ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಫುರ: ದಿನಾಂಕ 18/11/2021 ರಂದು ಬೆಳಿಗ್ಗೆ ಸುಮಾರು 9:15 ಗಂಟೆಗೆ, ಕುಂದಾಪುರ ತಾಲೂಕಿನ ಬಸ್ರೂರು ಗ್ರಾಮದ ಪಾನಕದಕಟ್ಟೆಯ ಮಸೀದಿ/ ಪಳ್ಳಿ ಕ್ರಾಸ್ ಬಳಿ ರಾಜ್ಯ ರಸ್ತೆಯಲ್ಲಿ, ಆಪಾದಿತೆ ಅರ್ಪಿತಾ   ಎಂಬವಳು KA-47-L-7453 HONDA ACTIVA ಸ್ಕೂಟರ್‌‌ನಲ್ಲಿ, ಅವಳ ಹಿಂಬದಿಯಲ್ಲಿ ಗ್ರೇಸಿ ಎಂಬವರನ್ನು ಸಹ ಸವಾರಳಾಗಿ ಕುಳ್ಳೀರಿಸಿಕೊಂಡು ಮಸೀದಿ/ಪಳ್ಳಿ ರಸ್ತೆ ಕಡೆಯಿಂದ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಯಾವುದೇ ಸೂಚನೆ ನೀಡದೇ ರಾಜ್ಯ ರಸ್ತೆಗೆ ತಿರುಗಿಸಿ, ಯಡಮೊಗ್ಗೆ ಕಡೆಯಿಂದ ಬಸ್ರೂರು ಕಡೆಗೆ ರಾಜ್ಯ ರಸ್ತೆಯಲ್ಲಿ ಪಿರ್ಯಾದಿದಾರರಾದ ಮಂಜುನಾಥ (31) ತಂದೆ  ಆನಂತ ಪೂಜಾರಿ ವಾಸ  ಜನತಾ ಕಾಲೋನಿ, ಯಡಮೊಗ್ಗೆ  ಗ್ರಾಮ, ಕುಂದಾಪುರ  ಮಂಜುನಾಥ ಎಂಬವರು ಸವಾರಿ ಮಾಡಿಕೊಂಡು ಬರುತ್ತಿದ್ದ  KA-20-EX-4516 ನೇ ಬೈಕಿಗೆ ಅಪಘಾತಪಡಿಸಿದ ಪರಿಣಾಮ ಮಂಜುನಾಥರವರು ಗಾಯಗೊಂಡು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 91/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೊಲ್ಲೂರು:  ಪಿರ್ಯಾದಿ ಕುರಿಯಕೋಸ್ (35)  ತಂದೆ: ದಿ: ಜೋಸೇಫ್ ವಾಸ:  ತಾದು  ಕುನ್ನೇಲ್  ಮನೆ ಮುದೂರು ಮೈದಾನ ಮುದೂರು ಗ್ರಾಮ ಬೈಂದೂರು ಇವರು  ದಿನಾಂಕ: 18-11-202 ರಂದು ಬೆ: 11:45 ಗಂಟೆಗೆ ತನ್ನ ಕಾರನ್ನು  ಜಡ್ಕಲ್- ಮುದೂರು ರಸ್ತೆಯಲ್ಲಿ ಜಡ್ಕಲ್ ಕಡೆಯಿಂದ ಮುದೂರು ಕಡೆಗೆ ಚಲಾಯಿಸಿಕೊಂಡು   ಜಡ್ಕಲ್ ಗ್ರಾಮದ   ಮೆಕ್ಕೆ  ಸೇತುವೆ ಸಮೀಪ  ತಲುಪಿದಾಗ ಪಿರ್ಯಾದುದಾರರ ಕಾರಿನ ಎದುರಿನಿಂದ ಮುದೂರು ಕಡೆಯಿಂದ  ಜಡ್ಕಲ್ ಕಡೆಗೆ  ಆರೋಪಿ  ಸುನ್ನಿ  KA 20 X 6298 ಮೋಟಾರ್ ಸೈಕಲ್ ನಲ್ಲಿ  ಶಿಜೋ  ಎಂಬುವರನ್ನು ಹಿಂಬದಿ ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಮೆಕ್ಕೆ ಸೇತುವ ಸಮೀಪ ತಿರುವು ರಸ್ತೆಯಲ್ಲಿ  ಮೋಟಾರ್ ಸೈಕಲ್ ನ  ವೇಗ ನಿಯಂತ್ರಿಸಲಾಗದೇ ಒಮ್ಮೇಲೆ  ಎಡ ಬದಿಗೆ ಚಲಾಯಿಸಿ  ಹತೋಟಿ ತಪ್ಪಿದ ಪರಿಣಾಮ  ಮೋಟಾರ್ ಸೈಕಲ್ ಹಿಂಬದಿ ಸವಾರ ಶಿಜೋ  ಎಡ ಮಗ್ಗುಲಾಗಿ ರಸ್ತೆಗೆ ಎಸೆಯಲ್ಪಟ್ಟು ಎಡ ಕೈ ಮೂಳೆ ಮುರಿತದ ಒಳನೋವು ಹಾಗೂ ಮೈಕೈ ಗೆ ತರಚಿದ ಗಾಯ ಉಂಟಾಗಿ ಕುಂದಾಪುರ ವಿನಯ್  ಆಸ್ಪತ್ರೆಯಲ್ಲಿ   ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಹಾಗೂ  ಆರೋಪಿಯು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಸಣ್ಣಪುಟ್ಟ ರಕ್ತಗಾಯವಾಗಿ ರುತ್ತದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 44/2021 ಕಲಂ:279 ,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಕುಂದಾಫುರ: ಪಿರ್ಯಾದಿದಾರರಾದ ರಂಜಿತ್ (36) ತಂದೆ: ಆನಂದ, ವಾಸ: ಕುಡುಪು, ಮಂಗಳೂರು ಇವರ ಅಕ್ಕ ರಶ್ಮಿ (38) ರವರನ್ನು 17 ವರ್ಷಗಳ ಹಿಂದೆ ಕುಂಭಾಶಿಯ ಮನೋಜ್ ಪೂಜಾರಿಯವರಿಗೆ ಮದುವೆ ಮಾಡಿ ಕೊಟ್ಟಿದ್ದು, ರಶ್ಮಿರವರು ಸುಮಾರು 07-08 ತಿಂಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದು ಈ ಬಗ್ಗೆ ಕುಂದಾಪುರ ಮಾತಾ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದಾಗಿದೆ. ಹೀಗಿರುತ್ತಾ ದಿನಾಂಕ 18/11/2021 ರಂದು 06:00 ಗಂಟೆಯಿಂದ 07:00 ಗಂಟೆಯ ಮದ್ಯಾವಧಿಯಲ್ಲಿ ರಶ್ಮಿರವರು ಕುಂಬಾಶಿ ಗ್ರಾಮದ ಪಣ್ ಹತ್ವಾರ್ ಬೆಟ್ಟಿನಲ್ಲಿರುವ ವಾಸದ ಮನೆಯಲ್ಲಿ ಫ್ಯಾನ್ ಗೆ ಚೂಡಿದಾರದ ವೇಲ್ ನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಮೃತರ ಮರಣದಲ್ಲಿ ಯಾವುದೇ ಸಂಶಯ ಇಲ್ಲದೇ ಇರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 47/2021 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.     

ಇತರ ಪ್ರಕರಣಗಳು:

  • ಉಡುಪಿ: ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾದು ಸಂಖ್ಯೆ 64/2021 ರಂತೆ ಪಿರ್ಯಾದಿ ರಝಿಯಾ, ಪ್ರಾಯ  32 ವರ್ಷ,ಕೋಂ: ಮೊಹಮ್ಮದ್  ರಿಜ್ವಾನ್ಬಿನ್:ರಹೀಮುದ್ದೀನ್ ಬಿ.ಹೆಚ್.ವಾಸ:ಸರಕಾರಿ ಪ್ರಾಥಮಿಕ ಶಾಲೆಯ ಬಳಿ, ಜಾಮೀಯಾ ಮಸೀದಿ ರಸ್ತೆ, ಬಸ್ರೂರು,  ಇವರಿಗೆ ದಿ:04-06-2010 ರಂದು ಕುಂದಾಪುರ ಬಸ್ರೂರು ಜಾಮಿಯಾ ಮಸ್ಜಿದ್‌ನಲ್ಲಿ ಆರೋಪಿ ಮೊಹಮ್ಮದ್ ರಿಜ್ವಾನ್(42),ಬಿನ್.ದಿ.ಮೀರ್ ಗನಿ ಅಹ್ಮದ್ ಇವರೊಂದಿಗೆ ಮದುವೆಯಾಗಿರುತ್ತದೆ. ಮದುವೆಯ ಸಮಯ ಪಿರ್ಯಾದಿದಾರರ ಮನೆಯವರು ಆರೋಪಿತರ ಬೇಡಿಕೆಯಂತೆ 16 ಪವನ್‌ಚಿನ್ನ ಹಾಕಿದ್ದು, ಮದುವೆಯ ಖರ್ಚನ್ನು ಪಿರ್ಯಾದಿದಾರರ ಮನೆಯವರೇ ಭರಿಸಿರುತ್ತಾರೆ.ಆರೋಪಿಯು ವಿದೇಶದಲ್ಲಿ ಉದ್ಯೋಗ ಮಾಡಿಕೊಂಡಿದ್ದು, ವಿದೇಶದಲ್ಲಿರುವಾಗ ಇತರ ಆರೋಪಿಗಳಾದ ಸಗೀರಾ ಬಾನು(60) ಕೋಂ.ದಿ.ಮೀರ್ ಗನಿ  ಅಹ್ಮದ್, ಆಸ್ಮಾ ಬಾನು(39)ಕೋಂ.ಅಯಾಜ್ ಬಾಷಾ, .ಪೌಝಾನ್ (31) ಬಿನ್.ದಿ.ಮೀರ್ ಗನಿ ಅಹ್ಮದ್,  ಹಾಗೂ ಅಯಾಜ್ ಬಾಷಾ(49) ಬಿನ್.ಅಬ್ದುಲ್ ಗಫರ್ವಾಸ: ಶಿರ್ವ ಗ್ರಾಮ, ಕಾಪು ತಾಲೂಕು, ರವರುಗಳು ಪಿರ್ಯಾದಿಗೆ ಕಿರುಕುಳ ನೀಡಿರುತ್ತಾರೆ. ಫಿರ್ಯಾದಿದಾರರ ಬಳಿ ಮನೆಯ ಎಲ್ಲಾ ಕೆಲಸವನ್ನುಮಾಡಿಸುತ್ತಿದ್ದು, ಫಿರ್ಯಾದಿದಾರರಿಗೆ ಹಾಗೂ ಮಕ್ಕಳಿಗೆ ಸರಿಯಾದ ಸಮಯದಲ್ಲಿ ಊಟ ನೀಡುತ್ತಿರಲಿಲ್ಲ. ಇವರಲ್ಲಿ ಆಸ್ಮಾ ಬಾನು ಎನ್ನುವ ಆರೋಪಿಯು ಪಿರ್ಯಾದಿಯ ಗಂಡನಿಗೆ  ಬೇರೆ ಬೇರೆ ಹುಡುಗರ ಪೋಟೋ ಕಳುಹಿಸಿ  ಇದು ನಿನ್ನ ಹೆಂಡತಿಯ ಮೊಬೈಲ್‌ನಲ್ಲಿ ಇತ್ತು ಎಂದು ಆರೋಪಿಗೆ ಕುಮ್ಮಕ್ಕು ನೀಡುತ್ತಿದ್ದು, ಆಕೆಯ ಮಾತನ್ನು ನಂಬಿ ಗಂಡನು ಫಿರ್ಯಾದಿದಾರರೊಂದಿಗೆ ಜಗಳ ಮಾಡುತ್ತಿದ್ದು, ಊರಿಗೆ ಬಂದಾಗ ಇದೇ ವಿಚಾರದಲ್ಲಿ ಜಗಳ ಮಾಡಿ ಪಿರ್ಯಾದಿದಾರರ ಕುತ್ತಿಗೆಯನ್ನು ಜೋರಾಗಿ ಹಿಸುಕಿ ಪ್ರಾಣಕ್ಕೆ ತೊಂದರೆ ಉಂಟು ಮಾಡಿರುತ್ತಾರೆ. ನಂತರ ಫಿರ್ಯಾದಿದಾರರು ಆರೋಪಿಗಳು ನೀಡುತ್ತಿದ್ದ ಕಿರುಕುಳ ತಾಳಲಾರದೇ ತನ್ನ ತಂದೆ ಮನೆಗೆ ಬಂದಿದ್ದು, ಆರೋಪಿಗಳು ಫಿರ್ಯಾದಿದಾರರನ್ನು ವಾಪಾಸು ಕರೆದುಕೊಂಡು ಹೋಗಿರುವುದಿಲ್ಲ. ಫಿರ್ಯಾದಿದಾರರ ಚಿನ್ನ ಹಾಗೂ ದಾಖಲೆಗಳು ಆರೋಪಿತರ ಮನೆಯಲ್ಲಿ ಇದ್ದು, ಅದನ್ನು ಪಡೆಯಲು ಹೋದಾಗ ಆರೋಪಿತರುಗಳು ಫಿರ್ಯಾದಿದಾರರಿಗೆ ಬೈಯ್ದು ಇನ್ನು ಮುಂದೆ ಇಲ್ಲಿಗೆ ಬಂದಲ್ಲಿ ನಿನ್ನ ಕೈ ಕಾಲು ಕಡಿದು ಕೊಂದು ಹಾಕುವುದಾಗಿ ಬೆದರಿಕೆ ಹಾಕಿರುತ್ತಾರೆ.ಈ ಬಗ್ಗೆ ಮಹಿಳಾ ಪೊಲೀಸಾ ಠಾಣಾ ಅಪರಾಧ ಕ್ರಮಾಂಕ 47/2021  ಕಲಂ:498(A), 323, 504, 506 R/W 149 ಐಪಿಸಿ ಹಾಗೂ 3, 4 DP Act. ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ:  ಪಿರ್ಯಾದುದಾರರು ಶ್ರೀಮತಿ ಜ್ಯೋತಿ. ಎಸ್‌(36) ಗಂಡ: ಶೇಖರ ವಾಸ: ಕೆದ್ಲಹಕ್ಲು, ಶಿರಿಯಾರ ಗ್ರಾಮ, ಬ್ರಹ್ಮಾವರ ತಾಲೂಕು ಇವರು ಸ್ವ ಉದ್ಯೋಗ ಮಾಡುವರೇ 2020-21ನೇ ಸಾಲಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಅರ್ಜಿ ಸಲ್ಲಿಸಿ, ಅರ್ಜಿ ಆಯ್ಕೆಗೊಂಡು ಬ್ರಹ್ಮಾವರ ಎಸ್‌ಬಿಐ ಬ್ಯಾಂಕಿನಲ್ಲಿ ಸಾಲ ಸೌಲಭ್ಯ ನೀಡುವ ಬಗ್ಗೆ ಇಲಾಖೆಯ ಒಪ್ಪಿಗೆ ಪತ್ರ ಕೇಳಿದ್ದು, ಬ್ಯಾಂಕ್‌ಒಪ್ಪಿಗೆ ಪತ್ರ ನೀಡಿರುತ್ತಾರೆ. ಮತ್ತು ಇಲಾಖೆಯ ಸಬ್ಸಿಡಿ ಹಣ ಬ್ರಹ್ಮಾವರ ಎಸ್‌ಬಿಐ ಖಾತೆಗೆ ಜಮಾ ಆಗಿದ್ದರೂ, ಸದ್ರಿ ಹಣವನ್ನು ನೀಡುವರೇ ಬ್ರಹ್ಮಾವರ ಎಸ್‌ಬಿಐ ಬ್ಯಾಂಕ್‌ಮ್ಯಾನೇಜರ್‌ನಿತೀಶ್‌ಪೈ ರವರು ಹಣವನ್ನು ಪಿರ್ಯಾದುದಾರರಿಗೆ ನೀಡುವರೇ ಸತಾಯಿಸಿ ನಂತರ ಉಡುಪಿ ಎಸ್‌ಬಿಐನ R A C C ವಿಭಾಗದ ಮ್ಯಾನೇಜರ್‌ಕಿರಣ್‌ಕುಮಾರ್‌ಎಂಬವರನ್ನು ಭೇಟಿಯಾಗುವಂತೆ ತಿಳಿಸಿದ ಮೇರೆಗೆ ದಿನಾಂಕ: 17/11/2021 ರಂದು ಬೆಳಿಗ್ಗೆ 11:30 ಗಂಟೆಗೆ ಹೋದಾಗ ಕಿರಣ್‌ಕುಮಾರ್‌ರವರು ಪಿರ್ಯಾದುದಾರರಿಗೆ ಅವಾಚ್ಯ ಶಬ್ಧಗಳಿಂದ ಬೈದು, ಜಾತಿ ನಿಂದನೆ ಮಾಡಿದ್ದಲ್ಲದೆ ಪಿರ್ಯಾದುದಾರರಿಗೆ ಆರ್ಥಿಕ ನಷ್ಟವುಂಟಾಗುವಂತೆ ಮಾಡಿರುತ್ತಾರೆ .ಈ ಬಗ್ಗೆ ಉಡುಪಿ  ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 167/2021 ಕಲಂ: 3(1)(r), 3(1)(s), 3(1)(zc) SC ST Act 1989, & ಕಲಂ:  409, 504 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 18-11-2021 06:47 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080