ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಶಿರ್ವಾ: ದಿನಾಂಕ 16/11/2021 ರಂದು ಪಿರ್ಯಾದಿದಾರರಾದ ದುರ್ಗಾದಾಸ್ ಶೆಣೈ (40), ತಂದೆ: ವಾಮನ ಶೆಣೈ , ವಾಸ: ಗಣಪನ ಕಟ್ಟೆ ,ಕಟ್ಟಿಂಗೇರಿ ಗ್ರಾಮ,ಕಾಪು ತಾಲೂಕು, ಉಡುಪಿ ಜಿಲ್ಲೆ ಇವರ ತಂದೆ ವಾಮನ ಶೈಣೈ(78)ರವರು ಬೆಳ್ಳೆ ಗ್ರಾಮದ ಗಣಪನಕಟ್ಟೆಯ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ನಾಲ್ಕು ಬೀದಿಯಿಂದ ಮೂಡುಬೆಳ್ಳೆ ಕಡೆಗೆ ಜೇಸನ್ ತನ್ನ ಸ್ಕೂಟರ್ ನಂಬ್ರ KA-20-U-7406 ನೇಯದನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ವಾಮನ ಶೈಣೈ ರವರಿಗೆ ಢಿಕ್ಕಿ ಹೊಡೆದ ಪರಿಣಾಮ ವಾಮನ ಶೈಣೈರವರು ರಸ್ತೆಗೆ ಬಿದ್ದು ಬಲಕಾಲಿಗೆ, ಮುಖ, ತುಟಿ, ಕಣ್ಣಿನ ಹುಬ್ಬಿನ ಬಳಿ, ಕೈಗೆ, ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 68/2021, ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಗಣೇಶ್ ಪೂಜಾರಿ (31), ತಂದೆ: ದೇವು ಪೂಜಾರಿ, ವಾಸ: ಸದಸ್ಯರು 3ನೇ ವಾರ್ಡ್, ನಾವುಂದ ಗ್ರಾಮ ಪಂಚಾಯತ್ ಬೈಂದೂರು ತಾಲೂಕು ಇವರು ನಾವುಂದ ಗ್ರಾಮ ಪಂಚಾಯತ್ 3 ನೇ ವಾರ್ಡ್ ನ ಸದಸ್ಯರಾಗಿದ್ದು, ನಾವುಂದ ಗ್ರಾಮದ ಮಸ್ಕಿ ಎಂಬಲ್ಲಿ 1 ನೇ ಆಪಾದಿತ ತಿಮ್ಮ ಪೂಜಾರಿ ಇವರ ಮನೆ ಬಳಿಯಿಂದ ನೀಲು ಪೂಜಾರಿ ರವರ ಮನೆವರೆಗಿನ ಪಾದಾಚಾರಿ ರಸ್ತೆಯನ್ನು ಪಂಚಾಯತ್ ನ 14ನೇ ಹಣಕಾಸು ಅನುದಾನದಲ್ಲಿ ಅಭಿವೃದ್ದಿ ಪಡಿಸಿದ್ದು ಈ ಬಗ್ಗೆ ಆಪಾದಿತರು ಮಾನ್ಯ ನ್ಯಾಯಾಲಯದಲ್ಲಿ ತಾತ್ಕಾಲಿಕ ನಿರ್ಬಂಧಾಜ್ಞೆಯನ್ನು ತಂದಿದ್ದು , ಪಂಚಾಯತ್ ನಿಂದ ವರದಿ ಸಲ್ಲಿಸಿ ತಾತ್ಕಾಲಿಕ ನಿರ್ಬಂಧಾಜ್ಞೆಯನ್ನು ತೆರವುಗೊಳಿಸಲಾಗಿರುತ್ತದೆ. ಆಪಾದಿತರು ರಸ್ತೆಗೆ ಕಲ್ಲುಗಳನ್ನು ಹಾಕಿ ತಡೆಯೊಡ್ಡಿದ್ದು ಈ ಬಗ್ಗೆ ದಿನಾಂಕ 08/03/2020 ರಂದು ಮಾನ್ಯ ಸಹಾಯಕ ಕಮಿಷನರ್ ಕುಂದಾಪುರ ರವರ ಆದೇಶದಂತೆ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳು ಬೈಂದೂರು, ಪಿಡಿಓ ನಾವುಂದ ರವರ ಸಮಕ್ಷಮ ಸದ್ರಿ ರಸ್ತೆಗೆ ಹಾಕಿದ ಕಲ್ಲು ಮುಳ್ಳುಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿರುತ್ತದೆ. ಪುನಃ  ಆಪಾದಿತರಾದ 1. ತಿಮ್ಮ ಪೂಜಾರಿ,  2, ರಾಜೇಂದ್ರ ಪೂಜಾರಿ, 3, ರವೀಂದ್ರ ಪೂಜಾರಿ ಇವರು ಪುನ: ಸದ್ರಿ ರಸ್ತೆಗೆ ಕಲ್ಲುಗಳನ್ನು ಹಾಕಿ ತಡೆಯೊಡ್ಡಿದ ಬಗ್ಗೆ ನೀಲು ಪೂಜಾರಿ ಎಂಬುವವರು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು ಮಾನ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ರಸ್ತೆಯಲ್ಲಿನ ತಡೆಗಳನ್ನು ತೆರವುಗೊಳಿಸಲಾಗಿದ್ದು. ನಂತರವೂ ಆಪಾದಿತರು ರಸ್ತೆಗೆ ಹಾಕಿದ ಸಣ್ಣ ಬಂಡೆಕಲ್ಲುಗಳು ಹಾಗೂ ರಸ್ತೆಯಲ್ಲಿ ನೆಟ್ಟ ತೆಂಗಿನ ಸಸಿಗಳನ್ನು ದಿನಾಂಕ 25/10/2021 ರಂದು ಪಿಡಿಓ ನಾವುಂದ, ಪೊಲೀಸರು ಹಾಗೂ ಪಂಚಾಯ್ತು ಸಿಬ್ಬಂದಿಗಳ ಸಮಕ್ಷಮ ತೆರವುಗೊಳಿಸಿ ರಸ್ತೆಯನ್ನು ಸಂಚಾರಕ್ಕೆ ಮುಕ್ತವಾಗಿ ಮಾಡಲಾಗಿರುತ್ತದೆ. ಆದಾಗ್ಯೂ ದಿನಾಂಕ 16/11/2021 ರಂದು ರಸ್ತೆಯನ್ನು ಪರಿಶೀಲಿಸಿದಾಗ ಪುನ: ಆರೋಪಿತರುಗಳು ರಸ್ತೆಗೆ ಕಲ್ಲುಗಳನ್ನು ಹಾಕಿ ಹೊಂಡಗಳನ್ನು ಮಾಡಿ ಗಿಡಗಳನ್ನು ನೆಟ್ಟು ಸಾರ್ವಜನಿಕರ ರಸ್ತೆಯನ್ನು ಹಾಳು ಮಾಡಿರುವುದಲ್ಲದೆ ವಾಹನ ಸಂಚಾರಕ್ಕೆ ಅಡ್ಡಿವುಂಟು ಮಾಡಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 185/2021 ಕಲಂ: 2(A), Prevention Of Destruction And Loss Property Act 1981 & 427 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 18-11-2021 09:40 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080