ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ದಿನಾಂಕ 16/10/2021  ರಂದು  ಸಂಜೆ  8:00 ಗಂಟೆಗೆ ಪಿರ್ಯಾದಿದಾರರಾದ ರಮೇಶ (38), ತಂದೆ:  ಸಂಜೀವ  ಪೂಜಾರಿ, ವಾಸ:  ವಡ್ಡರ್ಸೆ  ಗ್ರಾಮ, ಬನ್ನಾಡಿ  ಪೋಸ್ಟ್‌,  ಬ್ರಹ್ಮಾವರ  ತಾಲೂಕು,  ಉಡುಪಿ ಜಿಲ್ಲೆ ಇವರು ವಡ್ಡರ್ಸೆ  ಗ್ರಾಮದ  ಸೈಬ್ರಕಟ್ಟೆ- ಕೋಟ  ಮೂರಕೈ  ಡಾಮಾರು  ರಸ್ತೆಯ  ಬದಿಯಲ್ಲಿರುವ  ಶ್ರೀ ಮಂಜುನಾಥ ಹೊಟೇಲ್‌ ಹತ್ತಿರ ನಿಂತುಕೊಂಡಿರುವಾಗ Bajaj company Discovery ಮೋಟಾರ್ ಸೈಕಲ್ ನಂಬ್ರ KA-20-EB- 1607 ನೇದನ್ನು ಅವರ  ಸವಾರ  ರಂಜಿತ ಕೋಟ  ಮೂರಕೈ ಕಡೆಯಿಂದ  ಸೈಬ್ರಕಟ್ಟೆ ಕಡೆಗೆ  ಅತೀ ವೇಗ  ಹಾಗೂ  ಅಜಾಗರೂಕತೆಯಿಂದ  ಸವಾರಿ  ಮಾಡಿಕೊಂಡು  ಬಂದು ಶ್ರೀ ಮಂಜುನಾಥ  ಹೊಟೇಲ್‌ ಹತ್ತಿರ ತಲುಪುಷ್ಟರಲ್ಲಿ  ಡಾಮಾರು  ರಸ್ತೆಯನ್ನು ಉತ್ತರ  ಬದಿಯಿಂದ  ದಕ್ಷಿಣ  ಬದಿಗೆ  ದಾಟಲು  ರಸ್ತೆಯ ಉತ್ತರ  ಬದಿ  ಅಂಚಿನಲ್ಲಿ  ನಿಂತುಕೊಂಡಿದ್ದ ಶ್ರೀಮತಿ ಗುಲಾಬಿ  ರವರಿಗೆ  ಡಿಕ್ಕಿ  ಹೊಡೆದ  ಪರಿಣಾಮ ಶ್ರೀಮತಿ  ಗುಲಾಬಿ ರವರು  ರಸ್ತೆಗೆ  ಬಿದ್ದಿದ್ದು ಮೋಟಾರ್‌  ಸೈಕಲ್‌ ಸವಾರನು  ರಸ್ತೆಯ  ಉತ್ತರ  ಬದಿ  ಮಣ್ಣು  ರಸ್ತೆಗೆ ಬಿದ್ದಿದ್ದು  ಅಪಘಾತಕ್ಕೆ  ಒಳಗಾದ  ಗುಲಾಬಿ  ರವರ  ಹಣೆಗೆ  ರಕ್ತ  ಗಾಯವಾಗಿದ್ದು,  ಎಡಕಾಲ ಮೊಣಗಂಟಿನ ಕೆಳಗೆ ಮೂಳೆ ಮುರಿತದ  ರಕ್ತಗಾಯವಾಗಿರುತ್ತದೆ. ಮೋಟಾರ್‌ ಸೈಕಲ್‌ ಸವಾರನಿಗೆ  ಯಾವುದೇ ಗಾಯಗಳು ಆಗಿರುವುದಿಲ್ಲ. ಗಾಯಗೊಂಡಿದ್ದ ಗುಲಾಬಿ ರವರನ್ನು  ಸ್ಥಳೀಯರು  ಸ್ತಳೀಯ ಅಂಬ್ಯುಲೆನ್ಸ್‌ನಲ್ಲಿ  ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ  ಕರೆದುಕೊಂಡು ಹೋಗಿ  ದಾಖಲಿಸಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 177/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 16/10/2021 ರಂದು 18:50 ಗಂಟೆಗೆ ಪಿರ್ಯಾದಿದಾರರಾದ ಅಮಿತ್ ಎಂ (22), ತಂದೆ: ಮಂಜುನಾಥ ಎಸ್, ವಾಸ: ಗುಂಡಿಚಟ್ನಳ್ಳಿ ಅಂಚೆ ಮತ್ತು ಗ್ರಾಮ ಶಿವಮೊಗ್ಗ ತಾಲೂಕು ಮತ್ತು ಉಡುಪಿ ಜಿಲ್ಲೆ ಇವರು ತನ್ನ ಸ್ನೇಹಿತ ಭುವನ್ ಸವಾರಿ ಮಾಡುತ್ತಿದ್ದ KA-19-HG-3613 ನೇ ನಂಬ್ರದ ಬೈಕ್ ನಲ್ಲಿ ಸಹ ಸವಾರನಾಗಿ ಕುಳಿತುಕೊಂಡು ಕಾರ್ಕಳ ಕಡೆಯಿಂದ ನಿಟ್ಟೆ ಕಡೆಗೆ ಹೋಗುತ್ತಿರುವಾಗ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ದೂಪದಕಟ್ಟೆ ಪಂಜೊಟ್ಟು ರಸ್ತೆ ಕ್ರಾಸ್  ಎಂಬಲ್ಲಿ ಹಾದು ಹೋಗಿರುವ ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಪಂಜೊಟ್ಟು ರಸ್ತೆ ಕ್ರಾಸ್ ನಿಂದ KA-20-D-5861 ನೇ ನಂಬ್ರದ ರಿಕ್ಷಾ ಚಾಲಕ ರೋನಾಲ್ಡ್ ಡಿಸೋಜಾ ರವರು ತನ್ನ ರಿಕ್ಷಾವನ್ನು  ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ಹೆದ್ಧಾರಿ  ರಸ್ತೆಗೆ ಚಲಾಯಿಸಿ, ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಇಬ್ಬರು  ರಸ್ತೆಗೆ ಬಿದ್ದು, ಸವಾರ ಭುವನ್ ನ ಬಲಕೈ ಮೊಣಗಂಟಿನ ಬಳಿ ಒಳನೋವು, ಬಲಕಾಲಿನ ಕೆಳಗೆ ಹಾಗೂ ಮೂಗಿಗೆ ತರಚಿದ ಗಾಯವಾಗಿದ್ದು, ಪಿರ್ಯಾದಿದಾರರಿಗೆ  ಮೂಗಿಗೆ ರಕ್ತಗಾಯ,ತಲೆಗೆ ಒಳನೋವು ಆಗಿದ್ದು, ಚಿಕಿತ್ಸೆ ಬಗ್ಗೆ ಮೊದಲು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಪಿರ್ಯಾದಿದಾರರು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಭುವನ್ ಪುತ್ತೂರು ಹಿತ ಮಲ್ಟಿ ಸ್ಟೆಶಾಲಿಟಿ ಆಸ್ಪತ್ರಗೆ  ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 120/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಿರ್ವಾ: ದಿನಾಂಕ 16/10/2021 ರಂದು ಸಂಜೆ 7:30 ಗಂಟೆಗೆ ಕುರ್ಕಾಲು ಗ್ರಾಮದ ಶಂಕರಪುರ ಬರೋಡಾ ಬ್ಯಾಂಕ್ ಎದುರುಗಡೆ ಹಾದುಹೋಗಿರುವ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಅಪಾದಿತ ನಿಲೇಶ್ ಮೂಲ್ಯ ತನ್ನ KA-20-B-8573 ನೇ ಅಟೋ ರಿಕ್ಷಾವನ್ನು ಶಂಕರಪುರ ಕಡೆಯಿಂದ ಬಂಟಕಲ್ಲು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬದಿಗೆ ಬಂದು ಪಿರ್ಯಾದಿದಾರಾದ ಜಲೀಲ್ ಸಾಹೇಬ್ (56), ತಂದೆ: ಇಮಾಮ್ ಸಾಹೇಬ್, ವಾಸ: ಸರ್ಕಾರಿಗುಡ್ಡೆ, ಶಂಕರಪುರ ಅಂಚೆ, ಮೂಡುಬೆಟ್ಟು ಗ್ರಾಮ ಇವರು ಶಂಕರಪುರ ಕಡೆಯಿಂದ ಬ್ಯಾಂಕ್ ಆಫ್ ಬರೋಡಾ ಬಳಿಯಲ್ಲಿರುವ ತನ್ನ ತಂದೆಯ ಮನೆಗೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು, ಹಿಂಬದಿ ತಲೆಗೆ ರಕ್ತಗಾಯವಾಗಿದ್ದು ಅಲ್ಲದೇ ಬಲಕೈಯ ಮೊಣಗಂಟಿನ ಬಳಿ ಹಾಗೂ ಮಣಿಗಂಟಿನ ಬಳಿ ತರಚಿದ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 55/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಗಂಗೊಳ್ಳಿ: ಫಿರ್ಯಾದಿದಾರರಾದ ಬಾಬು ಗೌಡ (55), ತಂದೆ: ಸುಬ್ಬ ಗೌಡ, ವಾಸ:ಕಳಿ ಮೂಡುಬೆಟ್ಟು, ಆಲೂರು ಗ್ರಾಮ, ಕುಂದಾಪುರ ತಾಲೂಕು ಇವರ  ಚಿಕ್ಕಮ್ಮನ ಮಗ ರಾಮ ಗೌಡ (45) ಎಂಬುವವರು ತನ್ನ ಮನೆಯ ಸಮೀಪ ಕುಂದಾಪುರ ತಾಲೂಕು ಆಲೂರು ಗ್ರಾಮದ ಮೂಡುಬೆಟ್ಟು ಕಳಿ ಎಂಬಲ್ಲಿ ವಾಸ ಮಾಡಿಕೊಂಡಿದ್ದು ಕೃಷಿ ಕೆಲಸ ಮಾಡಿಕೊಂಡಿರುವುದಾಗಿದೆ. ದಿನಾಂಕ 11/10/2021 ರಂದು ಬೆಳಿಗ್ಗೆ 8:00 ಗಂಟೆಗೆ ಅವರ ಮನೆಯ ತೆಂಗಿನ ಮರವನ್ನು ಹತ್ತಿ ತೆಂಗಿನ ಕಾಯಿಯನ್ನು ಕೊಯ್ಯುವಾಗ ಆಕಸ್ಮಿಕವಾಗಿ ಕಾಲು ಜಾರಿ 25 ಅಡಿ ಮೇಲಿನಿಂದ ಕೆಳಗೆ ನೆಲದ ಮೇಲೆ ಬಿದ್ದ ಪರಿಣಾಮ ಕುತ್ತಿಗೆಗೆ ತೀವ್ರ ಜಖಂ ಗೊಂಡಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಹೋಗಿದ್ದು ಅಲ್ಲಿ ಆಯುಷ್ಮಾನ್ ಬೆಡ್ ಖಾಲಿ ಇಲ್ಲದ ಕಾರಣ  ಅಲ್ಲಿಂದ ಸುರತ್ಕಲ್ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು  ಹೋದಾಗ ಚಿಕಿತ್ಸೆ ನೀಡಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ರಾಮ ಗೌಡ ರವರು ಚಿಕಿತ್ಸೆಯಲ್ಲಿರುತ್ತಾ ದಿನಾಂಕ 17/10/2021 ರಂದು ಬೆಳಗಿನ ಜಾವ  00:40 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ  ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 30/2021 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ವಸಂತ (40), ತಂದೆ: ಕೊಗ್ಗ ದೇವಾಡಿಗ, ವಾಸ: ಬೈಲುಮನೆ, ಪೆರ್ವಾಜೆ, ಕಸಬಾ ಗ್ರಾಮ, ಕಾರ್ಕಳ ಇವರ ಅಕ್ಕ ವನಿತಾ ಹಾಗೂ ಅವರ ಮಗ ಕಿಶೋರ (26) ರವರು ಪಿರ್ಯಾದಿದಾರರ ಮನೆಯ ಬಳಿ ವಾಸವಾಗಿದ್ದು ಪಿರ್ಯಾದಿದಾರರು  ದಿನಾಂಕ 17/10/2021 ರಂದು ಕಾರ್ಕಳ ಪೇಟೆಯಲ್ಲಿರುವಾಗ ಪಿರ್ಯಾದಿದಾರರ ಅಕ್ಕ ವನಿತಾರವರು ಕರೆ ಮಾಡಿ ಕಿಶೋರನು ಮನೆಯ ಬಾಗಿಲು ಹಾಕಿಕೊಂಡು ನೇಣು ಹಾಕಿಕೊಂಡಿರುವುದಾಗಿ ತಿಳಿಸಿರುತ್ತಾರೆ, ಪಿರ್ಯಾದಿದಾರರು ಆ ಕೂಡಲೇ ಅಲ್ಲಿ ಹೋಗಿ ನೋಡಿದಾಗ ರೂಮಿನ ಚಿಲಕ ಹಾಕಿದ್ದು ಬಳಿಕ ಮಾಡಿನ ಹಂಚನ್ನು ತೆಗೆದು ಮನೆಯೊಳಗೆ ಇಳಿದು ಪಕ್ಕಾಸಿನಲ್ಲಿ ಬಟ್ಟೆಯಿಂದ ನೇಣನ್ನು ತನ್ನ ಕುತ್ತಿಗೆಗೆ ಹಾಕಿ ನೇತಾಡುವ ಸ್ಥಿತಿಯಲ್ಲಿದ್ದು ಆ ಬಳಿಕ ಅಲ್ಲಿ ಸೇರಿರುವ ಜನರು ನೇಣು ಹಗ್ಗದಿಂದ ಇಳಿಸಿ ಚಿಕಿತ್ಸೆಗಾಗಿ ಕಾರ್ಕಳದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅಲ್ಲಿನ ವೈದ್ಯರು ಕಿಶೋರ ರವರು ದಾರಿ ಮಧ್ಯೆ ಮೃತಪಟ್ಟಿರುವುದಾಗಿ  ಸಂಜೆ 5:18 ಕ್ಕೆ ತಿಳಿಸಿರುತ್ತಾರೆ. ಕಿಶೋರ ಜೀವನದಲ್ಲಿ ಯಾವುದೋ ಕಾರಣದಿಂದ ನೊಂದು  ಮನೆಯ ಮಾಡಿನ ಪಕ್ಕಾಸಿಗೆ ಬಟ್ಟೆಯಿಂದ ತನ್ನ ಕುತ್ತಿಗೆಗೆ ನೇಣು ಹಾಕಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 34/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತ್ತೀಚಿನ ನವೀಕರಣ​ : 18-10-2021 09:46 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080