ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಶಿರ್ವಾ: ಪಿರ್ಯಾದಿದಾರರಾದ ರಾಜೇಶ್‌ಆಚಾರ್ಯ (39), ತಂದೆ: ಶೀನ ಆಚಾರ್ಯ, ವಾಸ: ಮನೆ ನಂ. 2-139, ಭಂಡಾರಿ ಬೆಟ್ಟು,ಪಳ್ಳಿ ಗ್ರಾಮ,  ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರು ದಿನಾಂಕ 17/06/2022 ರಂದು  ತನ್ನ  ಸ್ಕೂಟರ್‌ ನಂಬ್ರ KA-20-EQ-3634  ನೇದರಲ್ಲಿ ಕೆಲಸ  ಮುಗಿಸಿಕೊಂಡು ಕಟಪಾಡಿ ಕಡೆಯಿಂದ  ವಾಪಾಸು ತನ್ನ ಮನೆಗೆ ಹೋಗಲು ಬಂಟಕಲ್‌ ಮಾರ್ಗವಾಗಿ ಶಿರ್ವ  ಕಡೆಗೆ  ಬರುತ್ತಿರುವಾಗ ಸಂಜೆ 5:45 ಗಂಟೆಗೆ  ಶಿರ್ವಾ ಪಂಜಿಮಾರು  ಕೋಡುಗುಡ್ಡೆ  2 ನೇ  ಅಡ್ಡ  ರಸ್ತೆ  ಬಳಿ ತಲುಪುವಾಗ  ಎದುರುಗಡೆಯಿಂದ ಶಿರ್ವ ಕಡೆಯಿಂದ  ಕಟಪಾಡಿ  ಕಡೆಗೆ  ಓರ್ವ  ದ್ವಿಚಕ್ರ  ವಾಹನವನ್ನು  ಅದರ  ಸವಾರನು   ಅತೀ ವೇಗ  ಮತ್ತು  ಅಜಾಗರೂಕತೆಯಿಂದ  ಸವಾರಿ ಮಾಡಿಕೊಂಡು  ಬಂದು  ಡಾಮಾರು  ರಸ್ತೆಯಲ್ಲಿ  ಸ್ಕಿಡ್‌ ಆಗಿ  ನೆಲಕ್ಕೆ  ಬಿದ್ದಿದ್ದು  ಆತನು  ಸವಾರಿ  ಮಾಡುತ್ತಿದ್ದ  ದ್ವಿಚಕ್ರ  ವಾಹನ ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರಿಗೆ ಡಿಕ್ಕಿ ಹೊಡೆಯಿತು.  ಈ ಅಪಘಾತದ  ರಭಸಕ್ಕೆ ಪಿರ್ಯಾದಿದಾರರು ಸ್ಕೂಟರ್‌ಸಮೇತ ಸಾರ್ವಜನಿಕ ರಸ್ತೆಗೆ ಬಿದ್ದ  ಪರಿಣಾಮ ಪಿರ್ಯಾದಿದಾರರ  ಬಲ ಕಾಲಿಗೆ ಒಳ ನೋವು  ಆಗಿರುತ್ತದೆ. ಸ್ಕೂಟರ್‌ ಜಖಂಗೊಂಡಿರುತ್ತದೆ.  ದ್ವಿಚಕ್ರ  ವಾಹನ  ಸವಾರನು  ಸಾರ್ವಜನಿಕ ರಸ್ತೆಗೆ  ಬಿದ್ದ ಪರಿಣಾಮ  ಆತನ ತಲೆಗೆ  ತೀವ್ರ ಸ್ವರೂಪದ  ಗಾಯವಾಗಿದ್ದು, ಆತನ ಕೈ ಹಾಗೂ ಕಾಲುಗಳಿಗೆ  ತರಚಿದ ರಕ್ತಗಾಯವಾಗಿರುತ್ತದೆ.  ನಂತರ  ಅಲ್ಲಿ  ಸೇರಿದ  ಸಾರ್ವಜನಿಕರು  ಆತನನ್ನು ಉಪಚರಿಸಿ  ಚಿಕಿತ್ಸೆ ಬಗ್ಗೆ ಒಂದು ವಾಹನದಲ್ಲಿ ಉಡುಪಿ ಆದರ್ಶ  ಆಸ್ಪತ್ರೆಗೆ  ಕರೆದುಕೊಂಡು  ಹೋಗುವುದಾಗಿ  ತಿಳಿಸಿ ಕರೆದುಕೊಂಡು  ಹೋದರು. ಆ ಸಮಯದಲ್ಲಿ  ಆತನ  ಹೆಸರು ಕೇಳಲಾಗಿ  ಅರ್ಜುನ್‌ ರೈ  ಎಂಬುದಾಗಿ  ತಿಳಿಯಿತು.  ಪಿರ್ಯಾದಿದಾರರ   ಸ್ಕೂಟರಿಗೆ ಡಿಕ್ಕಿ  ಹೊಡೆದ ದ್ವಿಚಕ್ರ ವಾಹನದ ನಂಬ್ರ  ನೋಡಲಾಗಿ  KA-20-EM-8000 ನೇ  ನೊಂದಣಿ ಸಂಖ್ಯೆಯ ಹೊಂಡಾ ಕಂಪೆನಿಯ ನೀಲಿ ಬಣ್ಣದ ದ್ವಿಚಕ್ರ ವಾಹನ ಆಗಿರುತ್ತದೆ.  ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 39/2022, ಕಲಂ: 279,  337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ದಿನಾಂಕ 17/06/2022 ರಂದು ಅಪಾದಿತ ಶ್ರೀನಿವಾಸ ಇವರು ತನ್ನ KA-02-MA-2180 ನೇ ಸ್ಕಾಪೀಯೋ ಕಾರಿನಲ್ಲಿ ವೆಂಕಟೇಶ್, ಸರಸ್ವತಮ್ಮ, ತನುಜಾ, ಗಿರಿ, ಪೂಜಾ  ಮತ್ತು ಎರಡು ಸಣ್ಣ ಮಕ್ಕಳಾದ ರೀತಿಕಾ (7), ಚಿನ್ಮಯಿ (3)  ಇವರನ್ನು ಕುಳ್ಳಿರಿಸಿಕೊಂಡು ಹೆಬ್ರಿ-ಸೋಮೇಶ್ವರ ಮುಖ್ಯರಸ್ತೆಯಲ್ಲಿ ಹೆಬ್ರಿ ಕಡೆಯಿಂದ ಸೋಮೇಶ್ವರ ಕಡೆಗೆ ಅತೀವೇಗ ಹಾಗೂ ಅಜಾಗರುಕತೆ ಯಿಂದ ಚಲಾಯಿಸಿ  ಮುಂಜಾನೆ 01:30 ಗಂಟೆಗೆ ಹೆಬ್ರಿ ಗ್ರಾಮದ ಜಡ್ ಕಟ್ ಎಂಬಲ್ಲಿಗೆ ತಲುಪಿದಾಗ ಕಾರು ಚಾಲಕನ ಹತೋಟಿ ತಪ್ಪಿ ರಸ್ತೆಯ ತೀರಾ ಬಲಬದಿಗೆ ಹೋಗಿ ಕಚ್ಚಾ ರಸ್ತೆಯ ಚರಂಡಿಯ ಬದಿಯಲ್ಲಿದ್ದ ಒಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮಗು ಚಿನ್ಮಯಿ ಇವರನ್ನು ಹೊರತುಪಡಿಸಿ ಉಳಿದೆಲ್ಲರಿಗೂ ಸಣ್ಣ ಪುಟ್ಟ ಮತ್ತು ಮೂಳೆ ಮುರಿತದ ಗಾಯವಾಗಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 26/2022 ಕಲಂ: 279 , 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ರತ್ನಾಕರ ಶೆಟ್ಟಿ (50), ತಂದೆ:ದಿ .ನರಸಿಂಹ ಶೆಟ್ಟಿ, ವಾಸ: ಸಾಯಿ ನಿಲಯ ಚಾರು ಕೊಟ್ಟಿಗೆ ಮೇಲ್ಮನೆ ಕೊರ್ಗಿ ಗ್ರಾಮ ಕುಂದಾಪುರ ತಾಲಕು ಇವರ ಹೆಂಡತಿಯ ಅಕ್ಕನ ಮಗ ಪ್ರವೀಣ ಶೆಟ್ಟಿ (34) ಇವರು ಕುಂದಾಪುರದ ಅರವಿಂದ ಮೋಟಾರ್ಸ ನಲ್ಲಿ ಕೆಲಸ ಮಾಡಿಕೊಂಡಿದ್ದು , 10 ತಿಂಗಳಿನಿಂದ ತಲೆ ನೋವು ಎಂದು ಹೇಳಿ ರಾತ್ರಿ ಸರಿಯಾಗಿ ಮಲಗುತ್ತಿರಲಿಲ್ಲ ಹಾಗೂ ಮಾನಸಿಕವಾಗಿ ವರ್ತಿಸುತ್ತಿದ್ದು ಈ ಬಗ್ಗೆ ಕುಂದಾಪುರದ ಮಾತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ದಿನಾಂಕ 16/06/2022 ರಂದು ರಾತ್ರಿ ವಿಪರೀತ ತಲೆ ನೋವು ಎಂದು ಹೇಳಿ ಮಾನಸಿಕವಾಗಿ ವರ್ತಿಸುತ್ತಿದ್ದು ಕೂಡಲೇ ಕೊಟೇಶ್ವರದ ಎನ್ ಆರ್ ಆಚಾರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ವಾಪಾಸ್ಸು ಮನೆಗೆ ಕರೆದುಕೊಂಡು ಬಂದಿರುತ್ತಾರೆ. ಪ್ರವೀಣರವರು ವಿಪರೀತ  ತಲೆ ನೋವಿನಿಂದ ಅಥವಾ ಯಾವುದೋ ಒಂದು ವಿಚಾರದಲ್ಲಿ  ಮಾನಸಿಕವಾಗಿ ಮನನೊಂದು ದಿನಾಂಕ: 17/06/2022 ರಂದು ಬೆಳಿಗ್ಗೆ 09:30 ಗಂಟೆಯಿಂದ 15:45 ಗಂಟೆಯ  ಮಧ್ಯಾವಧಿಯಲ್ಲಿ  ಕೆದೂರು ಗ್ರಾಮದ ಮೂಡು ಕೆದೂರು ಎಂಬಲ್ಲಿ ರೈಲ್ವೆ  ಬ್ರಿಡ್ಜ ನ ಬಳಿಯಲ್ಲಿಯಲ್ಲಿರುವ ಸರ್ಕಾರಿ ಗೇರು ಹಾಡಿಯಲ್ಲಿ  ಗೇರು ಮರದ ಕೊಂಬೆಗೆ  ನೈಲಾನ್ ಹಗ್ಗದಿಂದ ಕಟ್ಟಿ ಕುತ್ತಿಗೆಗೆ ಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 22/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಮಣಿಪಾಲ: ದಿನಾಂಕ 11/06/2022 ರಂದು ಮಂಜುನಾಥ  ಎಂ, ಪೊಲೀಸ್‌ನಿರೀಕ್ಷಕರು, ಮಣಿಪಾಲ ಪೊಲೀಸ್‌ ಠಾಣೆ ಇವರಿಗೆ ಬಂದ ಮಾಹಿತಿಯಂತೆ   ಶಿವಳ್ಳಿ ಗ್ರಾಮದ ವಿದ್ಯಾರತ್ನ ಸಾರ್ವಜನಿಕ ಸ್ಥಳದಲ್ಲಿ ನಿಹಾತ್‌ (24), ತಂದೆ: ಅಬ್ದುಲ್‌ ಶುಕುರ್‌, ಮಜಿದ್‌ ರೋಡ್‌ ಕುಕ್ಕಿಕಟ್ಟೆ ಉಡುಪಿ ಎಂಬಾತನನ್ನು  ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಆತನು ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಬಗ್ಗೆ ಅನುಮಾನ ಬಂದ ಮೇರೆಗೆ  ದಿನಾಂಕ 15/06/2022 ರಂದು ಆತನನ್ನು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಆರೋಪಿತನು ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರು  ದಿನಾಂಕ 17/06/2022 ರಂದು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 90/2022 ಕಲಂ: 27 (B) NDPS ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 18-06-2022 09:50 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080