ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ:

  • ಉಡುಪಿ: ಫಿರ್ಯಾದಿ ಅಶೋಕ್‌ಕುಮಾರ್‌ ಎಸ್‌ ಇವರು  ಮೂಲತಃ  ತುಮಕೂರು  ಜಿಲ್ಲೆಯವರಾಗಿದ್ದು,  ಉಡುಪಿ ರಥಬೀದಿಯ  ವಾದಿರಾಜ  ಕಾಂಫ್ಲೆಕ್ಸ್‌ನಲ್ಲಿರುವ  ಗ್ಲೋಬಲ್‌  ಟೈಮ್‌  ಟ್ರೇಡರ್ಸ್‌ ಕಚೇರಿಯಲ್ಲಿ ಕಳೆದ ನಾಲ್ಕು  ತಿಂಗಳಿನಿಂದ  ಶೇರು  ಮಾರುಕಟ್ಟೆ ವ್ಯವಹಾರ  ಮಾಡಿಕೊಂಡಿದ್ದು, ದಿನಾಂಕ: 16/07/2021ರಂದು 15:00  ಗಂಟೆಗೆ  ಫಿರ್ಯಾದುದಾರರ  ಬಾಬ್ತು ಕಚೇರಿಗೆ  ಬಂದಿದ್ದ  ಸಂತೋಷ ಎಂಬ  ವ್ಯಕ್ತಿಯು ಫಿರ್ಯಾದುದಾರರನ್ನು  ವ್ಯವಹಾರದ ಮಾತುಕತೆಗೆಂದು  ಆತನು  ತಂದಿದ್ದ  ಗ್ರೇ ಬಣ್ಣದ ಇನ್ನೊವಾ    ಕಾರಿನಲ್ಲಿ ಕರೆದುಕೊಂಡು  ಹೋಗಿದ್ದು,  ನಂತರ ಸದ್ರಿ ಕಾರನ್ನು ಇನ್ನೂ ನಾಲ್ವರು ಏರಿದ್ದು, ಅವರೆಲ್ಲರೂ  ಸೇರಿ ಫಿರ್ಯಾದುದಾರರನ್ನು ಒಂದು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು, 'ನಮಗೆ  70  ಲಕ್ಷ  ಹಣ ಕೊಡಬೇಕು, ಇಲ್ಲದಿದ್ದರೆ  ನಿನ್ನನ್ನು  ಕೊಂದು  ನಾವು  ಜೈಲಿಗೆ  ಹೋಗುವುದಾಗಿ' ಬೆದರಿಸಿರುತ್ತಾರೆ.   ಫಿರ್ಯಾದುದಾರರು ಒಪ್ಪದಿದ್ದಕ್ಕೆ ಮಾರಕಾಸ್ತ್ರಗಳು ಹಾಗೂ  ಪಿಸ್ತೂಲ್‌ನ್ನು ತೋರಿಸಿ ಬೆದರಿಸಿ,  ನಂತರ ಅಲ್ಲಿಂದ  ರೆಸಾರ್ಟ್‌ ಒಂದಕ್ಕೆ ಕೊಂಡೊಯ್ದು ರೆಸಾರ್ಟ್‌ನ  ರೂಮಿನಲ್ಲಿ  ಬಲವಂತವಾಗಿ ಕೂಡಿ  ಹಾಕಿ,  ಹಣ  ಕೊಡದಿದ್ದರೆ   ಕೊಲ್ಲುವುದಾಗಿ  ಜೀವ  ಬೆದರಿಕೆ ಹಾಕಿ,  ಕೈಯಿಂದ ಹಲ್ಲೆ  ಮಾಡಿದ್ದಲ್ಲದೇ, ದಿನಾಂಕ: 17/07/2021 ರಂದು ಆರೋಪಿತರು ಫಿರ್ಯಾದುದಾರರಿಂದ ಉಡುಪಿಯ  ಕೆನರಾ  ಬ್ಯಾಂಕಿನಿಂದ  ಬಲವಂತವಾಗಿ  ಹಣವನ್ನು  ಡ್ರಾ   ಮಾಡಿಸಿಕೊಳ್ಳುವ ಸಲುವಾಗಿ ಮಧ್ಯಾಹ್ನ 12:00  ಗಂಟೆಗೆ  ಕರೆ ತಂದಾಗ ಜೋರಾಗಿ  ಬೊಬ್ಬೆ ಹಾಕಿದಾಗ  ಆರೋಪಿತರು ಓಡಿ  ಹೋಗಿದ್ದು, ಆರೋಪಿಗಳು  ಫಿರ್ಯಾದುದಾರರ ಬ್ಯಾಗ್‌ನಲ್ಲಿದ್ದ   1,99,500 ರೂ.  ನಗದು,  2  ಮೊಬೈಲ್‌  ಫೋನ್‌ಗಳು,  ವಾಚ್‌,  ಮಾರ್ಕ್ಸ್‌  ಕಾರ್ಡ್‌ಗಳು,  ಕಂಪೆನಿ ಲೈಸನ್ಸ್‌,  ಬೈಕ್‌ನ  ಆರ್‌ಸಿ ಕಾರ್ಡ್‌, ಡಿಎಲ್‌, ಬ್ಯಾಂಕಿನ  ಚೆಕ್‌ಗಳು-10, ಪಾಸ್‌ ಪುಸ್ತಕಗಳು-3  ಹಾಗೂ  ಕೆಲವು ದಾಖಲೆಗಳನ್ನು ಬಲವಂತವಾಗಿ  ಕೊಂಡೊಯ್ದಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ102/2021 ಕಲಂ: 324, 342, 363, 387, 395   IPC & 3, 25 ಆರ್ಮ್ಸ್ ಆ್ಯಕ್ಟ್‌‌ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಫಿರ್ಯಾದಿ ನಾಗರಾಜ ಇವರು ದಿನಾಂಕ; 17/07/2021 ರಂದು ಸಂಜೆ 05:30 ಗಂಟೆಗೆ ಸೆಂಟ್ರಿಂಗ್ ಕೆಲಸ ಮುಗಿಸಿ ಮನೆಗೆ ಹೋಗುವರೇ ಶಾಂತ ರವರ ಬೈಕಿನಲ್ಲಿ ಬರುತ್ತಿರುವಾಗ ನೀರ್ಗದ್ದೆ ಅಂಗಡಿ ಹತ್ತಿರ ಆಪಾದಿತ ನಾಗರಾಜ (ದೊಂಬೆ) ನು ಬೈಕನ್ನು ತಡೆದು ನಿಲ್ಲಿಸಿದಾಗ, ಅಲ್ಲಿಯೇ ಅಂಗಡಿಯ ಹತ್ತಿರದ ದಾಸವಾಳದ ಗಿಡದ ಮರೆಯಲ್ಲಿದ್ದ ಆಪಾದಿತ ಮಂಜುನಾಥ ಪಡಿಯಾರಹಿತ್ಲು ಎಂಬವನು  ಬೈಕ್ ಬಳಿ ಬಂದು ಆತನ ಕೈಯಲ್ಲಿದ್ದ ಬಿಯರ್ ಬಾಟಲಿಯಿಂದ ಫಿರ್ಯಾದಿದಾರರ ತಲೆಗೆ ಹೊಡೆದಿದ್ದು ಫಿರ್ಯಾದಿದಾರರು ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಓಡಿದಾಗ ಆಪಾದಿತ ಮಂಜುನಾಥನು ಫಿರ್ಯಾದುದಾರರಿಗೆ ವಾಚ್ಯವಾಗಿ ಬೈದು  ಫಿರ್ಯಾದುದಾರರ ಹಿಂದೆಯೇ ಓಡಿ ಬಂದು ಅಲ್ಲೇ ಇದ್ದ ಒಂದು ದೊಣ್ಣೆಯಿಂದ ಮತ್ತು ಕಬ್ಬಿಣದ ರಾಡ್ ನಿಂದ ಫಿರ್ಯಾದುದಾರರ ಕಾಲಿಗೆ ಹಾಗೂ ತೊಡೆಗೆ ಹೊಡೆದಿದ್ದು, ನಂತರ ಆಪಾದಿತ ನಾಗರಾಜನು ಉಂಡೆ ಕಲ್ಲನ್ನು ಫಿರ್ಯಾದಿದಾರರ ಎಡಗಾಲಿಗೆ ಎತ್ತಿ ಹಾಕಿರುತ್ತಾನೆ. ಫಿರ್ಯಾದಿದಾರರು ಜೋರಾಗಿ ಬೊಬ್ಬೆ ಹೊಡೆದಾಗ ಅಣ್ಣಪ್ಪ ಮತ್ತು ನಾಗರಾಜ ಎಂಬವರು ಬರುವುದನ್ನು ನೋಡಿ ಆರೋಪಿತರು ಇನ್ನೂ ಇದೇ ಬಿಡುವುದಿಲ್ಲವೆಂದು ಎಂದು ಹೇಳಿ ಹೋಗಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 119-2021 ಕಲಂ: 341. 324. 504. 506 ಜೊತೆಗೆ 34  ಐಪಿಸಿ ಮತ್ತು ಕಲಂ 3(1) (r), (s), 3 (2)(v-a)  SC St Act  ನಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿ ಇಬ್ರಾಹಿಂ ಇವರಿಗೆ ಪರಿಚಯ ಇರುವ ಆರೋಪಿ 1. ಮೊಹಮ್ಮದ್ ಕಬೀರ್‌ ರವರು 3 ವರ್ಷಗಳ ಹಿಂದೆ ಕಾಪುವಿನಲ್ಲಿ ಸಂಪರ್ಕಿಸಿ ವ್ಯವಹಾರದ ಸಲುವಾಗಿ ರೂ. 2,00,000/- ವನ್ನು ಕೇಳಿದ್ದು, ಪಿರ್ಯಾದಿದಾರರು ಆರೋಪಿ 1 ನೇಯವರಿಗೆ ನಗದು ಹಣ ನೀಡಿರುತ್ತಾರೆ.  ಸದ್ರಿ ಆರೋಪಿ ತಾನು ಪಡೆದ  ಹಣವನ್ನು ವಾಪಾಸ್ಸು ನೀಡದೇ,  ಆರೋಪಿ 1 ನೇಯವರು ತನ್ನ  ಮಗನಾದ ಆರೋಫಿ 2ನೇ ಆದಿಲ್ ಮೊಹಮ್ಮದ್ ಕಬೀರ್‌ ರವರಿಗೆ ಸೇರಿದ ಫೆಡರಲ್ ಬ್ಯಾಂಕ್, ಕೊಜಿಕೊಡ್ ಶಾಖೆ, ಇಲ್ಲಿನ ಚೆಕ್ ನಂಬ್ರ 346766 ನಲ್ಲಿ ರೂ. 60,000/- ಹಾಗೂ ಆರೋಪಿ 1 ನೇಯವರು ಅವರ ಹೆಂಡತಿ ಜಾಸ್ಮೀನ್ ರವರ ಫೆಡರಲ್ ಬ್ಯಾಂಕ್, ಕೊಜಿಕೊಡ್ ಶಾಖೆ, ಇಲ್ಲಿನ ಚೆಕ್ ನಂಬ್ರ 274540  ನಲ್ಲಿ ರೂ. 1,40,000/- ಚೆಕ್ಕನ್ನು ದಿನಾಂಕ 01-05-2020 ರಂದು ಕಾಪುವಿನಲ್ಲಿ ನೀಡಿದ್ದು, ಸದ್ರಿ ಚೆಕ್ಕಗಳು ಪಿರ್ಯಾದಿದಾರರು ನಗದೀಕರಣಕ್ಕೆ ಹಾಕಿದ್ದು ಸದ್ರಿ ಚೆಕ್‌ಗಳು ಬೌನ್ಸ್ ಆಗಿರುತ್ತದೆ. ಈ ಬಗ್ಗೆ ಪಿರ್ಯಾದಿದಾರರು ಆರೋಪಿಗಳಲ್ಲಿ ಕೇಳಿದಾಗ ಇವತ್ತು ನಾಳೆ ಎಂದು ಸತಾಯಿಸುತ್ತಿದ್ದು, ಆರೋಪಿಗಳು ಪಿರ್ಯಾದಿದಾರರಿಗೆ ಮೋಸ ಮಾಡುವ ಉದ್ದೇಶದಿಂದ ರೂ. 2,00,000/- ಹಣವನ್ನು ಪಡೆದು ಮೋಸ ಮಾಡಿರುತ್ತಾರೆ. ಈ ಬಗ್ಗೆ ಆರೋಪಿಗಳಲ್ಲಿ ಕೇಳಿದಾಗ ಬೈದು ಇನ್ನೂ ಮುಂದಕ್ಕೆ ಹಣದ ವಿಚಾರಕ್ಕೆ ಬಂದಲ್ಲಿ, ನಿನ್ನ ಕೈ ಕಾಲು ಕಡಿದು ಕೊಂದು ಹಾಕುವುದಾಗಿ ಅವಾಶ್ಚ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 119/2021 ಕಲಂ 406 420 504 506  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿ ಚಂದ್ರಹಾಸ ಇವರು ಟಿಪ್ಪರ್ ಡ್ರೈವರ್ ಕೆಲಸ ಮಾಡಿಕೊಂಡಿದ್ದು ದಿನಾಂಕ 17.07.2021 ರಂದು ಕೆಲಸ ಮುಗಿಸಿ ಲಾರಿಯನ್ನು ಪುಲ್ಕೇರಿ ಜಂಕ್ಷನ್ ಬಳಿಯ ಮೈದಾನದಲ್ಲಿ ನಿಲ್ಲಿಸಿ ಕಸಬ ಗ್ರಾಮದ ಪುಲ್ಕೇರಿ ಜಂಕ್ಷನ್ ಬಳಿ ನಡೆದುಕೊಂಡು ಬರುತ್ತಿರುವಾಗ ರಾತ್ರಿ 10.15 ಘಂಟೆಗೆ ಪರಿಚಯದ ಜರಿಗುಡ್ಡೆ ನಿವಾಸಿ ಅಫಾನ್ ಎನ್ನುವವನು ಪಿರ್ಯಾದಿದಾರರನ್ನು ದಾರಿ ಮದ್ಯ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈಯ್ದು ಮೈಗೆ ಕೈ ಹಾಕಿ ನೆಲಕ್ಕೆ ದೂಡಿ ಕಾಲಿನಿಂದ ಒದ್ದು ಕೊಂದು ಬಿಡುತ್ತೇನೆ ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ.   ಆಪಾದಿತನ ತಂದೆ ಹಮೀದ್ ಎನ್ನುವವರು ಈ ಹಿಂದೆ ಪಿರ್ಯಾದಿದಾರರಿಗೆ ವಿದೇಶದಲ್ಲಿ ಕೆಲಸ ಕೊಡಿಸುತ್ತೆನೆಂದು ಹೇಳಿ ಹಣವನ್ನು ಪಡೆದು ಕೆಲಸವನ್ನು ಕೊಡಿಸದೇ ಹಣವನ್ನು ವಾಪಾಸು ನೀಡದೇ ಇದ್ದು, ಈ ಹಣವನ್ನು ಆಪಾದಿತನಲ್ಲಿ ಪಿರ್ಯಾದಿದಾರರು ವಾಪಾಸು ಕೇಳಿದ ಕಾರಣಕ್ಕೆ ಈ ಕೃತ್ಯವನ್ನು ನಡೆಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್  ಠಾಣೆ ಅಪರಾಧ ಕ್ರಮಾಂಕ 87/2021  ಕಲಂ 341,323, 504, 506  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ಅಫಘಾತ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿ ಇಂದ್ರೇಶ್  ಇವರು ದಿನಾಂಕ 17.07.2021 ರಂದು ತಮ್ಮ ಕಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಕಾಪು ಕಡೆಯಿಂದ ಹೆಜಮಾಡಿ ಕಡೆಗೆ ಸಾಗುವ ಏಕಮುಖ ಸಂಚಾರ ರಸ್ತೆಯಲ್ಲಿ ಹೋಗುತ್ತಾ ಸಮಯ ಸುಮಾರು 11:30 ಗಂಟೆಗೆ ಕಾಪು ತಾಲೂಕು ತೆಂಕ ಎರ್ಮಾಳ್ ಗ್ರಾಮದ ಬ್ರಹ್ಮ ಬೈದರ್ಕಳ ಗರಡಿ ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ಕಾರಿನ ಮುಂದೆ ಹೋಗುತ್ತಿದ್ದ KA-19-D-1769  ನೇ ನಂಬ್ರದ ಆಟೋ ರಿಕ್ಷಾ ಕ್ಕೆ KA-20-MC-9218 ನೇ ಫೋರ್ಡ ಕಾರು ಚಾಲಕ ಲಕ್ಷ್ಮೀಶ ಭಟ್, ಹೆಜಮಾಡಿ ಎಂಬಾತನು ತನ್ನ ಕಾರನ್ನು ಅತೀ ವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿ ಅದರ ಹಿಂದಿನಿಂದ ಬಂದು ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾವು ರಸ್ತೆಯ ಬದಿಯ ಹೊಂಡಕ್ಕೆ ಬಿದ್ದಿರುತ್ತದೆ, ನಂತರ ಕಾರನ್ನು ಅದರ ಚಾಲಕ ರಸ್ತೆಯ ಎಡ ತೀರಾ ಎಡ ಬದಿಯಲ್ಲಿ ನಿಲ್ಲಿಸಿ, ಕಾರಿನಿಂದ ಇಳಿದು ಬಿದ್ದ ರಿಕ್ಷಾವನ್ನು ನೋಡುತ್ತಿರುವ ಸಮಯ, KA-21-P -2096 ನೇ ನಂಬ್ರದ ರೆನೋಲ್ಟ್ ಲಾಡ್ಜಿ ಕಾರು ಚಾಲಕ ಹರಿಪ್ರಸನ್ನ ಭಟ್ ಎಂಬುವರು ತನ್ನ ಕಾರನ್ನು  ಅತೀ ವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿ KA-20-MC-9218 ನೇ ನಂಬ್ರದ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿರುತ್ತಾರೆ, ಸದ್ರಿ ಅಪಘಾತದಿಂದ ಮೂರೂ ವಾಹನಗಳು ಜಖಂಗೊಂಡಿದ್ದು, ರಿಕ್ಷಾ ಚಾಲಕ ರಾಜೇಶ್ ಮೊಯಿಲೊಟ್ಟು ಹಾಗೂ ರಿಕ್ಷಾದಲ್ಲಿ ಪ್ರಯಾಣಿಕರಾದ ಶಾರದಾ ಶೆಟ್ಟಿರವರಿಗೆ ಗಂಭೀರ ಸ್ವರೂಪದ ಗಾಯ ಹಾಗೂ ಶಂಕರ ಶೆಟ್ಟಿರವರಿಗೆ ಗಾಯವಾಗಿರುತ್ತದೆ. ನಂತರ ಗಾಯಾಳುಗಳನ್ನು ಚಿಕಿತ್ಸೆಯ ಬಗ್ಗೆ ಸುರತ್ಕಲ್‌‌ನ ಅಥರ್ವ ಆಸ್ಪತ್ರೆಗೆ ಸಾಗಿಸಿರುವುದಾಗಿ ತಿಳಿದುಬಂದಿದೆ . ಈ ಬಗ್ಗೆ ಪಡುಬಿದ್ರಿ ಪೊಲೀಸ್  ಠಾಣೆ ಅಪರಾಧ ಕ್ರಮಾಂಕ 69/2021 ಕಲಂ 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ: 16/07/2021 ರಂದು 17:40  ಗಂಟೆಗೆ ಪಿರ್ಯಾದಿ ಶಿವನ ಗೌಡ  ಇವರು ತನ್ನ ಬಾಬ್ತು ಕೆಎ 48 ಎಂ 8989 ನೇ ಕಾರಿನಲ್ಲಿ ಉಡುಪಿಯಿಂದ ಹೊರನಾಡಿಗೆ ಹೋಗುವರೇ  ಕಾರ್ಕಳ ತಾಲೂಕು ಮಾಳ ಗ್ರಾಮದ ಮಾಳ ಚೆಕ್ ಪೊಸ್ಟ್ ನಿಂದ 7.0 ಕೀ ಮೀ  ಮುಂದಕ್ಕೆ ಯು ಟರ್ನ್ ನಲ್ಲಿ ತಲುಪುವಾಗ   ಕೆಎ 19 ಎಂಇ 3974  ನೇ    ಕಾರಿನ ಚಾಲಕ ಹರ್ಷ ಶ್ರೀ ವಾಸ್ತವ ಎಂಬಾತನು ಆತನ ಬಾಬ್ತು  ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸಿಸುತ್ತಿದ್ದ  ಕಾರಿನ ಬಲ ಭಾಗಕ್ಕೆ  ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ  ಹಾಗೂ ಆರೋಪಿಯ ಕಾರುಗಳು ಜಖಂಗೊಂಡಿದ್ದು ಅದರಲ್ಲಿದ್ದ ಪ್ರಯಾಣಿಕರಿಗೆ ಯಾರಿಗೂ ಕೂಡ ಗಾಯವಾಗಿರುವುದಿಲ್ಲ. ಈ ಬಗ್ಗೆ ಕಾರ್ಕಳ  ಗ್ರಾಮಾಂತರ ಪೊಲೀಸ್  ಠಾಣೆ ಅಪರಾಧ ಕ್ರಮಾಂಕ 85/2021 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ಪಿರ್ಯಾದಿದಾರರಾದ ಕಾರ್ತಿಕ್ ಇವರು ಹೆಬ್ರಿ ಗ್ರಾಮದ ನಿಸರ್ಗಧಾಮದಲ್ಲಿ ಚಾಲಕ ವೃತ್ತಿ ಮಾಡಿಕೊಂಡಿದ್ದು. ದಿನೇಶ್ ಶಂಕರ ಗುನಗಿ ಇವರು ಸಹ ಅಲ್ಲಿಯೇ ಅಡುಗೆ ಕೆಲಸ ಮಾಡಿಕೊಂಡಿರುವುದಾಗಿದೆ. ದಿನಾಂಕ; 15/07/2021 ರಂದು ದಿನೇಶ್ ಶಂಕರ ಗುನಗಿ ಇವರು ರಾತ್ರಿ ಸಮಯ ನಿಸರ್ಗದಾಮದಲ್ಲಿ ಅಡುಗೆ ಕೆಲಸ ಮಾಡಿ ಅವರ ಬಾಬ್ತು KA.30.R.8723 ನೇ ಮೋಟಾರ್ ಸೈಕಲ್ ನ್ನು ಚಲಾಯಿಸಿಕೊಂಡು ಹೆಬ್ರಿ ನಿಸರ್ಗದಾಮದಿಂದ ಹೊರಟು ಅವರ ಮನೆಯಾದ ಹೆಬ್ರಿ ಕಡೆಗೆ ಬರುತ್ತಿರುವಾಗ ಅವರು ಸಮಯ ಸುಮಾರು ರಾತ್ರಿ 9-30 ಗಂಟೆಗೆ ಹೆಬ್ರಿ ಗ್ರಾಮದ ಜಡ್ಕಟ್ ಎಂಬಲ್ಲಿಗೆ ತಲುಪಿದಾಗ ಕಾಡು ಪ್ರಾಣಿಯೊಂದು ಅವರ ಮೋಟಾರ್ ಸೈಕಲ್ ಗೆ ಅಡ್ಡ ಬಂದ ಕಾರಣ ದಿನೇಶ್ ಇವರು ತಾನು ಚಲಾಯಿಸುತ್ತಿರುವ ಮೋಟಾರ್ ಸೈಕಲ್ ಗೆ ನಿರ್ಲಕ್ಷತನದಿಂದ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಮೋಟಾರ್ ಸೈಕಲ್ ಅವರ ಹತೋಟಿ ತಪ್ಪಿ ಅವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಅವರ ತಲೆಗೆ ತೀವ್ರ ಸ್ವರೂಪದ ಗಾಯವಾಗಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್  ಠಾಣೆ ಅಪರಾಧ ಕ್ರಮಾಂಕ 49/2021 ಕಲಂ:,279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಕುಂದಾಪುರ: ದಿನಾಂಕ 05-07-2021 ರಂದು 18:00 ಗಂಟೆ ಪಿರ್ಯಾದಿ ಮಲ್ಲಿಕಾರ್ಜುನ ಇವರು ಅವರ ತಾಯಿಯನ್ನು ಅನಾರೋಗ್ಯ ನಿಮಿತ್ತ ಕುಂದಾಪುರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿದ್ದು ದಿನಾಂಕ  07-07-2021 ರಂದು 16:00 ಗಂಟೆಗೆ ಪಿರ್ಯಾದುದಾರರ ತಾಯಿಯು ಪಿರ್ಯಾದುದಾರರಲ್ಲಿ ಕುತ್ತಿಗೆಯಲ್ಲಿದ್ದ 20 ಗ್ರಾಂ ತೂಕದ ಚಿನ್ನದ  ಸರ ಇಲ್ಲದೆ ಇರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪಿರ್ಯಾದುದಾರರು ಕಳೆದುಹೋದ ಚಿನ್ನದ ಸರವನ್ನು ಆಸ್ಪತ್ರೆಯ ಕೊಠಡಿಯಲ್ಲಿಹುಡುಕಲಾಗಿ ಮತ್ತು ಆಸ್ಪತ್ರೆಯ  ಸಿಬ್ಬಂದಿಯವರಲ್ಲಿ ವಿಚಾರಿಸಲಾಗಿ ಸರ ಪತ್ತೆಯಾಗಿರುವುದಿಲ್ಲ. ಸದ್ರಿ ಚಿನ್ನದ ಸರವನ್ನು ದಿನಾಂಕ 05/07/2021 ರಂದು 18:00  ಗಂಟೆಯಿಂದ  07/07/2021 ರಂದು 16:00  ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳೆದುಹೋದ ಚಿನ್ನದ ಸರದ ಮೌಲ್ಯ 84,000 ರೂಗಳಾಗಿರುತ್ತದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 90/2021 ಕಲಂ: 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 18-07-2021 12:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080