ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾದ ಭೋವಿ (30), ತಂದೆ: ಚಿಕ್ಕಯ್ಯ ಭೋವಿ, ವಾಸ: ನೇರಳಕಟ್ಟೆ ಹಿಲ್ಕೋಡು, ನೇರಳಕಟ್ಟೆ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 17/07/2022 ರಂದು ತನ್ನ KA-20-EJ-3141 ನೇ ಮೋಟಾರು ಸೈಕಲ್‌ನಲ್ಲಿ ರಾಧಕೃಷ್ಣ ಭೋವಿಯವರನ್ನು ಸಹಸವಾರನ್ನಾಗಿ ಕುಳ್ಳಿರಿಸಿಕೊಂಡು ನೇರಳಕಟ್ಟೆಯಿಂದ ಮರವಂತೆ ಕಡೆಗೆ NH 66 ರಸ್ತೆಯಲ್ಲಿ ಹೋಗುತ್ತೀರುವಾಗ 12:30 ಗಂಟೆಗೆ ತ್ರಾಸಿ ಗ್ರಾಮದ ತ್ರಾಸಿ ಬಸ್ಸ್ ನಿಲ್ದಾಣದ ಬಳಿ ತಲುಪುವಾಗ ಪಿರ್ಯಾದಿದಾರರ ಹಿಂದಿನಿಂದ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ MH-12-RN-9798 ನೇ ಲಾರಿಯಯನ್ನು ಚಾಲಕ ಯೋಗೀಸ್‌ ಕಾಂಬ್ಳೆ ಅತೀ ವೇಗ ಹಾಗೂ  ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡ ಬದಿಯಲ್ಲಿ ಮೋಟಾರು ಸೈಕಲ್‌ನ್ನು ಸವಾರಿಮಾಡಿಕೊಂಡು ಹೋಗುತ್ತಿದ್ದ ಪಿರ್ಯಾದಿದಾರರ  ಮೋಟಾರು ಸೈಕಲ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು, ಪರಿಣಾಮ ಪಿರ್ಯಾದಿದಾರರು ಹಾಗೂ ಸಹಸವಾರ ಮತ್ತು ಮೋಟಾರು ಸೈಕಲ್‌ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಬಲಕೈ ಮಣಿಗಂಟಿನ ಬಳಿ, ಎಡಕೈ ಅಂಗೈಗೆ, ಎಡ ಕಾಲು ಮತ್ತು ಸೊಂಟಕ್ಕೆ ರಕ್ತ ಗಾಯವಾಗಿರುತ್ತದೆ. ಹಾಗೂ ಸಹಸವಾರ ರಾಧಕೃಷ್ಣ ರವರಿಗೆ ಮುಖಕ್ಕೆ, ಎರಡು ಕೈಗಳಿಗೆ, ಮತ್ತು ಕಾಲುಗಳಿಗೆ ರಕ್ತ ಗಾಯವಾಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 61/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ ನಾಗರಾಜ ಕಟೀಲ್‌ ಶೆಟ್ಟಿಗಾರ್‌ (52), ತಂದೆ: ಪರಮೇಶ್ವರ, ವಾಸ:  8 – 113/4, ಪ್ರಶಾ, ಈಶ್ವರನಗರ, 6 -D ಕ್ರಾಸ್‌ಹೆರ್ಗಾ ಗ್ರಾಮ, ಉಡುಪಿ ತಾಲೂಕು ಇವರ ಅತ್ತೆ ಸುಮತಿ (72) ಇವರು ಅನೇಕ ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಳುತ್ತಿದ್ದು ಅದರ ಬಗ್ಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದರು, 2021 ನೇ ಮಾರ್ಚ ತಿಂಗಳಿನಲ್ಲಿ ಮೃತ ಸುಮತಿಯವರ ಗಂಡ ಅನಾರೋಗ್ಯದಿಂದ ಮೃತಪಟ್ಟಿದ್ದು ಆ ಬಳಿಕ ಮೃತ ಸುಮತಿ ಯವರಿಗೆ ಮಾನಸಿಕ ಖಿನ್ನತೆ ಸಮಸ್ಯೆ ಉಲ್ಬಣಗೊಂಡಿದ್ದು ಅವರನ್ನು ಕಳೆದ 25 ದಿನಗಳ ಹಿಂದೆ ಉಡುಪಿ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಯ ಬಗ್ಗೆ ದಾಖಲಿಸಿ  ಒಂದು ವಾರದ ಬಳಿಕ ಬಿಡುಗಡೆಗೊಳಿಸಿ ಮನೆಗೆ ಕರೆದುಕೊಂಡು ಬಂದಿರುತ್ತಾರೆ, ಅವರ ಮಾನಸಿಕ ಖಿನ್ನತೆ ಸಮಸ್ಯೆ ಗುಣಮುಖವಾಗದೆ ತೀವ್ರಗೊಂಡಿದ್ದು ಇದೇ ಕಾರಣದಿಂದ ಅವರು ಜೀವನದಲ್ಲಿ ಜಿಗುಪ್ಸೆಗೊಂಡು  ದಿನಾಂಕ 17/07/2022 ರಂದು 16:00 ಗಂಟೆಯಿಂದ 16:30 ಗಂಟೆಯ ಮಧ್ಯಾವಧಿಯಲ್ಲಿ ಪಿರ್ಯಾದಿದಾರರ ಮನೆಯ ಪಕ್ಕದಲ್ಲಿರುವ ಬಾವಿಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 25/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಯೋಗೀಶ್ ಪೂಜಾರಿ (29), ತಂದೆ: ಶೇಷು ಪೂಜಾರಿ, ವಾಸ: ಹಾವಳಿ ಪುಟ್ಟನ ಮನೆ ಕೆಳಪೇಟೆ ಶಿರೂರು, ಶಿರೂರು ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 17/07/2022 ರಂದು 15:00 ಗಂಟೆಗೆ  ಶಿರೂರು ಕೆಳಪೇಟೆಯಲ್ಲಿರುವಾಗ ಸ್ನೇಹಿತ ಅಶೋಕ್ ಶೆಟ್ಟಿ ರವರು ದೂರವಾಣಿ ಕರೆ ಮಾಡಿ ಶಿರೂರು ಗ್ರಾಮದ ಬೆಟ್ಟಿನ ಮನೆ ಎಂಬಲ್ಲಿನ ತನ್ನ ಮನೆಯ ಬಳಿಯ  ರೈಲ್ವೆ ಹಳಿಯ ಪಕ್ಕದಲ್ಲಿರುವ ಗಿಡ ಬಳ್ಳಿಗಳಿರುವ ಪೊದೆಯಲ್ಲಿ ಒಂದು ಮೃತ ಶರೀರ ಇರುವುದಾಗಿ ತಿಳಿಸಿದ ಮೇರೆಗೆ ಪಿರ್ಯಾದಿದಾರರು ಕೂಡಲೇ ಅಲ್ಲಿಗೆ ಸ್ನೇಹಿತನೊಂದಿಗೆ ಹೋಗಿ ಪರಿಶೀಲಿಸಿದಾಗ ರೈಲ್ವೆ ಹಳಿಯ ಬದಿಯಲ್ಲಿ ವಿದ್ಯುತ್ ಕಂಬದ ಕೆಳಭಾಗದಲ್ಲಿ ಒಂದು ಮೃತ ಶರೀರ ಕವುಚಾಗಿ ಬಿದ್ದುಕೊಂಡಿದ್ದು, ಕೊಳೆತ ಸ್ಥಿತಿಯಲ್ಲಿದ್ದು, ಮೃತದೇಹದ ಮೇಲೆ ಹುಳಗಳು ಹರಿದಾಡುತ್ತಿದ್ದು, ಸುಮಾರು 45 ರಿಂದ 50  ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹವಾಗಿರುತ್ತದೆ. ಮೃತರು 3-4 ದಿನಗಳ ಹಿಂದೆ ರೈಲ್ವೆ ಹಳಿಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಯಾವುದೋ ರೈಲು ತಾಗಿಯೋ ಅಥವಾ ಚಲಿಸುತ್ತಿರುವ ರೈಲಿನಿಂದಲೋ ಕೆಳಗೆ ಬಿದ್ದು ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 32/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾದ ರಿಯಾಝ್‌ ಅಹಮ್ಮದ್‌(42), ತಂದೆ: ಅಹಮ್ಮದ್‌ ಸಾಹೇಬ್‌, ವಾಸ: ಮುಬಾರಕ್‌ ಮಂಜಿಲ್‌, ನಾವುಂದ ಚಾತ್ನಾಕೇರೆ, ನಾವುಂದ ಗ್ರಾಮ , ಬೈಂದೂರು ತಾಲೂಕು ಮತ್ತು ಪಿರ್ಯಾದಿದಾರರ ಸಂಬಂಧಿ ಅಬ್ದುಲ್‌ಸಲಾಂ ರವರು ದಿನಾಂಕ 17/07/2022 ರಂದು ಮರವಂತೆ ಮಸೀದಿಯ ಹಾಲ್‌ಗೆ ಸಂಬಂದಿಕರ ಮದುವೆ ಬಗ್ಗೆ ಹೋಗಿದ್ದು, ಮದುವೆ ಹಾಲ್‌ನಲ್ಲಿ  ಇರುವಾಗ ಪಿರ್ಯಾದಿದಾರರ ಪರಿಚಯದ ನಾಸೀರ್‌, ಸಾಕೀರ್‌, ಹನೀಫ್‌ಮತ್ತು ಆಸಿಪ್‌ರವರು  ಜಗಳ ಮಾಡಿಕೊಳ್ಳುತ್ತಿದ್ದು, ಆ ಸಮಯ ಪಿರ್ಯಾದಿದಾರರು ಹಾಗೂ ಹಾಲ್‌ನಲ್ಲಿರುವ ಇತರರು ಜಗಳವನ್ನು ಬಿಡಿಸಿ ಹಾಲ್‌ನಿಂದ ಹೊರಗೆ ಕಳುಹಿಸಿದ್ದು, ಆ ಸಮಯ ಆರೋಪಿ ನಾಸೀರ್‌, ಮತ್ತು ಸಾಕೀರ್‌ರವರು ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿ ಹೋಗಿರುತ್ತಾರೆ. ನಂತರ  16:30 ಗಂಟೆಗೆ ಪಿರ್ಯಾದಿದಾರರು  ಹಾಗೂ ಅಬ್ದುಲ್‌ಸಲಾಂ ರವರು ಮರವಂತೆ ಗ್ರಾಮದ ಮರವಂತೆ ಆಲ್‌ ಆರೀಪ್‌ ಕೋಳಿ ಅಂಗಡಿ ಬಳಿ ಕುಳಿತುಕೊಂಡಿರುವಾಗ ಅಲ್ಲಿಗೆ ಆರೋಪಿಗಳಾದ ಅಬ್ದುಲ್‌ ಅಜೀಜ್‌, ನಾಸೀರ್‌, ಸಾಕೀರ್‌, ಆಸಿಫ್‌ ಹಾಗೂ  ಖಾದರ್‌ರವರು ಇನ್ನೋವಾ ಕಾರಿನಲ್ಲಿ ಬಂದು  ಪಿರ್ಯಾದಿದಾರರ ಬಳಿ ಬಂದು ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿ ಆರೋಪಿ ಅಬ್ದುಲ್‌ ಅಜೀಜ್‌ರವರು ದೊಣ್ಣೆಯಿಂದ, ಹಾಗೂ ಆರೋಪಿ ನಾಸೀರ್‌ರವರು ಸರಳಿನಿಂದ ಪಿರ್ಯಾದಿದಾರರಿಗೆ ಹಾಗೂ ಅಬ್ದುಲ್‌ಸಲಾಂ ರವರಿಗೆ ಹಲ್ಲೆ ಮಾಡಿದ್ದು ಪರಿಣಾಮ ಪಿರ್ಯಾದಿದಾರರಿಗೆ ಬಲಕೈಗೆ, ಎದೆಗೆ, ಪಿರ್ಯಾದಿದಾರರ ಬಲಕೈ, ಎದೆಗೆ,  ಹೊಟ್ಟೆಗೆ ನೋವಾಗಿರುತ್ತದೆ. ಅಲ್ಲದೇ ಅಬ್ದುಲ್‌ಸಲಾಂ ರವರಿಗೆ ಎದೆಗೆ, ತಲೆಗೆ, ಬಲಕೈಗೆ ಮತ್ತು ಮರ್ಮಾಂಗಕ್ಕೆ ನೋವುಂಟಾಗಿರುತ್ತದೆ.  ಈ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಾಗಿರುವುದಾಗಿ ನೀಡಿದ ದೂರಿನಂತೆ್ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 62/2022 ಕಲಂ: 143, 147, 148, 324, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ಪಿರ್ಯಾದಿದಾರರಾದ ಅಬ್ದುಲ್‌ ನಾಸೀರ್‌(35), ತಂದೆ: ಅಬ್ದುಲ್‌ ಅಜೀಜ್‌, ವಾಸ: ಶಕಿಲಾ ಮಂಜಿಲ್‌, ಗಾಂಧಿನಗರ, ಮರವಂತೆ ಗ್ರಾಮ, ಬೈಂದೂರು ತಾಲೂಕು ಮತ್ತು ಪಿರ್ಯಾದಿದಾರರ ಅಣ್ಣ ಮಹಮ್ಮದ್‌ ಶಾಕೀರ್‌ರವರು ದಿನಾಂಕ 17/07/2022 ರಂದು ಸಂಬಂಧಿಕರ ಮದುವೆ ಬಗ್ಗೆ ಮರವಂತೆ ಮಸೀದಿಯ  ಹಾಲ್‌ಗೆ ಹೋಗಿದ್ದು, ಮದುವೆ ಹಾಲ್‌ನಲ್ಲಿ ಊಟ ಮಾಡುತ್ತೀರುವಾಗ ಗಂಗೊಳ್ಳಿಯ ಹನೀಪ್‌  ಪಿರ್ಯಾದಿದಾರರ ಕಡೆಗೆ ಬಂದು ಮೀನು ಸಾಗಟ ವ್ಯವಹಾರದಲ್ಲಿನ ಬಾಕಿ ಇರುವ 20,000/- ಹಣವನ್ನು ಏಕೆ ಕೊಡಲಿಲ್ಲ ಎಂದು  ಬೈದು ಜಗಳ ಮಾಡಿದ್ದು ಆಗ ಹಾಲ್‌ನಲ್ಲಿರುವ  ಜನರು ಹನೀಪ್‌ನನ್ನು ಹೊರಗೆ  ಕಳುಹಿಸಿರುತ್ತಾರೆ. ಹಾಗೂ ಪಿರ್ಯಾದಿದಾರರು  ಹಾಲ್‌ನಿಂದ ಹೊರಗೆ ಬರುವಾಗ ಆರೋಪಿ ಸಲಾಂ ರವರು ಅವಾಚ್ಯವಾಗಿ ಬೈದಿರುತ್ತಾರೆ. ನಂತರ ಸಂಜೆ ಈ ವಿಚಾರದಲ್ಲಿ ರಾಜಿ ಮಾತುಕತೆ ಬಗ್ಗೆ ಪಿರ್ಯಾದಿದಾರರು ಹಾಗೂ ಪಿರ್ಯಾದಿದಾರ ಅಣ್ಣನಾದ ಮಹಮ್ಮದ್‌ ಶಾಕೀರ್‌ ಮತ್ತು ತಂದೆ ಅಬ್ದುಲ್‌ ಅಜೀಜ್‌ರವರು ಮರವಂತೆ ಗ್ರಾಮದ ಮರವಂತೆ ಆಲ್‌ ಅರೀಪ್‌ ಕೋಳಿ ಅಂಗಡಿ ಬಳಿ ಹೋದಾಗ 16:00 ಗಂಟೆಗೆ ಆರೋಪಿಗಳಾದ ಸಲಾಂ, ಉಸ್ಮಾನ್‌, ಅಬ್ಬು, ಅಯ್ಯೂಬ್‌, ಝೈನ್‌ಮತ್ತು ರಿಯಾಝ್‌ರವರು ನಿಂತಿದ್ದು, ಆರೋಪಿಗಳು ಪಿರ್ಯಾದಿದಾರರ ಕಡೆಯವರನ್ನು ನೋಡಿ  ಅವಾಚ್ಯ ಶಬ್ದಗಳಿಂದ ಬೈದು ಆರೋಪಿ ರಿಯಾಝ್‌ನು ತನ್ನ ಕೈಯಲ್ಲಿದ್ದ ಹೆಲ್ಮೆಟ್‌ನಿಂದ ಪಿರ್ಯಾದಿದಾರರ ಹಣೆಗೆ ಮತ್ತು ಮುಖಕ್ಕೆ ಹೊಡೆದು ಪಿರ್ಯಾದಿದಾರರ ತಂದೆಯ ತಲೆಗೆ,  ಹಣೆಗೆ, ಮುಖಕ್ಕೆ ಹೊಡೆದಿರುತ್ತಾನೆ.  ಪಿರ್ಯಾದಿದಾರರ ಅಣ್ಣನಿಗೂ ಹಲ್ಲೆ ಮಾಡಿರುತ್ತಾರೆ. ಹಾಗೂ  ಆರೋಪಿ ಸಲಾಂ ನು ಸರಳಿನಿಂದ ಪಿರ್ಯಾದಿದಾರರ ತಂದೆಗೆ ಹಲ್ಲೆ ಮಾಡಿರುತ್ತಾರೆ. ನಂತರ ಆರೋಪಿಗಳೆಲ್ಲರು ಸೇರಿ  ಪಿರ್ಯಾದಿದಾರರ ಕಡೆಯವರಿಗೆ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಈ ಬಗ್ಗೆ ಪಿರ್ಯಾದಿದಾರರು, ಹಾಗೂ ಮಹಮ್ಮದ್‌ ಶಾಕೀರ್‌ ಮತ್ತು ಅಬ್ದುಲ್‌ ಅಜೀಜ್‌ರವರು ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 63/2022 ಕಲಂ: 143, 147, 148, 324, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 18-07-2022 09:47 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080