ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಕಾರ್ಕಳ: ಪಿರ್ಯಾದಿದಾರರಾಧ ರಹೀಂ ಅಬ್ದುಲ್ ಸಲಾಂ, (48) ತಂದೆ ಅಬ್ದುಲ್  ಸಲಾಂ ವಾಸ ಆರ್‌ಎಸ್ ಮಂಜಿಲ್,  ಕೈಂದ್ರಬೆಟ್ಟು, ಮಿಯಾರು ಇವರು ದಿನಾಂಕ 16/12/2022 ರಂದು ಬೆಳಿಗ್ಗೆ ಮುಜಾಮೀಲ್‌ಎಂಬುವರು ಸವಾರಿ ಮಾಡುತ್ತಿರುವ KA-20 EY-1325 ನೇ ನಂಬ್ರದ ದ್ವಿಚಕ್ರ ವಾಹನದಲ್ಲಿ ಸಹ ಸವಾರನಾಗಿ ಮನೆಯಿಂದ ಹೊರಟು ಬೆಳಿಗ್ಗೆ 11:00 ಗಂಟೆಗೆ ಕಾರ್ಕಳ ಕಸಬಾ ಗ್ರಾಮದ ಪುಲ್ಕೇರಿ ಬೈಪಾಸ್‌ನ ಮಯೂರ ಹೋಟೆಲ್‌ಸಮೀಪ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಬದಿ ಮಣ್ಣು ರಸ್ತೆಯಲ್ಲಿ ನಿಲ್ಲಿಸಿದ್ದ KA-20 EY-1325 ನೇ ನಂಬ್ರದ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತುಕೊಂಡು ತನ್ನ ಪರಿಚಯದ ಅಲ್ವೀನ್‌ ಎಂಬುವರೊಂದಿಗೆ ಮಾತನಾಡುತ್ತಿರುವಾಗ KA-20 EH-0432 ನೇ ನಂಬ್ರದ ದ್ವಿಚಕ್ರ ವಾಹನವನ್ನು ಸವಾರ ಯೋಗೀಶರವರು ಬಜಗೋಳಿ ಕಡೆಯಿಂದ ಸವಾರಿ ಮಾಡಿಕೊಂಡು ಬಂದು ರಸ್ತೆಯ ಬಲ ಬದಿಗೆ ಹೋಗಲು ಡಾಮಾರು ರಸ್ತೆಯಲ್ಲಿ ನಿಲ್ಲಿಸಿಕೊಂಡಿರುವಾಗ KA-42 M-8270 ನೇ ನಂಬ್ರದ ಕಾರನ್ನು ಚಾಲಕ ಸೈಯದ್‌ ಅಬ್ರಾರ್‌ ಎಂಬಾತನು ಬಜಗೋಳಿ ಕಡೆಯಿಂದ ಪುಲ್ಕೇರಿ ಕಡೆಗೆ ಅತೀ ವೇಗವಾಗಿ ಮತ್ತು  ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಿಂತಿದ್ದ KA-20 EH-0432 ನೇ ನಂಬ್ರದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಕಾರನ್ನು ಬಲ ಬದಿಗೆ ಚಲಾಯಿಸಿ ಪಿರ್ಯಾದಿದಾರರು ಕುಳಿತುಕೊಂಡಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇವರ ಎಡಕಾಲಿನ ಮಣಿಗಂಟಿನ ಬಳಿ ಮೂಳೆ ಮುರಿತಗೊಂಡು ಎಡಕೈಗೆ ತರಚಿದ ಗಾಯವಾಗಿದ್ದು ಮುಜಾಮೀಲ್‌ನ ಎಡಕೈಗೆ ತರಚಿದ ಗಾಯವಾಗಿದ್ದು ರಹೀಂ ಅಬ್ದುಲ್ ಸಲಾಂ ರವರು ಚಿಕಿತ್ಸೆ ಬಗ್ಗೆ ಸ್ಪಂದನಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ  ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 153/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
 • ಪಡುಬಿದ್ರಿ: ದಿನಾಂಕ 16/12/2022 ರಂದು ಪಿರ್ಯಾದಿದಾರರಾದ ಉದಯ ಎಸ್‌ಕೋಟ್ಯಾನ್‌(49) ತಂದೆ: ದಿ. ಶ್ಯಾಮ ಕುಂದರ್‌ವಾಸ: ಚಿಂಗಪೂಜಾರಿ ಮನೆ, ಪಟೀಲ್‌ರಸ್ತೆ, ಪಣಿಯೂರು ಅಂಚೆ, ಬೆಳಪು ಗ್ರಾಮ, ಕಾಪು ತಾಲೂಕು, ಉಡುಪಿ ಇವರ ಅಣ್ಣ ಯಶೋಧರ ಶ್ಯಾಮಕುಂದರ್‌ ಹಾಗೂ ದೊಡ್ಡಮ್ಮನ ಮಗಳ ಮಗ ಸುಜಿತ್‌ ಕುಮಾರ್‌ಎಂಬವರು ಮುಕ್ಕ ಎಂಬಲ್ಲಿಗೆ ಮೆಹೆಂದಿ ಕಾರ್ಯಕ್ರಮಕ್ಕೆ ಹೋದವರು ವಾಪಸ್ಸು ಯಶೋಧರ ರವರ KA-20-ES-7817 ನೇ ಮೋಟಾರು ಸೈಕಲ್‌ನಲ್ಲಿ ಯಶೋಧರ ರವರು ಸವಾರ ಹಾಗೂ ಸುಜಿತ್‌ ಸಹಸವಾರರಾಗಿ ರಾಷ್ಟ್ರೀಯ ಹೆದ್ದಾರಿ-66 ರ ಮಂಗಳೂರು-ಉಡುಪಿ ಏಕಮುಖ ಸಂಚಾರ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ರಾತ್ರಿ 9:30 ಗಂಟೆ ಸುಮಾರಿಗೆ ಕಾಪು ತಾಲೂಕು ಹೆಜಮಾಡಿ ಗ್ರಾಮದ ಹೆಜಮಾಡಿ ನಾರಾಯಣಗುರು ಸಭಾಭವನ ಕ್ರಾಸ್‌ಎಂಬಲ್ಲಿ ತಲುಪುವಾಗ ಉಡುಪಿ-ಮಂಗಳೂರು ಏಕಮುಖ ಸಂಚಾರ ರಸ್ತೆಯಲ್ಲಿ ಉಡುಪಿ ಕಡೆಯಿಂದ KA-19-Z-0038 ನಂಬ್ರದ ಕಾರು ಚಾಲಕನು ಅತೀವೇಗವಾಗಿ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆಯನ್ನು ನೀಡದೇ ಒಮ್ಮೆಲೇ ಹೆಜಮಾಡಿ ನಾರಾಯಣಗುರು ರಸ್ತೆಗೆ ಹೋಗಲು ನಿರ್ಲಕ್ಷತನದಿಂದ ತಿರುಗಿಸಿದಾಗ ಪಿರ್ಯಾದಿದಾರರ ಅಣ್ಣ ಸವಾರಿ ಮಾಡಿಕೊಂಡು ಬರುತ್ತಿದ್ದ KA-20-ES-7817 ನೇ ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಮೋಟಾರು ಸೈಕಲ್‌ ಸವಾರ ಮತ್ತು ಸಹಸವಾರ ಮೋಟಾರು ಸೈಕಲ್‌ಸಮೇತ ರಸ್ತೆಗೆ ಬಿದ್ದು, ಯಶೋಧರ ರವರ ಬಲಕಾಲಿಗೆ ಮತ್ತು ಸೊಂಟಕ್ಕೆ ತರಚಿದ ಗಾಯವಾಗಿದ್ದಲ್ಲದೇ ಸೊಂಟದ ಕೀಲು ತಪ್ಪಿದ್ದು, ಸುಜೀತನಿಗೆ ಬಲಕಾಲಿನ ಪಾದದ ಗಂಟಿನ ಬಳಿ ತೀವೃಗಾಯ ಆಗಿ ಕಾಲಿಗೆ ತರಚಿದ ಗಾಯ ಹಾಗೂ ಕಾಲಿನ ಪಾದಗಂಟಿನ ಮೂಳೆ ಮುರಿತ ಆಗಿರುತ್ತದೆ. ಬಳಿಕ ಚಿಕಿತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಅಫಘಾತಕ್ಕೆ KA-19-Z0038 ಕಾರನ್ನು ಅದರ ಚಾಲಕ ಸಂದೀಪ ಎಂಬವರು ಅತೀವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿದೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 160/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಕುಂದಾಫುರ: ದಿನಾಂಕ 17/12/2022 ರಂದು ಸಂಜೆ ಸುಮಾರು 4:25 ಗಂಟೆಗೆ, ಕುಂದಾಪುರ ತಾಲೂಕಿನ, ವಡೇರಹೋಬಳಿ ಗ್ರಾಮದ ಶಾಸ್ತ್ರಿಸರ್ಕಲ್‌‌ಬಳಿ  NH 66 ಸವೀಸ್‌ ರಸ್ತೆಯಲ್ಲಿ, ಆಪಾದಿತ ಶರತ್‌ ಶೆಟ್ಟಿ ಎಂಬವರು, KA-20-ME-4772ನೇ ಕಾರನ್ನು  ಫ್ಲೈಓವರ್‌ ಅಂಡರ್‌‌ಪಾಸ್‌‌ನ ಪೂರ್ವ ಬದಿಯಿಂದ ಕುಂದಾಪುರ ಪೇಟೆ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು, ವಡೇರಹೋಬಳಿ ಬಿಸಿ ರಸ್ತೆ ಕಡೆಯಿಂದ (ಕೊಟೇಶ್ವರ) ಸಂಗಮ್‌ಕಡೆಗೆ ಗಣೇಶ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ  KA-20-C-1832 ನೇ ಅಟೋರಿಕ್ಷಾಕ್ಕೆ ಅಡ್ಡದಿಂದ ಡಿಕ್ಕಿ ಹೊಡೆದ ಪರಿಣಾಮ ಅಟೋರಿಕ್ಷಾವು ಎಡ ಮಗ್ಗುಲಾಗಿ ಅಡ್ಡಬಿದ್ದು, ಸದ್ರಿ ಅಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ 1) ಬಾಬಿ ಎಂಬವರ ಎಡಕೈಗೆ ಜಜ್ಜಿದ ರಕ್ತಗಾಯ, 2) ಪಿರ್ಯಾದಿ ಶೈಲಾ ಎಂಬವರ ಬಲ ಕೈಗೆ ಒಳನೋವಾದ ಗಾಯ, ಬಾಬಿ ರವರ 12 ವರ್ಷದ ಮಗ 3) ಪವನ್‌‌ನಿಗೆ ಎಡ ಪಕ್ಕೆಲುಬಿಗೆ ಒಳನೋವಾದ ಗಾಯ ಹಾಗೂ ಅಟೋರಿಕ್ಷಾ ಚಾಲಕ ಗಣೇಶರವರಿಗೆ ಎಡಕಣ್ಣಿನ ಹತ್ತಿರ  ಗಾಯವಾಗಿದ್ದು,  ಪಿರ್ಯಾದಿ ಶೈಲಾ,  ಗಣೇಶ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ಒಳ ರೋಗಿಯಾಗಿ ದಾಖಲಾಗಿದ್ದು, ಗಂಭೀರ ಗಾಯಗೊಂಡ ಬಾಬಿರವರು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ. ಎಂ. ಸಿ ಆಸ್ಪತ್ರೆಗೆ ಹೋಗಿರುವುದಾಗಿದೆ.  ಈ ಬಗ್ಗೆ ಕುಂದಾಫುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 134/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಕಾರ್ಕಳ: ದಿನಾಂಕ 17/12/2022 ರಂದು ಬೆಳಿಗ್ಗೆ 09:00 ಗಂಟೆಗೆ ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ಮುಂಡ್ಕೂರು ದುರ್ಗಾ ಪರಮೇಶ್ವರಿ ದೇವಸ್ಥಾನದ ದ್ವಾರದ ಬಳಿ ಹಾದು ಹೋಗುವ ಕಾರ್ಕಳ – ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಮುಂಡ್ಕೂರು ದುರ್ಗಾ ಪರಮೇಶ್ವರಿ ದೇವಸ್ಥಾನದ ದ್ವಾರದ ಕಡೆಯಿಂದ ಬೆಳ್ಮಣ್ ಕಡೆಗೆ ದ್ವಿಚಕ್ರ ವಾಹನ ನಂಬ್ರ KA-19 HG-7976 ನೇದರಲ್ಲಿ ವಿಖ್ಯಾತ್ ಜೆ ಶೆಟ್ಟಿ ಎಂಬಾತನನ್ನು  ಸಹಸವಾರನನ್ನಾಗಿ  ಕುಳ್ಳಿರಿಸಿಕೊಂಡು ಅತಿವೇಗ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಹೋಗುವಾಗ ದ್ವಿಚಕ್ರ ವಾಹನ ಸ್ಕಿಡ್ ಆಗಿ ಸವಾರ ಮತ್ತು ಸಹಸವಾರ ದ್ವಿಚಕ್ರ ವಾಹನ ಸಮೇತ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಸಹ ಸವಾರನ ಬಲ ಕೈ ಮೊಣಗಂಟಿಗೆ ಗುದ್ದಿದ ನೋವು ಹಾಗೂ ಎಡ ಕೈ ಗೆ ತರಚಿದ ಗಾಯ ಆಗಿರುತ್ತದೆ, ಎಂಬುದಾಗಿ ಪ್ರವೀಣ್ ಡಿಸೋಜಾ ಪ್ರಾಯ: 27 ವರ್ಷ ತಂದೆ: ಎಡ್ವಿನ್ ಡಿಸೋಜಾ ವಾಸ: ಕಲ್ಲಿಟ್ಟೆ ಮನೆ ಬೆಳ್ಮಣ್ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು , ಉಡುಪಿ ಇವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 146/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಮಲ್ಪೆ: ದಿನಾಂಕ 17/12/2022 ರಂದು ಪಿರ್ಯಾದಿದಾರರಾದ ಈಶ್ವರ  ಪುತ್ರನ್  (48) ತಂದೆ: ಆನಂದ ಪುತ್ರನ್ ವಾಸ: ಬಲರಾಮ ನಗರ  ಮಲ್ಪೆ ಇವರಿಗೆ ಸಾರ್ವಜನಿಕರು ಕರೆ ಮಾಡಿ  ಮಲ್ಪೆ ಸೀವಾಕ್  ವೇಯ  ಸಮುದ್ರದ ನೀರಿನಲ್ಲಿ  ಕಲ್ಲುಗಳ ರಾಶಿಯಲ್ಲಿ  ಗಂಡಸಿನ ಮೃತದೇಹವಿರುವುದಾಗಿ ತಿಳಿಸಿದಂತೆ  ಈಶ್ವರ  ಪುತ್ರನ್  ರವರು ಹೋಗಿ ನೋಡಲಾಗಿ ಸುಮಾರು 50 ರಿಂದ 55 ವರ್ಷ ಅಪರಿಚಿತ ಗಂಡಸಿನ ಮೃತದೇಹವಾಗಿದ್ದು , ಮೃತರು  ತುಂಬು ತೋಳಿನ ಶರ್ಟ್,  ಸೀಮೆಂಟ್  ಕಲರ್  ಪ್ಯಾಂಟ್  ಧರಿಸಿರುತ್ತಾರೆ. ಮೃತ ಅಪರಿಚಿತ ಗಂಡಸು ದಿನಾಂಕ 17/12/2022 ರಂದು  ಬೆಳಿಗ್ಗೆ  07:00 ಗಂಟೆಯಿಂದ 11:30 ಗಂಟೆಯ  ಮಧ್ಯಾವಧಿಯಲ್ಲಿ ಆಕಸ್ಮಿಕವಾಗಿ   ಅಥವಾ ಇನ್ಯಾವುದೋ ಕಾರಣದಿಂದ  ಸಮುದ್ರದ ನೀರಿಗೆ  ಬಿದ್ದು ಮೃತಪಟ್ಟಿರಬಹುದುದಾಗಿದೆ.  ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 73/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಮಣಿಪಾಲ: ಪಿರ್ಯಾದಿದಾರರಾಧ ಶ್ರೇಯಾ (16) ತಂದೆ: ರಾಜ್ ಕುಮಾರ್ ವಾಸ: ನೇತಾಜಿನಗರ ಪರ್ಕಳ ಅಂಚೆ, 80 ಬಡಗುಬೆಟ್ಟು ಗ್ರಾಮ, ಉಡುಪಿ ತಾಲೂಕು ಇವರು ದಿನಾಂಕ 17/12/2022 ರಂದು ಸಮಯ ಸುಮಾರು ಬೆಳಿಗ್ಗೆ 09:30 ಗಂಟೆಗೆ ತಮ್ಮ ಮನೆಯಲ್ಲಿರುವಾಗ ಇವರ ಮನೆಯ ಹತ್ತಿರದ ರೇವತಿ ಎಂಬುವರು ಏಕಾಎಕಿ ಶ್ರೇಯಾ ರವರ ಮನೆಯ ಒಳ ಪ್ರವೇಶಿಸಿ ನೀವು ಸಾಕಿದ ನಾಯಿ ನಮ್ಮ ಸಂಬಂದದವರ ಮನೆಗೆ ಬರುತ್ತದೆ, ಹೀಗೆ ನಾಯಿ ಬರುತ್ತಾ ಇದ್ದರೆ ನಾನು ನಿಮ್ಮನ್ನು ಸುಮ್ನೆ ಬಿಡುವುದಿಲ್ಲ ಎಂದು ಕಬ್ಬಿಣದ ಒಂದು ವಸ್ತುವಿನಿಂದ  ಶ್ರೇಯಾ ರವರ ಎರಡು ಕೈ ಕಾಲುಗಳಿಗೆ ಮತ್ತು ಎದೆಯ ಎಡಬದಿಗೆ ಗೀರಿದ್ದು ಪರಿಣಾಮ ಕೈ ಕಾಲಿನಲ್ಲಿ ರಕ್ತ ಬಂದಿದ್ದು, ಆ ಸಮಯ ಮನೆಯಲ್ಲಿದ್ದ ಶ್ರೇಯಾ ರವರ ತಾಯಿ ಹಾಗೂ ನೆರೆ ಮನೆಯ ಕವಿತಾ ರವರು ಬಂದು ಬಿಡಿಸಿದ್ದು, ನಂತರ ಆರೋಪಿ ರೇವತಿ,  ಶ್ರೇಯಾವ ಇವರನ್ನು ಉದ್ದೇಶಿಸಿ ನೀನು ಈಗ ಬದಿಕಿದ್ದೀಯಾ ನಿನ್ನನ್ನು ಮುಂದೆ ನೋಡಿಕೊಳ್ಳುತ್ತೇನೆ, ಜೀವಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 218/2022 ಕಲಂ: 448,324,506  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     
 • ಮಲ್ಪೆ: ಪಿರ್ಯಾದಿದಾರರಾದ ಸುಷ್ಮಾ ಜಿ ಬಿ ಮಪಿಎಸ್ಐ ಮಲ್ಪೆ ಠಾಣೆ ಇವರಿಗೆ ಠಾಣಾ ರಾತ್ರಿ ಪ್ರಭಾರದಲ್ಲಿ ಕರ್ತವ್ಯದಲ್ಲಿರುವ ಎಚ್ ಸಿ  1125 ನೇ ಯವರು ಕರೆ ಮಾಡಿ  ಕೊಡವೂರು ಗ್ರಾಮದ ಮದ್ವನಗರ  ಪರಿಸರದಲ್ಲಿ ಮೆಹಂದಿ ಕಾರ್ಯಕ್ರಮದಲ್ಲಿ ಡಿ ಜೆ ಸೌಂಡ್ ಹಾಕಿ ಸಾರ್ವಜನಿಕರಿಗೆ ಉಪದ್ರವಾಗುತ್ತಿರುವುದಾಗಿ ಸಾರ್ವಜನಿಕರು ಠಾಣೆಗೆ ದೂರವಾಣೆ ಕರೆ ಮಾಡಿ ತಿಳಿಸಿರುವುದಾಗಿ ಮಾಹಿತಿ ತಿಳಿಸಿದಂತೆ  ಇವರು , ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿಇರುವ ಎಚ್ ಸಿ 108 ಮತ್ತು  ರಾತ್ರಿ ಗಸ್ತು ಕರ್ತವ್ಯದಲ್ಲಿ ಇರುವ  ಪಿ ಸಿ 165 ಮತ್ತು163   ರವರನ್ನು ಮತ್ತು  ಪಂಚರೊಂದಿಗೆ ಇಲಾಖಾ ಹೊಯ್ಸಳ ವಾಹನದಲ್ಲಿ ಸ್ಥಳಕ್ಕೆ ಹೋಗಿ ನೋಡಲಾಗಿ ಮದ್ವನಗರ ನಿವಾಸಿ ಕಿಶನ್ ಎಂಬವರ ಮನೆಯಲ್ಲಿ ಮದುವೆಯ ಮೆಹಂದಿ ಕಾರ್ಯ ಕ್ರಮದಲ್ಲಿ ಅತೀ ಕರ್ಕಶವಾದ ಡಿ ಜೆ ಸೌಂಡ್ ಹಾಕಿ ಕೊಂಡು ಕಾರ್ಯ ಕ್ರಮವನ್ನು ತಡ ರಾತ್ರಿವರೆಗೂ ನಡೆಸುತ್ತಿದ್ದು, ಈ ಬಗ್ಗೆ ಸಕ್ಷಮ ಪ್ರಾಧಿಕಾರ ದಿಂದ ಪರವಾನಿಗೆ ಯಾ ಪೂರ್ವಾನುಮತಿ ಪಡೆದುಕೊಂಡಿರುವ ಬಗ್ಗೆ ವಿಚಾರಿಸಲಾಗಿ ಕಿಶಾನ್  ಯಾವುದೇ ಪೂರ್ವಾನುಮತಿ ಅಥವಾ ಪರವಾನಿಗೆಯನ್ನು ಪಡೆದುಕೊಂಡಿರುವುದಿಲ್ಲವಾಗಿ ತಿಳಿಸಿರುತ್ತಾರೆ. ಹಾಗೂ ಕಾರ್ಯ ಕ್ರಮದಲ್ಲಿ ಡಿ ಜೆಯ ಬಗ್ಗೆ ವಿಚಾರಿಸಲಾಗಿ  ತೊಟ್ಟಂ ನಾಗರಾಜರವರ ಡಿ ಜೆ ಆಗಿರವುದಾಗಿ  ತಿಳಿಸಿರುತ್ತಾರೆ. ಅರೋಪಿತರು ಯಾವುದೇ ಪರವಾನಿಗೆ ಇಲ್ಲದೇ ತಡ ರಾತ್ರಿವರೆಗೆ ದ್ವನಿವರ್ದಕವನ್ನು ಅತೀ ಕರ್ಕಶವಾಗಿ ಸಾರ್ವಜನಿಕರಿಗೆ ಉಪದ್ರವಾಗುವ ರೀತಿಯಲ್ಲಿ ಬಳಸಿ ಸಾರ್ವಜನಿಕರಿಗೆ ತೊಂದರೆವುಂಟುಮಾಡಿರುವುದಾಗಿದೆ.  ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 112/2022 ಕಲಂ: 92 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.    

ಇತ್ತೀಚಿನ ನವೀಕರಣ​ : 18-12-2022 10:37 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080