ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕುಂದಾಪುರ: ದಿನಾಂಕ 16/09/2022  ರಂದು  ಸಂಜೆ ಸುಮಾರು 7:30 ಗಂಟೆಗೆ, ಕುಂದಾಪುರ  ತಾಲೂಕಿನ, ಕೋಣಿ ಗ್ರಾಮದ ಕೋಣಿ ಪಂಚಾಯತ್ ಕಛೇರಿಯ ಬಳಿ SH 52 ರಸ್ತೆಯಲ್ಲಿ, ಆಪಾದಿತ  ಫಹಾದ್‌ ಎಂಬವರು KA20EW-9086ನೇ ಬೈಕನ್ನು ಬಸ್ರೂರು ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ  ಮಾಡಿಕೊಂಡು ಬಂದು,  ರಸ್ತೆ ದಾಟಲು ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದ ಹೆರಿಯ ಪೂಜಾರಿಯವರಿಗೆ ಡಿಕ್ಕಿ ಹೊಡೆದ ಪರಿಣಾಮ ಹೆರಿಯ ಪೂಜಾರಿಯವರ ಬಲಕಾಲಿಗೆ ಒಳಜಖಂ ರಕ್ತಗಾಯ, ಎಡಕಾಲು, ಮೈಕೈಗೆ ತರಚಿದ ಗಾಯ, ಹಾಗೂ  ಫಹಾದ್‌ ರವರ ಎಡ ಕೈಗೆ ಒಳನೋವು ಹಾಗೂ ಮೈಕೈಗೆ ತರಚಿದ ಗಾಯಗಳಾಗಿದ್ದು, ಹೆರಿಯ ಪೂಜಾರಿಯವರು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು  ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ. ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಆಪಾದಿತ  ಫಹಾದ್‌ ರವರು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 100/2022 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 • ಉಡುಪಿ: ದಿನಾಂಕ 06/09/2022 ರಂದು ಪಿರ್ಯಾದಿ ಲಕ್ಸ್ಮೀ ನಾರಾಯಣ ಭಟ್ ಇವರ ಮಾವನವರಾದ ವೆಂಕಟ ಕೃಷ್ಣ ಉಪಾದ್ಯ (65)  ರವರು  ಅವರ ಬಾಬ್ತು ಸ್ಕೂಟರ್ ನಂಬ್ರ KA20 EP 1648 ರಲ್ಲಿ ತನ್ನ ಮನೆಯಿಂದ ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನಕ್ಕೆ ಹೋಗುತ್ತಿರುವಾಗ ಶಾರದ ಕಲ್ಯಾಣ ಮಂಟಪದ ರಸ್ತೆಯಿಂದ ರಾ.ಹೆ 169 (ಎ) ಮಣಿಪಾಲದಿಂದ ಉಡುಪಿ ಕಡೆಗೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ದುಡುಕುತನ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 07:00 ಗಂಟೆಗೆ ಶಿವಳ್ಳಿ ಗ್ರಾಮದ ಕುಂಜಿಬೆಟ್ಟು ಎಸ್.ಕೆ.ಎಮ್ ಬಳಿಯ  ಜಸ್ಟ್ ಬೇಕ್ ಎದುರು ತಲುಪುವಾಗ ಸ್ಕೂಟರಿನ ಆಯತಪ್ಪಿ ಸ್ಕಿಡ್ ಆಗಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ತಲೆಯ ಹಿಂಬದಿ ಗಂಭೀರ ಗಾಯವಾಗಿದ್ದು, ಕಾಲುಗಳಿಗೆ ತರಚಿದ ಗಾಯವಾಗಿ ಕೆಎಮ್‌ಸಿ ಆಸ್ಪತ್ರೆ ಮಣಿಪಾಲದಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 73/2022 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 • ಕೋಟ: ಫಿರ್ಯಾದಿ ಗಣೇಶ ಭಂಡಾರಿ ಇವರು ದಿನಾಂಕ: 16.09.2022 ರಂದು ಸಂಜೆ ಸಮಯ 5:30 ಗಂಟೆಗೆ ರಾ.ಹೆ. 66 ಉಡುಪಿ - ಕುಂದಾಪುರ ಮುಖ್ಯರಸ್ತೆಯ ಪಶ್ಚಿಮ ದಿಕ್ಕಿನ ಸರ್ವಿಸ್‌ರಸ್ತೆಯಲ್ಲಿ ನರಸಿಂಹ ಶೆಟ್ಟಿ ರವರ ರೈಸ್ ಮಿಲ್ ಎದುರು ತಲುಪುವಾಗ ರಾ.ಹೆ. 66 ರ ಉಡುಪಿ - ಕುಂದಾಪುರ ಮುಖ್ಯರಸ್ತೆಯಲ್ಲಿ ನಂ: KA 20 EQ 1264 ನೇ ಹೊಂಡಾ ಆಕ್ಟೀವಾ ಸ್ಕೂಟಿಯನ್ನು ಅದರ ಸವಾರ ನಾರಾಯಣ ಎಂಬಾತನು ತನ್ನ ಸ್ಕೂಟಿಯನ್ನು ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಫ್ಲೈಓವರ್ ಮೇಲಿಂದ ಇಳಿಜಾರಾದ ರಸ್ತೆಯಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಸದ್ರಿ ರಾ.ಹೆ. 66 ರಲ್ಲಿ ಪೂರ್ವದಿಂದ ಪಶ್ಚಿಮ ದಿಕ್ಕಿಗೆ ರಸ್ತೆ ದಾಟುತಿದ್ದ ಪಾದಾಚಾರಿ ಶ್ರೀಧರ ಬಂಗೇರ (64 ವರ್ಷ) ತಂದೆ: ಕೃಷ್ಣ ಕಾಂಚನ್ ರವರಿಗೆ ಢಿಕ್ಕಿ ಹೊಡೆದನು. ಅಪಘಾತದಲ್ಲಿ ಪಾದಾಚಾರಿ ಶ್ರೀಧರ ಬಂಗೇರ ರವರ ಬಲಕಾಲಿನ ತೊಡೆಗೆ ತೀವ್ರ ತರದ ರಕ್ತಗಾಯ ಹಾಗೂ ಮುಖದ ಬಲಭಾಗಕ್ಕೆ ತರಚಿದ ಗಾಯಗಳೂ ಹಾಗೂ ಸ್ಕೂಟಿ ಸವಾರ ನಾರಾಯಣ ರವರ ಬಲಕಾಲಿಗೆ ತರಚಿದ ಸಾದಾ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 147/2022 ಕಲಂ: 279.338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

 

ಇತರ ಪ್ರಕರಣ

 • ಕೋಟ: ದಿನಾಂಕ 16/09/2022 ರಂದು ಮಧು ಬಿ ಇ . ಪಿ ಎಸ್.ಐ.ಐ, ಕೋಟ ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ ಇಲಾಖಾ ವಾಹನದಲ್ಲಿ ವಿಶೇಷ ರೌಂಡ್ಸ್‌ ಕರ್ತವ್ಯದಲ್ಲಿರುವಾಗ  ಕುಂದಾಪುರ  ತಾಲೂಕು ತೆಕ್ಕಟ್ಟೆ ಗ್ರಾಮದ ಕನ್ನುಕೆರೆ  ಜಂಕ್ಷನ್ ಎಂಬಲ್ಲಿಯ ಸಾರ್ವಜನಿಕ ಸ್ಥಳದ ಸಮೀಪದ ಸಂಜೆ 4.00 ಗಂಟೆಗೆ ನೋಡಲಾಗಿ ಇಲಿಯಾಸ್ ಎಂಬಾತ ನಿಂತುಕೊಂಡಿದ್ದು,  ಸದ್ರಿಯವರ ಬಾಯಿಯಿಂದ ಅಮಲು ಪದಾರ್ಥ  ಸೇವನೆಯಂತಹ ವಾಸನೆ ಬರುತ್ತಿದ್ದು, ಅವನಲ್ಲಿ ವಿಚಾರಿಸಿದಾಗ ತಾನು ಗಾಂಜಾ ಸೇವನೆ ಮಾಡಿರುವುದಾಗಿ ತಿಳಿಸಿರುತ್ತಾನೆ. ಅವನನ್ನು ವಶಕ್ಕೆ ತೆಗೆದುಕೊಂಡು ಕುಂದಾಪುರ ತಾಲೂಕು ಮಾತಾ ಆಸ್ಪತ್ರೆಯ  ವೈದ್ಯಾಧಿಕಾರಿಯವರ  ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಇಲಿಯಾಸ್ ಎಂಬಾತನು  ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 146/2022 ಕಲಂ: 27(b)   NDPS Act ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 • ಕಾರ್ಕಳ: ದಾಮೋದರ ಕೆ ಬಿ ಪಿಎಸ್ ಐ ಕಾರ್ಕಳ ನಗರ ಪೊಲೀಸ್‌ ಠಾಣೆ ಇವರು ದಿನಾಂಕ:17.09.2022 ರಂದು ಠಾಣಾ ಎಎಸ್‌ಐ ರಾಜೇಶ ಪಿ, ಸದಾನಂದ ಪಿಸಿ  ಮಹಾದೇವ ಹಾಗೂ ಹೊಯ್ಸಳ ಜೀಪು ಚಾಲಕ ಪ್ರವೀಣ್‌ ಇವರೊಂದಿಗೆ ಇಲಾಖಾ ಹೊಯ್ಸಳ ವಾಹನದಲ್ಲಿ ಮಧ್ಯಾಹ್ನ 13:00 ಗಂಟೆಗೆ ಠಾಣಾ ಸರಹದ್ದಿನ ಮಾರ್ಕೆಟ್‌ ರಸ್ತೆ ಬಳಿ ರೌಂಡ್ಸ್ ಕರ್ತವ್ಯದಲ್ಲಿರುವಾಗ  ಸಂತೋಷ ಪೂಜಾರಿ ಎಂಬವರು ತನ್ನ ಸ್ವಂತ ಲಾಭಕ್ಕೋಸ್ಕರ ಯಾವುದೇ ಪರವಾನಿಗೆ ಹೊಂದದೆ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುವ ಉದ್ದೇಶದಿಂದ ಕಾರ್ಕಳ ಬಸ್‌ ನಿಲ್ದಾಣದ ಕಡೆಯಿಂದ ತೆಳ್ಳಾರು ದುರ್ಗಾ ಕಡೆಗೆ ದ್ವಿಚಕ್ರ ವಾಹನ ನಂಬ್ರ KA20EQ 6978 ನೇದರಲ್ಲಿ ಮದ್ಯ ತುಂಬಿದ ಪ್ಯಾಕೆಟ್‌ಗಳನ್ನು ತುಂಬಿಕೊಂಡು ಹೋಗುತ್ತಿರುವುದಾಗಿ ಬಂದ ಖಚಿತ ಮಾಹಿತಿಯನ್ನು ಸ್ವೀಕರಿಸಿ ಕಾರ್ಕಳ ಕಸಬಾ ಗ್ರಾಮದ ತೆಳ್ಳಾರು ರವಳನಾಥ ದೇವಸ್ಥಾನದ ಬಳಿ ತಲುಪಿ ಕಾರ್ಕಳ ಪೇಟೆ ಕಡೆಯಿಂದ ದುರ್ಗಾ ಕಡೆಗೆ ಹಾದು ಹೋಗುವ ವಾಹನಗಳನ್ನು ಪರಿಶೀಲನೆ ನಡೆಸುತ್ತಿರುವಾಗ ಸಮಯ ಸುಮಾರು ಮದ್ಯಾಹ್ನ 13:30 ಗಂಟೆಗೆ ದ್ವಿಚಕ್ರ ವಾಹನ ನಂಬ್ರ KA20EQ 6978 ನೇದನ್ನು ಸವಾರನು ಕಾರ್ಕಳ ಪೇಟೆ ಕಡೆಯಿಂದ ತೆಳ್ಳಾರು ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವುದನ್ನು ಗಮನಿಸಿ ಸಿಬ್ಬಂದಿಯವರ ಸಹಾಯದಿಂದ ದ್ವಿಚಕ್ರ ವಾಹನವನ್ನು ನಿಲ್ಲಿಸಿ ವಶಕ್ಕೆ ಪಡೆದು ಆತನ ವಶದಲ್ಲಿದ್ದ ಪ್ಲಾಸ್ಟಿಕ್‌ ಗೋಣಿ ಚೀಲದ ಒಳಗೆ  ಇದ್ದ  1615/- ರೂಪಾಯಿ ಮೌಲ್ಯದ ಮೈಸೂರ್‌ ಲ್ಯಾನ್ಸರ್‌ ವಿಸ್ಕಿಯ ಒಟ್ಟು  46 ಮದ್ಯ ತುಂಬಿದ ಟೆಟ್ರಾ ಪ್ಯಾಕೆಟ್‌ಗಳನ್ನು, ಬೆಲೆಬಾಳದಿರುವ ಒಂದು ಪ್ಲಾಸ್ಟಿಕ್‌ ಗೋಣಿ ಚೀಲವನ್ನು ಹಾಗೂ 30,000/- ರೂಪಾಯಿ ಬೆಲೆಬಾಳುವ ದ್ವಿಚಕ್ರ ವಾಹನವನ್ನು ಸ್ವಾಧೀನಪಡಿಸಿಕೊಂಡಿದ್ದು ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 120/2022, ಕಲಂ: 32, 34 K.E ACT  ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 • ಉಡುಪಿ: ದಿನಾಂಕ 17.09.2022ರಂದು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಇಂದ್ರಾಣಿ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೋಗುವ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡಲು ಕಾನೂನು ಬಾಹಿರವಾಗಿ ಗಾಂಜಾವನ್ನು ಹೊಂದಿದ್ದ 1. ರವಿ ಶಂಕರ 2. ದೇವಿ ಪ್ರಸಾದ್ 3. ಅಂಜಲ್ ಬೈಜು ಎಂಬವರನ್ನು ಖಚಿತ ಮಾಹಿತಿಯ ಮೇರೆಗೆ ಪತ್ರಾಂಕಿತ ಅಧಿಕಾರಿ ಹಾಗೂ ಪಂಚರೊಂದಿಗೆ ದಾಳಿ ನಡೆಸಿ, ಆರೋಪಿಗಳನ್ನು ಸಾಯಂಕಾಲ 5:15 ಗಂಟೆಗೆ ದಸ್ತಗಿರಿಗೊಳಿಸಿ, ಆರೋಪಿಗಳಿಂದ 1 ಕೆ.ಜಿ. 277 ಗ್ರಾಂ ಗಾಂಜಾ, 2 ಮೋಟಾರ್‌ ಸೈಕಲ್, 4 ಮೊಬೈಲ್ ಪೋನ್,  ವೇಯಿಂಗ್ ಮೆಷಿನ್-1, ಕಪ್ಪು ಬಣ್ಣದ ಬ್ಯಾಗ್-1, ಗಾಂಜಾ ಪ್ಯಾಕ್ ಮಾಡಲು ಬಳಸುವ ಸಣ್ಣ ಪ್ಲಾಸ್ಟಿಕ್ ಕವರ್ -9, ಜೊಮೊಟೋ ಬ್ಯಾಗ್-1,ವಶಪಡಿಸಿಕೊಂಡಿರುವುದಾಗಿರುತ್ತದೆ. 4 ನೇ ಆರೋಪಿಯು ಮೇಲಿನ ಆರೋಪಿಗಳಿಂದ ಮಾರಾಟ ಮಾಡಲು ಗಾಂಜಾ ಪಡೆದಿರುವ ಬಗ್ಗೆ ಆರೋಪಿಗಳು ನುಡಿದಿರುತ್ತಾರೆ. ಸ್ವಾಧೀನಪಡಿಸಿಕೊಂಡ ಗಾಂಜಾದ ಅಂದಾಜು ಮೌಲ್ಯ ರೂ. 30,000/- ಆಗಿರುತ್ತದೆ. ಎರಡು ಮೋಟಾರ್‌ ಸೈಕಲಿನ ಅಂದಾಜು ಮೌಲ್ಯ ರೂ. 95,000/- ಆಗಿರುತ್ತದೆ. ಸ್ವಾಧೀನಪಡಿಸಿಕೊಂಡಿರುವ 4 ಮೊಬೈಲ್ ಫೋನ್ ಗಳ ಅಂದಾಜು ಮೌಲ್ಯ ರೂ. 12,000/- ಆಗಿರುತ್ತದೆ. ಸ್ವಾಧೀನಪಡಿಸಿಕೊಂಡಿರುವ ಎಲ್ಲಾ ಸ್ವತ್ತುಗಳ ಒಟ್ಟು ಅಂದಾಜು ಮೌಲ್ಯನ ರೂ. 1,37,000/- ಆಗಿರುತ್ತದೆ. ಈ ಬಗ್ಗೆ ಸೆನ್‌ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 66/2022 ಕಲಂ: 8(C), 20(b)(ii)( B) ಎನ್.ಡಿ.ಪಿ.ಎಸ್. ಕಾಯ್ದೆ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 • ಹಿರಿಯಡ್ಕ: ಪಿರ್ಯಾದಿ ಕಿಶೋರ್ ಇವರು ದಿನಾಂಕ: 17/09/2022 ರಂದು ಮನೆಯ ಬಳಿ ಇದ್ದ ಸಮಯ ಸುಮಾರು ಸಂಜೆ 5:30 ಗಂಟೆಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬೆನ್ನಿನಲ್ಲಿ ಬ್ಯಾಗನ್ನು ಹಾಕಿಕೊಂಡು ಬಂದು ಅವರಲ್ಲಿ ಹಿಂದಿ ಭಾಷೆಯಲ್ಲಿ ನಿಮ್ಮಲ್ಲಿ  ಚಿನ್ನವಿದ್ದರೆ ಕೊಡಿ ಅದನ್ನು ಪಾಲಿಶ್ ಮಾಡಿ ಕೊಡುತ್ತೇವೆ ಎಂದು ಹೇಳಿದ್ದು, ಅದಕ್ಕೆಅವರು ಅವರಲ್ಲಿ ನೀವು ಯಾವ ರೀತಿಯಲ್ಲಿ ಚಿನ್ನಪಾಲಿಶ್ ಮಾಡುತ್ತೀರಿ ಎಂದು ಕೇಳಿದಾಗ ಅವರು ಅವರಲ್ಲಿದ್ದ ಬ್ಯಾಗನ್ನು ತೆರೆದು ತೋರಿಸಿದ್ದು, ಆ ಬ್ಯಾಗ್ ಗಳಲ್ಲಿ ಕೆಲವು ಪ್ಯಾಕೆಟ್ ಗಳು, ಬ್ರೆಶ್ ಬಾಟಲಿಯಲ್ಲಿ ಯಾವುದೋ ದ್ರಾವಣಗಳನ್ನು ತೋರಿಸಿ ಇವುಗಳಿಂಧ ಚಿನ್ನ ಪಾಲೀಶ್ ಮಾಡುತ್ತೇವೆ ಎಂದು ಹೇಳಿದಾಗ ಅವರ ಮೇಲೆ ಸ್ವಲ್ಪ ಸಂಶಯ ಬಂದು ಅವರ ಹೆಸರು ಕೇಳಿದಾಗ ಅವರಲ್ಲಿ ತುಂಬು ತೋಳಿನ ಅಂಗಿಯನ್ನು ಧರಿಸಿದ ವ್ಯಕ್ತಿಯ ಹೆಸರು ಆನಂದ ಕಿಶೋರ್ ಮೆಹ್ತಾ ಹಾಗೂ ಅರ್ದ ತೋಳಿನ ಅಂಗಿಯನ್ನು ಹಾಕಿದ ವ್ಯಕ್ತಿಯ ಹೆಸರು ಮನೋಜ್ ಯಾದವ್ ಎಂದು ಹೇಳಿ, ಅವರು ಬಿಹಾರದಿಂದ ಬಂದಿರುವುದಾಗಿ ತಿಳಿಸಿರುತ್ತಾರೆ. ಪಿರ್ಯಾದುದಾರರು ಸಂಶಯಗೊಂಡು, ಹಿರಿಯಡ್ಕ ಪಿಎಸ್ಐ ರವರಿಗೆ ಫೋನ್ ಮಾಡಿ ವಿಷಯ ತಿಳಿಸಿದಾಗ ಅವರಿಬ್ಬರು ಸಿಟ್ಟುಗೊಂಡು ಫಿರ್ಯಾದಿದಾರರನ್ನು ಉದ್ದೇಶಿಸಿ ಹಿಂದಿಯಲ್ಲಿ ಕೆಟ್ಟದಾಗಿ ಬೈದು ಅಲ್ಲಿಂದ ಹೋಗಲು ಪ್ರಯತ್ನಿಸಿದ್ದು, ಅವರುಗಳು ಚಿನ್ನಪಾಲೀಶ್ ಮಾಡುವುದಾಗಿ ಜನರನ್ನು ನಂಬಿಸಿ ಮೋಸ ಮಾಡುವ ಇರಾದೆಯನ್ನು ಹೊಂದಿದವರಾಗಿದ್ದು,  ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 53/2022 ಕಲಂ: 420, 511, 504 ಜೊತೆಗೆ 34  ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  .

ಕಳವು ಪ್ರಕರಣ

 • ಶಂಕರನಾರಾಯಣ: ದಿನಾಂಕ 16-09-2022 ರಂದು ಪಿರ್ಯಾದಿ ನಾಗೇಂದ್ರ ಪ್ರಸಾದ್ ಇವರು ಶಂಕರನಾರಾಯಣ ದೇವಸ್ಥಾನಕ್ಕೆ ಕುಟುಂಬ ಸಮೇತ ಪಾರಾಯಣ  ಪೂಜೆ ಮಾಡಿಸುವರೇ ಹೋಗಿರುವ  ಸಮಯ ಸುಮಾರು 16:20 ಗಂಟೆಯಿಂದ 20:30 ಗಂಟೆಯ ಮಧ್ಯಾವಧಿಯಲ್ಲಿ ಕುಂದಾಪುರ ತಾಲೂಕು ಶಂಕರನಾರಾಯಣ  ಗ್ರಾಮದ ಲಕ್ಕೊಳ್ಳಿ  ಬೆನಕ ನಿಲಯ  ಎಂಬಲ್ಲಿನ ಪಿರ್ಯಾದಿದಾರರ ಮನೆಗೆ  ಯಾರೋ ಕಳ್ಳರು ಮನೆಯ ಎದುರಿನ ಬಾಗಿಲಿನ ಬೀಗ ಮುರಿದು  ಒಳ ಪ್ರವೇಶಿಸಿ  ದೇವರ ಕೋಣೆಯೊಳಗೆ ಗೋಡ್ರೇಜ್ ಕಪಾಟಿನ ಬಾಗಿಲನ್ನು ತೆರೆದು ಅದರ ಒಳಗೆ ಸಣ್ಣ ಕಪಾಟಿನ   ಒಳಗೆ ಇಟ್ಟಿದ್ದ  ನಗದು ಹಣ ರೂ 50,000/-,  ಚಿನ್ನದ ಒಂದು ಜೊತೆ ಒಲೆ ಅರ್ಧ ಪವನ್ ಅಂದಾಜು ಬೆಲೆ 6000/- ಬೆಳ್ಳಿಯ ಅರತಿ ತಟ್ಟೆ ಒಂದು ಜೊತೆ ಅಂದಾಜು ಬೆಲ್ ರೂ 3000/-, ಒಂದು ಜೊತೆ  ಬೆಳ್ಳಿಯ ಕುಂಕುಮ ಹಾಕುವ ಭರಣಿ- 1000/- ಮಗುವಿನ ಕಾಲು ಗೆಜ್ಜೆ ಒಂದು ಜೊತೆ-600, ಮಗುವಿನ ಬೆಳ್ಳಿಯ ಬ್ರಾಸ್ ಲೈಟ್ 1-  ರೂ 150/-  ಬೆಳ್ಳಿಯ ಲೋಟ ಒಂದು ರೂ 500/-  ಒಟ್ಟು ಅಂದಾಜು ಮೌಲ್ಯ 61250 /-ಮೌಲ್ಯದ  ಚಿನ್ನಾ , ಬೆಳ್ಳಿಯ ಆಭರಣ ಮತ್ತು ನಗದು ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 89 /2020  ಕಲಂ: 454, 457, 380   ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 18-09-2022 11:08 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080