ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ಸತೀಶ್ ಪೈ(68), ತಂದೆ: ದಿ ನರಸಿಂಹ ಪೈ, ವಾಸ: ಮನೆ ನಂಬ್ರ 210.8 ನರಸಿಂಹ ಕೃಪಾ ನಾರಾಯಣ ಗುರು ಮಂದಿರ  ಹತ್ತಿರ ಮಲ್ಪೆ ,ಕೊಡವೂರು ಗ್ರಾಮ ಇವರ ಮನೆಯ ಮೇಲ್ಚಾಣಿ ಸೋರುತ್ತಿದ್ದರಿಂದ ಮನೆಯ ರಿಪೇರಿಯ ಕೆಲಸ ಆಗುತ್ತಿದ್ದು , ಅಲ್ಲದೆ ಪಿರ್ಯಾದಿದಾರರು ಮತ್ತು ಅವರ ಹೆಂಡತಿ ರಾತ್ರಿ ದಿನಾಲು ಹೆಂಡತಿಯ ಅಣ್ಣ ಉಪೇಂದ್ರ ಪೈ ರವರ ಮನೆಯಲ್ಲಿ ರಾತ್ರಿ ಉಳಿಯುತ್ತಿದ್ದು ,   ದಿನಾಂಕ 17/06/2022 ರಂದು  ರಾತ್ರಿ 8:30 ಗಂಟೆ ಸಮಯಕ್ಕೆ ಪಿರ್ಯಾದಿದಾರರು ಅವರ ಹೆಂಡತಿಯ ಜೊತೆ ಉಪೇಂದ್ರ ಪೈ ರವರ ಮನೆಗೆ ಹೋಗಿ ದಿನಾಂಕ 18/06/2022 ರಂದು  ಬೆಳಿಗ್ಗೆ 7:00 ಗಂಟೆಗೆ ಮನೆಗೆ ಬಂದಾಗ  ಮನೆಯ ಮುಖ್ಯದ್ವಾರಕ್ಕೆ ಅಳವಡಿಸಿದ ಕಬ್ಬಿಣದ ಬಾಗಿಲು ತೆರೆದಿದ್ದು , ಬಾಗಿಲಿನ ಬಳಿ ಬಂದು ನೋಡಿದಾಗ ಬಾಗಿಲಿನ ಬೀಗ ಇರದಿದ್ದು ಅಲ್ಲದೆ ಮುಖ್ಯ ದ್ವಾರದ ಬಾಗಿಲಿನ  ಬೀಗವನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ಮುರಿದು  ಮನೆಯ ಒಳಗೆ ಪ್ರವೇಶಿಸಿ ಮನೆಯ ರೂಮಿನಲ್ಲಿದ್ದ  ಕಬ್ಬಿಣದ ಗೊದ್ರೇಜ್ ಕಬಾಟಿನ ಬಾಗಿಲಿನ ಬೀಗ್ ಮುರಿದು  ಕಬಾಟಿನಲ್ಲಿದ್ದ  ಬಟ್ಟೆ ಗಳನ್ನು ಹರಡಿದ್ದು ಅಲ್ಲದೆ ಕಬಾಟಿನ  ಲಾಕರ್ ನಲ್ಲಿದ್ದ  ಚಿನ್ನ 36 ಗ್ರಾಂ ತೂಕದ ತುಳಸಿ ಹಾರ, 12 ಗ್ರಾಂ ತೂಕದ ಚಿನ್ನದ ನವರತ್ನದ ಉಂಗುರ, 8 ಗ್ರಾಂ ತೂಕದ ಚಿನ್ನದ ಉಂಗುರ , 5 ಗ್ರಾಂ ತೂಕದ ಬಂಗಾರ ಕಿವಿಯ ಚೈನ್ , 500 ಮಿಲಿ ಗ್ರಾಂ ತೂಕದ ಚಿನ್ನದ ಮೂಗುತಿ, 8 ಗ್ರಾಂ  ತೂಕದ ಚಿನ್ನದ ಮುತ್ತಿನ ಸರ ಹಾಗೂ ನಗದು 10 ಸಾವಿರ ರೂಪಾಯಿಯನ್ನು  ಯಾರೋ ಕಳ್ಳರು  ರಾತ್ರಿ ಸಮಯ  ಕಳವು ಮಾಡಿಕೊಂಡು ಹೋಗಿದ್ದು , ಕಳವಾದ ಒಟ್ಟು ಚಿನ್ನ 69.500 ಗ್ರಾಂ, ಒಟ್ಟು ಮೌಲ್ಯ ರೂಪಾಯಿ 2 ಲಕ್ಷದ 50 ಸಾವಿರ ಹಾಗೂ 10 ಸಾವಿರ  ನಗದು ಆಗಿರುತ್ತದೆ.  ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ     52/2022 ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕೊಲೆ ಪ್ರಕರಣ

  • ಅಜೆಕಾರು: ದಿನಾಂಕ 17/06/2022 ರಂದು ರಾತ್ರಿ 7:00 ಗಂಟೆಯಿಂದ ದಿನಾಂಕ 18/06/2022 ರಂದು ಬೆಳಿಗ್ಗೆ 08:00 ಗಂಟೆಯ ನಡುವಿನ ಅವಧಿಯಲ್ಲಿ ಕಾರ್ಕಳ ತಾಲೂಕು ಕೆರ್ವಾಶೆ ಗ್ರಾಮದ ಪಾಚಾರಬೆಟ್ಟು ಎಂಬಲ್ಲಿ ಆರೋಪಿ ಕೃಷ್ಣ ಪೂಜಾರಿ (55) ಎಂಬಾತನು ತನ್ನ  ಅಂಗವಿಕಲ ಮಗ ದಿಪೇಶ್ (26) ಎಂಬುವವರನ್ನು ಮನೆಯ ಬಾವಿಯ ನೀರಿಗೆ  ಹಾಕಿ  ಕೊಲೆ ಮಾಡಿ ತಾನು ತನ್ನ ಮನೆಯ ಒಳಗೆ ಪಕ್ಕಾಸಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 21/2022 ಕಲಂ:302 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಪ್ರದೀಪ  (31), ತಂದೆ: ರಾಜು  ಪೂಜಾರಿ, ವಾಸ: ಭೃಮರಾಂಭ ಕೃಪ ಗರಡಿಗುಡ್ಡೆ ಬಜಗೋಳಿ ಮುಡಾರ್  ಗ್ರಾಮ, ಕಾರ್ಕಳ ತಾಲೂಕು ಇವರ ತಮ್ಮ ಪ್ರಶಾಂತ (29)  ಮದ್ಯ ವ್ಯಸನಿಯಗಿದ್ದು, ದಿನಾಂಕ 16/6/2022 ರಂದು ಸಂಜೆ  6:00 ಗಂಟೆಯಿಂದ ಸಂಜೆ 6:30 ರ ಮದ್ಯೆ ಬುನ್ನಾಡಿಯ ದೊಡ್ಡಮ್ಮನ ಮನೆಗೆ ಹೋಗುವ ದಾರಿ ಮದ್ಯೆ ನಿಂತುಕೊಂಡಿದ್ದವನು ಮನೆಗೂ ಬಾರದೇ ಸಂಬಂದಿಕರ ಮನೆಗೂ ಹೋಗದೇ ಇದ್ದು ಹುಡುಕಾಡಿದಲ್ಲಿ  ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 85/2022 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ಭಾರತಿ ಶೆಟ್ಟಿ (47) ಗಂಡ: ಕೆ ಶಾಂತ ರಾಮ ಶೆಟ್ಟಿ,ವಾಸ:  ಉದ್ದಾರ ಗುಡ್ಡೆ, ಕುಂದಾಪುರ ತಾಲೂಕು ಉಡುಪಿ  ಜಿಲ್ಲೆ ಇವರ ಗಂಡ ಕೆ. ಶಾಂತ ರಾಮ ಶೆಟ್ಟಿ (52) ರವರು ದಿನಾಂಕ 19/02/2020 ರಂದು ಕುಂದಾಪುರ ತಾಲೂಕು ಕಂಡ್ಲೂರು ಎಂಬಲ್ಲಿ ರಸ್ತೆ ಅಪಘಾತವಾಗಿ ತೀವ್ರಗಾಯಗೊಂಡಿದ್ದು ಅವರಿಗೆ ಅಸ್ಪತ್ರೆಯ ಚಿಕಿತ್ಸೆ ಕೊಡಿಸಿಯು ಗುಣಗವಾಗದೇ ಮನೆಯಲ್ಲಿ ಅರೇ ಪ್ರಜ್ಷಾವಸ್ಥೆಯಲ್ಲಿದ್ದವರು ಈ ಬಗ್ಗೆ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,  ರಸ್ತೆ ಅಪಘಾತದಿಂದ ತೀವೃಗಾಯಗೊಂಡಿದ್ದು ಅದೇ ಕಾರಣದಿಂದ  ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ:18/06/2022 ರಂದು ಬೆಳಿಗ್ಗೆ 06:30 ಗಂಟೆಗೆ ಅಪಘಾತದಿಂದ ಅದ ನೋವಿನಿಂದ ಉದ್ದಾರ ಗುಡ್ಡೆ ಅಂಪಾರು ಗ್ರಾಮ ಕುಂದಾಪುರ ತಾಲೂಕು ಇಲ್ಲಿ ಮನೆಯಲ್ಲಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 17/2022  ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ಶ್ರೀಮತಿ ಸುಮತಿ (34), ಗಂಡ: ರಘು ಪೂಜಾರಿ, ವಾಸ: “ ಅಮ್ಮ” ಮಹಾಸತೀಶ್ವರಿ ಗ್ರಾಮಕೋಡಿ ಕನ್ಯಾನ ಗ್ರಾಮ, ಬ್ರಹ್ಮಾವರ ಇವರ ಗಂಡ ರಘು ಪೂಜಾರಿ (40) ರವರು ಸುಮಾರು 6 ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಕುಂದಾಪುರ ಮಾತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದ್ದರು.  ಅಲ್ಲದೇ ಅವರಿಗೆ ವಿಪರೀತ ಕುಡಿತದ ಚಟ ಇರುತ್ತದೆ. ಪಿರ್ಯಾದಿದಾರರು ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಹೌಸ್‌ಕೀಪಿಂಗ್‌ ಕೆಲಸಕ್ಕೆ ರಾತ್ರಿ ಪಾಳಿ ಕೆಲಸಕ್ಕೆಂದು ಹೋದಾಗ ಗಂಡ ರಘು ಪೂಜಾರಿ ಮನೆಯಲ್ಲಿರದೇ ಅವರ ತಾಯಿ ಮನೆಯಾದ ಗುಂಡ್ಮಿ ತಗ್ಗಿನಬೈಲು ಎಂಬಲ್ಲಿಗೆ ಹೋಗುತ್ತಿದ್ದರು. ಎಂದಿನಂತೆ ದಿನಾಂಕ: 17/06/2022 ರಂದು ಪಿರ್ಯಾದಿದಾರರು ರಾತ್ರಿ ಪಾಳಿ ಕೆಲಸ ಇದ್ದುದರಿಂದ ಪಿರ್ಯಾದಿದಾರರು ಕೆಲಸಕ್ಕೆ ಹೋದ ನಂತರ ರಘು ಪೂಜಾರಿ ಅವರ ತಾಯಿಯ ಮನೆಗೆ ಹೋಗಿರುತ್ತಾರೆ. ಪಿರ್ಯಾದಿದಾರರು  ದಿನಾಂಕ: 18/06/2022 ರಂದು ಬೆಳಿಗ್ಗೆ 9:00 ಗಂಟೆಗೆ ಮನೆ ಬಂದು ಗದ್ದೆ ಕೆಲಸದ ಬಗ್ಗೆ ಹೋಗಿತ್ತಾರೆ. ಬೆಳಿಗ್ಗೆ ಸಮಯ 10:30 ಗಂಟೆಗೆ ಪಿರ್ಯಾದಿದಾರರ  ಗದ್ದೆಯಲ್ಲಿ ಕೆಲಸ ಮಾಡಿಕೊಂಡಿರುವಾಗ ಗಂಡನ ಅಕ್ಕ ಯಶೋದಾ ಎಂಬವರು ಕರೆ ಮಾಡಿ ಗಂಡ ರಘು ರವರಿಗೆ ಬೆಳಿಗ್ಗೆ ತಿಂಡಿ ತಿಂದು ಚಾ ಕುಡಿಯುವ ಸಮಯ ತಿಂಡಿ ಗಂಟಲಿನಲ್ಲಿ ಸಿಕ್ಕಿಕೊಂಡಿದ್ದು ಮಾತನಾಡುತ್ತಿಲ್ಲ ಎಂಬುದಾಗಿ ಹೇಳಿದ್ದು, ಪಿರ್ಯಾದಿದಾರರು  ಕೂಡಲೇ ಗಂಡನ ತಾಯಿ ಮನೆಗೆ ಹೋಗಿ ಗಂಡನನ್ನುಉಪಚರಿಸಿ ಅವರ ಬಾಯಿಯಲ್ಲಿದ್ದ ತಿಂಡಿಯನ್ನು ಕೈಯಿಂದ ತೆಗೆದಿರುತ್ತಾರೆ. ಆಗಲೂ ಅವರೂ ಸ್ಪಂದಿಸದೇ ಇದ್ದುದನ್ನು ಕಂಡು ಸಾಸ್ತಾನ ಕ್ಲಿನಿಕ್‌ನ ವೈದ್ಯರಾದ ಡಾ. ಶರತ್‌ರವರಿಗೆ ಕರೆ ಮಾಡಿದ್ದು, ಅವರು ಮನೆಗೆ ಬಂದು ಪರೀಕ್ಷಿಸಿ ಅದಾಗಲೇ ಮೃತಪಟ್ಟಿದ್ದು, ಅವರು ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂಬುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 23/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ಸದಾಶಿವ (42), ತಂದೆ:ಸುಬ್ರಾಯ ಆಚಾರ್ಯ , ವಾಸ: ಬೆರ್ಮೋಟ್ಟು ಹೌಸ್ ಇನ್ನಂಜೆ ಗ್ರಾಮ ಕಾಪು ತಾಲೂಕು ಇವರ ಅಣ್ಣ ಜಗದೀಶ ಆಚಾರ್ಯ ಇವರು  20 ವರ್ಷಗಳಿಂದ ವಿಪರೀತ ಕುಡಿತದ ಚಟವನ್ನು ಹೊಂದಿದ್ದು, ಸರಿಯಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲ. ಕೆಲವೊಮ್ಮೆ ಕೆಲಸಕ್ಕೆ ಹೋದರೆ ಎಲ್ಲಿಗೆಂದು ಮನೆಯಲ್ಲಿ ತಿಳಿಸದೇ ಹೋಗಿ ನಂತರ 1-2 ತಿಂಗಳ ನಂತರ ಮನೆಗೆ ಬರುತ್ತಿದ್ದರು. ಎರಡು ತಿಂಗಳಿನಿಂದ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದು ದಿನಾಂಕ 11/06/2022 ರಂದು ಸಂಜೆ 6:00 ಗಂಟೆಗೆ ಜಗದೀಶ ಆಚಾರ್ಯರವ ರು ಮನೆಯಿಂದ ಏನೂ ಹೇಳದೇ ಬಟ್ಟೆ ತೆಗೆದುಕೊಂಡು ಹೋಗಿರುತ್ತಾರೆ. ದಿನಾಂಕ 18/06/2022 ರಂದು ಬೆಳಿಗ್ಗೆ 11:00 ಗಂಟೆಗೆ ಪಿರ್ಯಾದಿದಾರರ ಪರಿಚಯದ ಉಮೇಶ್ ಆಚಾರ್ಯ ಹಾಗೂ ಕಾಪು ಪೊಲೀಸರು ಪಿರ್ಯಾದಿದಾರರಿಗೆ ಪೋನ್ ಮಾಡಿ  ಉಡುಪಿ ಜಿಲ್ಲಾ ಆಸ್ಪತ್ರೆಗೆ ಬರುವಂತೆ ತಿಳಿಸಿದ್ದು ಪಿರ್ಯಾದಿದಾರರು 12:00 ಗಂಟೆ ಸಮಯಕ್ಕೆ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಹೋದಾಗ ಒಂದು ಅಂಬ್ಯುಲೆನ್ಸ್‌ನಲ್ಲಿ ಪಿರ್ಯಾದಿದಾರರ ಅಣ್ಣ ಜಗದೀಶ ರವರು ಮಲಗಿದ ಸ್ಥಿತಿಯಲ್ಲಿದ್ದು ಮೃತಪಟ್ಟಿರುವುದು ಕಂಡು ಬಂದಿರುತ್ತದೆ. ಜಗದೀಶ ಆಚಾರ್ಯರವರು ವಿಪರೀತ ಅಮಲು ಪದಾರ್ಥ ಸೇವಿಸುವ ಚಟವನ್ನು ಹೊಂದಿದ್ದು, ಇದರಿಂದಲೇ ಮೃಪಟ್ಟಿರಬಹುದಾಗಿದೆ.  ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಆರ್‌ ಕ್ರಮಾಂಕ 17/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ಶಮೀರಾ (38), ಗಂಡ: ಮಹಮ್ಮದ್ ಇಸ್ರೈಲ್ ಅನ್ಸಾರಿ, ವಾಸ: ಆರ್. ಟಿ.ಓ ಪೋಲೀಸ್ ಸ್ಟೇಶನ್, ಕೋಕಣ್ ವೈಭವ್, ಚಾಲ್ ನಂಬ್ರ:01.ಕಾಮರಾಜ್ ನಗರ, ಘಾಟ್ ಕೋಪರ್, ಈಸ್ಟ್ ಮುಂಬೈ. ಹಾಲಿ ವಾಸ: ಹೀನಾ ಮಂಜಿಲ್, ಬಸದಿ ರೋಡ್, ನಲ್ಲೂರು ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರು ನಲ್ಲೂರು ಗ್ರಾಮದ ಖಾಯಂ ನಿವಾಸಿಯಾಗಿದ್ದು ಅವರ ಅಜ್ಜಿಯಾದ ಜೈನಾಬಿ ರವರು ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ಸರ್ವೆ ನಂಬ್ರ: 496/2A-P1-p2 ರಲ್ಲಿ 0.05 ಎಕ್ರೆ ಸ್ಥಿರಾಸ್ಥಿ  ಹೊಂದಿದ್ದು,  ಸ್ಥಿರಾಸ್ಥಿಯು ಜೈನಾಬಿ ಹಾಗೂ ಅವರ ಮಗ ಹಮೀದ್, ಸೊಸೆ ಇಸ್ಮದ್ ಹಮೀದ್ ರವರ ಮರಣಾನಂರತದ ಜಮೀನು ಅವರ ಮಕ್ಕಳಾದ ಪಿರ್ಯಾದಿದಾರ, ಸೈಯದ್ ಹಮೀದ್ ಹಾಗೂ ನಜಾಕತ್ ರವರ ಸಮಷ್ಟಿ ಹಕ್ಕಿನಲ್ಲಿ ಇದ್ದು ಆರೋಪಿತರಾದ 1.ಸೈಯದ್ ಕರೀಮ್ ಪ್ರಾಯ: 55 ವರ್ಷ ತಂದೆ: ದಿ: ಸಿಲಾರ್ ಸಾಹೇಬ್ ವಾಸ:  ಆರ್,ಕೆ ನಗರ, ಬಜಗೊಳಿ ಅಂಚೆ ನಲ್ಲೂರು ಗ್ರಾಮ ಕಾರ್ಕಳ ತಾಲೂಕು,  2.ಶ್ರೀಮತಿ ನಜೀಮಾ ಪ್ರಾತ: 40 ವರ್ಷ ಗಂಡ: ಸೈಯದ್ ಕರೀಮ್ ವಾಸ: ಬಜಗೊಳಿ ಅಂಚೆ ಮುಡಾರು ಗ್ರಾಮ ಕಾರ್ಕಳ ತಾಲೂಕು, 3.ಇಬ್ರಾಹಿಂ ಪ್ರಾಯ: 31 ವರ್ಷ ತಂದೆ: ಸಾಹೇಬ್ ವಾಸ: ಪಾತಿಮಾ ಮಂಜಿಲ್, ಪೇರಂಗಡಿ ದರ್ಖಾಸ್ ಹೌಸ್, ಬಜಗೊಳಿ ಅಂಚೆ ಮುಡಾರು ಗ್ರಾಮ, ಕಾರ್ಕಳ ತಾಲೂಕು ಉಡುಪಿ ಇವರು  ದುರುದ್ದೇಶದಿಂದ ಉದ್ದೇಶಪೂರ್ವಕವಾಗಿ ದಿನಾಂಕ 25/10/2004 ರಲ್ಲಿ  ಜಂಟಿ ಹಕ್ಕಿನ ಆಸ್ತಿಯನ್ನು ಕಬಳಿಸಿ ಅಕ್ರಮವಾಗಿ ಮಾರಾಟ ಮಾಡಿ ಪಿರ್ಯಾದಿದಾರರಿಗೆ ಹಾಗೂ ಉಳಿದ ಹಕ್ಕಿನವರಿಗೆ ಮೋಸ ಮಾಡುವ ಉದ್ದೇಶದಿಂದ ಜೈನಾಬಿ ಇವರ ಹೆಬ್ಬೆಟ್ಟಿನ ಗುರುತನ್ನು ನಕಲಿ ಮಾಡಿ ಫೋರ್ಜರಿ ಹಿಭಾ ಧ್ರಢೀಕರಣ ಪತ್ರವನ್ನು ಆರೋಫಿ 01 ನೇ ಸೈಯದ್ ಕರೀಮ್ ರವರ ಹೆಸರಿಗೆ ಮಾಡಿಕೊಂಡಿದ್ದು ಅಲ್ಲದೇ ಜಾಗದ ಪಹಣಿಯನ್ನು ತನ್ನ ಹೆಸರಿಗೆ ಬದಲಾವಣೆ ಮಾಡಿಕೊಂಡಿದ್ದು ಎಲ್ಲಾ ದಾಖಲಾತಿಗಳಿಗೆ ಆರೋಪಿ 02 ಮತ್ತು 03 ನೇಯವರು ಸಾಕ್ಷಿದಾರರಾಗಿ ಸಹಿ ಮಾಡಿದ್ದು ಮೂವರು ಆರೋಪಿಗಳು ಒಟ್ಟು ಸೇರಿ  ಜೈನಾಬಿರವರ ನಕಲಿ ಹೆಬ್ಬೆಟ್ಟಿನ ಗುರುತನ್ನು ಹಾಕಿ ಮೋಸ ಮಾಡಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 84/2022 ಕಲಂ: 405, 406, 415. 420. 423, 424, 465. 467, 468, 420(b) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 18-06-2022 06:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080