ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಹಿರಿಯಡ್ಕ: ಪಿರ್ಯಾದಿ: ಪ್ರಕಾಶ್ ಶೆಟ್ಟಿ (37) ತಂದೆ: ಅಣ್ಣಿ ಶೆಟ್ಟಿ ವಾಸ: ಪ್ರಮೀಳಾ ನಿವಾಸ, ಕಾಮೇರಗುತ್ತು, ಕುಂಡಿಬೈಲು , ಮಿಯಾರು ಗ್ರಾಮ  ಇವರು ಹಾಗೂ ಅವರ ತಮ್ಮ ಪ್ರವೀಣ್ ಶೆಟ್ಟಿರವರು ಖಾಸಗಿ ಕೆಲಸದ ನಿಮಿತ್ತಾ ತನ್ನಮನೆಯಿಂದ ಉಡುಪಿಗೆಂದು ಪ್ರವೀಣ್ ಶೆಟ್ಟಿಯವರ ಬಾಬ್ತು ಮೊಟಾರು ಸೈಕಲ್ ನಂಬ್ರ KA-20-HA-2236 ನ್ನು ಸವಾರಿ ಮಾಡುತ್ತಾ ಪಿರ್ಯಾದುದಾರರು ಸಹ ಸವಾರರಾಗಿ ಕುಳಿತು ಉಡುಪಿಗೆ ಹೋಗುತ್ತಿರುವಾಗ 11:50 ಗಂಟೆಗೆ ಹಿರಿಯಡ್ಕ ಬಳಿಯ ಕೋಟ್ನಕಟ್ಟೆ ಸುರೇಶ್ ನಾಯಕ್‌ರವರ ಅಂಗಡಿ ಬಳಿ ತಲುಪುವಾಗ್ಗೆ ತನ್ನ ಹಿಂದಿನಿಂದ ಅಂದರೆ ಕಾರ್ಕಳ ಕಡೆಯಿಂದ ಉಡುಪಿ ಕಡೆಗೆ ಕಾರು ನಂ KA-25-Z-6161 ನ್ನು ಅದರ ಚಾಲಕ ಸತೀಶ್ ರಾವ್ ರವರು ನಿರ್ಲಕ್ಷ್ಯತನದಿಂದ ರಸ್ತೆಯ  ತೀರಾ ಎಡಬದಿಗೆ ಚಲಾಯಿಸಿ ಡಿಕ್ಕಿ ಹೊಡೆದ  ಪರಿಣಾಮ ಮೋಟಾರು ಸೈಕಲ್ ರಸ್ತೆಗೆ ಬಿದ್ದು ಪಿರ್ಯಾದಿಯ ತಮ್ಮ ಪ್ರವೀಣ್  ಶೆಟ್ಟಿಯವರ ಬಲಕಾಲಿನ ಕೋಲು ಕಾಲಿಗೆ  ಹಾಗೂ ತಲೆಯ ಬಲಬದಿಗೆ ರಕ್ತಗಾಯವಾಗಿರುವುದಲ್ಲದೆ, ಪಿರ್ಯಾದುದಾರರ ಎಡಕೈ ಮೊಣಗಂಟಿಗೆ ಮತ್ತು  ಎಡಬದಿಯ ತಲೆಗೆ ಗುದ್ದಿದ ಒಳಜಖಂ ಉಂಟಾಗಿರುತ್ತದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ಠಾಣೆ. ಅಪರಾಧ ಕ್ರಮಾಂಕ  35/2023  ಕಲಂ 279, 337, ಐಪಿಸಿ ಯಂತೆ  ಪ್ರಕರಣ ದಾಖಲಿಸಲಾಗಿದೆ.

ವಂಚನೆ ಪ್ರಕರಣ

 • ಉಡುಪಿ : ದಿನಾಂಕ:17.05.2023 ರಂದು ಪಿರ್ಯಾದಿ: ಮಹಾದೇವ, ಪ್ರಾಯ:33 ವರ್ಷ, ತಂದೆ:ಜೋಗಯ್ಯ ಪೂಜಾರಿ, ವಾಸ: ಹೊಸಒಕ್ಲಲು ಮನೆ, ನೀರಗದ್ದೆ, ಶಿರೂರು, ಬೈಂದೂರು ತಾಲೂಕು , ಇವರು ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆ ಯಲ್ಲಿ ದಾಖಲಾತಿಗಾಗಿ ಗೂಗಲ್ ನ ಸಹಾಯದಿಂದ ಸಂಪರ್ಕ ಸಂಖ್ಯೆಯನ್ನು ಹುಡುಕಿದಾಗ ನಂಬ್ರ: 7667844106 ದೊರೆತಿದ್ದು, ಆತನಿಗೆ ಕರೆ ಮಾಡಿ ವಿಚಾರ ಹೇಳಿದಲ್ಲಿ ಇನ್ನೊಂದು ದೂರವಾಣಿ ಸಂಖ್ಯೆ  9162124966 ನೇದರ ಮೂಲಕ ಕಸ್ಟಮರ್ ಸಫೋರ್ಟ (1.0) ಆ್ಯಪ್ ನ್ನು ವಾಟ್ಸ್ ಅಪ್ ಮೂಲಕ ಕಳುಹಿಸಿ ಅದರಲ್ಲಿ ವಿವರಗಳನ್ನು ಪೂರ್ಣಗೊಳಿಸಲು ಸೂಚಿಸಿ, ಹಣ ಪಾವತಿಸುವಂತೆ ತಿಳಿಸಿದ ಮೇರೆಗೆ ಫಿರ್ಯಾದಿದಾರರು ಇದನ್ನು ನಂಬಿಕೊಂಡು ಫೋನ್ ಫೇ ಮುಖೇನ ಪಾಸ್ ವರ್ಡ ನ್ನು ಹಾಗೂ ಆ ವ್ಯಕ್ತಿ ಕಲುಹಿಸಿದ ಓಟಿಪಿ ಸಂಖ್ಯೆ ಯನ್ನು ಕೂಡ ನಮೂದಿಸಿದ್ದು, ಆ ನಂತ್ರ ಅಪಾಯಿಂಟ್ ಮೆಂಟ್ ಕೋಡ್ ನ್ನು ಕಳುಹಿಸಿ ಮಾರನೆಯ ದಿನ ಆಸ್ಪತ್ರೆಗೆ ಬರುವಂತೆ ತಿಳಿಸಿದ್ದು, ಈ ದಿನ ದಿನಾಂಕ: 18-05-2023 ರಂದು ಬೆಳಿಗ್ಗೆ 10:20 ಗಂಟೆಗೆ ಫಿರ್ಯಾದಿಯ ಕರ್ನಾಟಕ ಬ್ಯಾಂಕ್ ಹಟ್ಟಿಯಂಗಡಿ ಶಾಖೆಯ ಎಸ್.ಬಿ ಖಾತೆಯಿಂದ ಕ್ರಮವಾಗಿ, ರೂ.88,880/-, 9,532/-, 1,580/- ರಂತೆ ಒಟ್ಟು ರೂ. 99,992/- ಹಣವನ್ನು .ಮೋಸದಿಂದ ವರ್ಗಾಯಿಸಿಕೊಂಡು ನಷ್ಟ ಉಂಟು ಮಾಡಿರುವುದಾಗಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ  95/2023 ಕಲಂ: 66(C), 66(D) ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಿಸಲಾಗಿದೆ.
 • ಉಡುಪಿ: ದಿನಾಂಕ 17.05.2023 ರಂದು ಪಿರ್ಯಾದಿ: ರಕ್ಷ, ಪ್ರಾಯ 30 ವರ್ಷ, ಗಂಡ: ಸಚಿನ್ ಕುಮಾರ್, ವಾಸ: ಸಿದ್ದಿವಿನಾಯಕ, 3 ನೇ ಕ್ರಾಸ್, ದಶರಥ ನಗರ, ಮಣಿಪಾಲ ಇವರು ವಾಟ್ಸ್ ಅಪ್ ನಲ್ಲಿ ಮೊಬೈಲ್ ನಂಬ್ರ +639463098830 ನಿಂದ ಟಾಸ್ಕ್ ಉಧ್ಯೋಗ ನಡೆಸಿ, ಕಮಿಶನ್ ಮತ್ತು ಹೆಚ್ಚಿನ ಹಣ ಪಡೆಯುವ ಬಗ್ಗೆ ಸಂದೇಶವನ್ನು ನಂಬಿ, ಟೆಲಿಗ್ರಾಮ್ ಆಫ್ ಮುಖೇನ ಸಂಪರ್ಕಿಸಿದಲ್ಲಿ ಆರೋಪಿಗಳು ಟಾಸ್ಕ್ ಬಗ್ಗೆ ಹಣ ಪಾವತಿಸುವಂತೆ ಬ್ಯಾಂಕ್ ಖಾತೆಗಳನ್ನು ಹಾಗೂ UPI ಐ.ಡಿ.ಗಳನ್ನು ನೀಡಿದ್ದು, ಇದನ್ನು ಸತ್ಯವೆಂದು ನಂಬಿದ ಪಿರ್ಯಾದಿದಾರರು ದಿನಾಂಕ 17.05.2023 ರಂದು UPI ಮುಖೇನ ಕ್ರಮವಾಗಿ ರೂ. 5,000/-, 23,500/- ಮತ್ತು ರೂ. 68,000/- ವರ್ಗಾವಣೆ ಮಾಡಿದ್ದು, ಅಲ್ಲದೇ ರೂ. 1,96,000/- ಹಣವನ್ನು IMPS ಮುಖೇನ ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗೆ ವರ್ಗಾಯಿಸಿರುತ್ತಾರೆ. ಒಟ್ಟು 2,92,500/- ಹಣವನ್ನು ಆರೋಪಿಗಳ ಖಾತೆಗೆ ಆನ್ ಲೈನ್ ಮುಖೇನ ವರ್ಗಾವಣೆ ಮಾಡಿರುತ್ತಾರೆ. ಆದರೆ, ಆರೋಪಿಗಳು ಆನ್ ಲೈನ್ ಮುಖೇನ ಟಾಸ್ಕ್ ನಡೆಸುವ ಉಧ್ಯೋಗ ನೀಡುವುದಾಗಿ ಮತ್ತು ಕಮಿಶನ್ ನೀಡುವ ಬಗ್ಗೆ ನಂಬಿಸಿ ಪಿರ್ಯಾದಿದಾರರಿಂದ ಒಟ್ಟು ರೂ. 2,95,500/- ನ್ನು ಪಡೆದು ಉಧ್ಯೋಗವನ್ನೂ ನೀಡದೇ ಪಡೆದ ಹಣವನ್ನು ವಾಪಾಸು ನೀಡದೇ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ : 94/2023 ಕಲಂ: 66(C), 66(D) ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಿಸಲಾಗಿದೆ.
 • ಉಡುಪಿ: ಪಿರ್ಯಾದಿ: ಪಿ. ಅಪ್ರಾಯ ಶೆಟ್ಟಿಗಾರ್, ಪ್ರಾಯ 72 ವರ್ಷ, ತಂದೆ: ತಿಮ್ಮ ಶೆಟ್ಟಿಗಾರ್, ವಾಸ: ಅಲಕಾ ಮನೆ ನಂಬ್ರ 6-109/A, ಮುಖ್ಯ ರಸ್ತೆ, ಹೆರ್ಗಾ ಗ್ರಾಮ, ಪರ್ಕಳ ಇವರ ಮಗ ಅವಿನಾಶ್ ಶೆಟ್ಟಿಗಾರ್ ಇವರು ಮಣಿಪಾಲದ ಕೆನರಾ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದು, ಅದಕ್ಕೆ ಮೊಬೈಲ್ ನಂಬ್ರ 9880734951 ನೇದನ್ನು ಲಿಂಕ್ ಮಾಡಲಾಗಿದ್ದು, ಸದ್ರಿ ಬ್ಯಾಂಕ್ ಖಾತೆಯ ಮತ್ತು ಸಿಮ್ ನ ವ್ಯವಹಾರವನ್ನು ಪಿರ್ಯಾದಿದಾರರೇ ನೋಡಿಕೊಳ್ಳುತ್ತಿದ್ದು, ದಿನಾಂಕ 18.05.2023 ರಂದು ಮಧ್ಯಾಹ್ನ 3:00 ಗಂಟೆಗೆ ಪಿರ್ಯಾದಿದಾರರು ಬಳಸುತ್ತಿದ್ದ ಮೇಲಿನ ಮೊಬೈಲ್ ನಂಬ್ರಕ್ಕೆ ಅಪರಿಚಿತ ಮೊಬೈಲ್ ನಂಬ್ರ +919661674382 ನೇದರಿಂದ ಯಾರೋ ಅಪರಿಚಿತ ಕರೆ ಮಾಡಿ ತಾನು ಕೆನರಾ ಬ್ಯಾಂಕ್ ಸಿಬ್ಬಂದಿ ಎಂಬುದಾಗಿ ಹೇಳಿ, ಮೇಲಿನ ಬ್ಯಾಂಕ್ ಖಾತೆ ನಿಷ್ಕ್ರೀಯಗೊಂಡಿದೆ ಕೂಡಲೇ ಕೆ.ವೈ.ಸಿ. ಅಪ್‌‌ಡೇಟ್ ಮಾಡಬೇಕು ಎಂಬುದಾಗಿ ಪಿರ್ಯಾದಿದಾರರನ್ನು ನಂಬಿಸಿ, ಪಿರ್ಯಾದಿದಾರರಿಂದ ಕಾರ್ಡ್ ನಂಬ್ರ ಹಾಗೂ ಓ.ಟಿ.ಪಿ. ನಂಬ್ರ ಪಡೆದು, ಕ್ರಮವಾಗಿ 98,500/- ಮತ್ತು ರೂ. 8,500/- ರಂತೆ ಒಟ್ಟು ರೂ. 1,07,000/- ಹಣವನ್ನು ಆನ್ ಲೈನ್ ಮುಖೇನ ಮೋಸದಿಂದ ವರ್ಗಾವಣೆ ಮಾಡಿ ನಷ್ಟ ಉಂಟುಮಾಡಿರುವುದಾಗಿದೆ. ಈ ಬಗ್ಗೆ  ಉಡುಪಿ ಸೆನ್ ಅಪರಾಧ ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ: 96/2023 ಕಲಂ: 66(C), 66(D) ಐ.ಟಿ. ಆಕ್ಟ್ರಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಬ್ರಹ್ಮಾವರ: ಬ್ರಹ್ಮಾವರ ತಾಲೂಕು, ಮಟಪಾಡಿ  ಗ್ರಾಮದ, ಮಟಪಾಡಿ ಎಂಬಲ್ಲಿ ಪಿರ್ಯಾದಿ: ಉಪೇಂದ್ರ ಗಾಣಿಗ  (55), ತಂದೆ: ಮಂಜುನಾಥ ಗಾಣಿಗ ವಾಸ: ಡೊರ್ ನಂಬ್ರ 4-1 ಸುಮತಿ ಫಾರ್ಮನ  ಎದುರು ಚಾಂತಾರು  ಗ್ರಾಮ, ಬ್ರಹ್ಮಾವರ ಇವರ ತಂದೆ ಮಂಜುನಾಥ ಗಾಣಿಗ ಪ್ರಾಯ:88 ವರ್ಷ ಎಂಬುವರು  ತಮ್ಮ ಹೆಂಡತಿ ಮರಣ ಹೊಂದಿದ ಬಳಿಕ  ಒಬ್ಬಂಟಿಯಾಗಿ ವಾಸವಾಗಿದ್ದು, ಅವರು ಯಾವುದೋ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ:17/05/2023 ರಂದು ಸಂಜೆ 5:00 ಗಂಟೆಯಿಂದ  ದಿನಾಂಕ:18/05/2023 ರಂದು ಬೆಳಿಗ್ಗೆ 11:30 ಗಂಟೆಯ ಮಧ್ಯಾವಧಿಯಲ್ಲಿ ಅವರು ವಾಸವಿದ್ದ ಮನೆಯ ಹಾಲ್ ನ ಜಂತಿಗೆ ಹಗ್ಗವನ್ನು ಕಟ್ಟಿ ಇನ್ನೊಂದು ನೇಣನ್ನು ಕುತ್ತಿಗೆಗೆ ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ  ಬ್ರಹ್ಮಾವರ ಠಾಣೆ  ಯುಡಿಆರ್ ನಂ. 40/2023 ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಮಲ್ಪೆ: ಪಿರ್ಯಾದಿ: ಗಂಗಾಧರ (50) ತಂದೆ: ಮುತ್ತಪ್ಪ ಕಾಂಚನ್‌ ವಾಸ: ಕೋಡಿಬೇಂಗ್ರೆ ಇವರ ತಮ್ಮ  ದಿನೇಶ ಕುಂದರ್‌  ಪ್ರಾಯ: 48 ವರ್ಷ ಇತನು INDKA-02MM5882 ನೀಲಾವರ  ಪ್ರಸಾದ್‌   ಬೋಟಿನಲ್ಲಿ  ದಿನಾಂಕ: 17-05-2023 ರಂದು ಬೆಳಿಗ್ಗೆ 4:00 ಗಂಟೆಗೆ   ಮೀನುಗಾರಿಕೆ  ಬಗ್ಗೆ ಮಲ್ಪೆ ಬಂದರಿನಿಂದ  ಹೊರಟು  ಸಮುದ್ರ ಮಧ್ಯದಲ್ಲಿ  ಮೀನುಗಾರಿಕೆ ಮಾಡುತ್ತಿರುವಾಗ  ಅಸ್ವಸ್ಥಗೊಂಡವರನ್ನು  ಬೋಟಿನವರು ಸಂಜೆ 5:00 ಗಂಟೆಗೆ ಮಲ್ಪೆ  ಬಂದರಿಗೆ  ಕರೆದುಕೊಂಡು ಬಂದಿರುತ್ತಾರೆ.  ಪಿರ್ಯಾದಿದಾರರ ತಮ್ಮ ದಿನೇಶ ಕುಂದರ್‌ ಸಂಜೆ 6:30 ಗಂಟೆಗೆ  ಕೆಮ್ಮಣ್ಣು ಪಡುಕುದ್ರಿನಲ್ಲಿರುವ ತನ್ನ ಮನೆಗೆ ಬಂದಾಗ ತನಗೆ  ಏನೋ ಕಚ್ಚಿದ ಹಾಗೆ  ಆಗಿದೆ ಎಂದು   ಹೆಂಡತಿಗೆ ಹೇಳಿ  ಕುಸಿದು ಬಿದ್ದಾಗ  ನೆರೆಕೆರೆಯವರೆಲ್ಲ ಸೇರಿ ಉಡುಪಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ  ವೈದ್ಯರು ಈಗಾಗಲೆ  ಮೃತಪಟ್ಟಿರುವುದಾಗಿ  ತಿಳಿಸಿರುತ್ತಾರೆ.  ಪಿರ್ಯಾದಿದಾರರ ತಮ್ಮ  ಅನಾರೋಗ್ಯದಿಂದಲೋ ಅಥವಾ ಇತರೆ ಯಾವುದೋ ಕಾರಣದಿಂದ  ಮೃತಪಟ್ಟಿರಬಹುದು. ಈ ಬಗ್ಗೆ ಮಲ್ಪೆಠಾಣಾ ಯು.ಡಿ.ಆರ್ ನಂಬ್ರ 25/2023 ,ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಹೆಬ್ರಿ: ಪಿರ್ಯಾದಿ: ವಿನೋದ ಪ್ರಾಯ: 47 ವರ್ಷ , ಗಂಡ: ಸುರೇಶ್‌ ಪೂಜಾರಿ ವಾಸ: ಹೆರ್ಗಲ್ಲು ಚಾರಾ ಗ್ರಾಮ ಹೆಬ್ರಿ ತಾಲೂಕು ಇವರ ಗಂಡ ಸುರೇಶ್ ಪೂಜಾರಿ (52 ವರ್ಷ) ಇವರು ವಿಪರೀತ ಮದ್ಯಪಾನ ಮಾಡುವ ಚಟವನ್ನು ಹೊಂದಿ ಯಾವಾಗಲೂ ಮನೆಯವರಲ್ಲಿ ತಾನು ಸಾಯುತ್ತೇನೆಂದು  ತಾನು ಸಾಯುತ್ತೇನೆಂದು ಹೇಳಿ ಮಾನಸಿಕ ಖಿನ್ನತೆಗೆ ಒಳಗಾಗಿ ದಿನಾಂಕ; 18/05/2023 ರಂದು ಮುಂಜಾನೆ 02-00 ಗಂಟೆಯಿಂದ ಮುಂಜಾನೆ 06-30 ಗಂಟೆಯ ಮದ್ಯವಾದಿಯಲ್ಲಿ ಚಾರಾ ಗ್ರಾಮದ ಹೇರ್ಗಲ್ಲು ಎಂಬಲ್ಲಿ ಮೃತರ ವಾಸದ ಮನೆಯಿಂದ ಸುಮಾರು 200 ಮೀಟರ್ ದೂರದಲ್ಲಿರುವ ಒಂದು ಮಾವಿನ ಮರದ ಕೊಂಬೆಗೆ ನೈಲಾನ್ ಹಗ್ಗವನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ಬಿಗಿದು ನೇಣು ಅತ್ಮಹತ್ಯೆ ಮಾಡಿಕೊಂಡಿದ್ದು. ಅವರು ಬದುಕಿರ ಬಹುದೆಂದು ಪಿರ್ಯಾದಿದಾರರು ನೈಲಾನ್ ಹಗ್ಗವನ್ನು ಕತ್ತಿಯಿಂದ ತುಂಡು ಮಾಡಿದಾಗ ಮೃತದೇಹವು ಕೆಳಗೆ ನೆಲದ ಮೇಲೆ ಬಿದ್ದ ಪರಿಣಾಮ ಮೃತರ ಬೆನ್ನಿನ ಹಿಂಬದಿ , ಬಲಕಿವಿಯ ಬಳಿ ಮತ್ತು ಎಡಕೈಯ ಬಳಿ ಗಾಯವಾಗಿರುವು ದಾಗಿಯೂ ಮೃತರ ಮರಣದಲ್ಲಿ ಯಾವುದೇ ಸಂಶಯವಿರುದಿಲ್ಲ. ಈ  ಬಗ್ಗೆ ಹೆಬ್ರಿ ಪೊಲೀಸ್ ಠಾಣೆ UDR NO 15/2023 U/s 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಮಣಿಪಾಲ: ಪಿರ್ಯಾದಿ: ರೇಖಾವರ್‌ ರಾಜು(55)ತಂದೆ: ಉಮಾಂಕಾಂತ , ವಾಸ:  5-55/2 ದುರ್ಕಿ  B C ಕಾಲೋನಿ, ಬಿರರರಕುರ್‌ ಮಂಡಲ್‌ , ನಿಜಾಮಾಬಾದ್‌ ಗ್ರಾಮ, ನಸರುಲ್ಲಾ ಬಾದ್‌ ಜಿಲ್ಲೆ, ತೆಲಂಗಾಣ, ಇವರ  ಮಗನಾದ  ಆರ್ ಸಂಪತ ಕುಮಾರ್ ಪ್ರಾಯ: 33 ವರ್ಷ ಇವರು ಮಣಿಪಾಲದ ಕೆನರಾ ಬ್ಯಾಂಕ್ ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್  ಆಗಿ ಕೆಲಸಮಾಡಿಕೊಂಡಿದ್ದು, ದಿನಾಂಕ: 16.05.2023 ರಂದು ರಾತ್ರಿ 03:00 ಗಂಟೆಯಿಂದ ದಿನಾಂಕ: 17.05.2023 ರಂದು 01:00 ಗಂಟೆಯ ಮಧ್ಯಾವಧಿಯಲ್ಲಿ  ತಾನು ವಾಸಿಸುತ್ತಿದ್ದ ಉಡುಪಿ ತಾಲೂಕು ಹೆರ್ಗಾ ಗ್ರಾಮದ ಶ್ರೀ ದೇವಿ ಎಕ್ ಕ್ಲೇವ್  ಅಪಾರ್ಟಮೆಂಟ್ ನ ಪ್ಲಾಟ್ ನಂ: 406 ರಲ್ಲಿ ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಪ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ,  ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್‌‌ನಂಬ್ರ 24/2023 ಕಲಂ: 174  ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 18-05-2023 06:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080