ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಪಡುಬಿದ್ರಿ: ಪಿರ್ಯಾದಿದಾರರಾದ ನಾರಾಯಣ ಸಿ ಶೆಟ್ಟಿ (57), ತಂದೆ: ದಿ. ಚೆನ್ನಪ್ಪ ಶೆಟ್ಟಿ, ವಾಸ: ನವೀನ್ ನಿವಾಸ, ಕಾಡಿಪಟ್ನ ರಸ್ತೆ, ಬೋರ್ಡ ಶಾಲೆಯ ಬಳಿ, ನಡ್ಸಾಲು  ಗ್ರಾಮ, ಪಡುಬಿದ್ರಿ  ಕಾಪು ತಾಲೂಕು ಇವರು ಪಡುಬಿದ್ರಿಯಲ್ಲಿ ಸೋನು ಡಾಬಾ ಎಂಬ ಹೆಸರಿನ ಡಾಬಾ ನಡೆಸಿಕೊಂಡಿದ್ದು ,ದಿನಾಂಕ 18/01/2022 ರಂದು ರಾತ್ರಿ 11:00 ಗಂಟೆಗೆ ಡಾಬಾ ಬಂದ್ ಮಾಡಿ ಕ್ಯಾಶ್ ಕೌಂಟರ್‌ನಲ್ಲಿ ಕೂತ್ತಿದಾಗ 35 ವರ್ಷದ ವ್ಯಕ್ತಿಯೊಬ್ಬ ಬಂದು ಊಟ ಸಿಗುತ್ತದೆಯೇ ಎಂದು ಕೇಳಿದ್ದು, ಡಾಬಾ ಬಂದ್‌ ಆಗಿದ್ದು ಊಟ ಸಿಗುವುದಿಲ್ಲ ಎಂಬುದಾಗಿ ತಿಳಿದು ಆತನು ಹೊರಗೆ ಹೋಗಿ, ಡಾಬಾದ ಎದುರು ರಾಷ್ಟ್ರೀಯ ಹೆದ್ದಾರಿ-66 ರ ಉಡುಪಿ- ಮಂಗಳೂರು  ರಸ್ತೆಯ ಪೂರ್ವದ ಅಂಚಿನಲ್ಲಿ ನಿಂತಿರುವಾಗ ರಾತ್ರಿ 11:15 ಗಂಟೆಗೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ KA-22-C-2878 ನೇ ಟ್ಯಾಂಕರ್ ಲಾರಿಯನ್ನು ಅದರ ಚಾಲಕ ತನ್ವೀರ್ ಸೈಯದ್ ಅತೀ ವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಪೂರ್ವ ಬದಿಯ ಅಂಚಿನಲ್ಲಿ ನಿಂತಿದ್ದ  35 ವರ್ಷ ವಯಸ್ಸಿನ ಅಪರಿಚಿತ ಗಂಡಸಿಗೆ ಡಿಕ್ಕಿ ಹೊಡೆದು, ಅದರ ಚಾಲಕನು ಲಾರಿಯನ್ನು ನಿಲ್ಲಿಸದೇ ಮುಂದೆ ಹೋಗುತ್ತಿದ್ದವನ್ನು ಅಲ್ಲಿ ಸೇರಿದವರು ಹಿಂದಿನಿಂದ ಹೋಗಿ ಲಾರಿಯನ್ನು ನಿಲ್ಲಿಸಿರುತ್ತಾರೆ. ರಸ್ತೆಯ ಮೇಲೆ ಬಿದ್ದ ಅಪರಿಚಿತ ಗಂಡಸಿನ ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 06/2022 ಕಲಂ: 279,   304(A) ಐಪಿಸಿ. ಮತ್ತು 134 (ಎ)(ಬಿ) ಐಎಂವಿ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ಪಿರ್ಯಾದಿದಾರರಾದ ಸೋಮರಾಜ ಬಿ ಬೋವಿವಡ್ಡರ್‌‌‌(20) ತಂದೆ:ಬಸವರಾಜ್‌ ‌ಬೋವಿ ವಡ್ಡರ್‌‌‌‌, ವಾಸ:ಗಣೇಶನಗರ ಪುಟ್ಟನಮನೆ ಶಿರಸಿ, ಉತ್ತರಕನ್ನಡ ಇವರು ಹೇರೂರು ಗ್ರಾಮದ ರುಡ್‌‌ಸೆಟ್‌ ಕ್ರಾಸ್‌ ‌‌ಬಳಿ ಇರುವ ಶೆಡ್‌‌ನಲ್ಲಿ ವಾಸಮಾಡಿಕೊಂಡಿದ್ದು, ದಿನಾಂಕ 18/01/2022 ರಂದು ದಿನಸಿ ಸಾಮಾಗ್ರಿಗಳನ್ನು ತರಲು ತನ್ನ KA-31-EC-4294 ನೇ ಮೋಟಾರ್‌ಸೈಕಲಿನಲ್ಲಿ ಶೆಡ್‌‌ನಿಂದ ಹೊರಟು ರೂಮಿನಿಂದ ರಾಷ್ಟ್ರೀಯ ಹೆದ್ದಾರಿ 66ರ ಪಶ್ಚಿಮ ಬದಿಯಲ್ಲಿರುವ ದುರ್ಗಾ ಕಾಂಪ್ಲೆಕ್ಸ್‌‌‌‌‌‌‌‌ನಲ್ಲಿರುವ ಅಂಗಡಿಗೆ ಹೋಗಿ ಸಾಮಾನು ಖರೀದಿಸಿ ವಾಪಾಸು ರೂಮ್‌‌ ಕಡೆಗೆ ಬರಲು ಉಡುಪಿಯಿಂದ ಬ್ರಹ್ಮಾವರ ಕಡೆಗೆ ಬರುವ ರಸ್ತೆಯನ್ನು ದಾಟಿಕೊಂಡು ಬಂದು ಬ್ರಹ್ಮಾವರದಿಂದ ಉಡುಪಿ ಕಡೆಗೆ ಹೋಗುವ ರಸ್ತೆಯನ್ನು ದಾಟಲು ಬೈಕಾಡಿ ರುಡ್‌‌‌ಸೆಟ್‌‌ಕ್ರಾಸ್‌ ‌ಡಿವೈಡರ್‌ ಮಧ್ಯಭಾಗದಲ್ಲಿ ಮೋಟಾರ್‌ಸೈಕಲ್‌‌ನ್ನು ನಿಲ್ಲಿಸಿ ರಸ್ತೆ ದಾಟಲು ಅಣಿಯಾಗುತ್ತಿರುವಾಗ ರಾತ್ರಿ 8:45 ಗಂಟೆಗೆ ಬ್ರಹ್ಮಾವರ ಕಡೆಯಿಂದ ಉಡುಪಿ ಕಡೆಗೆ ಆರೋಪಿ ಸಂದೀಪನು ತನ್ನ  KA-51-M-2114 ನೇ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್‌ಸೈಕಲ್‌‌ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರ್‌ಸೈಕಲ್‌ ಸಮೇತ ರಸ್ತೆಗೆ ಬಿದ್ದಿದ್ದು, ಅವರ ಎರಡು ಕಾಲುಗಳ ಮೊಣಗಂಟಿಗೆ ರಕ್ತಗಾಯವಾಗಿ ತಲೆಗೆ ಒಳ ಜಖಂ ಉಂಟಾಗಿ, ಮುಖ ಹಾಗೂ ಕೈಗಳಿಗೆ ತರಚಿದ ಗಾಯವಾಗಿರುತ್ತದೆ. ಪಿರ್ಯಾದಿದಾರರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 13/2022 ಕಲಂ: 279, 337  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಗಂಡಸು ಕಾಣೆ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ಶ್ರೀನಿವಾಸ (69), ತಂದೆ: ದಿ. ಅಣ್ಣಯ್ಯ ಸೇರ್ವೆಗಾರ್, ವಾಸ: ಕುದ್ರುಬೆಟ್ಟು ಅಂಚೆ, ಉಪ್ಪೂರು ಗ್ರಾಮ, ಬ್ರಹ್ಮಾವರ ಇವರೊಂದಿಗೆ ವಾಸವಾಗಿರುವ ಅವರ 3 ನೇ ತಮ್ಮ ಕೃಷ್ಣಮೂರ್ತಿ ಸೇರ್ವೆಗಾರ್ (58) ಎಂಬುವವರು ದಿನಾಂಕ 10/12/2021 ರಂದು  ಬೆಳಿಗ್ಗೆ 10:00 ಗಂಟೆಗೆ ಅವರ ಅಕ್ಕನ ಮನೆಯಾದ ಕಾರ್ಕಳ ತಾಲೂಕಿನ ಅಂಡಾರು ಎಂಬಲ್ಲಿಗೆ ಹೋಗುತ್ತೇನೆಂದು ಹೇಳಿ ಹೋದವರು ಅಕ್ಕನ ಮನೆಗೆ ಹೋಗದೇ ವಾಪಾಸ್ಸು ಮನೆಗೂ ಬಂದಿರುವುದಿಲ್ಲ. ಅವರಿಗೆ ಮಾನಸಿಕ ಅಸ್ವಸ್ಥತೆಯ ಖಾಯಿಲೆ ಇದ್ದು, ಈ ಬಗ್ಗೆ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಅವರು ಹಲವಾರು ಬಾರಿ ಸಂಬಂಧಿಕರ ಮನೆಗಳಾದ ಉಡುಪಿ, ಕಾರ್ಕಳ, ಭಧ್ರಾವತಿಗೆಲ್ಲ ಹೋಗುವುದು ಬರುವುದು ಮಾಡುತ್ತಿದ್ದು ಅಲ್ಲಗೆ ಹೋಗಿರಬಹುದು ಎಂದು ಭಾವಿಸಿ ಇದೂವರೆಗೂ  ಮನೆಗೆ ಬಾರದೇ ಇದ್ದಾಗ ಹಾಗೆಯೇ ಸಂಬಂಧಿಕರ ಮನೆಗಳಲ್ಲಿ ವಿಚಾರಿಸಿದ್ದಲ್ಲಿ  ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 12/2022 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಲ್ಪೆ: ಪಿರ್ಯಾದಿದಾರರಾದ ಸುಮತಿ (41), ಗಂಡ: ನಾಗೇಶ, ವಾಸ: ಪಿಡಬ್ಯುಡಿ ಕ್ವಾರ್ಟಸ್ ಅಜ್ಜರಕಾಡು ಉಡುಪಿ ಇವರ ಗಂಡ ನಾಗೇಶ(47  ರವರು ಕನ್ನರಪಾಡಿಯಲ್ಲಿ  ಗ್ಯಾರೇಜ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದು  ಎಂದಿನಂತೆ ದಿನಾಂಕ 18/01/2021 ರಂದು ಬೆಳಿಗ್ಗೆ 09:00 ಗಂಟೆಗೆ ಗ್ಯಾರೇಜ್ ಗೆ ಕೆಲಸಕ್ಕೆ ಹೋಗಿರುತ್ತಾರೆ , ರಾತ್ರಿಯಾದರೂ ಮನೆಗೆ ಬಾರದೆ ಇದ್ದುದರಿಂದ ಗ್ಯಾರೇಜ್ ಹುಡುಗರಿಗೆ ಪಿರ್ಯಾದಿದಾರರು ಕರೆ ಮಾಡಿ ವಿಚಾರಿಸಿದಾಗ ಬೆಳಿಗ್ಗೆ 11:00 ಗಂಟೆಯ ತನಕ ಗ್ಯಾರೇಜ್ ನಲ್ಲಿ ಇದ್ದು ನಂತರ  ಹೋಗಿರುತ್ತಾರೆ, ನಂತರ ಗ್ಯಾರೇಜ್ ನ ಹುಡುಗರು  ಗ್ಯಾರೇಜ್ ಗೆ ಬಂದು ನೋಡಿದಾಗ ಗ್ಯಾರೇಜ್ ನಲ್ಲಿ ನಾಗೇಶ ರವರ ಮೊಬೈಲ್ ಇದ್ದು  ಅದರ ಮೇಲೆ ಚೀಟಿ ಇದ್ದು ಚೀಟಿಯಲ್ಲಿ ಮೊಬೈಲ್ ಪೋನ್ ಲಾಕ್ ಹಾಗೂ  ನಾನು ಒಂದು ವಾರ ಇರುವುದಿಲ್ಲ ಯಾರೂ ಕೇಳಿದರೂ  ಗೊತ್ತಿಲ್ಲ  ಎಂದು ಹೇಳಿ ಬರೆದಿರುತ್ತದೆ, ಪಿರ್ಯಾದಿದಾರರು ಎಲ್ಲಾ  ಕಡೆ  ಸಂಬಂಧಿಕರ ಮನೆಯಲ್ಲಿ ವಿಚಾರಿಸಿದರೂ ಮಾಹಿತಿ   ಸಿಕ್ಕದೆ ಇದ್ದು , ಪಿರ್ಯಾಧಿದಾರರ ಗಂಡ  ನಾಗೇಶ ತನ್ನ  KA-20-MB-5349  ಬ್ರೀಜಾ ಕಾರಿನಲ್ಲಿ ಹೋಗಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 09/2022 ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

 • ಮಲ್ಪೆ: ಪಿರ್ಯಾದಿದಾರರಾದ ಶೇಖರ ಬಂಗೇರ( 60), ತಂದೆ: ಬಸವ ಮರಕಾಲ, ವಾಸ: ಶೇಷಾದ್ರಿ ನಿಲಯ ಪಾರಂಪಳ್ಳಿ ಗ್ರಾಮ, ಸಾಲಿಗ್ರಾಮ ಬ್ರಹ್ಮಾವರ ಇವರು  ಶರಾವತಿ ಹೆಸರಿನ ಬೋಟ್ ನ್ನು ನಡೆಸಿಕೊಂಡಿದ್ದು ಅದರಲ್ಲಿ  ಪಿರ್ಯಾದಿದಾರರನ್ನು ಸೇರಿ 5 ಜನ  ಕೆಲಸಗಾರರಿರುತ್ತಾರೆ ,  ದಿನಾಂಕ 18/01/2021 ರಂದು ಮಿನುಗಾರಿಕೆಗೆ ಹೋಗಲು ಎಲ್ಲಾ ರೀತಿಯ ತಯಾರಿ ನಡೆಸಿ ರಾತ್ರಿ 09:00 ಗಂಟೆಗೆ ಎಲ್ಲರೂ ಬೋಟಿನೊಳಗೆ ಮಲಗಿದ್ದು ದಿನಾಂಕ 19/01/2022 ರಂದು  ಮೀನುಗಾರಿಕೆ ಬಗ್ಗೆ ಹೊರಡಲು ಬೆಳಗಿನ ಜಾವ 2:30 ಗಂಟೆಗೆ  ನಾರಾಯಣ ತಿಂಗಳಾಯ(43)  ಇವರನ್ನು ಎಬ್ಬಿಸಲು ಹೋಗಿದ್ದು,  ಅವರು ಪ್ರತಿಕ್ರಿಯಿಸದೆ ಇದ್ದು  ಕೂಡಲೆ ಉಪಚರಿಸಿದ್ದು, ಮಲ್ಪೆ ಯೂನಿಯನ್  ಆಫೀಸ್ ನ  ನಾಗಾರಾಜ್ ರವರಿಗೆ  ತಿಳಿಸಿ ನಂತರ  ನಾರಾಯಣ ತಿಂಗಳಾಯ ರವರ ಮನೆಯವರಾದ  ಕೃಷ್ಣ  ತಿಂಗಳಾಯ ರವರಿಗೆ ತಿಳಿಸಿ ಅವರು ಬಂದರಿಗೆ ಬಂದಿದ್ದು , ಕೃಷ್ಣ ತಿಂಗಳಾಯರವರು  ಸೇರಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಪರೀಕ್ಷಿಸಿದ ವೈದ್ಯರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.  ಮೃತ ನಾರಾಯಣ ತಿಂಗಳಾಯವರಿಗೆ ದಮ್ಮ ಕಾಯಿಲೆ ಇದ್ದು ಅದೇ ಕಾರಣದಿಂದ ಅಥವಾ ಇನ್ಯಾವುದೋ ಕಾರಣದಿಂದ  ದಿನಾಂಕ-18/01/2022 ರಂದು ರಾತ್ರಿ 9:00 ಗಂಟೆಯಿಂದ ದಿನಾಂಕ: 19/01/2022 ರ ಬೆಳಗಿನ ಜಾವ 2:30  ಗಂಟೆಯ ಮಧ್ಯಾವದಿಯಲ್ಲಿ  ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 04/2022  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

 •  ಶಂಕರನಾರಾಯಣ : ದಿನಾಂಕ  18/01/2022  ರಂದು  18:45  ಗಂಟೆಗೆ ಆರೋಪಿ ರಂಜೀತ್  ಮೊಗವೀರ  ಕ್ರೋಡ  ಬೈಲ್ಲೂರು  ಶಂಕರನಾರಾಯಣ   ಗ್ರಾಮ  ಕುಂದಾಪುರ  ತಾಲೂಕು  ಎಂಬಾತ ಪಿರ್ಯಾದಿದಾರರಾದ ನಾರಾಯಣ ಮೊಗವೀರ (74), ತಂದೆ: ಕೊರಗ , ವಾಸ:ಶಾಂತ ನಿವಾಸ  ಕ್ರೋಡ  ಬೈಲ್ಲೂರು  ಶಂಕರನಾರಾಯಣ  ಗ್ರಾಮ  ಕುಂದಾಪುರ  ತಾಲೂಕು ಇವರ  ಮನೆಗೆ ಅಕ್ರಮ ಪ್ರವೇಶ  ಮಾಡಿ  ಅವಾಚ್ಯವಾಗಿ ಬೈದು  ಮರದ  ದೊಣ್ಣೆಯಿಂದ  ಎಡಕಣ್ಣಿನ ಹುಬ್ಬಿನ  ಬಳಿ  ಹಲ್ಲೆ ಮಾಡಿರುತ್ತಾನೆ, ಅಲ್ಲದೆ  ಈ   ಸಮಯ  ಜಗಳ ಬಿಡಿಸಲು ಬಂದ ಜಯರಾಮ ಮೊಗವೀರ  ಇವರಿಗೆ  ಸಹ ಎಡಕಿವಿಯ  ಬಳಿ  ಹಲ್ಲೆ ಮಾಡಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 09/2022  ಕಲಂ:   448, 324, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     

ಇತ್ತೀಚಿನ ನವೀಕರಣ​ : 19-01-2022 05:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080