ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಶಶಿಕಲಾ  (49), ಗಂಡ : ಸಂತೋಷ  ಶೆಟ್ಟಿ , ವಾಸ: ಕೆಳಮನೆ  ಕನ್ನಯಾನ ಗ್ರಾಮ ಇವರ ಗಂಡ ಸಂತೋಷ ಶೆಟ್ಟಿ (52) ರವರು ಹೋಟೇಲ್ ಕೆಲಸ ಮಾಡಿಕೊಂಡು ತನ್ನ ಹೆಂಡತಿ ಮನೆಯಾದ ಕನ್ಯಾನ ಗ್ರಾಮಕ್ಕೆ ಹೋಗಿ ಬರುತ್ತಿರುವುದಾಗಿದೆ.  ದಿನಾಂಕ 15/08/2021 ರಂದು ಕೆಲಸಕ್ಕೆಂದು ಹೋಗಿದ್ದು ದಿನಾಂಕ 17/08/2021 ರಂದು 11:30 ಗಂಟೆಗೆ ಪಿರ್ಯಾದಿದಾರರಿಗೆ ಪರಿಚಯದವರು ಪೋನ್ ಮಾಡಿ ಸಂತೋಷ ಶೆಟ್ಟಿಯವರು ರೈಲ್ವೆ ಟ್ರಾಕ್ ಬಳಿ ಮೃತ ಪಟ್ಟಿರುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು 11:45 ಗಂಟೆಗೆ ಹೋಗಿ ನೋಡಲಾಗಿ ಸಂತೋಷ ಶೆಟ್ಟಿಯವರು ಕೊಂಕಣ ರೈಲ್ವೆ ಟ್ರಾಕ್ ಬಳಿ ಗಿಡಗಂಟಿಗಳ ನಡುವೆ ಗಾಯಗೊಂಡು ಮೃತ ಪಟ್ಟಿರುವುದು ಕಂಡು ಬಂದಿರುತ್ತದೆ  ಸಂತೋಷ ಶೆಟ್ಟಿಯವರು ಹೋಟೆಲ್ ಕೆಲಸ ಮುಗಿಸಿ  ಈ ದಿನ ಒಳದಾರಿಯಾಗಿ ಪಾರ್ತಿಕಟ್ಟೆ ಕೊಂಕಣ ರೈಲ್ವೆ ಟ್ರಾಕ್ ಬಳಿ ಬರುತ್ತಿರುವಾಗ ಯಾವುದೋ ರೈಲು ಆಕಸ್ಮಿಕವಾಗಿ ತಾಗಿ ಗಾಯಗೊಂಡು ಮೃತಪಟ್ಟಿರುವುದಾಗಿದೆ . ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 22/2021 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ವೆಂಕಟರಮಣ (35), ತಂದೆ: ಮಂಜು, ವಾಸ: ಶೇಡಿಗುಂಡಿ ಮುದೂರು ಗ್ರಾಮ  ಬೈಂದೂರು  ತಾಲೂಕು ಇವರು ದಿನಾಂಕ  17/08/2021  ಕೆಲಸದ  ಬಗ್ಗೆ  ಬೈಂದೂರು  ತಾಲೂಕಿನ  ಹಳ್ಳಿಹೊಳೆ ಗ್ರಾಮದ ಕೊಳೆಕೋಡು ಎಂಬಲ್ಲಿಗೆ ಅಡಿಕೆ ತೋಟದ  ಕೆಲಸಕ್ಕೆ  ಬಂದಿದ್ದು,  ಅದರಂತೆ  ತೋಟದಲ್ಲಿ  ಕೆಲಸ  ಮಾಡುತ್ತಿರುವಾಗ ಬೆಳಿಗ್ಗೆ 10:15 ಗಂಟೆಗೆ ಆರೋಪಿಗಳಾದ 1)ಸುಷ್ಮಾ ಚಾತ್ರ, 2) ಶೈಲಜಾ  ಚಾತ್ರ, 3) ಗ್ರೀಷ್ಮಾ  ಚಾತ್ರ, 4) ವಿಜೇಂದ್ರ  ಚಾತ್ರ , 5) ಸುಮ  ವಿಜೆಂದ್ರ  ಚಾತ್ರ ವಾಸ: ಹಳ್ಳಿಹೊಳೆ ಗ್ರಾಮದ ಕೊಳೆಕೋಡು ಇವರು  ಅಡಿಕೆ ತೋಟಕ್ಕೆ ಬಂದು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದದಿಂದ  ಬೈದಿದ್ದು ಹಾಗೂ ಆರೋಪಿ  ಸುಷ್ಮಾ ಚಾತ್ರ  ಯಾವುದೊ ವಿಷ ಪೂರಿತ  ಕೆಮಿಕಲ್‌ನ್ನು  ಹಿಡಿದಕೊಂಡು ಬಂದು ಪಿರ್ಯಾದಿದಾರರ ಮೈ ಮೇಲೆ ಎರಚಿರುತ್ತಾರೆ, ಅಷ್ಟರಲ್ಲಿ ಉಳಿದವರು ದೊಣ್ಣೆಯಿಂದ ಹಾಗೂ ಕೈಯಿಂದ ಹಲ್ಲೆ ಮಾಡಿ ಕಾಲಿನಿಂದ  ತುಳಿದಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 79/2021  ಕಲಂ:  504  323, 324 ಐಪಿಸಿ ಜೊತೆಗೆ 34 ಕಲಂ: 3(1)(r),(S),3(2)(v-a)SC AND THE ST (PREVENTION OF ATTROCITIES) ACT, 1989 ರಂತೆ ಪ್ರಕರಣ ದಾಖಲಾಗಿರುತ್ತದೆ.
      

ಇತ್ತೀಚಿನ ನವೀಕರಣ​ : 18-08-2021 09:26 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080