ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ ಪ್ರಕರಣ

  • ಉಡುಪಿ: ಉಡುಪಿ ತಾಲೂಕು ಪುತ್ತೂರು ಗ್ರಾಮದ  ನಿಟ್ಟೂರು ಅಂಚೆಯ ಶ್ರೀ ಸತ್ಯ ನಿಧಿ ಹೆಸರಿನ  ಮನೆಯಲ್ಲಿ ವಾಸವಿದ್ದ ವಾದಿರಾಜ ಗಾಣಿಗ(39ವರ್ಷ)ನು  ತನ್ನ ಹೆಂಡತಿ-ಮಕ್ಕಳೊಂದಿಗೆ ಬೆಂಗಳೂರಿನಲ್ಲಿ  ವಾಸವಿದ್ದವನು ಲಾಕ್‌ಡೌನ್‌ ನಿಮಿತ್ತ ಊರಿಗೆ  ಬಂದವನು, ದಿನಾಂಕ:09/06/2021ರಂದು ತನ್ನ ಅಕ್ಕನ ಮನೆಯಾದ ಕುಂದಾಪುರದ ಬಸ್ರೂರು ಮೂರುಕೈಗೆ ಹೋಗಿ ದಿನಾಂಕ: 13/06/2021ರಂದು ಸರಕು ಸಾಗಾಟದ ಲಾರಿಯಲ್ಲಿ ಉಡುಪಿಗೆ ಬಂದು ಇಂದ್ರಾಳಿ ರೈಲ್ವೆ ನಿಲ್ದಾಣ ರಸ್ತೆಯ ಬಳಿ ಇಳಿದುಕೊಂಡವನು ಇದುವರೆಗೂ ಮನೆಗೆ ಬಾರದೇ  ಕಾಣೆಯಾಗಿರುತ್ತಾನೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ 96/2021 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

 ಅಪಘಾತ ಪ್ರಕರಣ

  • ಬೈಂದೂರು: ದಿನಾಂಕ; 15/06/2021 ರಂದು ಪಿರ್ಯಾದಿ ಮನೀಶ್ ಶೆಟ್ಟಿ ಇವರು ಅವರ ಸ್ನೇಹಿತ ಪ್ರತಾಪ್ ಶೆಟ್ಟಿಯವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ನಂಬ್ರ ಕೆ ಎ 20-ಇಎಕ್ಸ್-0575 ರಲ್ಲಿ ಸಹ ಸವಾರನ್ನಾಗಿ ಕುಳಿತು ರೇಷನ್ ಸಾಮಾಗ್ರಿಗಳನ್ನು ತರಲು ನಾಗೂರಿಗೆ ಹೊರಟಿದ್ದು ಸಮಯ ಸುಮಾರು ಮದ್ಯಾಹ್ನ 1:00 ಗಂಟೆಗೆ ಕಿರಿಮಂಜೇಶ್ವರ ಗ್ರಾಮದ ಗುಂಜಾನು ಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಸ್ವಲ್ಪ ಮುಂದಕ್ಕೆ ತಿರುವಿನಲ್ಲಿ ಹೋಗುತ್ತಿರುವಾಗ ಪ್ರತಾಪ್ ನು ದ್ವಿಚಕ್ರ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ಬಲ ಬದಿಗೆ ಹೋದಾಗ ಎದುರಿನಿಂದ ರಿಕ್ಷಾ ಬರುತ್ತಿದ್ದುದ್ದನ್ನು ಕಂಡು ಪ್ರತಾಪ್ ನು ದ್ವಿಚಕ್ರ ವಾಹನವನ್ನು ಒಮ್ಮೇಲೆ ಎಡಕ್ಕೆ ತಿರುಗಿಸಿದಾಗ ದ್ವಿಚಕ್ರ ವಾಹನವು ಪ್ರತಾಪ್ ನ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನದ ಸಮೇತ ರಸ್ತೆಗೆ ಬಿದ್ದಿದ್ದು ಪರಿಣಾಮ ಪಿರ್ಯಾದಿದಾರರ ಕಾಲಿಗೆ ರಕ್ತಗಾಯ,ತಲೆಗೆ,ಕಣ್ಣಿಗೆ ಪೆಟ್ಟಾಗಿ ಕೈ ಗಳಿಗೆ ತರಚಿದ ಗಾಯವಾಗಿದ್ದು ಪ್ರತಾಪ್ ನಿಗೆ ಕೈ ಕಾಲುಗಳಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತದೆ. ಗಾಯಗೊಂಡ ಪಿರ್ಯಾದಿದಾರರನ್ನು ಪ್ರತಾಪ್ ಹಾಗೂ ಸುಕೇಶ್ ಶೆಟ್ಟಿ ಎಂಬುವವರು ಉಪಚರಿಸಿ ಚಿಕಿತ್ಸೆ ಬಗ್ಗೆ 108 ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಕುಂದಾಪುರ ನ್ಯೂ ಮೆಡಿಕಲ್ ಅಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 103/2021 ಕಲಂ:279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾರ್ಕಳ: ದಿನಾಂಕ: 17/06/2021 ರಂದು ಜನಾರ್ಧನ ಕೆ ಪಿಎಸ್ಐ ಕ್ರೈಂ ಕಾರ್ಕಳ ಗ್ರಾಮಾಂತರ ಠಾಣೆ ಕಾರ್ಕಳ ಇವರಿಗೆ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ಕಾರ್ಕಳ ತಾಲೂಕು ನಂದಳಿಕೆ  ಗ್ರಾಮದ ಕೆದಿಂಜೆ ಮೇಲ್ಮನೆ ಎಂಬಲ್ಲಿ ಸಾರ್ವಜನಿಕ ಸ್ಥಳಕ್ಕೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಯಾವುದೇ ಸಕ್ಷಮ ಪ್ರಾಧಿಕಾರದಿಂದ ಪರವಾನಿಗೆಯನ್ನು ಹೊಂದದೆ ಅಕ್ರಮವಾಗಿ ಗಿರಾಕಿಗಳಿಗೆ ಮಧ್ಯವನ್ನು ಲೋಟಗಳಲ್ಲಿ ಸೇವನೆ ಮಾಡಲು ಹಾಕಿಕೊಡುತ್ತಿದ್ದಾಗ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿ ಪುರುಷೋತ್ತಮ ಆಚಾರ್ಯ ಹಾಗೂ ಮದ್ಯ ಸೇವನೆ ಮಾಡುತ್ತಿದ್ದ ಆರೋಪಿತರುಗಳಾದ ಪವನ್ ಆಚಾರ್ಯ,  ಸಂತೋಷ, ಸಾಧುರವರನ್ನು ವಶಕ್ಕೆ ತೆಗೆದುಕೊಂಡು 1ನೇ ಆರೋಪಿಯ ವಶದಲ್ಲಿದ್ದ ವರ್ಜಿನಲ್ ಚಾಯ್ಸ್ ವಿಸ್ಕಿಯ 90 ಎಂಎಲ್ ನ 85 ಸ್ಯಾ ಚೆಟ್ ಗಳು, ವರ್ಜಿನಲ್ ಚಾಯ್ಸ್ ವಿಸ್ಕಿಯ 180  ಎಂಎಲ್ ನ 10 ಸ್ಯಾಚೆಟ್ ಗಳು, ಮದ್ಯ ಮಾರಾಟದಿಂದ ಸಂಗ್ರಹವಾದ ನಗದು ಹಣ 1100/ ರೂಪಾಯಿಗಳು ,2 ಬ್ಯಾಗ್ , ಸ್ಟೀಲ್ ಲೋಟಗಳು 4, ಪ್ಲಾಸ್ಟಿಕ್ ಬಾಟಲಿಗಳು 2, ಪ್ಲಾಸ್ಟಿಕ್ ತೊಟ್ಟೆಗಳು 4, ಖಾಲಿ ಮದ್ಯದ 90 ಎಂಎಲ್ ನ ಸ್ಯಾಚೆಟ್ ಗಳು 4 ಸ್ವಾದೀನಪಡಿಸಿಕೊಂಡಿರುವುದಾಗಿದೆ. ಅಕ್ರಮ ಮದ್ಯದ ಒಟ್ಟು ಮೌಲ್ಯ 3600 ರೂಪಾಯಿಗಳು ಆಗಬಹುದು. ಘನ ಕರ್ನಾಟಕ ಸರಕಾರ ಹಾಗೂ ಉಡುಪಿ ಜಿಲ್ಲಾಡಳಿತವು ಕೋವಿಡ್ ಮಹಾಮಾರಿ ಕರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ನಿಯಮಗಳ ಬಗ್ಗೆ ಹಾಗೂ ಅನಗತ್ಯವಾಗಿ ಓಡಾಟ ಮಾಡಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ಆರೋಪಿತರಿಗೆ ತಿಳಿದರು ಕೂಡ ನಿರ್ಲಕ್ಷದಿಂದ ಕೋವಿಡ ನಿಯಮಗಳನ್ನು ಉಲ್ಲಂಘಿಸಿ ಅಪರಾಧ ಎಸಗಿರುತ್ತಾರೆ. ಈ ಬಗ್ಗೆ ಕಾರ್ಕಳ  ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 73/2021 ಕಲಂ: 32,34,15(ಎ) ಕರ್ನಾಟಕ ಅಬಕಾರಿ ಕಾಯ್ದೆ, 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 18-06-2021 10:14 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080