ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿ ಸುಬ್ರಮಣ್ಯ ಹೊಳ್ಳ ಇವರು  ದಿನಾಂಕ 17/10/2022 ರಂದು ಹೆಂಡತಿ ಸುಮ ಹೊಳ್ಳ ರೊಂದಿಗೆ ತನ್ನ ಬಾಬ್ತು  KA55E6552 ನೇದರಲ್ಲಿ  ತೆಕ್ಕಟ್ಟೆಗೆ ಹೋಗಿ ಕೆಲಸ ಮುಗಿಸಿ ವಾಪಾಸ್ಸು ಮನೆಗೆ ಹೊರಟು ಮಧ್ಯಾಹ್ನ 3.00 ಗಂಟೆಗೆ ರಾ ಹೆ 66 ರ ತೆಕ್ಕಟ್ಟೆ ಗ್ರಾಮದ ತೆಕ್ಕಟ್ಟೆ ಜಂಕ್ಷನ್ ನಿಂದ ಸ್ವಲ್ಪ  ಮುಂದಕ್ಕೆ ಕುವೆಂಪು ಶಾಲೆಯ ಬಳಿಯಲ್ಲಿ ಬರುತ್ತಿರುವಾಗ ಎದುರಿನಿಂದ KA20EX3073 ಸ್ಕೂಟಿ ಸವಾರ ಪ್ರಮೋದ ಎಂಬಾತನು ತನ್ನ ಬಾಬ್ತು ಸ್ಕೂಟಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟಿಗೆ ಢಿಕ್ಕಿ ಹೊಡೆದನು.  ಪರಿಣಾಮ ಎರಡೂ ಸ್ಕೂಟಿ ರಸ್ತೆಗೆ  ಬಿದ್ದಿದ್ದು ಸ್ಕೂಟಿಯನ್ನು ಚಲಾಯಿಸುತ್ತಿದ್ದ  ಪಿರ್ಯಾದಿದಾರರಿಗೆ ಎರಡೂ ಕಾಲಿನ ಪಾದಕ್ಕೆ  ಕಾಲಿನ ಗಂಟಿಗೆ  ಎರಡೂ ಕೈಗೆ ತರಚಿದ ಗಾಯವಾಗಿದ್ದು ಸ್ಕೂಟಿಯ ಸಹ ಸವಾರಳಾದ ಸುಮಾರಿಗೆ ತಲೆಗೆ ತೀವೃ ತರಹದ ರಕ್ತಗಾಯ ಕೈಗೆ ಕಾಲಿಗೆ ತರಚಿದ ಗಾಯವಾಗಿರುತ್ತದೆ. ಹಾಗೂ ಅಪಘಾತ ಪಡಿಸಿದ ಸ್ಕೂಟಿ ಸವಾರ ಪ್ರಮೋದ ಎಂಬವರಿಗೆ  ಕೈಗೆ ಕಾಲಿಗೆ  ತರಚಿದ ಗಾಯ ಆಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 176/2022 ಕಲಂ: 279. 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿ ಜಯಕರ ಹೆಗ್ಡೆ ಇವರು ದಿನಾಂಕ 17/10/2022 ರಂದು ತನ್ನ ಬಾಬ್ತು ಮೋಟಾರ್ ಸೈಕಲ್ KA20EW9388 ನೇದರಲ್ಲಿ ಸಹ ಸವಾರನಾಗಿ ಚಂದ್ರ ಶೇಖರ ಶೆಟ್ಟಿ ರವರನ್ನು ಕುಳ್ಳಿರಿಸಿಕೊಂಡು ಬೇಳೂರು ಪೇಟೆಗೆ ಹೋಗುವರೆ ಮನೆಯಿಂದ ಹೊರಟು ಸುಮಾರು 5.00 ಗಂಟೆಗೆ ಕೋಣಬಗೆ ಬೇಳೂರು ರಸ್ತೆಯಲ್ಲಿರುವ ನಾರಾಯಣ ಶೆಟ್ಟಿಯವರ  ಅಂಗಡಿಯ  ಎದುರು ತಲುಪಿಸಿದಾಗ ಎದುರಿನಿಂದ KA20B 2967 ನೇ ಶಾಲಾ ವಾಹನದ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾಬಲ ಬದಿಗೆ ಬಂದು ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರರು  ಹಾಗೂ ಸಹ ಸವಾರರು ಮೊಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲ ಕಾಲು ಮತ್ತು ಬಲ ಕೈಗೆ ಮೂಳೆ ಮುರಿತದ ಗಾಯವಾಗಿದ್ದು, ಸಹ ಸವಾರನಿಗೆ ಮೂಗಿಗೆ ಹಾಗೂ ತುಟಿಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 177/2022 ಕಲಂ: 279. 338 IPC  134(A)(B)MV ACT  ನಂತೆ ಪ್ರಕರಣ ದಾಖಲಾಗಿರುತ್ತದೆ.

 ಇತರ ಪ್ರಕರಣ

  • ಬೈಂದೂರು: ದಿನಾಂಕ :18-10-2022 ರಂದು ಪಿರ್ಯಾದಿ ಗಣೇಶ ಪ್ರಭು ಇವರು ಮನೆಯಲ್ಲಿರುವಾಗ ಬೆಳಿಗ್ಗೆ 10:00  ಗಂಟೆ ಸಮಯಕ್ಕೆ ಪಿರ್ಯಾದಿದಾರರ ದೊಡ್ಡಪ್ಪನ ಮಗ ಸತೀಶ ಪ್ರಭುರವರ ಮನೆಯ ಪಕ್ಕದ ಗುಮ್ನಾಡಿಯ ತೋಟದಲ್ಲಿ ಕಿರುಚಾಟದ ಶಬ್ಧ ಕೇಳಿ ಪಿರ್ಯಾದಿದಾರರು ಜೊತೆಯಲ್ಲಿ  ನಾಗರಾಜ ಪ್ರಭುರವರನ್ನು ಸೇರಿಸಿಕೊಂಡು ಸದ್ರಿ ತೋಟಕ್ಕೆ ತೆರಳಿದಾಗ ಸತೀಶ ಪ್ರಭುರವರು ತೆಂಗಿನ ಮರದ ಬುಡದಲ್ಲಿ ಅರ್ಧ ಸುಟ್ಟ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂದಿದ್ದು ಏಣಿಯೊಂದು ವಿದ್ಯುತ್ ತಂತಿಗೆ ತಾಗಿಕೊಂಡಿದ್ದು ಪಿರ್ಯಾದಿದಾರರು  ಸತೀಶ ಪ್ರಭುರವರನ್ನು ಉಪಚರಿಸಿ ನೋಡಿದಾಗ ಸ್ಥಳದಲ್ಲಿ ಮೃತ ಪಟ್ಟಿದ್ದು ಕಂಡು ಬಂತು ಈ ದಿನ ಬೆಳಿಗ್ಗೆ 10:00 ಗಂಟೆ ಸಮಯಕ್ಕೆ ಸತೀಶ ಪ್ರಭುರವರು ಶಿರೂರು ಗ್ರಾಮದ  ತಮ್ಮ ಗುಮ್ನಾಡಿಯ ತೋಟದಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದು ತೋಟದಲ್ಲಿ ತೆಂಗಿನ ಮರದಿಂದ ತೆಂಗಿನ ಕಾಯಿ ಕೀಳಲು ಅಲ್ಯೂಮಿನಿಯಂ ಏಣಿಯನ್ನು ತೆಗೆದುಕೊಂಡು ಹೋಗುವಾಗ ಅವರ ಜಾಗದಲ್ಲಿ ಹಾದು ಹೋಗಿರುವ ಹೈ ಟೆನ್ಸನ್ ವಿದ್ಯುತ್ ಗೆ ಏಣಿ ತಗುಲಿ ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿ ಮೃತಪಟ್ಟಿದ್ದು ಈ ಘಟನೆಗೆ ಸದ್ರಿ ಸ್ಥಳದಲ್ಲಿ ನಿಗದಿತ ಮಿತಿಗಿಂತ ಬಹಳ ಕಡಿಮೆ ಎತ್ತರದಲ್ಲಿ ಹಾದು ಹೋಗಿದ್ದ ಹೈ ಟೆನ್ಸನ್ ವಿದ್ಯುತ್ ತಂತಿಯೇ ಕಾರಣವಾಗಿದ್ದು ಮೆಸ್ಕಾಂನವರ  ನಿರ್ಲಕ್ಷ್ಯತನದಿಂದ ಈ ಘಟನೆ ಸಂಭವಿಸಿರುತ್ತವೆ ಎಂಬಿತ್ಯಾದಿ. ಈ ಬಗ್ಗೆ ಬೈಂದೂರು  ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ ಅಕ್ರ:208-2022 ಕಲಂ: 304(A)  ಐಪಿಸಿ  ನಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ದಿನಾಂಕ:13.10.2022 ರಂದು ರಾತ್ರಿ ಸುಮಾರು 20:00 ಗಂಟೆಗೆ ಪಿರ್ಯಾದಿ ಪ್ರವೀಣ್ ಕುಂದರ್  ಇವರು ತನ್ನ ಬಾಬ್ತು KA20 MB- 5675 ನೇ ಕಾರಿನಲ್ಲಿ ಕಿರಣ್ ಆಳ್ವ ಎಂಬವರೊಂದಿಗೆ  ಮುಲ್ಕಿ ಕಡೆಯಿಂದ ಕಾಪು ಕಡೆಗೆ ಬರುತ್ತಿರುವಾಗ ಕಾಪು ತಾಲೂಕು ನಡ್ಸಾಲು ಗ್ರಾಮದ ಅಮರ್ ಕಂಫರ್ಟ್ಸ ನ ಎದುರು ಆರೋಪಿಯು KA-19-F-3464 ನೇ ಸರಕಾರಿ ಬಸ್ಸನ್ನು ಅತಿವೇಗವಾಗಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಗಾಡಿಗೆ ಚೊಕ್ ಹೊಡೆದು ಮುಂದಕ್ಕೆ ಚಲಾಯಿಸಿ ಪಡುಬಿದ್ರಿ ಬಸ್ ಸ್ಟ್ಯಾಂಡ್ ನಲ್ಲಿ ನಿಲ್ಲಿಸಿದನು. ಆ ಸಮಯ ಕಿರಣ್ ಆಳ್ವ ಕಾರನ್ನು ನಿಲ್ಲಿಸಲು ಸೂಚಿಸಿದಂತೆ ಪಿರ್ಯಾದುದಾರರು ಕಾರನ್ನು ನಿಲ್ಲಿಸಿ ದಾಗ ಕಿರಣ್ ಆಳ್ವ ಬಸ್ಸಿನ ನಿರ್ವಾಹಕ ರಲ್ಲಿ ಅತೀವೇಗವಾಗಿ ಚಲಾಯಿಸುವುದನ್ನು ಪ್ರಶ್ನಿಸಲು ಹೊರಟರು.   ಪಿರ್ಯಾದುದಾರರು ಕಾರನ್ನು ನಿಲ್ಲಿಸಿ ಬರುವಾಗ ಕಿರಣ್ ಆಳ್ವ ರವರು ಬಸ್ಸಿನ ನಿರ್ವಾಹಕರಿಗೆ ಬಸ್ಸನ್ನು ನಿಧಾನವಾಗಿ ಚಲಾಯಿಸಲು ಸೂಚಿಸಿದಾಗ ಅವರ ನಡುವೆ ಮಾತುಕತೆ ನಡೆಯುವುದನ್ನು ನೋಡಿ ಫಿರ್ಯಾದುದಾರರು ಅಲ್ಲಿಗೆ ದಾವಿಸಿ ಹೋಗುವಾಗ ಆ ಬಸ್ಸಿನ ಚಾಲಕ ಆರೋಪಿಯು ಬಸ್ಸಿನಿಂದ ಕೆಳಗಿಳಿದು ಪಿರ್ಯಾದುದಾರರನ್ನು ತಡೆದು ನಿಲ್ಲಿಸಿ ಬೈಯುತ್ತಾ, ತಾನು ಸರಕಾರಿ ಬಸ್ಸಿನ ಚಾಲಕ ಎಂದು ಅಹಂಕಾರದಿಂದ ಪಿರ್ಯಾದುದಾರರಿಗೆ ಮತ್ತು ಕಿರಣ್ ಆಳ್ವ ರವರಿಗೆ ಅವಾಚ್ಯ ಶಬ್ಧಗಳಿಂದ ಬೈದು ನಿಮ್ಮನ್ನು ಬಸ್ಸಿನ ಅಡಿಗೆ ಹಾಕಿ ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿರುವುದಲ್ಲದೇ ಕೈಯಿಂದ ಹೊಡೆದಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ  ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 130/2022 ಕಲಂ:341, 504, 506, 323 ಐಪಿಸಿ ನಂತೆ ಪ್ರಕರಣ ದಾಖಲಾಗಿರುತ್ತದೆ.

 ಕಳವು ಪ್ರಕರಣ

  • ಮಣಿಪಾಲ: ಪಿರ್ಯಾದಿ ಧೀಕ್ಷಿತ್‌ ಶೆಟ್ಟಿ ಇವರು ,ದಿನಾಂಕ: 29.07.2022 ರಂದು 11:30 ಗಂಟೆಗೆ ಕೆಲಸ ಮುಗಿಸಿಕೊಂಡು ತನ್ನ ಬಾಬ್ತು ಕೆಎ19 ಇಡಬ್ಲ್ಯೂ 2005 ಪಲ್ಸರ್‌ ಮೋಟಾರ್‌ ಸೈಕಲ್‌ನಲ್ಲಿ ಮನೆಗೆ ಹೋಗುತ್ತಾ ಕೆಳ ಪರ್ಕಳ ಗೋಪಾಲಕೃಷ್ಣ ದೇವಸ್ಥಾನದ ಬಳಿ ಮೋಟಾರ್‌ಸೈಕಲ್‌ನ ಪೆಟ್ರೋಲ್‌ ಖಾಲಿಯಾಗಿದ್ದು ಮೋಟಾರ್‌ ಸೈಕಲ್‌ನ್ನು ಅಲ್ಲಿಯೇ  ನಿಲ್ಲಿಸಿ ಮನೆಗೆ  ಹೋಗಿರುತ್ತಾರೆ. ದಿನಾಂಕ: 01.08.2022 ರಂದು ಮಧ್ಯಾಹ್ನ 12:00 ಗಂಟೆಗೆ ಬಂದು ನೋಡುವಾಗ ಮೋಟಾರ್‌ ಸೈಕಲ್‌ಅಲ್ಲಿ ಇಲ್ಲದೇ ಇದ್ದು ಯಾರೊ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಮೋಟಾರ್‌ಸೈಕಲ್‌ನ ಅಂದಾಜು ಬೆಲೆ 25000/- ಆಗಬಹುದು. ಈ ಬಗ್ಗೆ ಮಣಿಪಾಲ  ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 191/2022  ಕಲಂ: 379 ಐಪಿಸಿ ನಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ ‌

  • ಪಡುಬಿದ್ರಿ: ಪಿರ್ಯಾದಿ ಉಮೇಶ್ ಇವರು ರೈಲ್ವೆ ಇಲಾಖೆಯಲ್ಲಿ ಟ್ರಾಕ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿದ್ದು, ಈ ದಿನ ದಿನಾಂಕ:18.10.2022 ರಂದು ಬೆಳಿಗ್ಗೆ 6:00 ಗಂಟೆಯಿಂದ 14:00 ಗಂಟೆಯವರೆಗ ನಂದಿಕೂರಿನಿಂದ ಪಾದೆಬೆಟ್ಟುವಿನ ನಡುವಿನ ಟ್ರಾಕ್ ನಲ್ಲಿಕರ್ತವ್ಯದಲ್ಲಿರುವಾಗ ಸ್ಟೇಷನ್ ಮಾಸ್ಟರ್ ದಿನೇಶ ಎಂಬವರು ಬೆ.10:45 ಗಂಟೆಗೆ ಕರೆ ಮಾಡಿ ಎಲ್ಲೂರು ಗ್ರಾಮದ ಕೊಳಚ್ಚೂರು ಎಂಬಲ್ಲಿ ಟ್ರಾಕ್ ಮಧ್ಯೆ ತಲೆ ಕೈಕಾಲು ಛಿದ್ರಗೊಂಡು ಕವುಚಿ ಬಿದ್ದ ಸ್ಥಿತಿಯಲ್ಲಿ ಸುಮಾರು 17 ರಿಂದ 18 ವರ್ಷ ಪ್ರಾಯದ ಹುಡುಗನ ಮೃತದೇಹ ಇರುವುದಾಗಿ ತಿಳಿಸಿದ್ದು, ಪಿರ್ಯಾದುದಾರರು ಸ್ಥಳಕ್ಕೆ ಹೋಗಿ ನೋಡಿದಾಗ ಮುಂಬೈಯಿಂದ ಕೂಚುವೇಲಿಗೆ ಹೋಗುವ ಗರೀಬ್ ರತ್ ಎನ್ನುವ ಟ್ರೈನಿಗೆ 10:42 ಗಂಟೆಗೆ ರೈಲ್ವೆ ಟ್ರಾಕ್ ನಲ್ಲಿ ರೈಲಿಗೆ ತಲೆ ಕೊಟ್ಟು ಮೃತಪಟ್ಟಿರುವ ಸಾಧ್ಯತೆ ಇರುತ್ತದೆ. ಟ್ರಾಕ್ ನ ಪಕ್ಕದಲ್ಲಿ KA20EY4151 ನೇ ಸ್ಕೂಟರ್ ನಿಂತಿದ್ದು ಅದನ್ನು ಪರಿಶೀಲಿಸಿ ಅದರಲ್ಲಿದ್ದ ಮೊಬೈಲ್ ಪೋನ್ ಗೆ ಕರೆ ಮಾಡಿದಾಗ ಮೃತಪಟ್ಟ ಹುಡುಗ ಬೆಳ್ಮಣುವಿನ ಸದಾಶಿವ ಆಚಾರ್ಯ ರವರ ಮಗ ಆದರ್ಶ ಎಂಬುದಾಗಿ ತಿಳಿದು ಬಂದಿರುತ್ತದೆ.  ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಯು.ಡಿ.ಆರ್ 24/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

 

 

 

ಇತ್ತೀಚಿನ ನವೀಕರಣ​ : 18-10-2022 06:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080