ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣಗಳು

  • ಬ್ರಹ್ಮಾವರ: ಬ್ರಹ್ಮಾವರ ತಾಲೂಕು ಹಲುವಳ್ಳಿ ಗ್ರಾಮದ ಕಿನ್‌ಮಾನ್‌ ಬೆಟ್ಟು ಎಂಬಲ್ಲಿ ವಾಸವಾಗಿರುವ ಪಿರ್ಯಾದಿದಾರರು ಕೃಷಿಕನಾಗಿದ್ದು, ತಾನು ಬೆಳೆದ ಅಡಿಕೆಗಳನ್ನು ಒಟ್ಟು ಮಾಡಿ ಒಣಗಿಸಿ ಗೋಟ್ ಅಡಿಕೆ ಮಾಡಿ ಈಗ ಮಳೆಗಾಲವಾಗಿದ್ದರಿಂದ ಅದನ್ನು ಸೋಲಾರ್‌ ಡ್ರಾಯರ್‌‌ನೊಳಗೆ ಸ್ಟಾಕ್‌‌ ಮಾಡಿ ಇಟ್ಟಿದ್ದು. ಎಪ್ರೀಲ್‌‌ 10 ನೇ ತಾರೀಕಿನ ಬಳಿಕ ಸದ್ರಿ  ಅಡಿಕೆಗಳು ಕಡಿಮೆಯಾಗುತ್ತಿರುವ ಬಗ್ಗೆ ಮೇ ತಿಂಗಳಲ್ಲಿ  ಪಿರ್ಯಾದಿದಾರರ ಗಮನಕ್ಕೆ ಬಂದಿರುತ್ತದೆ. ಅದೇ ರೀತಿ ದಿನಾಂಕ 15/08/2022 ರಂದು ರಾತ್ರಿಯಿಂದ ದಿನಾಂಕ 16/08/2022 ರಂದು ಬೆಳಿಗ್ಗೆ 07:00 ಗಂಟೆಯ  ಮಧ್ಯಾವಧಿಯಲ್ಲಿ  ಸೋಲಾರ್‌‌  ಗೋಡಾನ್‌‌ನಲ್ಲಿದ್ದ ಒಣ ಅಡಿಕೆಯಲ್ಲಿ ಸುಮಾರು 20 ಕೆಜಿ ಯಷ್ಟು ಒಣ ಅಡಿಕೆ ಇಲ್ಲದೇ ಇರುವುದು ಕಂಡು ಬಂದಿರುತ್ತದೆ. , ರಾತ್ರಿ ವೇಳೆ ಯಾರೋ ಕಳ್ಳರು ಸದ್ರಿ 20 ಕೆಜಿ ಯಷ್ಟು ಒಣ ಅಡಿಕೆಯನ್ನು ಕಳವು ಮಾಡಿಕೊಂಡು ಹೋದವರೇ ಈ ಹಿಂದೆ ಅವರ ಸೋಲಾರ್‌ ಗೋಡಾನ್‌ಲ್ಲಿ ಒಣಗಿಸಿದ್ದ ಅಡಿಕೆಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಪಿರ್ಯಾದಿದಾರರಿಗೆ ಸಂಶಯ ಇದ್ದು. ಎಪ್ರೀಲ್‌‌ 10 ನೇ ತಾರೀಕಿನಿಂದ ಇದುವರೆಗೆ  ಸೋಲಾರ್‌ ಡ್ರಾಯರ್‌‌ನೊಳಗೆ ಒಣಗಿಸಿದ್ದ ಸುಮಾರು ಒಟ್ಟು 620 ಕೆಜಿಯಷ್ಟು ಒಣ ಅಡಿಕೆಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಅದರ ಅಂದಾಜು ಮೌಲ್ಯ ರೂ  1,24,000/- ಆಗಿರುತ್ತದೆ ಈ ಬಗ್ಗೆ ಸುಬ್ರಹ್ಮಣ್ಯ ಭಟ್‌‌  (62) ತಂದೆ : ಮಂಜುನಾಥ ಭಟ್‌ವಾಸ: ಕಿನ್‌ಮಾನ್‌‌ ಬೆಟ್ಟು, ಹಲುವಳ್ಳಿ ಅಂಚೆ ಮತ್ತು ಗ್ರಾಮ ಬ್ರಹ್ಮಾವರ ರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ  139/2022 ಕಲಂ :379 IPC ಯಂತೆ ಪ್ರಕರಣ ದಾಖಲಿಸಲಾಗಿದೆ್.
  • ಶಿರ್ವ : :ದಿನಾಂಕ 17.08.2022 ರಂದು  ಸಂಜೆ 4:15  ಗಂಟೆಯಿಂದ  ದಿನಾಂಕ 18.08.2022  ರಂದು  ಬೆಳಿಗ್ಗೆ 9:45  ಗಂಟೆಯ ನಡುವಿನ ಅವಧಿಯಲ್ಲಿ  ಶಿರ್ವ ಗ್ರಾಮದ ಮಟ್ಟಾರು ಯು.ಬಿ.ಎಂ.ಸಿ.  ಶಾಲೆಯ ಹಿಂದೆ ಇರುವ  ಅಕ್ಷರದಾಸೋಹ ಕೊಠಡಿಗೆ ಹಾಕಿದ್ದ ಬೀಗವನ್ನು ಯಾರೋ ಕಳ್ಳರು ಮುರಿದು ಒಳಪ್ರವೇಶಿಸಿ  ಅಕ್ಷರದಾಸೋಹಕ್ಕೆ  ಉಪಯೋಗಿಸುತ್ತಿದ್ದ  ಗ್ಯಾಸ್‌ ಸಿಲಿಂಡರ್‌-1 ಹಾಗೂ  ಗೋಡೌನ್‌ನಲ್ಲಿಟ್ಟಿದ್ದ  ತಲಾ  50  ಕೆ.ಜೆ. ಅಕ್ಕಿ  ಹಾಗೂ 50 ಕೆ.ಜಿ. ಬೇಳೆಯನ್ನುಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಸೊತ್ತಿನ ಒಟ್ಟು ಮೌಲ್ಯ ರೂ.  5,000/-  ಆಗಬಹುದು. ಈ ಬಗ್ಗೆ ಶರತ್ ಕುಮಾರಿ ಪ್ರಾಯ 60 ವರ್ಷ, ಗಂಡ: ಕೃಷ್ಣ ನಾಯ್ಕ್,ವಾಸ: ಆಶೀರ್ವಾದ್ ಹೌಸ್, ಬೆಳಿಂಜಾಲೆ ಮಟ್ಟಾರು ಅಂಚೆ  ಮತ್ತು ಶಿರ್ವಾ ರವರು ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  55/22, ಕಲಂ 454, 457, 380 IPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಪ್ರಕರಣಗಳು

  • ಪಡುಬಿದ್ರಿ: ಪಿರ್ಯಾದಿ ಶೇಖ್ ಮೊಹಮ್ಮದ್ ಇದ್ರೀಸ್, ಪ್ರಾಯ: 52 ವರ್ಷ, ತಂದೆ: ದಿ. ಶೇಖ್ ಮುನವರ್ ಹುಸೇನ್ ಸಾಹೇಬ್, ವಾಸ: ಮುದರಂಗಡಿ ಮಸೀದಿ ಎದುರು, ಮುದರಂಗಡಿ, ಇವರ ಮಗ ಶೇಖ್ ಮೊಹಮ್ಮದ್ ನಹೀದ್(20) ಎಂಬುವರು ನಿಟ್ಟೆಯ ಕಾಲೇಜಿನಲ್ಲಿ 2 ನೇ ವರ್ಷದ ಬಿ.ಬಿ.ಎ. ವ್ಯಾಸಂಗ ಮಾಡಿಕೊಂಡಿದ್ದು, ಪ್ರತಿ ದಿನ ಪಿರ್ಯಾದಿದಾರರ ಬಾಬ್ತು KA-20-EB-9081 ನೇ ನಂಬ್ರದ ಮೋಟಾರ್‌ ಸೈಕಲ್ಲಿನಲ್ಲಿ ಕಾಲೇಜಿಗೆ ಹೋಗಿ ಬರುತ್ತಿರುವುದಾಗಿದೆ. ಸದ್ರಿ ಶೇಖ್ ಮೊಹಮ್ಮದ್ ನಹೀದ್ ನು ನಿನ್ನೆ ದಿನ ದಿನಾಂಕ: 17.08.2022 ರಂದು ಅವರ ತಂದೆಯ ಬಾಬ್ತು ಮೋಟಾರ್‌ ಸೈಕಲ್ಲಿನಲ್ಲಿ ಕಾಲೇಜಿಗೆಹೋಗಿ ವಾಪಾಸ್ಸು ಬರುತ್ತಾ ಸಮಯ ಸುಮಾರು 19:00 ಗಂಟೆಗೆ ಕಾಪು ತಾಲೂಕು ಎಲ್ಲೂರು ಗ್ರಾಮದ ಬೆಳ್ಳಿಬೆಟ್ಟು ಬಳಿ ತಲುಪುತ್ತಿದ್ದಂತೆ KA-20-AB-3591 ನೇ ನಂಬ್ರದ ರಿಕ್ಷಾ ಚಾಲಕ ರಿಚರ್ಡ್‌ ಡಿಸೋಜ ಎಂಬಾತನು ತನ್ನರಿಕ್ಷಾವನ್ನು ಮುದರಂಗಡಿ ಕಡೆಯಿಂದ ನಂದಿಕೂರು ಕಡೆಗೆ ಅತೀವೇಗ ಹಾಗೂ ಆಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮಗನ ಮೋಟಾರ್‌‌ ಸೈಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ, ಶೇಖ್ ಮೊಹಮ್ಮದ್ ನಹೀದ್ ನು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಆತನ ಎಡಕಾಳಿಗೆ ಮೂಳೆ ಮುರಿತ ಮತ್ತು ಕುತ್ತಿಗೆಯ ಎಡಭಾಗ, ತಲೆಗೆ, ಹಣೆಗೆ ತರಚಿದ ಗಾಯವಾಗಿದ್ದು, ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  101/2022 ಕಲಂ 279, 338 ಐಪಿಸಿ.  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಅಜೆಕಾರು: ಪಿರ್ಯಾದಿ . ಜೆ ಚೆರಿಯನ್ (41) ತಂದೆ: ಕೆ.ಸಿ. ಜೋಸ್ ವಾಸ: ಕಾರಿಕ್ಕಾಟ್ ಹೌಸ್ ಮಧುರಾಪಟ್ಟಣ ಬಸದಿ ಅಜೆಕಾರು ಮರ್ಣೆ ಗ್ರಾಮ ರವರು ತನ್ನ  KA-20-Z-8471 ನೇ  ಹೋಂಡಾ ಸಿಟಿ ಕಾರನ್ನು ದಿನಾಂಕ: 18/08/2022 ರಂದು ಬೆಳಿಗ್ಗೆ ಸುಮಾರು 9:25 ಗಂಟೆಯ ಸಮಯಕ್ಕೆ ಅಜೆಕಾರು ಮುಖ್ಯ ರಸ್ತೆಯಿಂದ ತನ್ನ ಮನೆಗೆ ಹೋಗುತ್ತಿರುವಾಗ  ಕೈಕಂಬ ಜಡ್ಡು ಮಜಲು ಎಂಬಲ್ಲಿ ಪಂಚಾಯತ್ ಬಾವಿಯ ಬಳಿ ತಲುಪುವಾಗೆ  ಎದುರುಗಡೆಯಿಂದ KA -20-M--2992 ನೇ ಜೀಪನ್ನು ಅದರ ಚಾಲಕ ಉಮ್ಮರ್ ಸಾಹೇಬ್ ರವರು ಜೀಪನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು  ಸವಾರಿ ಮಾಡಿಕೊಂಡು ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಬಲ ಕಾಲಿಗೆ ರಕ್ತ ಗಾಯ, ಎಡಕಾಲಿಗೆ ಮತ್ತು ಬಲಕೈಯ ಮಣಿಗಂಟಿಗೆ ನೋವುಂಟಾಗಿದ್ದು ಹಾಗೂ ನನ್ನ ವಾಹನ ಜಖಂ ಗೊಂಡಿರುತ್ತದೆ. ಈ ಅಪಘಾತಕ್ಕೆ KA -20-M--2992 ನೇ ಜೀಪಿನ ಚಾಲಕ ಉಮ್ಮರ್ ಸಾಹೇಬ್ ರವರ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ  ಕಾರಣವಾಗಿರುತ್ತದೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  26/2022 ಕಲಂ 279, 337, IPC ಯಂತೆ ಪ್ರಕರಣ ದಾಖಲಿಸಲಾಗಿದೆ.  

ಅಸ್ವಾಭಾವಿಕ ಮರಣ ಪ್ರಕರಣಗಳು

  • ಕಾರ್ಕಳ: ಪಿರ್ಯಾದಿ ಶ್ರೀಮತಿ ಲೈಲಾ ತೋಮಸ್, ಪ್ರಾಯ: 44 ವರ್ಷ, ವಾಸ: ಹಿರಿಯ ಆರೋಗ್ಯ ನಿರೀಕ್ಷಕರು, ಇವರು ಹಿರಿಯ ಆರೋಗ್ಯ ನಿರೀಕ್ಷಕರಾಗಿ ಕಾರ್ಕಳ ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ದಿನ ದಿನಾಂಕ: 18.08.2022 ರಂದು ಬೆಳಗ್ಗೆ 11:30 ಗಂಟೆಗೆ ಪಿರ್ಯಾದಿದಾರರ ಕಛೇರಿ ಸಿಬ್ಬಂದಿಯವರಾದ ವಿನಯರವರು ಪಿರ್ಯಾದಿದಾರರಿಗೆ ಕರೆ ಮಾಡಿ ಕಾರ್ಕಳ ಕಸಬಾ ಗ್ರಾಮದ ಗಾಂಧಿ ಮೈಧಾನ ವೀರಭದ್ರ ದೇವಾಸ್ಥಾನದ ಪಕ್ಕದಲ್ಲಿ ಅಪರಿಚಿತ ಗಂಡಸಿನ ಮೃತದೇಹ ಇರುವುದಾಗಿ ತಿಳಿಸಿದ್ದು, ಕೂಡಲೇ ಪಿರ್ಯಾದಿದಾರರು ಸ್ಥಳಕ್ಕೆ ಹೋಗಿ ನೋಡಿದಾಗ ಮೃತದೇಹವು ಮಲಗಿರುವ ಸ್ಥಿತಿಯಲ್ಲಿದ್ದು, ಸುಮಾರು 40 ರಿಂದ 50 ವರ್ಷದ ಗಂಡಸಿನ ವ್ಯಕ್ತಿಯಾಗಿರುವುದಾಗಿ ಕಂಡುಬಂದಿದ್ದು, ಆತನ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಎನ್ನುವುದಾಗಿ ದೂರು ನೀಡಿದ್ದು ಈ ಬಗ್ಗೆ ಕಾರ್ಕಳ ನಗರ ಪೊಲೀಸ್  ಠಾಣೆ ಯುಡಿಆರ್‌ ಕ್ರಮಾಂಕ  36/2022 ಕಲಂ 174(ಸಿ) CRPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 18-08-2022 06:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080