ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ಉದಯ ಪೂಜಾರಿ (35) ತಂದೆ: ದಿ. ಗೋಪಾಲ ಮೇಸ್ತ್ರೀ, ವಾಸ: ಬಬ್ಬು ಸ್ವಾಮಿ ದೇವಸ್ಥಾನದ ಬಳಿ, ವಿಷ್ಣುಮೂರ್ತಿನಗರ ನಿಟ್ಟೂರು ಪುತ್ತೂರು ಗ್ರಾಮ ಉಡುಪಿ ಇವರು ದಿನಾಂಕ 15/12/2021 ರಂದು ರಾತ್ರಿ 7:10 ಗಂಟೆಗೆ ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ನಿಟ್ಟೂರು ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರ ಬದಿಯಲ್ಲಿ ನಿಂತಿರುವಾಗ ಕರಾವಳಿ ಕಡೆಯಿಂದ ಸಂತೆಕಟ್ಟೆ ಕಡೆಗೆ KA-20 AA-9297 ನೇ ರಿಕ್ಷಾ ಚಾಲಕ ಅಂಜನ ಶೆಟ್ಟಿ ಎಂಬಾತ ತನ್ನ ರಿಕ್ಷಾವನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಇವರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು, ಎಡಕೈಗೆ ಮತ್ತು ಬಲಕೈಗೆ ತರಚಿದ ಗಾಯವಾಗಿ ಎಡಕಾಲಿಗೆ ಮೂಳೆ ಮುರಿತದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು, ಪಿರ್ಯಾದಿದಾರರು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದುದ್ದರಿಂದ ದೂರು ನೀಡಲು ತಡವಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 91/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ದಿನಾಂಕ 17/12/2021 ರಂದು  ಪಿರ್ಯಾದಿದಾರರಾದ ಮಲ್ಲಪ್ಪ  ಈರಪ್ಪ  ಗುಡಿಮನಿ (24) ತಂದೆ ಈರಪ್ಪ ಸರಸಾಪುರ ಅಂಚೆ  ಬಂಕನೇರಿ ಗ್ರಾಮ  ಬಾದಾಮಿ ತಾಲೂಕು  ಬಾಗಲಕೋಟೆ ಇವರು ತನ್ನ KA-13 D-0529 ನೇ ಟ್ಯಾಂಕರ ಲಾರಿಯನ್ನು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬಲಾಯಿಪಾದೆ  ಕಡೆಯಿಂದ ಸಂತೆಕಟ್ಟೆ ಕಡೆಗೆ ಚಲಾಯಿಸಿಕೊಂಡು ಬಂದು ಸಂಜೆ 6:00 ಗಂಟೆಗೆ ಅಂಬಲಪಾಡಿ ಜಂಕ್ಷನ್ನ ತಲುಪುವಾಗ  ಹಿಂದಿನಿಂದ   KA-25 EL-0011 ನೇ ಮೋಟಾರು ಸೈಕಲ್ ಸವಾರ ಸಚಿನ್ ಆರ್ ಗಂಗೋಳ್ಳಿ ಎಂಬಾತ ತನ್ನ ಮೋಟಾರು ಸೈಕಲನ್ನು ಮೋಟಾರು ಸೈಕಲನ್ನು ದುಡುಕುತನದಿಂದ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿ  ಟ್ಯಾಂಕರ  ಲಾರಿಗೆ ಹಿಂಬದಿ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ  ಜಖಂಗೊಂಡಿದ್ದು, ಮೋಟಾರು ಸೈಕಲ್ ಸವಾರ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಹೊಟ್ಟೆಗೆ ಮತ್ತು ಬಲಕಾಲಿಗೆ ಗಂಬೀರ ಸ್ವರೂಪದ  ಗಾಯವಾಗಿರುವುದಾಗಿದೆ, ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 92/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

 • ಗಂಗೊಳ್ಳಿ: ನಂಜಾನಾಯ್ಕ್‌ಎನ್‌ಪೊಲೀಸ್ ಉಪನಿರೀಕ್ಷಕರು ಗಂಗೊಳ್ಳಿ ಪೊಲೀಸ್‌ಠಾಣೆ ರವರು ದಿನಾಂಕ 17/12/2021 ರಂದು 18:00 ಗಂಟೆಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬೈಂದೂರು ತಾಲೂಕು ನಾಡ ಗ್ರಾಮದ ಪಡುಕೋಣೆ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ವಿಜಯ ಎಂಬುವವರು ಮಟ್ಕಾ ಜುಗಾರಿ ನಡೆಸುತ್ತಿದ್ದ ಬಗ್ಗೆ ಮಾನ್ಯ ಪೊಲೀಸ್ ಉಪಾಧೀಕ್ಷಕರು ಕುಂದಾಪುರ ಉಪವಿಭಾಗರವರು ಖಚಿತ ಮಾಹಿತಿ ನೀಡಿ ದಾಳಿ ನಡೆಸಿ ಪ್ರಕರಣ ದಾಖಲಿಸಲು ಸೂಚಿಸಿದ ಮೇರೆಗೆ ಪಂಚರು ಹಾಗೂ ಸಿಬ್ಬಂದಿಗಳೊಂದಿಗೆ ಹೋಗಿ 18:30 ಗಂಟೆಗೆ ದಾಳಿ ನಡೆಸಿ ಮಟ್ಕಾ ಜುಗಾರಿ ನಡೆಸುತ್ತಿದ್ದ ವಿಜಯ ದೇವಾಡಿಗ (46) ತಂದೆ: ರಾಮ ವಾಸ: ಪಡುಕೋಣೆ, ಹಡವು ಗ್ರಾಮ, ಬೈಂದೂರು ತಾಲೂಕು ಇವರನ್ನು ವಶಕ್ಕೆ ಪಡೆದು ವಿಚಾರಿಸಿದಲ್ಲಿ ತಾನು ಸ್ವಂತ ಲಾಭಕ್ಕೋಸ್ಕರ ಮಟ್ಕ ಚೀಟಿ ಬರೆಯುತ್ತಿರುವುದಾಗಿ ತಿಳಿಸಿದ್ದು, ಮಟ್ಕಾ ಜುಗಾರಿಗೆ ಬಳಸಿದ ಮಟ್ಕ ಚೀಟಿ-1, ಬಾಲ್ ಪೆನ್ನು-1 ಹಾಗೂ 940/-ರೂಪಾಯಿ ನಗದನ್ನು ಸ್ವಾಧೀನ ಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 115/2021 ಕಲಂ:78(I),78(III) ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆ 2021  ಯಂತೆ ಪ್ರಕರಣ ದಾಖಲಾಗಿರುತ್ತದೆ. 

ಕಳವು ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ಎಚ್‌. ಗಂಗಾಧರ ಶೆಟ್ಟಿ, ತಂದೆ: ದಿ. ಹೆರಿಯಣ್ಣ ಶೆಟ್ಟಿ, ವಾಸ: “ಶ್ರೀದೇವಿ”, ಭಂಡಾರ ದೇವಸ್ಥಾನ ಹತ್ತಿರ, ಮಂದಾರ್ತಿ ಅಂಚೆ, ಹೆಗ್ಗುಂಜೆ ಗ್ರಾಮ, ಬ್ರಹ್ಮಾವರ ಇವರ ಮಾವನ ಮಗನಾದ ಎಚ್‌. ಹರೀಶ್ಚಂದ್ರ ರವರು ಹೆಗ್ಗುಂಜೆ ಗ್ರಾಮದ ಸುರ್ಗಿಕಟ್ಟೆ ಎಂಬಲ್ಲಿ ವಾಸವಾಗಿದ್ದು, ಅವರು ದಿನಾಂಕ 18/11/2021 ರಂದು ಬೆಳಿಗ್ಗೆ 06:00 ಗಂಟೆ ಸುಮಾರಿಗೆ ಮನೆಗೆ ಬೀಗ ಹಾಕಿ ಗರ್ಭಿಣಿಯಾಗಿರುವ ಅವರ ಮಗಳನ್ನು ನೋಡಿಕೊಂಡು ಬರುವ ಬಗ್ಗೆ ಸಂಸಾರ ಸಮೇತ ಬೆಂಗಳೂರಿಗೆ ಹೋಗಿದ್ದು, ದಿನಾಂಕ 17/12/2021 ರಂದು ಅವರು ಎಚ್‌. ಗಂಗಾಧರ ಶೆಟ್ಟಿ ರವರಿಗೆ ಫೋನ್ ಕರೆ ಮಾಡಿ ಮನೆ ಕಡೆ ನೋಡಿಕೊಂಡು ಬರಲು ತಿಳಿಸಿದಂತೆ ಇವರು ಸುರ್ಗಿಕಟ್ಟೆಯಲ್ಲಿರುವ ಎಚ್‌. ಹರೀಶ್ಚಂದ್ರ ಶೆಟ್ಟಿ ರವರ ಮನೆಗೆ ಮಾದ್ಯಾಹ್ನ 2:00 ಗಂಟೆಯ ಸುಮಾರಿಗೆ ಹೋಗಿ ನೋಡಿದಾಗ ಮನೆಯ ಎದುರು ಬಾಗಿಲು ತೆರೆದುಕೊಂಡಿದ್ದು, ಬಾಗಿಲು ಜಖಂ ಗೊಂಡಿರುತ್ತದೆ. ಸದ್ರಿ ವಿಷಯವನ್ನು ಎಚ್‌. ಗಂಗಾಧರ ಶೆಟ್ಟಿ ರವರು ಎಚ್‌. ಹರೀಶ್ಚಂದ್ರ ಶೆಟ್ಟಿ ರವರಿಗೆ ಕರೆ ಮಾಡಿ ತಿಳಿಸಿದಾಗ, ಅವರು ಮನೆಯಲ್ಲಿರುವ ಸೊತ್ತುಗಳ ಇರುವಿಕೆಯ ಬಗ್ಗೆ ತಿಳಿಸಿ ಪರಿಶೀಲನೆ ಮಾಡುವಂತೆ ಸೂಚಿಸಿದ್ದು ಅದರಂತೆ ಎಚ್‌. ಗಂಗಾಧರ ಶೆಟ್ಟಿ ರವರು ಮನೆಯನ್ನು ಪರಿಶೀಲನೆ ಮಾಡಿದಾಗ  ಮನೆಯ ಬೆಡ್‌ ರೂಮ್‌ ನಲ್ಲಿರುವ ಗೊಡ್ರೇಜ್ ಕಪಾಟು ತೆರೆದುಕೊಂಡಿದ್ದು ಅದರಲ್ಲಿಟ್ಟಿರುವ  ಒಂದು ಚಿನ್ನದ ಕರಿಮಣಿ ಸರ – 3 ½ ಪವನ್ ಅಂದಾಜು ರೂ. 1,20,000/-, ಒಂದು ಬೆಳ್ಳಿಯ ಚೆಂಬು ಅಂದಾಜು ರೂ. 15,000/- ಒಂದು ಜೊತೆ ದೊಡ್ಡ ಬೆಳ್ಳಿಯ ಕಾಲು ದೀಪ ಅಂದಾಜು ರೂ. 5,000/-, ಒಂದುಜೊತೆ  ಸಣ್ಣ ಬೆಳ್ಳಿಯ ಕಾಲು ದೀಪ ಅಂದಾಜು ರೂ. 3,000/, ಬೆಳ್ಳಿಯ ಹಣ್ತಿಗೆ -4 ಅಂದಾಜು ರೂ. 2,000/- ವಸ್ತುಗಳನ್ನು ಒಟ್ಟು ರೂ. 1,45,000/- ಮೌಲ್ಯದ ಸೊತ್ತುಗಳನ್ನು ಯಾರೋ ಕಳ್ಳರು ಮನೆಯ ಎದುರು ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ಒಳ ಪ್ರವೇಶಿಸಿ  ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 206/2021 ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.      

ಇತ್ತೀಚಿನ ನವೀಕರಣ​ : 18-12-2021 10:01 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080