ಅಭಿಪ್ರಾಯ / ಸಲಹೆಗಳು

 ಅಪಘಾತ ಪ್ರಕರಣ

 • ಕಾರ್ಕಳ: ದಿನಾಂಕ 17/10/2022 ರಂದು ಬೆಳಗ್ಗೆ 10:45 ಗಂಟೆಗೆ ಕಾರ್ಕಳ ತಾಲೂಕು, ಮುಡಾರು ಗ್ರಾಮದ ಕಂಬಳ ಕ್ರಾಸ್  ಬಳಿ ಹಾದು ಹೋಗಿರುವ ಕಾರ್ಕಳ-ಎಸ್.ಕೆ. ಬಾರ್ಡರ್ ಕಡೆಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೋಟಾರು ಸೈಕಲ್ ನಂಬ್ರ KA-21-K-693 ನೇಯದರ ಸವಾರ ಸುದರ್ಶನ ಶೇರಿಗಾರ ಮೋಟಾರು ಸೈಕಲನ್ನು ಬಜಗೋಳಿ ಪೇಟೆ ಕಡೆಯಿಂದ ಕಂಬಳ ಕ್ರಾಸ್ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆಯನ್ನು ದಾಟುತ್ತಿದ್ದ ಶೀನ ನಲ್ಕೆ ರವರಿಗೆ ಢಿಕ್ಕಿ ಹೊಡೆದು, ಬಳಿಕ ರಸ್ತೆಯನ್ನು ದಾಟಲು ರಸ್ತೆ ಬದಿಯಲ್ಲಿ ನಿಂತಿದ್ದ ಪಿರ್ಯಾದಿದಾರರಾದ ಶ್ರೀಮತಿ ವಿಶಾಲ ಶೆಟ್ಟಿ (31), ಗಂಡ: ಪ್ರಸಾದ್ ಶೆಟ್ಟಿ, ವಾಸ: ಹಲ್ಮೆರಗುತ್ತು, ಗಣಪತಿ ಕಟ್ಟೆ, ನಲ್ಲೂರು ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು ಇವರ ಹಿಂಭಾಗಕ್ಕೆ ಢಿಕ್ಕಿ ಹೊಡೆದ ಪರಿಣಾಮ, ಶೀನ ನಲ್ಕೆಯವರ ಬಲಕಾಲಿನ ಪಾದದ ಗಂಟಿಗೆ ಗುದ್ದಿದ ಗಾಯ ಹಾಗೂ ಪಿರ್ಯಾದಿದಾರರ ಬೆನ್ನಿಗೆ ಗುದ್ದಿದ ನೋವು ಹಾಗೂ ಎರಡೂ ಕಾಲುಗಳಿಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 134/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹೆಬ್ರಿ: ಪಿರ್ಯಾದಿದಾರರಾದ ಪ್ರಾನ್ಸಿಸ್ ಮಸ್ಕರೇನನ್ಸ್ (45) , ತಂದೆ: ದಿ. ಜಾನ್ ಮಸ್ಕರೇನನ್ಸ್, ವಾಸ:ದುರ್ಗಪರಮೇಶ್ವರಿ ರೈಸ್ ಮೀಲ್ ನ ಹತ್ತಿರ, ಹಳೇ ಮನೆ, ಹೆರ್ಗ ಅಂಚೆ, ಮತ್ತು ಗ್ರಾಮ,  ಉಡುಪಿ ಇವರು  KA-20-4099 ನೇ ಓಮ್ನಿ ಅಂಬುಲೈನ್ ವಾಹನದ ಚಾಲಕ ಮತ್ತು ಮಾಲಕರಾಗಿದ್ದು, ದಿನಾಂಕ 17/10/2022 ರಂದು ಪಿರ್ಯಾದಿದಾರರು ತನ್ನ ಓಮ್ನಿ ಅಂಬುಲೈನ್ಸ್ ವಾಹನದಲ್ಲಿ ರಾತ್ರಿ 8:30 ಗಂಟೆಗೆ ಮಣಿಪಾಲ ಕೆ.ಎಂ.ಸಿ ಅಸ್ಪತ್ರೆಯಲ್ಲಿ ಪ್ರಿಯಾಂಕ ಇವರನ್ನು ಅವರ ಸಂಬಂಧಿಕರಾದ ಸಾಕಮ್ಮ ಭಾಯಿ, ಬೀಮನಾಯ್ಕ್ ಜೊತೆಯಲ್ಲಿ ಮಣಿಪಾಲದಿಂದ ದಾವಣಗೆರೆಯ ಹೊನ್ನಾಳ್ಳಿಗೆ ಹೊರಟು ರಾತ್ರಿ 9:20 ಗಂಟೆಗೆ ಹೆಬ್ರಿ ಗ್ರಾಮದ ಮೇಲ್ಪೇಟೆಯ ಹಳೇ ಕುಬೇರ ಬಾರ್ ನ ಎದುರಿನ ರಸ್ತೆ ತಲುಪಿದಾಗ ಅವರ ಎದುರುಗಡೆಯಿಂದ ಅಗುಂಬೆ ಕಡೆಯಿಂದ KA-20-P-1091 ನೇ ಓಮ್ನಿ ಕಾರನ್ನು ಅದರ ಚಾಲಕ ಪ್ರಕಾಶ್ ಇವರು ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿ ರಸ್ತೆಯ ಬಲಬದಿಗೆ ಬಂದು ಪಿರ್ಯಾದಿದಾರರು ಚಲಾಯಿಸಿಕೊಂಡು ಬರುತ್ತಿದ್ದ ಓಮ್ನಿ ಅಂಬುಲೈನ್ಸ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಾಹನದ ಮುಂದಿನ ಭಾಗ ಜಖಂ ಅಗಿರುವುದಲ್ಲದೇ ವಾಹನದಲ್ಲಿದ್ದ ಸಾಕಮ್ಮ ಬಾಯಿ ಇವರಿಗೆ ತಲೆಗೆ ಮತ್ತು ಮೂಗಿಗೆ ಗಾಯವಾಗಿದ್ದು. ಪ್ರಿಯಾಂಕ ರವರಿಗೆ ಬೆನ್ನಿಗೆ ಗುದ್ದಿದ ನೋವಾಗಿರುತ್ತದೆ. ಬೀಮಾ ನಾಯ್ಕ್ ಮತ್ತು ಪಿರ್ಯಾದಿದಾರರಿಗೆ ಯಾವುದೇ ನೋವು ಅಗಿರುವುದಿಲ್ಲ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 54/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .  

ಅಸ್ವಾಭಾವಿಕ ಮರಣ ಪ್ರಕರಣ

 • ಮಲ್ಪೆ: ಪಿರ್ಯಾದಿದಾರರಾದ ಸುನಿಲ್ ಕುಮಾರ(43), ತಂದೆ: ಸಂಜೀವ್, ವಾಸ: ಕವಿತ ನಿಲಯ ಕಲ್ಮಾಡಿ ಬೊಟ್ಟಲ ಕೊಡವೂರು ಗ್ರಾಮ ಇವರ  ಚಿಕ್ಕಮ್ಮನ  ಮಗ  ಪ್ರಶಾಂತ್(32) ಇವರು ದಿನಾಂಕ 17/10/2022 ರಂದು  ಬೆಳಿಗ್ಗೆ 11:00 ಗಂಟೆಯಿಂದ  ಬೆಳಿಗ್ಗೆ  11:30 ಗಂಟೆಯ  ಮದ್ಯಾವಧಿಯಲ್ಲಿ    ತನ್ನ ಮನೆಯ  ಕೋಣೆಯ  ಪಕ್ಕಾಸಿಗೆ  ಸೀರೆಯನ್ನು  ಕಟ್ಟಿ  ನೇಣು  ಬೀಗಿದು  ನೇತಾಡುತ್ತಿದ್ದವರನ್ನು  ಪಿರ್ಯಾದಿದಾರರು  ಹಾಗೂ  ಇತರರು  ಸೇರಿ  ಸೀರೆಯನ್ನು  ತುಂಡು  ಮಾಡಿ  ಚಿಕಿತ್ಸೆ  ಬಗ್ಗೆ  ಉಡುಪಿ  ಜಿಲ್ಲಾ ಆಸ್ಪತ್ರೆಗೆ  ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷಿಸಿ 12.00 ಗಂಟೆಗೆ  ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ.  ಪ್ರಶಾಂತ 6 ವರ್ಷಗಳಿಂದ ಮಾನಸಿಕ  ಖಾಯಿಲೆಯಿಂದ  ಬಳಲುತಿದ್ದು  ಈ  ಬಗ್ಗೆ  ದೊಡ್ಡಣ ಗುಡ್ಡೆ  ಕೆ.ಕೆ  ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆಯುತ್ತಿದ್ದು ಇತೀಚಿಗೆ 1  ತಿಂಗಳಿನಿಂದ  ಮಾನಸಿಕ ಖಿನ್ನತೆಗೆ  ಒಳಗಾಗಿದ್ದು ಇದೇ ಕಾರಣದಿಂದ  ಕುತ್ತಿಗೆ ಸೀರೆಯಿಂದ ನೇಣು  ಬಿಗಿದು ಕೊಂಡು  ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 59/2022 ಕಲಂ: 174   ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.      
 • ಮಲ್ಪೆ: ಪಿರ್ಯಾದಿದಾರರಾದ ವಸಂತಿ(54), ಗಂಡ: ದಿ. ಕೃಷ್ಂ  ಪೂಜಾರಿ, ವಾಸ: ಕಂಬಳತೋಟ, ಕೆಮ್ಮಣ್ಣು ಪಡುತೋನ್ಸೆ ಗ್ರಾಮ ಇವರು ಮಗಳು ಸ್ಮೀತಾ(32) ಇವರು ಪಿರ್ಯಾದಿದಾರರ  ಜೊತೆ  ದಿನಾಂಕ 08/10/2022 ರಂದು ಒರಿಸ್ಸ ರಾಜ್ಯಕ್ಕೆ  ಪ್ರವಾಸದ  ನಿಮಿತ್ತ  ಹೋಗಿದ್ದು  ದಿನಾಂಕ 16/10/2022  ರಂದು ಬೆಳಿಗ್ಗೆ  ಊರಿಗೆ  ಬಂದಿರುತ್ತಾರೆ. ದಿನಾಂಕ 16/10/2022  ರಂದು  ಬೆಳಿಗ್ಗೆ   ಮನೆಯಲ್ಲಿರುವಾಗ  11:00  ಗಂಟೆಗೆ  ಸ್ಮೀತಾ ರವರಿಗೆ ತೀವ್ರ  ಕೆಮ್ಮು ಬಂದಿದ್ದು  ಔಷದ  ಸೇವಿಸಿ  ಮಲಗಿರುತ್ತಾರೆ.    ದಿನಾಂಕ 17/10/2022 ರಂದು  ಬೆಳಿಗ್ಗೆ  6:00 ಗಂಟೆಗೆ  ಸ್ಮೀತಾ ರವರಿಗೆ  ತೀವ್ರ  ತರದ  ಉಸಿರಾಟದ  ತೊಂದರೆ  ಉಂಟಾದ  ಪರಿಣಾಮ  ಸ್ಮೀತಾ ರವರನ್ನು ಚಿಕಿತ್ಸೆ  ಬಗ್ಗೆ   ಪಿರ್ಯಾದಿದಾರರು  ಉಡುಪಿ ಗಾಂಧಿ ಅಸ್ಪತೆಗೆ  ಕರೆದುಕೊಂಡು ಬಂದಾಗ  ಅಲ್ಲಿನ  ವೈದ್ಯಾಧಿಕಾರಿಯವರು  ನೋಡಿ   ಬೇರೆ  ಅಸ್ಪತ್ರೆಗೆ ಕರೆದುಕೊಂಡು  ಹೋಗುವಂತೆ  ತಿಳಿಸಿದ್ದು , ಬಳಿಕ ಸ್ಮೀತಾ ರವರನ್ನು  ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು  ಬಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ  ಈಗಾಗಲೇ  ಮೃತಪಟ್ಟಿರುವುದಾಗಿ  ಬೆಳಿಗ್ಗೆ 8:05  ಗಂಟೆಗೆ    ತಿಳಿಸಿರುತ್ತಾರೆ. ಸ್ಮೀತಾ ರವರಿಗೆ  ಒಂದು  ವರ್ಷ ವಯಸ್ಸು  ಇರುವಾಗ  ಹೃದಯ ಶಸ್ತ ಚಿಕಿತ್ಸೆ  ಆಗಿರುತ್ತದೆ. ಹಾಗೂ  ಸ್ಮೀತಾರವರು   ಉಸಿರಾಟದ  ತೊಂದರೆ ಬಗ್ಗೆ  ಮಣಿಪಾಲ  ಕೆಂ.ಎಂ.ಸಿ ಆಸ್ಪತ್ರೆಯಲ್ಲಿ    ಚಿಕಿತ್ಸೆ ಪಡೆಯುತ್ತಿದ್ದವರು ರವರು ಹೃದಯ ಸಂಬಂದಿ  ಖಾಯಿಲೆಯಿಂದ  ಬಳಲುತಿದ್ದು  ಇದೇ ಕಾರಣದಿಂದ ಮೃತ  ಪಟ್ಟಿರ ಬಹುದುದಾಗಿದೆ . ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 58/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .    
 • ಹೆಬ್ರಿ: ಪಿರ್ಯಾದಿದಾರರಾದ ಕೃಷ್ಣ ಶೆಟ್ಟಿಗಾರ (47), ತಂದೆ:ಅನಂತ ಶೆಟ್ಟಿಗಾರ, ವಾಸ: ಶ್ರೀ ರಾಘವೇಂದ್ರ  ನಿಲಯ ಮುಳ್ಳುಗುಡ್ಡೆ  ಕಾಳಾಯಿ ಶಿವಪುರ ಗ್ರಾಮ ಹೆಬ್ರಿ ತಾಲೂಕು ಇವರ  ಅಣ್ಣ ನಾರಾಯಣ ಶೆಟ್ಟಿಗಾರ್ (73) ರವರು  ಸುಮಾರು ವರ್ಷಗಳಿಂದ ಉಬ್ಬಸ ಕಾಯಿಲೆ ಇದ್ದು. ಈ ಬಗ್ಗೆ ಅವರಿಗೆ ಸುಮಾರು ಕಡೆಗಳಲ್ಲಿ ಚಿಕಿತ್ಸೆಯನ್ನು  ಮಾಡಿಸಿದ್ದರೂ ಗುಣಮುಖವಾಗಿರುವುದಿಲ್ಲ ಈ ಬಗ್ಗೆ ಅವರು ಮಾನಸಿಕವಾಗಿ ನೊಂದು ಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 17/10/2022 ರಂದು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 4:30 ಗಂಟೆಯ ಮದ್ಯಾವಧಿಯಲ್ಲಿ ಶಿವಪುರ ಗ್ರಾಮದ ಮುಳ್ಳುಗುಡ್ಡೆ ಕಾಳಾಯಿ ಎಂಬಲ್ಲಿ ಅವರ ಮನೆಯಿಂದ 300 ಮೀಟರ್ ದೂರದಲ್ಲಿರುವ ಪಿ.ಕೆ ರಾಜನ್ ನಾಯರ್ ಇವರ ರಬ್ಬರ್ ತೋಟದಲ್ಲಿರುವ ಅವರಣವಿರದ ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 30/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .    

ಮಟ್ಕಾ ಜುಗಾರಿ ಪ್ರಕರಣ

 • ಉಡುಪಿ: ದಿನಾಂಕ 17/10/2022 ರಂದು ಪ್ರಮೋದ್‌ ಕುಮಾರ್‌.ಪಿ, ಪೊಲೀಸ್‌ ನಿರೀಕ್ಷಕರು, ಉಡುಪಿ ನಗರ ಪೊಲೀಸ್‌ ಠಾಣೆ ಇವರಿಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಸಿಟಿ ಬಸ್ ನಿಲ್ದಾಣದ ಎದುರಿನ  ಗೂಡಂಗಡಿಯ ಬಳಿಯ ಓರ್ವ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿರುವುದಾಗಿ ದೊರೆತ ಮಾಹಿತಿ ಮೇರೆಗೆ  ದಾಳಿ ನಡೆಸಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ವಿಠಲ ಶಂಕರಪ್ಪ ಹಿರೇಕುರುಬರ್  ಪ್ರಾಯ: 26 ವರ್ಷ, ತಂದೆ:ಶಂಕರಪ್ಪ, ಹಾಲಿ ವಾಸ: ವಿಜಯನ್ ರವರ ಬಾಡಿಗೆ ಮನೆ, ಅಡಕದಕಟ್ಟೆ, ನಿಟ್ಟೂರು ಅಂಚೆ,  ಪುತ್ತೂರು ಗ್ರಾಮ ಉಡುಪಿ ತಾಲೂಕು ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಾನು ಕಮೀಷನ್‌ ಹಣಕೋಸ್ಕರ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟದ ಬಗ್ಗೆ ಹಣವನ್ನು ಸಂಗ್ರಹಿಸುತ್ತಿದ್ದು, ಸಂಗ್ರಹಿಸಿದ ಹಣವನ್ನು 2ನೇ ಆಪಾದಿತ ರಮೇಶ್‌ ಎಂಬಾತನಿಗೆ , 2ನೇ ಆಪಾದಿತನು 3ನೇ ಆಪಾದಿತ ಶ್ರೀನಿವಾಸ ಎಂಬಾತನಿಗೆ ಹಾಗೂ 3ನೇ ಆಪಾದಿತನು 4ನೇ ಆಪಾದಿತ ಲಿಯೋ ಕರ್ನಲಿಯೋ ಗೆ ಕೊಡುತ್ತಿರುವುದಾಗಿ ತಿಳಿಸಿದ್ದು, ಆಪಾದಿತನ  ವಶದಿಂದ ಮಟ್ಕಾ ಜುಗಾರಿ ಆಟಕ್ಕೆ ಸಂಗ್ರಹಿಸಿದ ನಗದು ರೂಪಾಯಿ 1,470/- ಮತ್ತು ಮಟ್ಕಾ ನಂಬ್ರ ಬರೆದ ಚೀಟಿ-1, ಬಾಲ್‌ಪೆನ್‌-1, ಒಪ್ಪೊ ಮೊಬೈಲ್‌ ಫೋನ್‌-1 ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 155/2022 ಕಲಂ: 78 (i) (iii) Karnataka Police  ACT ರಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣ

 • ಕೋಟ: ಪಿರ್ಯಾದಿದಾರರಾದ ಜ್ಯೋತಿ (32), ಗಂಡ: ಸಾಧಿಕ್, ವಾಸ: ಎಂ.ಜಿ ಕಾಲೋನಿ ವಡ್ಡರ್ಸೆ ಗ್ರಾಮ ಬ್ರಹ್ಮಾವರ ತಾಲೂಕು ಇವರು ತನ್ನ ಗಂಡ ಹಾಗೂ ಮಕ್ಕಳೊಂದಿಗೆ ಬಿದ್ಕಲ್ ಕಟ್ಟೆಯ ನಾಗಲಕ್ಷ್ಮಿ ರಾಘವೇಂದ್ರ ರವರ ಬಾಡಿಗೆ ಮನೆಯಲ್ಲಿ ವಾಸವಿದ್ದು, ದಿನಾಂಕ 17/10/2022 ರಂದು ಬೆಳಿಗ್ಗೆ 11:00 ಗಂಟೆಗೆ  ಬ್ರಹ್ಮಾವರ ತಾಲೂಕು  ವಡ್ಡರ್ಸೆ ಗ್ರಾಮದ  ಎಂ.ಜಿ ಕಾಲೋನಿಯಲ್ಲಿರುವ ತನ್ನ ತಾಯಿ ಮನೆಗೆ ಬಂದಾಗ, ತಾಯಿಯು ಮನೆಯಲ್ಲಿ ಇರದೇ ಕೆಲಸಕ್ಕೆ ಹೋಗಿರುವುದಾಗಿ ನೆರೆಮನೆಯವರು ತಿಳಿಸಿರುತ್ತಾರೆ.  ಮನೆಯಲ್ಲಿ  ಪಿರ್ಯಾದಿದಾರರ ತಂಗಿ ಆಶಾ ಇದ್ದು ಅವಳಲ್ಲಿ ಸರ್ಕಾರದಿಂದ ಸಿಗುವ ಉಚಿತ ಪಡಿತರ ಅಕ್ಕಿಯಲ್ಲಿ ಪಿರ್ಯಾದಿದಾರರ ಮತ್ತು ತನ್ನ ಮಗಳ ಪಾಲಿಗೆ ಬಂದ  ಅಕ್ಕಿಯನ್ನು ನೀಡುವಂತೆ ಕೇಳಿದಾಗ ಆಶಾ ಅವಾಚ್ಯ ಶಬ್ದಗಳಿಂದ ಬೈದು ಹಿಂದಿನಿಂದ ಬಂದು ಮರದ ದೊಣ್ಣೆಯಿಂದ ಪಿರ್ಯಾದಿದಾರರ ತಲೆಗೆ ಹೊಡೆದಿದ್ದು ಆಗ ಅಲ್ಲಿಯೇ ಕುಸಿದು ಬಿದ್ದು ತಲೆಯಿಂದ ರಕ್ತ ಬರುತ್ತಿತ್ತು ಕೂಡಲೇ ಪಿರ್ಯಾದಿದಾರರ ಗಂಡ ಅಂಬ್ಯಲೆನ್ಸ್ ನಲ್ಲಿ ಕೋಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಅಲ್ಲಿಂದ ಉಡುಪಿ ಜಿಲ್ಲಾಸ್ಪತ್ರೆಗೆ ಹೋಗಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 175/2022 ಕಲಂ: 324, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .    

ಇತ್ತೀಚಿನ ನವೀಕರಣ​ : 18-10-2022 09:49 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080