆಯು ಸುಮಾರು 7 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಬೆಂಗಳೂರಿನ ಸ್ಪಂದನಾ ಆಸ್ಪತ್ರೆ, ಉಡುಪಿಯ ಬಾಳಿಗಾ ಆಸ್ಪತ್ರೆ ಹಾಗೂ ಕಾರ್ಕಳ ಸರಕಾರಿ ಆಸ್ಪತ್ರೆಯಿಂದ ಔಷಧಿ ಪಡೆಯುತ್ತಿದ್ದರೂ ಗುಣಮುಖವಾಗದೇ ಇದ್ದು ಮನೆಯಲ್ಲಿ ಎಲ್ಲರಿಗೂ ತೊಂದರೆ ನೀಡುತ್ತಿದ್ದು ಈ ಬಗ್ಗೆ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಲು ಇರುವುದ ರಿಂದ ಈಕೆಯನ್ನು ದಿನಾಂಕ 14.12.2022 ರಂದು ಕಾರ್ಕಳ ಜರಿಗುಡ್ಡೆಯಲ್ಲಿರುವ ಸುರಕ್ಷಾ ಆಶ್ರಮದಲ್ಲಿ ಸೇರಿಸಿದ್ದು,  ಮಾನಸಿಕ ಕಾಯಿಲೆ ಹೆಚ್ಚಾಗಿರುವುದರಿಂದ ಮನನೊಂದು ದಿನಾಂಕ:  19.01.2023  ರಂದು ಬೆಳಗ್ಗೆ 02:00 ಗಂಟೆಯಿಂದ 02.40 ಗಂಟೆಯ ಮಧ್ಯಾವಧಿಯಲ್ಲಿ ಕಾರ್ಕಳ ತಾಲೂಕು ಕಸಬಾ ಗ್ರಾಮದ ಜರಿಗಡ್ಡೆ  ಎಂಬಲ್ಲಿರುವ ಸುರಕ್ಷಾ ಆಶ್ರಮದ ಒಳಗೆ ಇರುವ ಟಾಯ್ಲೆಟ್‌ ಬಳಿ ಚೂಡಿದಾರ್ ಶಾಲಿನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆಕಾರ್ಕಳ ನಗರ ಪೊಲೀಸ್  ಠಾಣೆ ಯುಡಿಆರ್‌ 02/2023ಕಲಂ ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ. 

ಇತ್ತೀಚಿನ ನವೀಕರಣ​ : 19-01-2023 05:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080