ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಪಡುಬಿದ್ರಿ: ಪಿರ್ಯಾದಿದಾರರಾಧ ರಾಮದಾಸ್ (39) ತಂದೆ: ವೇಳಾಯುಧನ್, ವಾಸ: ತುಂಬಾಚೇರಿ, ಪೂವಾರಾಂತೋಡ್, ಕೂಡ್ರಂಜಿ, ಕೋಯಿಕೋಡ್ (ಕ್ಯಾಲಿಕಟ್) ಜಿಲ್ಲೆ, ಕೇರಳ ಇವರು ಮೀನು ಲಾರಿಯಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ತಮ್ಮ KL-10-BD-9724 ನೇ ನಂಬ್ರದ ಕ್ಯಾಂಟರ್‌‌ನಲ್ಲಿ ಹಾಗೂ ಅವರ ಸ್ನೇಹಿತ ಜಾಶೀರ ಎಂಬಾತನು KL-56-F-5698 ನೇ ನಂಬ್ರದ ಕ್ಯಾಂಟರನ್ನು ಮೀನು ಲೋಡ್‌‌ಗಾಗಿ ದಿನಾಂಕ 16/09/2021 ರಂದು ಮಲ್ಪೆಗೆ ಬಂದಿದ್ದು, ದಿನಾಂಕ 18/09/2021 ರಂದು ಮೀನು ಲೋಡ್ ಮಾಡಿಕೊಂಡು ರಾಷ್ಟ್ರೀಯ ಹೆದ್ದಾರಿ-66 ರ ಉಡುಪಿ- ಮಂಗಳೂರು ಏಕಮುಖ ಸಂಚಾರ ರಸ್ತೆಯಲ್ಲಿ ವಾಪಾಸ್ಸು ಹೋಗುತ್ತಾ ಸಮಯ 01:45 ಗಂಟೆಗೆ ಕಾಪು ತಾಲೂಕು ಹೆಜಮಾಡಿ ಗ್ರಾಮದ ರೋಯಲ್ ಪೆಟಲ್ ನರ್ಸರಿ ಬಳಿ ತಲುಪುತ್ತಿದ್ದಂತೆ, ಜಾಶೀರನು ತನ್ನ ಕ್ಯಾಂಟರನ್ನು ರಾಮದಾಸ್‌ ರವರ ಕ್ಯಾಂಟರಿಗಿಂತ ಮುಂದೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗ ಹಾಗೂ ನಿರ್ಲಕ್ಷವಾಗಿ ಚಲಾಯಿಸುತ್ತಾ ಒಮ್ಮೆಲೇ ರಸ್ತೆಯ ಎಡಬದಿಗೆ ಚಲಾಯಿಸಿ, ಸುಂಕ ವಸೂಲಾತಿ ಫಲಕವಿರುವ ಕಂಬಕ್ಕೆ ಡಿಕ್ಕಿ ಹೊಡೆದಿರುತ್ತಾನೆ. ಸದ್ರಿ ಅಪಘಾತದ ಪರಿಣಾಮ KL-56-F-5698 ನೇ ನಂಬ್ರದ ಕ್ಯಾಂಟರ್ ಎದುರು ಸಂಪೂರ್ಣ ಜಖಂಗೊಂಡಿದ್ದು, ಟೋಲ್ ಸುಂಕ ವಸೂಲಾತಿ ಕಂಬ ಕೂಡಾ ಜಖಂಗೊಂಡಿರುತ್ತದೆ. ಈ ಅಪಘಾತದಿಂದ ಕ್ಯಾಂಟರ್ ಕ್ಲೀನರ್ ಸವಾದ್ ಎಂಬಾತನಿಗೆ ತಲೆಗೆ, ಮುಖಕ್ಕೆ ಹಾಗೂ ಕಾಲುಗಳಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಚಾಲಕ ಜಾಶೀರನ ಮುಖಕ್ಕೆ ಹಾಗೂ ಕಾಲಿಗೆ ಸಾಧಾರಣ ಸ್ವರೂಪದ ಗಾಯವಾಗಿರುತ್ತದೆ. ಗಾಯಾಳುಗಳನ್ನು  ಚಿಕಿತ್ಸೆಯ ಬಗ್ಗೆ ಮುಕ್ಕಾ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಗಿದೆ  ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 93/2021 ಕಲ:279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಗಂಗೊಳ್ಳಿ: ಪಿರ್ಯಾದಿದಾರರಾಧ ಗೋಪಿ (62) ತಂದೆ: ದಿ: ಕುಂಜ್ಞಪ್ಪ ಪೂಜಾರಿ, ವಾಸ:ಜನತಾ ಕಾಲೊನಿ, ಕೊಡಪಾಡಿ, ಭಾರತ್ ನಗರ, ಗುಜ್ಜಾಡಿ ಇವರು ದಿನಾಂಕ 17/09/2021 ರಂದು ತ್ರಾಸಿ ಸಾಗರ್ ಬಾರ್ ನಲ್ಲಿ ರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗುವ ಬಗ್ಗೆ ತ್ರಾಸಿ ಕಡೆಯಿಂದ ಕೊಡಪಾಡಿ ಕಡೆಗೆ ರಸ್ತೆಯ ಎಡಬದಿಯಲ್ಲಿ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕುಂದಾಪುರ ತಾಲೂಕು ಹೊಸಾಡು ಗ್ರಾಮದ ಕಂಚ್ ಗೋಡ್ ಕ್ರಾಸ್ ಬಳಿ ತಲುಪುವಾಗ್ಗೆ ರಾತ್ರಿ ಸಮಯ ಸುಮಾರು 9:00 ಗಂಟೆಗೆ ತ್ರಾಸಿ ಕಡೆಯಿಂದ ಗಂಗೊಳ್ಳಿ ಕಡೆಗೆ ವಿವೇಕ್ ಎಂಬವರು ತನ್ನ ಮೋಟಾರ್ ಸೈಕಲ್ ನಂಬ್ರ KA-31 L-6978 ನೇದನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ರಸ್ತೆಯ ತೀರ ಎಡಬದಿಗೆ ಬಂದು ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಗೋಪಿ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಗೋಪಿ ಇವರು ರಸ್ತೆಗೆ ಬಿದ್ದಿದ್ದು ಗೋಪಿ ರವರ ಬಲ ಕಾಲಿನ ಮೂಳೆಗೆ ಹಾಗೂ ಎಡಕೈ ಮೂಳೆಗೆ ಜಖಂ ಉಂಟಾಗಿದ್ದು ತಲೆಗೆ ಹಾಗೂ ಕೈಕಾಲುಗಳಿಗೆ ತರಚಿದ ಗಾಯ ಉಂಟಾಗಿರುತ್ತದೆ. ಗಾಯಗೊಂಡ ಗೋಪಿ ರವರನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 84/2021 ಕಲ:279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಗಂಗೊಳ್ಳಿ: ಪಿರ್ಯಾದಿದಾರರಾಧ ಕೃಷ್ಣ ಖಾರ್ವಿ, (40) ತಂದೆ: ಮಂಜುನಾಥ ಖಾರ್ವಿ, ವಾಸ: ಮಲ್ಯರಬೆಟ್ಟು, ಗಂಗೊಳ್ಳಿ ಗ್ರಾಮ, ಕುಂದಾಪುರ ಇವರ ತಮ್ಮ ದೇವೇಂದ್ರ ಖಾರ್ವಿ (35) ಇವರು ದಿನಾಂಕ 16/09/2021 ರಂದು 18:30 ಗಂಟೆಗೆ ಮನೆಯಿಂದ ಮೀನುಗಾರಿಕೆ ಬಗ್ಗೆ ಗಂಗೊಳ್ಳಿ ಬಂದರಿಗೆ ಹೋದವರು ವಾಪಾಸು ಮನೆಗೆ ಬಾರದೇ ಇರುವುದನ್ನು ಕಂಡು ಹುಡುಕಾಡಿದಲ್ಲಿ ಪತ್ತೆ ಆಗದೇ ಇರುವುದರಿಂದ ದಿನಾಂಕ 17/09/2021 ರಂದು 19:15 ಗಂಟೆಗೆ ದೇವೇಂದ್ರ ಖಾರ್ವಿಯವರು ಕಾಣೆಯಾದ ಬಗ್ಗೆ ದೂರು ನೀಡಿದ್ದು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾಣೆಯಾದ ದೇವೇಂದ್ರ ಖಾರ್ವಿರವರ ಮೃತ ದೇಹವು ದಿನಾಂಕ 18/09/2021 ರಂದು ಬೆಳಿಗ್ಗೆ 07:45 ಗಂಟೆ ಸಮಯಕ್ಕೆ ಗಂಗೊಳ್ಳಿ  ಗ್ರಾಮದ ಗಂಗೊಳ್ಳಿ ಪಂಚಗಂಗಾವಳಿ ನದಿ ತೀರದ ಕಳವಿನ ಬಾಗಿಲು ಎಂಬಲ್ಲಿ ಪತ್ತೆಯಾಗಿರುತ್ತದೆ. ದೇವೇಂದ್ರ ಖಾರ್ವಿಯವರು ದಿನಾಂಕ 16/09/2021 ರಂದು 18:30 ಗಂಟೆಗೆ ಮನೆಯಿಂದ ಗಂಗೊಳ್ಳಿ ಬಂದರಿಗೆ ಮೀನುಗಾರಿಕೆ ಬಗ್ಗೆ ಹೋದವರು ಪಾತಿ ದೋಣಿಯಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ಆಕಸ್ಮಿಕವಾಗಿ ಆಯತಪ್ಪಿ ಪಂಚಗಂಗಾವಳಿ ನದಿಗೆ ಬಿದ್ದು ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್‌ ಕ್ರಮಾಂಕ 27/2021 ಕಲಂ:174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು: ದಿನಾಂಕ 17/09/2021 ರಂದು ಚರಣ್ ರಾಜ್ ಖಾರ್ವಿ ರವರು ಇತರ 6 ಜನರೊಂದಿಗೆ ಮೀನುಗಾರಿಕೆಯ ಬಗ್ಗೆ ಅಳಿವೆಕೋಡಿಯಿಂದ ಅರಬ್ಬಿ ಸಮುದ್ರಕ್ಕೆ ತೆರಳಿ ಮೀನುಗಾರಿಕೆ ಮುಗಿಸಿಕೊಂಡು ಸಂಜೆ ಸಮಯ ವಾಪಾಸ್ಸು ದಡಕ್ಕೆ ದೋಣಿಯಲ್ಲಿ ಬರುತ್ತಾ ಸಂಜೆ  6 ಗಂಟೆ ಸುಮಾರಿಗೆ ಸಮುದ್ರ ದಡದಿಂದ ಸುಮಾರು 200 ಮೀಟರ್ ದೂರದಲ್ಲಿ ಬರುತ್ತಿರುವಾಗ ದೊಡ್ಡದಾದ ಸಮುದ್ರದ ಅಲೆಯೊಂದು ದೋಣಿಗೆ ಅಪ್ಪಳಿಸಿ ದೋಣಿ ಮಗುಚಿ ಸಮುದ್ರ ನೀರಿಗೆ ಚರಣ್ ರಾಜ್ ಖಾರ್ವಿ (25) ಬಿದ್ದು ನೀರಿನಲ್ಲಿ ಮುಳುಗಿ ಉಸಿರು ಗಟ್ಟಿ ಮೃತ ಪಟ್ಟಿದ್ದು, ಮೃತ ದೇಹವು ದಿನಾಂಕ 18/09/2021 ರಂದು ಉಪ್ಪುಂದ ಗ್ರಾಮದ ಅಮ್ಮನವರತೊಪ್ಲು ಸಮುದ್ರದಲ್ಲಿ ಸಮಯ  ಸುಮಾರು 10:00 ಗಂಟೆಗೆ ದೊರಕಿರುತ್ತದೆ, ಎಂಬುದಾಗಿ ನಾಗೇಶ ಖಾರ್ವಿ (35)ತಂದೆ;ದಿ, ಸುಬ್ಬಯ್ಯ ಖಾರ್ವಿ ವಾಸ:  ಬುಡ್ಚನಮನೆ, ಅಳಿವೆಕೋಡಿ,  ತಾರಾಪತಿ, ಪಡುವರಿ ಇವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಯು.ಡಿ.ಆರ್‌ ಕ್ರಮಾಂಕ 35/2021 ಕಲಂ:174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿದಾರರಾಧ ರೋಹಿತ್‌ (27) ತಂದೆ: ಕರುಣಾಕರ ಶೆಟ್ಟಿ ವಾಸ: ಮನೆನಂಬ್ರ 2-13, ಸಣ್ಣಮನೆ, ವಿಷ್ಣುಮೂರ್ತಿ ದೇವಸ್ಥಾನದ ಬಳಿ, ಕೊರಂಗ್ರಪಾಡಿ ಗ್ರಾಮ, ಉಡುಪಿ ಇವರ ತಾಯಿ ಶ್ರೀಮತಿ ಚಂದ್ರಕಲಾ ಶೆಟ್ಟಿ (45) ಇವರು ಸುಮಾರು 30 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಚಿಕಿತ್ಸೆಯನ್ನು ಕೊಡಿಸಿದರು ಕೂಡ ಗುಣಮುಖವಾಗದೇ ಇದ್ದು ಅದೇ ಚಿಂತೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 18/09/2021 ರಂದು ಮಧ್ಯಾಹ್ನ 12:45 ಗಂಟೆಗೆ ಮನೆಯ  ಸಮೀಪದ ಬಾವಿಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯು.ಡಿ.ಆರ್‌ ಕ್ರಮಾಂಕ 38/2021 ಕಲಂ:174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 18-09-2021 06:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080