ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ಉಮೇಶ (40), ತಂದೆ: ಗುಂಡು ನಾಯ್ಕ, ವಾಸ: ಮಾತೃಶ್ರೀ, ಹೇರಾಡಿ ಗ್ರಾಮ, ಬ್ರಹ್ಮಾವರ, ಉಡುಪಿ ಇವರು ದಿನಾಂಕ 17/01/2021 ರಂದು ತನ್ನ ಫ್ಯಾಷನ್‌ ‌ಮೋಟಾರ್‌ ಸೈಕಲ್‌ ನಂಬ್ರ KA-20-EH-8060 ನೇದರಲ್ಲಿ ರಜನಿಕಾಂತ್‌ರವರನ್ನು ಹಿಂಬದಿ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಮನೆಯಿಂದ ಹೊರಟು ಬಾರ್ಕೂರು ಸರಕಾರಿ ಆಸ್ಪತ್ರೆಯ ಪಕ್ಕದ ರಸ್ತೆಯಲ್ಲಿ ಹೋಗಿ ಹೊಸಾಳ ಗ್ರಾಮದ ಹೊಸಾಳ ಗರಡಿ ಕ್ರಾಸ್‌ ಬಳಿ ಬ್ರಹ್ಮಾವರ ಸಾಯಿಬ್ರಕಟ್ಟೆ ಮುಖ್ಯ ರಸ್ತೆಯನ್ನು ದಾಟಲು ಮುಖ್ಯ ರಸ್ತೆಯ ಪೂರ್ವ ಬದಿಯಲ್ಲಿ ಮಧ್ಯಾಹ್ನ 1:00 ಗಂಟೆಗೆ ನಿಂತುಕೊಂಡಿರುವಾಗ ಹೇರಾಡಿ ಕಡೆಯಿಂದ KA-20-EQ-8513  ಮೋಟಾರ್‌ಸೈಕಲ್‌ನ್ನು ಅದರ ಸವಾರ ಪ್ರಶಾಂತ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ದಾಟಲು ನಿಂತಿದ್ದ ಪಿರ್ಯಾದಿದಾರರ ಮೋಟಾರ್‌ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಅಪಘಾತವೆಸಗಿದ ಮೋಟಾರ್‌ಸೈಕಲ್‌ ಸವಾರ ಮೋಟಾರ್‌ಸೈಕಲ್‌ ಸಮೇತ ರಸ್ತೆಗೆ ಬಿದ್ದು, ಪಿರ್ಯಾದಿದಾರರ ಬಲಕಾಲಿನ ಪಾದದ ಗಂಟಿನಿಂದ ಮೇಲ್ಭಾಗಕ್ಕೆ ಒಳ ಜಖಂ ಉಂಟಾಗಿದ್ದು, ಪಿರ್ಯಾದಿದಾರರ ಮೋಟಾರ್‌ ಸೈಕಲ್‌‌ನ್ನಲ್ಲಿದ್ದ ಹಿಂಬದಿ ಸವಾರ ರಜನಿಕಾಂತ್‌‌ರವರಿಗೆ ತಲೆಯ ಹಿಂಭಾಗಕ್ಕೆ ತರಚಿದ ರಕ್ತಗಾಯವಾಗಿರುತ್ತದೆ. ಪಿರ್ಯಾದಿದಾರರು ತನಗಾದ ಗಾಯದ ಬಗ್ಗೆ ಬ್ರಹ್ಮಾವರದ ಮಹೇಶ್‌ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 11/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಕಾರ್ಕಳ: ಪಿರ್ಯಾದಿದಾರರಾದ ಶ್ರೀ ಮೊಹಮ್ಮದ್ ರಮೀಝ್ (27), ತಂದೆ: ಅಬ್ದುಲ್ ರಝಾಕ್, ವಾಸ ಮೌಸೀನ್‌‌ರವರ ಬಾಡಿಗೆ ಮನೆ, ಬಸದಿ ರಸ್ತೆ, ಹಿರಿಯಂಗಡಿ, ಕಸಬಾ ಗ್ರಾಮ  ಕಾರ್ಕಳ ತಾಲೂಕು ಇವರು ಕಾರ್ಕಳ ಕಸಬಾದ ಸಾಲ್ಮರ ಎಂಬಲ್ಲಿ ನ್ಯಾಷನಲ್ ರೆಫ್ರಿಜರೇಶನ್  ಅಂಗಡಿಯಲ್ಲಿ A.C. ಮೆಕ್ಯಾನಿಕ್ ಕೆಲಸ ಮಾಡಿಕೊಂಡಿದ್ದು ದಿನಾಂಕ 17/01/2022 ರಂದು ಬೆಳಿಗ್ಗೆ ಮನೆಯಿಂದ ತನ್ನ  ಯಮಹಾ FZ ಬೈಕ್  KA-20-EP-1035 ರಲ್ಲಿ  ಕೆಲಸಕ್ಕೆ ಬಂದು ನಂತರ ಮಧ್ಯಾಹ್ನ 13:00 ಗಂಟೆಗೆ ಬೈಕನ್ನು ಅಂಗಡಿಯ ಮುಂದೆ ನಿಲ್ಲಿಸಿ ಹ್ಯಾಂಡ್ ಲಾಕ್ ಮಾಡಿ ಮಧ್ಯಾಹ್ನ 13:30 ಗಂಟೆಗೆ ತನ್ನ ಬೈಕ್‌ನಲ್ಲಿ ಮೈಲೇಜ್ ಕಡಿಮೆ ಇರುವ ಕಾರಣ ಮಾಲಿಕರಾದ  ಜಾಹಿರ್‌ರವರ ಮೋಟಾರ್ ಸೈಕಲ್‌ನಲ್ಲಿ ಕೆಲಸದ ಬಗ್ಗೆ ಮಂಗಳೂರಿಗೆ ಹೋಗಿ  ರಾತ್ರಿಯಾದ ಕಾರಣ ಮಂಗಳೂರಿನಲ್ಲಿ ಉಳಿದು ದಿನಾಂಕ 18/01/2022 ರಂದು ಬೆಳಿಗ್ಗೆ 10:00 ಗಂಟೆಗೆ ಬಂದು ನೋಡಿದಾಗ ಬೈಕ್ ನಿಲ್ಲಿಸಿದ  ಸ್ಥಳದಲ್ಲಿ ಇಲ್ಲದೇ  ಇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಮೋಟಾರ್ ಸೈಕಲ್‌ನ ಮೌಲ್ಯ ರೂಪಾಯಿ  60,000/ ಆಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 12/2022  ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಗಂಡಸು ಕಾಣೆ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ತಸ್ಲೀಮ್‌ (39), ಗಂಡ: ಮಹಮ್ಮದ್‌ ಇಕ್ಬಾಲ್‌, ವಾಸ: ರಹಮಾನಿಯಾ ಜುಮ್ಮಾ ಮಸೀದಿ ಎದುರು, ದೊಡ್ಡಣಗುಡ್ಡೆ, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಇವರ ಗಂಡ ಮಹಮ್ಮದ್‌ ಇಕ್ಬಾಲ್‌ (44) ಎಂಬುವವರು ದಿನಾಂಕ 17/01/2022 ರಂದು ಬೆಳಿಗ್ಗೆ 11:30 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ದೊಡ್ಡಣಗುಡ್ಡೆ ರಹಮಾನಿಯಾ ಜುಮ್ಮಾ ಮಸೀದಿ ಎದುರು ತಾನು ವಾಸ್ತವ್ಯವಿರುವ ಮನೆಯಿಂದ ಅವರ ಅಣ್ಣನ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವರು  ವಾಪಾಸು ಬಾರದೇ ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 10/2022 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಮಣಿಪಾಲ: ಪಿರ್ಯಾದಿದಾರರಾದ ಕಿರಣ ಮಹಾದೇವ ಬೋರಕರ, ವಾಸ: K/9/ ವೆಸ್ಟ್  ಕೈಗಾ ಟಾನಶಿಪ್, ಯಲ್ಲಾಪುರ – 581400, ಕಾರಾವಾರ , ಉತ್ತರ ಕನ್ನಡ ಇವರು ದಿನಾಂಕ 18/01/2022 ರಂದು ಮತ್ಸ್ಯಗಂಧ ಮಂಗಳೂರು ಲೋಕಮಾನ್ಯ ತಿಲಕ್ ರೈಲಿನಲ್ಲಿ ಡಿ 2, ಸೀಟ್ ನಂಬ್ರ 25 ರಲ್ಲಿ ಕುಳಿತುಕೊಂಡು 14:15 ಗಂಟೆಗೆ ಮಂಗಳೂರಿನಿಂದ ಹೊರಟು ಸುರತ್ಕಲ್ ದಾಟಿದಾಗ ರಿಸರ್ವೆಷನ್ ಸೀಟ್ ವಿಚಾರದಲ್ಲಿ ಚಾಸ್ಟನ್ ಇನಾಸ್ ಬರೆಟ್ಟೊ ಎಂಬಾತನು ಪಿರ್ಯಾದಿದರರೊಂದಿಗೆ ತಕರಾರು ತಗೆದು ಅವಾಚ್ಯ ಶಬ್ದಗಳಿಂದ ಬೈದು  ಬೆದರಿಕೆ ಹಾಕಿದ್ದು ಸಂಜೆ 04:30 ಗಂಟೆಗೆ ರೈಲು ಉಡುಪಿ ಪ್ಲಾಟ್ ಪಾರಂ 1 ರಲ್ಲಿ ನಿಂತಾಗ ಪಿರ್ಯಾದಿದರರು ರೈಲ್ವೇ ಪೊಲೀಸ್ ರಿಗೆ ದೂರು ಕೊಡುತ್ತೇನೆಂದು ರೈಲಿನಿಂದ ಇಳಿದು ಹೊರಟಾಗ ಆಪಾದಿತನು ಪಿರ್ಯಾದಿದರರನ್ನು ಅಡ್ಡಗಟ್ಟಿ ಕೈಯಿಂದ ಹಾಗೂ ಕಾಲಿನಿಂದ ಹಲ್ಲೆ ನಡೆಸಿರುವುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 07/2022 ಕಲಂ : 341, 323, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     

ಇತ್ತೀಚಿನ ನವೀಕರಣ​ : 19-01-2022 10:10 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080