ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಹೆಬ್ರಿ: ಪಿರ್ಯಾದಿದಾರರಾದ ರಮೇಶ (28), ತಂದೆ: ಗುರುಲಿಂಗಪ್ಪ, ವಾಸ: ಪಾತಪ್ಪನಗುಡಿ ಓಬಳಾಪುರ ಗ್ರಾಮ ಚಳ್ಳಕೆರೆ ತಾಲೂಕು ಚಿತ್ರದುರ್ಗ ಜಿಲ್ಲೆ ಇವರು KA-16-AA-4934 ನೇ ASHOK LEYLAND DOSTH PLUS ಗೂಡ್ಸ್ ವಾಹನದಲ್ಲಿ ದಿನಾಂಕ 16/05/2023 ರಂದು ಮಾವಿನಕಾಯಿ ಲೋಡ್ ಮಾಡಿಕೊಂಡು ಚಾಲಕ ಅಶೋಕ ಮತ್ತು ಮನೋಹರ ರವರೊಂದಿಗೆ  ಉಡುಪಿ ಕಡೆಗೆ ಬರುತ್ತಿರುವಾಗ ಅವರು ದಿನಾಂಕ 17/05/2023 ರಂದು ಮುಂಜಾನೆ 03:30 ಗಂಟೆಗೆ ನಾಡ್ಪಾಲು ಗ್ರಾಮದ ಆಗುಂಬೆ ಘಾಟಿಯ 11 ನೇ ತಿರುವು ಬಳಿ ತಲುಪುವಾಗ ಚಾಲಕ ಅಶೋಕ ರವರು ಗೂಡ್ಸ್ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ವಾಹನವು ಚಾಲಕನ ಹತೋಟಿ ತಪ್ಪಿ ರಸ್ತೆಯ ಎಡಭಾಗಕ್ಕೆ ಮಗುಚಿ ಬಿದ್ದ ಪರಿಣಾಮ ವಾಹನದ ಮುಂದಿನ ಗ್ಲಾಸ್ ಜಖಂಗೊಂಡಿರುತ್ತದೆ. ಈ ಅಪಘಾತದಿಂದ ಪಿರ್ಯಾದಿದಾರರಿಗೆ ಯಾವುದೇ ನೋವು ಆಗಿರುವುದಿಲ್ಲ, ಚಾಲಕ ಅಶೋಕ ನಿಗೆ ತರಚಿದ ಗಾಯವಾಗಿರುತ್ತದೆ. ಮನೋಹರ ರವರಿಗೆ ಎಡಕೈ ಮುಂಗೈ ಬಳಿ ಮೂಳೆ ಮುರಿತವಾಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 29/2023 ಕಲಂ:  279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿದಾರರಾದ ಸಾಧಿಕ್‌ , ತಂದೆ: ಶಬ್ಬೀರ್‌ ಸಾಹೇಬ, ವಾಸ: 3-109 ಶಿವ ಪಂಚಾಕ್ಷರಿ  ಭಜನಾ ಮಂದಿರದ ಹತ್ತಿರ  ಕೊಳ,ಮಲ್ಪೆ ಇವರು ಮಲ್ಪೆ ಬಂದರಿನಲ್ಲಿರುವ ಶಬ್ಬೀರ್ ಸಾಹೇಬ್ ರವರ ಉಸ್ತುವಾರಿಯಲ್ಲಿರುವ ಹಿಮಗಿರಿ ಮೀನುಗಾರಿಕಾ ಬೋಟಿನ ನಂಬ್ರ KA 02 IND MM5156 ರಲ್ಲಿ ಕನ್ನಿ ಪಾರ್ಟಿಯಾಗಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು. ಪಿರ್ಯಾದಿದಾರರು ಕೆಲಸ ಮಾಡುವ ಹಿಮಗಿರಿ ಬೋಟು ಸುಮಾರು 4 ದಿನಗಳ ಹಿಂದೆ ಪೈಂಟಿಂಗ್ ಕೆಲಸದ ಬಗ್ಗೆ ಪಡುಕೆರೆ ಕಚೇರಿಯಲ್ಲಿ ಪೈಂಟಿಂಗ್ ನ ಬಗ್ಗೆ ನೆಲದ ಮೇಲೆ ನಿಲ್ಲಿಸಿ ಕೆಲಸ ಮಾಡುತ್ತಿರುವುದಾಗಿದೆ.  ದಿನಾಂಕ 16/05/2023 ರಂದು ಬೆಳಿಗ್ಗೆ 10:15 ಗಂಟೆಗೆ ಪಿರ್ಯಾದಿದಾರರು ,ಉಮೇಶ್ , ಮಹೇಶ್, ಅಮಿತ್, ರಾಜೀವ ಇವರೊಂದಿಗೆ ಮಲ್ಪೆ ಪಡುಕೆರೆಯ ಕಚೇರಿಯಲ್ಲಿ ನೆಲದ ಮೇಲೆ ನಿಲ್ಲಿಸಿದ್ದ  ಹಿಮಗಿರಿ ಮೀನುಗಾರಿಕಾ ಬೋಟಿಗೆ ಪೈಂಟ್ ಮಾಡಿ ನಂತರ ಸುಮಾರು 8 ಅಡಿ ಎತ್ತರದಲ್ಲಿ ರಾಡರ್ ನ ಮೇಲೆ ಕುಳಿತು  ಬೋಟಿನ ಎದುರು ಬದಿಗೆ ಟಯರ್ ಕಟ್ಟುವ ಸಮಯ ಪಿರ್ಯಾದಿದಾರರು ಹಿಡಿದಿದ್ದ ಹಗ್ಗ ತುಂಡಾಗಿ ಆಯತಪ್ಪಿ ರಡಾರ್‌ನ ಮೇಲಿಂದ ನೆಲಕ್ಕೆ ಬಿದ್ದ ಪಿರ್ಯಾದಿದಾರರನ್ನು ಜೊತೆಗೆ  ಕೆಲಸ ಮಾಡುವವರು ಉಪಚರಿಸಿ ಚಿಕಿತ್ಸೆ ಬಗ್ಗೆ  ಉಡುಪಿ ಆದರ್ಶ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿರುತ್ತಾರೆ. ಪಿರ್ಯಾದಿದಾರರು ರಡಾರ್‌ನ ಮೇಲಿಂದ ಬಿದ್ದ ಪರಿಣಾಮ ಕುತ್ತಿಗೆಯ ಹಿಂಬದಿಯ ಪ್ರಮುಖ ನರಕ್ಕೆ  ತೀವ್ರತರದ ಒಳಜಖಂ ಉಂಟಾಗಿ ಇದರಿಂದ ಪಿರ್ಯಾದಿದಾರರ ಎರಡೂ ಕೈ ಮತ್ತು ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದು, ಈ ಘಟನೆಗೆ ಬೋಟಿನ ಉಸ್ತುವಾರಿ ನೋಡಿಕೊಳ್ಳುವ ಶಬ್ಬೀರ್ ಸಾಹೇಬರು ಪಿರ್ಯಾದಿದಾರರಿಗೆ ರಡಾರ್ ನ ಮೇಲೆ ಕುಳಿತುಕೊಂಡು ಬೋಟಿಗೆ ಟಯರ್ ಕಟ್ಟಲು ಹೇಳಿ ಕೆಲಸಕ್ಕೆ ಬೇಕಾಗುವ ಯಾವುದೇ ಜೀವ ರಕ್ಷಕ ಸಾಧನಗಳನ್ನು ಒದಗಿಸದೇ ನಿರ್ಲಕ್ಷ್ಯತನ ತೋರಿದ್ದರಿಂದ ಈ ಘಟನೆ ಸಂಭವಿಸಿದ್ದು ಇದಕ್ಕೆ ಶಬ್ಬೀರ್ ಸಾಹೇಬರೇ  ಕಾರಣವಾಗಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 48/2023 ಕಲಂ: 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಪಡುಬಿದ್ರಿ: ಪಿರ್ಯಾದಿದಾರರಾದ ಗುರುದತ್ ಶೆಣೈ (32), ತಂದೆ: ದಿ. ಪದ್ಮನಾಭ ಶೆಣೈ, ವಾಸ: ಶೆಣೈ ನಿವಾಸ, ಕೆನರಾ ಬ್ಯಾಂಕ್ ಬಳಿ, ತೆಂಕ ಎರ್ಮಾಳು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರು ಮಂಗಳೂರು ಯೂನಿವರ್ಸಿಟಿಯಲ್ಲಿ ಎಂ.ಕಾಂ. ವ್ಯಾಸಂಗ ಮಾಡಿಕೊಂಡಿದ್ದು, ಅವರು ದಿನಾಂಕ 16/05/2023 ರಂದು ಅವರ ತಾಯಿ ಯೋಗಿನಿ ನಾಯಕ್, ಅಕ್ಕ ಸೌಮ್ಯ ಭಟ್ ಹಾಗೂ ಅಕ್ಕನ ಮಗ ವಿಕಾಸ್ ಭಟ್ ಎಂಬುವವರೊಂದಿಗೆ ಅವರ ಪರಿಚಯದ ಭರತ್ ಎಂಬುವವರ KA-21-B-4498 ನೇ ನಂಬ್ರದ ರಿಕ್ಷಾದಲ್ಲಿಕಾಪುವಿನ ಮಾರಿಗುಡಿ ದೇವಸ್ಥಾನಕ್ಕೆ ಮನೆಯಿಂದ ಹೊರಟು, ರಾಷ್ಟ್ರೀಯ ಹೆದ್ದಾರಿ-66 ರ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸಾಗುವ ಏಕಮುಖ ಸಂಚಾರ ರಸ್ತೆಯಲ್ಲಿ ಹೋಗುತ್ತಾ 12:45 ಗಂಟೆಗೆ ಕಾಪು ತಾಲೂಕು ತೆಂಕ ಎರ್ಮಾಳು ಗ್ರಾಮದ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಎದುರು ರಿಕ್ಷಾ ಚಾಲಕ ಭರತನು ತನ್ನ ರಿಕ್ಷಾವನ್ನು ಅತೀ ವೇಗವಾಗಿ ಚಲಾಯಿಸುತ್ತಾ ರಿಕ್ಷಾದ ಎದುರು ಹೋಗುತ್ತಿದ್ದ KA-20-MA-3053  ನೇ ನಂಬ್ರದ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾವು ರಸ್ತೆಗೆ ಮಗುಚಿ ಬಿದ್ದಿರುತ್ತದೆ.  ಅಪಘಾತದಿಂದ ಪಿರ್ಯಾದಿದಾರರ ಎಡಕಾಲಿಗೆ ಮೂಳೆ ಮುರಿತದ ಗಾಯ, ಅವರ ತಾಯಿ ಯೋಗಿನಿ ನಾಯಕ್ ರವರ ಬಲಕೈಗೆ ಒಳ ಜಖಂ, ಸೌಮ್ಯ ಭಟ್‌‌ ರವರ ಮೂಗಿಗೆ ರಕ್ತಗಾಯ, ವಿಕಾಸ್‌ ಭಟ್‌‌ನ ಎಡಕೈ ಮೊಣಗಂಟಿಗೆ ಗಾಯವಾಗಿದ್ದು, ರಿಕ್ಷಾ ಚಾಲಕ ಭರತ್‌ನಿಗೂ ಮುಖಕ್ಕೆ ಗಾಯವಾಗಿರುತ್ತದೆ. ನಂತರ ಗಾಯಾಳುಗಳನ್ನು ಚಿಕಿತ್ಸೆಯ ಬಗ್ಗೆ ಅಂಬ್ಯುಲೆನ್ಸ್ ಒಂದರಲ್ಲಿ ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಸೌಮ್ಯ ಭಟ್ ಹಾಗೂ ವಿಕಾಸ್‌ ಭಟ್ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದು, ಪಿರ್ಯಾದಿದಾರರು ಹಾಗೂ ಯೋಗಿನಿ ನಾಯಕ್ ಒಳರೋಗಿಗಳಾಗಿ ದಾಖಲಾಗಿರುತ್ತಾರೆ.  ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 60/2023, ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ಹರೀಶ್‌‌‌‌‌‌ಭಂಡಾರಿ  (36), ತಂದೆ ಶೀನ  ಭಂಡಾರಿ, ಮೂಡುಗಿಳಿಯಾರು,  ಗಿಳಿಯಾರು  ಗ್ರಾಮ ಕೋಟ,  ಬ್ರಹ್ಮಾವರ  ತಾಲೂಕು ಇವರು  ದಿನಾಂಕ  17/05/2023  ರಂದು 17:00  ಗಂಟೆಗೆ ತನ್ನ ಮೋಟಾರು  ಸೈಕಲ್‌‌‌‌ನಲ್ಲಿ  ಮೂಡುಗಿಳಿಯಾರಿನ ಹಳೆ  ಪಶು ಆಸ್ಪತ್ರೆಯ  ಎದುರು  ಕುಂದಾಪುರ- ಉಡುಪಿ  ರಾಷ್ಟ್ರೀಯ ಹೆದ್ದಾರಿ  66  ಕ್ಕೆ  ಸೇರುವಾಗ,   ಕುಂದಾಪುರ  -  ಉಡುಪಿ  ರಾಷ್ಟ್ರೀಯ ಹೆದ್ದಾರಿ  66  ರಲ್ಲಿ  ಕುಂದಾಪುರ  ಕಡೆಯಿಂದ  ಉಡುಪಿ  ಕಡೆಗೆ  ನಂಬ್ರ KA-20-MD-8041 ಕಾರನ್ನು ಅದರ  ಚಾಲಕ  ರಾಘವೇಂದ್ರ ಎಂಬುವವರು ಅತೀವೇಗ  ಹಾಗೂ  ನಿರ್ಲಕ್ಷತನದಿಂದ  ಚಲಾಯಿಸಿಕೊಂಡು  ಬಂದು  ರಸ್ತೆ  ಬದಿಯಲ್ಲಿ  ರಸ್ತೆ  ದಾಟಲು  ನಿಂತಿದ್ದ  ಶಂಕರ  ಎಂಬುವವರಿಗೆ  ಡಿಕ್ಕಿ  ಹೊಡೆದ  ಪರಿಣಾಮ  ಶಂಕರ ರವರು  ಎಸೆಯಲ್ಪಟ್ಟು  ರಸ್ತೆ  ಮೇಲೆ  ಬಿದ್ದ ಪರಿಣಾಮ ಶಂಕರ ರವರ ತಲೆ,  ಮುಖ,  ದೇಹದ ಇತರ  ಭಾಗಗಳಿಗೆ  ತೀವ್ರ  ತರದ  ರಕ್ತ  ಗಾಯವಾಗಿರುತ್ತದೆ.  ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 95/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣ

  • ಕಾರ್ಕಳ:  ದಿನಾಂಕ 16/05/2023 ರಂದು ರಾತ್ರಿ 11:00 ಗಂಟೆಗೆ ಪಿರ್ಯಾದಿದಾರರಾದ ಸಾಧು (50), ತಂದೆ:ಶೀನ, ವಾಸ: ರಾಜೀವಗಾಂಧಿ ನಗರ, ಕುಜುಮಾರುಗುಡ್ಡೆ, ಸಾಣೂರು ಗ್ರಾಮ, ಕಾರ್ಕಳ ತಾಲೂಕು ಇವರ ಮಗ ಅಪಾದಿತ ಹರ್ಷಿತ್‌ ಮನೆಯ ಜಾಗದ ಪಾಲಿನ ವಿಚಾರದಲ್ಲಿ ಗಲಾಟೆ ಮಾಡಿ ಕೋಪದಿಂದ ಮನೆಯಲ್ಲಿದ್ದ ಕೋಳಿಬಾಳಿ ನಿಂದ ಪಿರ್ಯಾದಿದಾರರ ಸೊಂಟದ ಎಡಭಾಗಕ್ಕೆ ತಿವಿದು ಗಾಯಗೊಳಿಸಿರುವುದಲ್ಲದೇ, ಬಲಗೈ ಮೊಣಗಂಟಿಗೆ ಕಚ್ಚಿರುತ್ತಾನೆ. ಅಪಾದಿತನು ಪಿರ್ಯಾದಿದಾರರಿಗೆ ಹೊಡೆಯುವುದನ್ನು ನೋಡಿ ಮನೆಯಲ್ಲಿರುವವರು ತಡೆದು ಪಿರ್ಯಾದಿದಾರರನ್ನು ಚಿಕಿತ್ಸೆ ಬಗ್ಗೆ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಿ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಜಿಲ್ಲಾ ಆಸ್ಪತ್ರೆ ಉಡುಪಿಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 63/2023  ಕಲಂ: 324 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 18-05-2023 09:29 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080