ಅಭಿಪ್ರಾಯ / ಸಲಹೆಗಳು

 ಇತರ ಪ್ರಕರಣ 

  • ಶಿರ್ವಾ: ದಿನಾಂಕ 18/07/2021 ರಂದು ಶ್ರೀಶೈಲ್‌ ಡಿ.ಎಂ, ಪೊಲೀಸ್‌ ಉಪನಿರೀಕ್ಷಕರು, ಶಿರ್ವ ಪೊಲೀಸ್ ಠಾಣೆ ಇವರಿಗೆ ಅಕ್ರಮವಾಗಿ ಜಾನುವಾರುಗಳನ್ನು ವದೇ ಮಾಡಿ ಮಾಂಸ ಮಾಡುವ ಉದ್ದೇಶದಿಂದ ಒಂದು ವಾಹನದಲ್ಲಿ ತುಂಬಿಸಿ ಬಂಟಕಲ್ಲು ಕಡೆಯಿಂದ ಶಿರ್ವಾ ಕಡೆಗೆ ಬರುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಶಿರ್ವಾ ಗ್ರಾಮದ ಮಸೀದಿ ಜಂಕ್ಷನ್ ಬಳಿ ನಿಂತುಕೊಂಡಿರುವಾಗ ಬಂಟಕಲ್ಲು ಕಡೆಯಿಂದ ಒಂದು ಬಿಳಿ ಬಣ್ಣದ ವ್ಯಾಗನಾರ್ ಕಾರು ವೇಗವಾಗಿ ಹೋಗಿದ್ದು, ಅದರ ಹಿಂಬದಿಯಿಂದ ಇನ್ನೊಂದು ವಾಹನ ಬೂತೊಟ್ಟು ಕಡೆಗೆ ಹೋಗಿರುತ್ತದೆ. ವಾಹನಗಳನ್ನು ಹಿಂಬಾಲಿಸಿ ಕೊಂಡು ಹೋಗಿದ್ದು, ಬೂತೊಟ್ಟು ಕ್ರಾಸ್ ಬಳಿ ಅಡ್ಡ ಹಾಕಿದ್ದು, ಸದ್ರಿ ಸಮಯ ಕಾರಿನಲ್ಲಿದ್ದ 2 ಜನರು ಮತ್ತು ಜಾನುವಾರುಗಳು ಇದ್ದ ವಾಹನದಲ್ಲಿ ಒಬ್ಬ ವ್ಯಕ್ತಿ ಇದ್ದು, ವಾಹನಗಳನ್ನು ಅಲ್ಲಿಯೇ ಬಿಟ್ಟು ಕತ್ತಲಿನಲ್ಲಿ ಓಡಿ ಪರಾರಿಯಾಗಿದ್ದು, ಕೂಡಲೇ ಅಲ್ಲಿಗೇ ಹೋಗಿದ್ದು, ಸಮಯ ಬೆಳಿಗ್ಗೆ 06:15 ಗಂಟೆಗೆ ವಾಹನಗಳ ಹತ್ತಿರ ಹೋಗಿ ನೋಡಿದಾಗ ನಂಬ್ರ ಕೆಎ 20 ಎಂಡಿ. 3395 ನೇ ಬಿಳಿ ಬಣ್ಣದ ಮಾರುತಿ ಸುಝುಕಿ ಕಂಪೆನಿಯ ವ್ಯಾಗನಾರ್ ಕಾರು ಆಗಿದ್ದು, ಇನ್ನೊಂದು ನಂಬ್ರ ಕೆಎ 18 ಬಿ 6634ನೇ ಬಿಳಿ ಬಣ್ಣದ ಮಹೇಂದ್ರ ಕಂಪೆನಿಯ ಬೊಲೆರೋ ಪಿಕ್‌ಅಪ್‌ ಆಗಿದ್ದು, ಪಿಕಪ್ ವಾಹನದಲ್ಲಿ 4 ಜಾನುವಾರುಗಳು ಇದ್ದು, ಅವುಗಳ ಕಾಲುಗಳನ್ನು ನೈಲಾನ್ ಹಗ್ಗದಿಂದ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿರುವುದು ಕಂಡು ಬಂದಿರುತ್ತದೆ. ನಂತರ ಸ್ಥಳಕ್ಕೆ ಪಂಚರನ್ನು ಬರಮಾಡಿಕೊಂಡು ವಾಹನದ ಒಳಗಡೆ ಇದ್ದ 4 ಜಾನುವಾರುಗಳನ್ನು ಹೊರಗಿಳಿಸಿ ನೋಡಿದಾಗ 1) ಕಪ್ಪು ಮತ್ತು ಬಿಳಿ ಮಿಶ್ರಿತ ಗಂಡು ಹೋರಿ -1 , 2) ಕಪ್ಪು ಮತ್ತು ಬಿಳಿ ಬಣ್ಣ ಮಿಶ್ರಿತ ಗಂಡು ಹೋರಿ-1, 3) ಕಪ್ಪು ಬಣ್ಣದ ಸಣ್ಣ ಗಂಡು ಹೋರಿ-1 4) ಕಪ್ಪು ಬಣ್ಣದ ಸಣ್ಣ ಗಂಡು ಹೋರಿ-1 ಇರುತ್ತದೆ. ಸದ್ರಿ ಬೆಂಗಾವಲು ಕಾರನ್ನು ಪರಿಶೀಲಿಸಿದಲ್ಲಿ ಮಾರುತಿ ಸುಜುಕಿ ಕಂಪೆನಿಯ ವ್ಯಾಗನಾರ್ ಕಾರು ಆಗಿದ್ದು, ಅದರ ನೊಂದಣಿ ನಂಬ್ರ ಕೆಎ 20 ಎಂಡಿ. 3395 ಆಗಿರುತ್ತದೆ. ಕಾರು ಮೇಲ್ನೋಟಕ್ಕೆ ಯಾವುದೇ ಜಖಂ ಆಗಿರುವುದು ಕಂಡು ಬಂದಿರುವುದಿಲ್ಲ, ಮೌಲ್ಯ 1,50,000/- ಆಗಿರುತ್ತದೆ . ಅಲ್ಲದೇ ಜಾನುವಾರುಗಳಿದ್ದ ವಾಹನವನ್ನು ಪರಿಶೀಲಿಸಲಾಗಿ ಬಿಳಿ ಬಣ್ಣದ ಮಹೇಂದ್ರ ಕಂಪೆನಿಯ ಬೊಲೆರೋ ಪಿಕ್‌ಅಪ್‌ ಆಗಿದ್ದು, ಅದರ ನಂಬ್ರ ಕೆಎ 18 ಬಿ 6634 ಆಗಿರುತ್ತದೆ, ಮೌಲ್ಯ 2,50,000/- ಆಗಿರುತ್ತದೆ . . ಪಿಕ್‌ಆಫ್ ವಾಹನದಲ್ಲಿದ್ದ ಚಾಲಕನ ಹೆಸರು ಚೇತು ಎಂಬುದಾಗಿ ತಿಳಿಯಿತು. ದಿನಾಂಕ 18/07/2021 ರಂದು ಬೆಳಿಗ್ಗಿನ ಜಾವ ಯಾರೋ ಕಳ್ಳರು ಪಿಕ್ ಆಫ್ ವಾಹನದಲ್ಲಿ ಜಾನುವಾರುಗಳನ್ನು ಕದ್ದು ತಂದು ಅದರ ಕಾಲುಗಳನ್ನು ಕಟ್ಟಿ ಹಿಂಸಾತ್ಮಕ ರೀತಿಯಿಂದ ಮಾಂಸ ಮಾಡುವ ಉದ್ದೇಶದಿಂದ ಯಾವುದೇ ಪರವಾನಿಗೆ ಇಲ್ಲದೇ ಜಾನುವಾರಗಳನ್ನು ವಾಹನದಲ್ಲಿ ತುಂಬಿಸಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸಾಗಾಟ ಮಾಡಿದ್ದು, ಸದ್ರಿ ವಾಹನಕ್ಕೆ ಬೆಂಗಾವಲು ಆಗಿ ಇನ್ನೊಂದು ವಾಹನವನ್ನು ಚಲಾಯಿಸಿಕೊಂಡು ಬಂದಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 40/21, ಕಲಂ 279 ಮತ್ತು 379 ಐ.ಪಿ.ಸಿ ಮತ್ತು ಕಲಂ 8, 9, 11 ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆ 1964 , ಕಲಂ:. 11 (1) (ಡಿ) ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯಿದೆ-1960 ಹಾಗೂ ಕಲಂ 192 (ಎ) ಐ.ಎಮ್.ವಿ ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತ್ತೀಚಿನ ನವೀಕರಣ​ : 18-07-2021 06:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080