ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾಧಿ ಲಕ್ಷ್ಮೀನಾರಾಯಣ ತುಂಗ ಇವರು ಅಣ್ಣ ಕೃಷ್ಣಮೂರ್ತಿ ತುಂಗ ಪ್ರಾಯ 67 ವರ್ಷ ಎಂಬವರೊಂದಿಗೆ ದಿನಾಂಕ 17/10/2021  ರಂದು ಸಂಜೆ ಗುಂಡ್ಮಿ ಗಣಪತಿ ದೇವಸ್ಥಾನಕ್ಕೆ ಹೋಗಿ ಹಣ್ಣು ಕಾಯಿ ಮಾಡಿಸಿ ವಾಪಾಸ್ಸು ಮನೆಗೆ ಹೊರಟು ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಹೋಗುವ ರಸ್ತೆಯ ಪಶ್ಚಿಮ ಬದಿಯಲ್ಲಿ, ಸಾಸ್ತಾನ  ಟೋಲ್‌‌‌‌‌‌‌ ಗೇಟ್‌‌‌‌‌‌ ದಾಟಿ ಸುಮಾರು 50 ಮೀಟರ್‌‌‌‌‌‌‌ ದೂರದಲ್ಲಿ ಸಂಜೆ 6-45 ಗಂಟೆಯ ಸಮಯಕ್ಕೆ ನಡೆದುಕೊಂಡು ಹೋಗುತ್ತಿರುವಾಗ, ಎದುರುಗಡೆಯಿಂದ ಅಂದರೆ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ KA-20-N-2406 ನೇ ಸ್ಯಾಂಟ್ರೋ ಕಾರನ್ನು ಅದರ ಚಾಲಕ ನಟರಾಜ್‌‌‌‌‌‌ ಅಮೀನ್‌‌‌‌‌‌‌‌ ಎಂಬವರು ತನ್ನ ಬಾಬ್ತು ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ  ಪಿರ್ಯಾದಿದಾರರ ಅಣ್ಣ ಕೃಷ್ಣಮೂರ್ತಿ ತುಂಗರವರಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಪಿರ್ಯಾಧಿದಾರರ ಅಣ್ಣ  ಕಾರಿನ ಗ್ಲಾಸ್‌‌‌‌‌‌‌‌ಗೆ ತಲೆ ಬಡಿದು ತಲೆಗೆ ತೀವ್ರ ತರದ  ರಕ್ತ ಗಾಯವಾಗಿ ರಸ್ತೆಗೆ ಬಿದ್ದು ಪ್ರಜ್ಞೆ  ತಪ್ಪಿದ್ದು, ಮಾತನಾಡಲಾರದ ಸ್ಥಿತಿಯಲ್ಲಿದ್ದವರನ್ನು ಪಿರ್ಯಾದಿದಾರರು ಮತ್ತು ಅಲ್ಲಿ ಸೇರಿದ ಸಾರ್ವಜನಿಕರ ಸಹಾಯದಿಂದ ಆಂಬುಲೆನ್ಸ್ ವಾಹನದಲ್ಲಿ ಮಣಿಪಾಲ  ಕೆ.ಎಂ.ಸಿ. ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ 7-30 ಗಂಟೆಯ ಸಮಯಕ್ಕೆ ಕರೆದುಕೊಂಡು ಹೋದಲ್ಲಿ ಪರೀಕ್ಷಿದ ವೈದ್ಯರು ಅದಾಗಲೇ  ಮೃತಪಟ್ಟಿರುವುದಾಗಿ ತಿಳಿಸಿದ್ದು, ಈ ಅಪಘಾತಕ್ಕೆ ಸ್ಯಾಂಟ್ರೋ ಕಾರು ನಂಬ್ರ KA-20-N-2406 ನೇಯದರ ಚಾಲಕ ನಟರಾಜ್‌‌‌‌‌‌‌ ಅಮೀನ್‌‌‌‌‌‌‌ರವರ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದೇ ಕಾರಣವಾಗಿರುತ್ತದೆ.ಈ  ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 178/2021 ಕಲಂ: 279, 304 (A)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿ ಭಾಸ್ಕರ ಇವರು ದಿನಾಂಕ 17/10/2021 ರಂದು  ಮದ್ಯಾಹ್ನ  ಮನೆಯಿಂದ ಕೋಟೇಶ್ವರ ಕಡೆಗೆ ಹೋಗುವರೆ ತನ್ನ ಬಾಬ್ತು KA20EH8727 ನೇ TVS Star City ಮೋಟಾರು ಸೈಕಲ್‌ನಲ್ಲಿ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಕ್ರಮದಂತೆ ಹೋಗುತ್ತಿರುವಾಗ ತೆಕ್ಕಟ್ಟೆ ಗ್ರಾಮದ ತೆಕ್ಕಟ್ಟೆ ಜಂಕ್ಷನ್‌ ಬಳಿ ರಾ ಹೆ 66 ರಲ್ಲಿ ಮದ್ಯಾಹ್ನ 3-45 ಗಂಟೆ ಸುಮಾರಿಗೆ ಫಿರ್ಯಾದಿದಾರರ ಎದುರಿನಿಂದ ಅಂದರೆ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ರಾಂಗ್‌ ಸೈಡ್‌ನಲ್ಲಿ KA05KQ1566ನೇ ಜುಪಿಟರ್‌ ಮೋಟಾರು ಸೈಕಲ್‌ನ ಸವಾರ ಮಂಜುನಾಥನು ಅವನ ಬಾಬ್ತು ಮೋಟಾರು ಸೈಕಲ್‌ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ಎಡಬದಿಯಿಂದ ಬಲಗಡೆಗೆ ಅಂದರೆ ರಸ್ತೆಯ ಮದ್ಯದಲ್ಲಿರುವ ಜಂಕ್ಷನ್‌ ಕಡೆಗೆಯಾವುದೇ ಸೂಚನೆ ನೀಡದೇ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ಬೈಕ್‌ ಸಮೇತ ರಸ್ತೆಗೆ ಬಿದ್ದು,ಅವರ ಬಲಕೈ ಭುಜದ ಬಳಿ, ಹಣೆಯ ಮೇಲೆ ರಕ್ತಗಾಯವಾಗಿದ್ದು  ಹಾಗೂ ಬಲ ಕಾಲಿನ ಮಂಡಿಗೆ ತರಚಿದ ಗಾಯವಾಗಿದ್ದು, ಕೂಡಲೇ ಫಿರ್ಯಾದಿದಾರನ್ನು ಒಂದು ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಕೋಟೇಶ್ವರ ಎನ್‌ ಆರ್‌ ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ  ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 179/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾರ್ಕಳ: ಪಿರ್ಯಾದಿ ಶ್ರೀಮತಿ ಪ್ರತಿಮಾ ದೇವಾಡಿಗ  ಇವರು ದಿನಾಂಕ 23/06/2014 ರಂದು ಆನೆಕಲ್ಲು ನಿವಾಸಿ ಕುಮಾರ್ ಎಂಬವರನ್ನು ಮದುವೆಯಾಗಿದ್ದು, ಮದುವೆಯ ಬಳಿಕ ಪಿರ್ಯಾದುದಾರರು ತಮ್ಮ ಗಂಡನ ಜೊತೆಯಲ್ಲಿಯೇ ವಾಸವಿದ್ದು, ಪಿರ್ಯಾದುದಾರರು ಮತ್ತು ಕುಮಾರ್ ಮಧ್ಯೆ ಅಗಾಗ್ಗೆ ಸಣ್ಣ ಪುಟ್ಟ ವಿಚಾರದಲ್ಲಿ ಜಗಳ ನಡೆಯುತ್ತಿದ್ದು, ಇದೇ ವಿಚಾರದಲ್ಲಿ ಮಾನಸಿಕ ಹಿಂಸೆ ನೀಡಿ, ರಾತ್ರಿ ಸಮಯ ಪಿರ್ಯಾದುದಾರರನ್ನು ಅವರ ಇಬ್ಬರು ಮಕ್ಕಳ ಜೊತೆ ಮನೆಯಿಂದ ಹೊರಗೆ ಹಾಕಿ ಕಿರುಕುಳ ನೀಡುತ್ತಿದ್ದು, ಇದರಿಂದ ಮಾನಸಿಕವಾಗಿ ನೊಂದ ಪಿರ್ಯಾದುದಾರರು ಕಳೆದ ಮಾರ್ಚ್ ತಿಂಗಳಿನಲ್ಲಿ ತಮ್ಮ ಇಬ್ಬರು ಮಕ್ಕಳೊಂದಿಗೆ ತಮ್ಮ ತಂದೆಯ ಮನೆಯಾದ ಕಾರ್ಕಳ ತಾಲೂಕು, ಈದು ಗ್ರಾಮದ ಅಲಿಮಾರು ಗುಡ್ಡೆ 5 ಸೆಂಟ್ಸ್ ಗೆ ಬಂದು ಉಳಕೊಂಡಿದ್ದು, ಅಲ್ಲಿಗೂ ಪಿರ್ಯಾದುದಾರರ ಗಂಡ ಕುಡಿದು ಬಂದು ಪಿರ್ಯಾದುದಾರರ ಜೊತೆ ಜಗಳ ಮಾಡಿ, ಅನೆಕಲ್ಲಿಗೆ ಬಾ, ಇಲ್ಲವಾದರೆ ಮಕ್ಕಳನ್ನು ಕೊಡುವಂತೆ ಗಲಾಟೆ ಮಾಡುತ್ತಿದ್ದವನು, ದಿನಾಂಕ 16/10/2021 ರಂದು ರಾತ್ರಿ 8:00 ಗಂಟೆಗೆ ಪೋನ್ ಕರೆ ಮಾಡಿ ಮಕ್ಕಳನ್ನು ಕರೆದುಕೊಂಡು ಮನೆಗೆ ಬಾ ಇಲ್ಲವಾದರೆ ಸ್ಕೆಚ್ ಹಾಕಿ ಮಕ್ಕಳನ್ನು ಹೇಗೆ ಕರೆದುಕೊಂಡು ಹೋಗಬೇಕು ಎಂದು ಹೇಳಿದ್ದು, ಅದರಂತೆ ದಿನಾಂಕ 18/10/2021 ರಂದು ಬೆಳಗ್ಗಿನ ಜಾವ 1:20 ಗಂಟೆಗೆ ಪಿರ್ಯಾದುದಾರರ ಗಂಡ ಕುಮಾರ, ಪಿರ್ಯಾದುದಾರರ ಪರಿಚಯದ ದ್ರುವ, ವರುಣ್, ಮಂಜು, ಪವನ್ ಹಾಗೂ ಇತರ 3 ಜನರು ಟಾಟಾ ಸುಮೋ ವಾಹನದಲ್ಲಿ ಪಿರ್ಯಾದುದಾರರ ಮನೆಗೆ ಅಕ್ರಮ ಪ್ರವೇಶ ಮಾಡಿ ಮನೆಯ ಬಾಗಿಲನ್ನು ಕಾಲುಗಳಿಂದ ತುಳಿದು, ಬಾಗಿಲನ್ನು ಜಖಂಗೊಳಿಸಿ, ಕಿಟಕಿಯ ಗಾಜನ್ನು ಹೊಡೆದು ಹಾನಿ ಮಾಡಿ ಬಲಾತ್ಕಾರವಾಗಿ ಮನೆಯೊಳಗೆ ಪ್ರವೇಶಿಸಿದ್ದು, ಅವರ ಪೈಕಿ ದ್ರುವ, ಪವನ್, ವರುಣ್ ಪಿರ್ಯಾದುದಾರರ ಕೈಗಳನ್ನು ಮತ್ತು ಜುಟ್ಟನ್ನು ಹಿಡಿದುದಲ್ಲದೆ, ಬೊಬ್ಬೆಯನ್ನು ಹೊಡೆಯದಂತೆ ಬಾಯಿಯನ್ನು ಮುಚ್ಚಿ, ಪಿರ್ಯಾದುದಾರರ ಮಗಳು ಯಮುನಾಳನ್ನು ಅವರೆಲ್ಲರೂ ಸೇರಿ ಬಲಾತ್ಕರವಾಗಿ ಎಳೆದುಕೊಂಡು ಕೊಂಡಿದ್ದು, ಈ ಸಮಯ ಮಗುವನ್ನು ಅವರ ಕೈಯಿಂದ ತಪ್ಪಿಸಲು ಹೋದ ಪಿರ್ಯಾದುದಾರರ ಸಹೋದರ ಪ್ರವೀಣನಿಗೆ ಅವರೆಲ್ಲರೂ ಕೈಗಳಿಂದ ಹೊಡೆದು, ಕಾಲುಗಳಿಂದ ತುಳಿದು ನೆಲಕ್ಕೆ ದೂಡಿ ಬಲವಂತದಿಂದ ಪಿರ್ಯಾದುದಾರರ ಮಗಳನ್ನು ಎಳೆದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 121/2021 ಕಲಂ:143,147,323,341,448,354,498(A) 363 ಜೊತೆಗೆ 149  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಪಿರ್ಯಾದಿ ಗಿರೀಶ ಇವರ ಚಿಕ್ಕಪ್ಪನ ಮಗನಾದ ರಾಘವೇಂದ್ರ ಪ್ರಾಯ 30 ವರ್ಷರವರು ಸುಮಾರು 8 ದಿನಗಳ ಹಿಂದೆ ಫಿರ್ಯಾದಿದಾರರ ಮನೆಗೆ ಬಂದು ಇದ್ದು ನಿನ್ನೆ ದಿನಾಂಕ; 17/10/2021 ರಂದು ರಾತ್ರಿ 11:30 ಗಂಟೆಗೆ ಫಿರ್ಯಾದಿದಾರರೊಂದಿಗೆ ಊಟ ಮಾಡಿ ಮಲಗಿದ್ದು ನಂತರ ಫಿರ್ಯಾದಿದಾರರು ದಿನಾಂಕ; 18/10/2021 ರಂದು ಬೆಳಿಗ್ಗೆ 06:00 ಗಂಟೆಗೆ ಎದ್ದು ಮೂತ್ರ ಮಾಡಲು ಹೊರಗೆ ಹೋಗಿ ಬಂದು ನೋಡಿದಾಗ ರಾಘವೇಂದ್ರನು ಮಲಗಿಕೊಂಡಿದ್ದು, ನಂತರ ಫಿರ್ಯಾದಿದಾರರು ಬೆಳಿಗ್ಗೆ 08:30 ಗಂಟೆಗೆ ಪುನ: ಎದ್ದು ರಾಘವೇಂದ್ರನನ್ನು ಎಬ್ಬಿಸಿದಾಗ ರಾಘವೇಂದ್ರನು ಎದ್ದಿರುವುದಿಲ್ಲ. ನಂತರ ಫಿರ್ಯಾದಿದಾರರು ಅವರ ತಾಯಿಯನ್ನು ಕರೆದು ಹೇಳಿದಾಗ ಅವರು ಎಬ್ಬಿಸಿದಾಗ ರಾಘವೇಂದ್ರನು ಎದ್ದಿರುವುದಿಲ್ಲ. ನಂತರ ಅಕ್ಕಪಕ್ಕದವರು ಬಂದು ರಾಘವೇಂದ್ರನನ್ನು ನೋಡಿ ಮೃತಪಟ್ಟಿರುವುದಾಗಿ ಹೇಳಿರುತ್ತಾರೆ, ರಾಘವೇಂದ್ರನು ದಿನಾಂಕ; 17/10/2021 ರಂದು ರಾತ್ರಿ 11:30 ಗಂಟೆಗೆ ಊಟ ಮುಗಿಸಿ ಮಲಗಿದ್ದವನು ದಿನಾಂಕ; 18/10/2021 ರಂದು ಬೆಳಿಗ್ಗೆ 08:30 ಗಂಟೆಯ ಮಧ್ಯಾವಧಿಯಲ್ಲಿ ಮೃತಪಟ್ಟಿರುತ್ತಾನೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 42/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

 

ಇತ್ತೀಚಿನ ನವೀಕರಣ​ : 18-10-2021 06:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080