ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಹೆಬ್ರಿ: ದಿನಾಂಕ 17/11/2022 ರಂದು ಅಪಾದಿತ ಸತೀಶ್ ನಾಯ್ಕ್ ಇವರು ತನ್ನ KA-20-ET-4310 ನೇ ಮೋಟಾರ್ ಸೈಕಲ್ ನಲ್ಲಿ  ಮುದ್ದೂರು ಕಡೆಯಿಂದ ನಂಚಾರು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಬೆಳಿಗ್ಗೆ 8:55 ಗಂಟೆಗೆ ನಾಲ್ಕೂರು ಗ್ರಾಮದ ಮಿಯ್ಯಾರು ಬಿಕ್ರಿಜಡ್ಡು ಎಂಬಲ್ಲಿಗೆ ತಲುಪಿ ರಸ್ತೆಯ ಬಲಬದಿಗೆ ಬಂದು ಅವರ ಎದುರುಗಡೆಯಿಂದ ನಂಚಾರು ಕಡೆಯಿಂದ ಮುದ್ದೂರು ಕಡೆಗೆ ಗುರುಪ್ರಸಾದ್ ಇವರು ಚಲಾಯಿಸಿಕೊಂಡು ಬರುತ್ತಿದ್ದ KA-20-EC-4328 ನೇ ಮೋಟಾರ್ ಸೈಕಲ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಎರಡು ಮೋಟಾರ್ ಸೈಕಲ್ ಸವಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ  ಬಿದ್ದು. ಗುರು ಪ್ರಸಾದ್ ಇವರಿಗೆ ಬಲಕೈಯ  ಮೂರು ಬೆರಳುಗಳಿಗೆ ತೀವ್ರ ಸ್ವರೂಪದ ಗಾಯವಾಗಿದ್ದು  ಅಪಾದಿತ ಸತೀಶ್ ನಾಯ್ಕ್ ರವರಿಗೆ ತರಚಿದ ಗಾಯವಾಗಿರುತ್ತದೆ.  ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 64/2022 ಕಲಂ:279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು: ಪಿರ್ಯಾದಿದಾರರಾದ  ಶಿವಾನಂದ ಐತಾಳ್ (45), ತಂದೆ: ವಿಷ್ಣುಮೂರ್ತಿ ಐತಾಳ್, ವಾಸ: ಶ್ರೀ ವಿಷ್ಣು ನಿಲಯ , ಕಿರಿಮಂಜೇಶ್ವರ  ಗ್ರಾಮ, ಬೈಂದೂರು ತಾಲೂಕು ಇವರು ತನ್ನ ತಂದೆ  ವಿಷ್ಣುಮೂರ್ತಿ ಐತಾಳ್   ರವರೊಂದಿಗೆ  ದಿನಾಂಕ 15/11/2022 ರಂದು ಸಂಜೆ  ವೇಳೆಗೆ  ತಮ್ಮ ಹಳೆ ಮನೆ ಮತ್ತು ಜಾಗ ನೋಡಲು ಹೋದವರು ಮನೆ ಹಾಗೂ ಜಾಗ ನೋಡಿಕೊಂಡು ವಾಪಾಸು ಸಂಜೆ 5:40 ಗಂಟೆಗೆ ತಮ್ಮ ಮನೆಗೆ ಹೋಗಲು ಕಿರಿಮಂಜೇಶ್ವರ ಗ್ರಾಮದ ಶಾಲೆ ಬಾಗಿಲು ಎಂಬಲ್ಲಿ  ರಾಷ್ಟ್ರೀಯ ಹೆದ್ದಾರಿ 66 ರ ಪೂರ್ವ ಬದಿಯಿಂದ ರಸ್ತೆ ದಾಟಿ ಪಶ್ಚಿಮ ಬದಿ ಮಣ್ಣು ರಸ್ತೆಗೆ ತಲುಪುತ್ತಿದ್ದಂತೆ  ಕುಂದಾಪುರ ಕಡೆಯಿಂದ ಉಪ್ಪುಂದ ಕಡೆಗೆ KA-47-W-3212 ನೇ ಮೋಟಾರು ಸೈಕಲ್ ನ್ನು ಅದರ  ಸವಾರ ದರ್ಶನ್ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತೀರಾ ಎಡ ಬದಿಗೆ ಚಲಾಯಿಸಿ ನಡೆದುಕೊಂಡು ಹೋಗುತ್ತಿದ್ದ ವಿಷ್ಣುಮೂರ್ತಿ ಐತಾಳ್ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ವಿಷ್ಣುಮೂರ್ತಿ ಐತಾಳ್ ರವರು ರಸ್ತೆಗೆ ಎಸೆಯಲ್ಪಟ್ಟು  ಬಿದ್ದಿರುತ್ತಾರೆ. ಅಪಘಾತದಿಂದ ವಿಷ್ಣುಮೂರ್ತಿ ಐತಾಳ್ ರವರಿಗೆ ತಲೆಗೆ, ಮೈಕೈಗೆ ರಕ್ತಗಾಯ ಉಂಟಾಗಿ ಬಲ ಕಾಲಿನ ಮೊಣಗಂಟಿನ ಬಳಿ ಮೂಳೆ  ಮುರಿತ ಉಂಟಾಗಿದ್ದು ಫಿರ್ಯಾದಿದಾರರು ಗಾಯಾಳುವನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆ ತಂದು ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 225/2022 ಕಲಂ: 279 , 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ಗೌತಮ್ (32), ತಂದೆ: ನಾಗ ಮೊಗವೀರ, ವಾಸ: ಗೋಣ ಬೆಟ್ಟು ಮನೆ, ಉದ್ದಾಬೆಟ್ಟು ತಗ್ಗರ್ಸೆ ಗ್ರಾಮ, ಬೈಂದೂರು ತಾಲೂಕು ಇವರ  ತಂದೆ  ನಾಗ ಮೊಗವೀರ(71) ಇವರು  ಎಂದಿನಂತೆ  ದಿನಾಂಕ 17/11/2022 ರಂದು  ಬೆಳಿಗ್ಗೆ 9:00 ಗಂಟೆಗೆ ಕೆಲಸಕ್ಕೆ ಮನೆಯಿಂದ  ಹೋದವರು ಕೆಲಸ ಮುಗಿಸಿ  ರಾತ್ರಿ 8:20 ಗಂಟೆಗೆ  ಬಿಜೂರು ಗ್ರಾಮದ ಮೂರ್‌ಗೋಳಿ ಹಕ್ಲು ಎಂಬಲ್ಲಿ ಕಾಲು ದಾರಿಯಲ್ಲಿ ನಡೆದುಕೊಂಡು ರೈಲ್ವೆ ಗೇಟ್  73-74  ಕಿಮೀ ಕಲ್ಲಿನ  ಮದ್ಯ  ರೈಲ್ವೆ ಹಳಿ ದಾಟುತ್ತಿರುವ ಸಮಯ ಕಾರವಾರ ಕಡೆಯಿಂದ ಮಂಗಳೂರು ಕಡೆಗೆ  ಹೋಗುವ ರೈಲು ಡಿಕ್ಕಿ ಹೊಡೆದು  ನಾಗ ಮೊಗವೀರ  ರವರನ್ನು ರೈಲು ಎಳೆದು ಕೊಂಡು ಹೋಗಿ ದೇಹ ಚಿದ್ರಚಿದ್ರವಾಗಿ ಮೃತಪಟ್ಟಿರುತ್ತಾರೆ.  ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ  ಯುಡಿಆರ್ ಕ್ರಮಾಂಕ 59/2022 ಕಲಂ: 174 ಸಿ.ಅರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .  

ಗಂಡಸು ಕಾಣೆ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ಮುತ್ತವ್ವ ಚವ್ಹಾಣ್‌ (41), ಗಂಡ: ಮೇಘಪ್ಪ ಚವ್ಹಾಣ್‌, ವಾಸ: ಕಳಮಳ್ಳಿ ತಾಂಡ, ಕುಷ್ಟಗಿ ತಾಲೂಕು, ಕೊಪ್ಪಳ ಜಿಲ್ಲೆ, ಪ್ರಸ್ತುತ: ಗುಂಡುಶೆಟ್ಟಿ ಕಂಪೌಂಡ್‌, ಬೀಡಿನಗುಡ್ಡೆ, ಉಡುಪಿ  ತಾಲೂಕು ಇವರ ಗಂಡ ಮೇಘಪ್ಪ ಚವ್ಹಾಣ್‌ (46) ಇವರು ಪಿರ್ಯಾದಿದಾರರೊಂದಿಗೆ ವಾಸ್ತವ್ಯವಿದ್ದು, ದಿನಾಂಕ 15/11/2022 ರಂದು ಬೆಳಿಗ್ಗೆ 09:00 ಗಂಟೆಗೆ ಉಡುಪಿ ತಾಲೂಕು 76-ಬಡಗುಬೆಟ್ಟು ಗ್ರಾಮದ ಬೀಡಿನಗುಡ್ಡೆ ಗುಂಡುಶೆಟ್ಟಿ ಕಂಪೌಂಡ್‌ ಎಂಬಲ್ಲಿಂದ ಕೆಲಸಕ್ಕೆಂದು ಹೋದವರು ವಾಪಾಸು ಮನೆಗೆ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 167/2022 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 18-11-2022 09:47 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080