ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

  • ಬೈಂದೂರು: ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ: 14/06/2021 ರಿಂದ ದಿನಾಂಕ: 21/06/2021 ರ ವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು ಈ ಕರ್ಫ್ಯೂ ಜಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು ಈ ಬಗ್ಗೆ ದಿನಾಂಕ 18/06/2021 ರಂದು ಮಹಾಬಲ  ಎಎಸ್ಐ ಬೈಂದೂರು ಪೊಲೀಸ್ ಠಾಣೆ ಇವರು ಇಲಾಖಾ ಹೊಯ್ಸಳ ವಾಹನದಲ್ಲಿ ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಶಿರೂರು ಗ್ರಾಮದ ಮೊಮಿನ್ ಮೊಹಲ್ಲ ಹತ್ತಿರ ಸಮುದ್ರದ ತೀರದಲ್ಲಿ  ಕೆಲವು ವ್ಯಕ್ತಿಗಳು ಮರಳು ತುಂಬಿಸುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಪಿರ್ಯಾದಿದಾರರು ಬೆಳಿಗ್ಗೆ 08.45 ಗಂಟೆಗೆ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಲ್ಲಿ ಮೋಟಾರ್ ಸೈಕಲ್ ನಂಬ್ರ ಕೆಎ 47 ಆರ್ 2676ನೇದನ್ನು ನಿಲ್ಲಿಸಿಕೊಂಡು 5 ಜನರು ಮಾಸ್ಕ್ ಧರಿಸದೇ ನಿಂತಿದ್ದನ್ನು ಗಮನಿಸಿ ಸಿಬ್ಬಂದಿಗಳ ಸಹಾಯದಿಂದ ಇಬ್ಬರನ್ನು ಹಿಡಿದು ಹೆಸರು, ವಿಳಾಸ ಕೇಳಲಾಗಿ 1) ಮುಲ್ಲಾ ಮಹಮ್ಮದ್ ಅಸಿಫ್ ಪ್ರಾಯ 29 ವರ್ಷ, ತಂದೆ; ಮುಲ್ಲಾ ಮಹಮ್ಮದ್ ಜಫ್ರಿ ವಾಸ; ಮೊಮಿನ್ ಮೊಹಲ್ಲ, ಶಿರೂರು ಗ್ರಾಮ, ಬೈಂದೂರು ತಾಲೂಕು 2) ಮೊಮಿನ್ ಮಹಮ್ಮದ್ ಝಯೀಮ್ ಪ್ರಾಯ 24 ವರ್ಷ, ತಂದೆ; ದಿ; ಅಬ್ದುಲ್ ರಜಾಕ್ ವಾಸ; ನೂರಾನಿ ಮಸೀದಿ ಬಳಿ, ಶಿರೂರು ಗ್ರಾಮ, ಬೈಂದೂರು ತಾಲೂಕು ಎಂದು ತಿಳಿಸಿದ್ದು ಉಳಿದ 3 ಜನರು ಓಡಿ ಹೋಗಿರುತ್ತಾರೆ ಆದ್ದರಿಂದ ಸದ್ರಿ ಮೇಲ್ಕಂಡ ಆಪಾದಿತರು ಕೋವಿಡ್-19 ಕೊರೋನ ವೈರಸ್ ಸೋಂಕು ಹರಡುವದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವು ಕೊರೋನ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರು ಕೂಡ ಸಾರ್ವಜನಿಕರ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೊಂಕನ್ನು ಹರಡುವ ಸಂಭವ ಇದೆ ಎಂದು ತಿಳಿದು ಕೂಡ ಸಕಾರಣವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ನಿರ್ಲಕ್ಷ್ಯತನದಿಂದ ಸರ್ಕಾರ ಹಾಗೂ ಜಿಲ್ಲಾಡಳಿತ ಮಾರ್ಗಸೂಚಿಗಳಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯಕಾರಿಯಾದಂತಹ ರೋಗವು ಹರಡುವಂತೆ ಮಾಡಿ ನಿರ್ಲಕ್ಷ್ಯತನ ತೋರಿರುವದರಿಂದ ಸದ್ರಿ ವಾಹನಗಳನ್ನು ಸ್ವಾದೀನ ಪಡೆಸಿಕೊಂಡು ಆಪಾದಿತರ ವಿರುದ್ದ ಬೈಂದೂರು ಪೊಲೀಸ್ ಠಾಣೆ ಅಪರಾಧ 104/2021 ಕಲಂ:269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಪಡುಬಿದ್ರಿ: ಪಿರ್ಯಾದಿ ಎಂ ನಾಗಯ್ಯ ಶೆಟ್ಟಿ ಇವರು ಪಿ.ಡಬ್ಲ್ಯೂ.ಡಿ ಕಾಂಟ್ರ್ಯಾಕ್ಟರ್ ಆಗಿ ಕೆಲಸ ಮಾಡಿಕೊಂಡಿದ್ದು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾವೇರಿ ಜಿಲ್ಲೆಗಳಲ್ಲಿ ಕಾಂಟ್ರ್ಯಾಕ್ಟ್ ಕೆಲಸ ವಹಿಸಿಕೊಂಡಿದ್ದು, ತಮ್ಮದೇ ಟಿಪ್ಪರುಗಳು, ಜೆ.ಸಿ.ಬಿ. ಹಾಗೂ ಹಿಟಾಚಿಗಳನ್ನು ಹೊಂದಿರುತ್ತಾರೆ. ಮಂಗಳೂರಿನ ಗಂಜಿಮಠದ ಬಳಿ ನಡೆಯುತ್ತಿದ್ದ ರಸ್ತೆ ಕಾಮಗಾರಿಯನ್ನು ವಿಪರೀತ ಮಳೆಯಿಂದಾಗಿ ಕಳೆದ 2 ವಾರಗಳಿಂದ ನಿಲ್ಲಿಸಿದ್ದು, ಅಲ್ಲಿನ ಕೆಲಸದ 5 ಟಿಪ್ಪರ್ ಹಾಗೂ 1 ಜೆ.ಸಿ.ಬಿ.ಯನ್ನು ಕಾಪು ತಾಲೂಕು ಸಾಂತೂರು ಗ್ರಾಮ ಮುದರಂಗಡಿಯ ಅಳುಂಬೆ ಎಂಬಲ್ಲಿರುವ ಪಿರ್ಯಾದಿದಾರರ ಬಾಬ್ತು ಡಾಂಬಾರು ಪ್ಲಾಂಟ್‌‌ನ  ಕಂಪೌಂಡ್‌‌ನ ಒಳಗಡೆ ನಿಲ್ಲಿಸಿರುತ್ತಾರೆ.  ನಂತರ  ಅಲ್ಲಿ ನಿಲ್ಲಿಸಿದ 5 ಟಿಪ್ಪರುಗಳ ಪೈಕಿ KA-20-C-6741 ನೇ ನಂಬ್ರದ ಟಿಪ್ಪರನ್ನು ದಿನಾಂಕ:  16.06.2021ರ ಸಂಜೆ 17:30 ಗಂಟೆಯಿಂದ ದಿನಾಂಕ: 17.06.2021 ರ ಬೆಳಿಗ್ಗೆ 08:30 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಗೇಟನ್ನು ತೆರೆದು ಕಳವು ಮಾಡಿಕೊಂಡು ಹೋಗಿರುತ್ತಾರೆ.  ಸದ್ರಿ ಟಿಪ್ಪರಿನ ಅಂದಾಜು ಮೌಲ್ಯ ರೂ 8,00,000/- ಆಗಬಹುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ 57/2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ಅಸ್ವಾಭಾವಿಕ ಮರಣ ಪ್ರಕರಣ

  • ಹಿರಿಯಡ್ಕ: ದಿನಾಂಕ: 17/06/2021 ರಂದು ರಾತ್ರಿ ಸುಮಾರು 8:00 ಗಂಟೆಗೆ ಪಿರ್ಯಾಧಿ ಅನಿತಾ ಇವರು ಅವರ ಮಕ್ಕಳೊಂದಿಗೆ ತವರು ಮನೆಯಾದ ಸಾಂತ್ಯಾರುವಿಗೆ ಹೋಗಿದ್ದು, ಪಿರ್ಯಾದಿದಾರರ ಗಂಡ ಸುಕುಮಾರ ಸೇರ್ವೇಗಾರ್(40) ರವ ರು ಮನೆಯಲ್ಲಿ ಒಬ್ಬರೇ ಇದ್ದು, ಫಿರ್ಯಾದಿದಾರ ಗಂಡ ಈ ಮೊದಲು ಮುಂಬೈನಲ್ಲಿ ಹೋಟೇಲ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ಒಂದು ವರ್ಷದ ಹಿಂದೆ ಊರಿಗೆ ಬಂದು ಕೂಲಿ ಕೆಲಸ ಮಾಡಿಕೊಂಡಿರುವುದಾಗಿದೆ. ಅವರಿಗೆ ಸ್ವಲ್ಪ ಮದ್ಯಪಾನ ಮಾಡುವ ಚಟವಿದ್ದು, ಅಲ್ಲದೇ ಮನೆಯ ಬಾವಿಗೆ ಮಾಡಿದ ಸಾಲದ ವಿಚಾರದಲ್ಲಿ ಮನನೊಂದು ಈ ಬಗ್ಗೆ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 17/06/2021 ರ ರಾತ್ರಿ 8:00 ಗಂಟೆಯಿಂದ ಈ ದಿನ ದಿನಾಂಕ: 18/06/2021 ರ ಬೆಳಿಗ್ಗೆ 11:30 ರ ಮಧ್ಯಾವಧಿಯಲ್ಲಿ  ಪಿರ್ಯಾಧಿದಾರರ ಮನೆಯ ಮಲಗುವ ಕೋಣೆಯಲ್ಲಿ  ನೇಣು ಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಠಾಣಾ ಯುಡಿಆರ್‌ ಸಂಖ್ಯೆ 13/2021 U/s  174 CrPC ಯಂತೆ ಪ್ರಕರಣ ದಾಖಲಿಸಲಾಗಿದೆ. 

 

ಇತ್ತೀಚಿನ ನವೀಕರಣ​ : 18-06-2021 06:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080