ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಕಿರಣ್ ಶೆಟ್ಟಿ (27), ತಂದೆ:ನಾರಾಯಣ ಶೆಟ್ಟಿ, ವಾಸ: ಮಾದಮ್ಮ ನಿಲಯ , ಬೊಳಂಬಳ್ಳಿ, ಕಾಲ್ತೋಡು ಗ್ರಾಮ , ಬೈಂದೂರು ತಾಲೂಕು ಇವರು ದಿನಾಂಕ 17/05/2022 ರಂದು ಮಧ್ಯಾಹ್ನ 1:30 ಗಂಟೆಗೆ ಮುರೂರಿನಿಂದ ಅರೆಹೊಳೆ ಕಡೆಗೆ  ಕಾರಿನಲ್ಲಿ  ಸ್ನೇಹಿತರೊಂದಿಗೆ ಬರುತ್ತಾ ಕಾಲ್ತೋಡು ಗ್ರಾಮದ ಹಾಲಗೇರಿ ನಂದೀಕೇಶ್ವರ ದೇವಸ್ಥಾನದಿಂದ ಸ್ವಲ್ಪ ಮುಂದಕ್ಕೆ ಬರುತ್ತಿರುವಾಗ  ಬೊಳಂಬಳ್ಳಿ  ಕ್ರಾಸ್ ರಸ್ತೆಯ ಕಡೆಯಿಂದ ಮೋಟಾರು ಸೈಕಲ್ ನಂಬ್ರ KA-20-EV-0452 ನೇದರಲ್ಲಿ  ವಿಜಯ ಶೆಟ್ಟಿ ಎಂಬುವವರು ಲಲಿತಾ ಶೆಡ್ತಿ ಎಂಬುವವರನ್ನು  ಸಹ ಸವಾರಳಾಗಿ ಕುಳ್ಳಿರಿಸಿಕೊಂಡು ಮೂರೂರು  ಕಡೆಗೆ  ಮೋಟಾರು ಸೈಕಲ್ ನಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಂದೀಕೇಶ್ವರ ದೇವಸ್ಥಾನದಿಂದ ಸ್ವಲ್ಪ ಮುಂದಕ್ಕೆ ಹಾಲಗೇರಿ ಎಂಬಲ್ಲಿ ಮುರೂರು - ಅರೆಹೊಳೆ ರಸ್ತೆಯಲ್ಲಿ  ಹೊಂಡವನ್ನು ತಪ್ಪಿಸಲು ವಿಜಯ ಶೆಟ್ಟಿಯವರು ಮೋಟಾರು ಸೈಕಲ್ ಗೆ ಒಮ್ಮೇಲೇ ಬ್ರೇಕ್  ಹಾಕಿದ ಪರಿಣಾಮ ಸಹ ಸವಾರಳಾಗಿ ಕುಳಿತಿದ್ದ  ಲಲಿತಾ ಶೆಡ್ತಿ ರವರು ಮೋಟಾರು ಸೈಕಲ್ ನಿಂದ ಹಿಮ್ಮುಖವಾಗಿ  ಉರುಳಿ ಬಿದ್ದು ತಲೆಯ ಹಿಂಭಾಗ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು  ಪಿರ್ಯಾದಿದಾರರು  ಇತರರೊಂದಿಗೆ ಗಾಯಾಳುವನ್ನು ಚಿಕಿತ್ಸೆಬಗ್ಗೆ  108 ಅಂಬುಲೆನ್ಸ್ ನಲ್ಲಿ  ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ  ಕರೆದುಕೊಂಡು ಹೋಗಿ ನಂತರ ಕುಂದಾಪುರ ಸರಕಾರಿ ಆಸ್ಪತ್ರೆಗೆ  ಕರೆದುಕೊಂಡು ಹೋದಲ್ಲಿ  ವೈದ್ಯರು  ಪರೀಕ್ಷಿಸಿ  ಮೃತಪಟ್ಟಿರುವುದಾಗಿ ದೃಡೀಕರಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 96/2022 ಕಲಂ: 279, 304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 16/05/2022 ರಂದು ಪಿರ್ಯಾದಿದಾರರಾದ ರೇಶ್ಮ ಬಿ ಹೆಗ್ಡೆ (40), ಗಂಡ: ಬೃಜೇಶ್ ಹೆಗ್ಡೆ,  ವಾಸ: ಅಂಬ ನಿವಾಸ ನೆಹರು ನಗರ ಮಣಿಪಾಲ ಉಡುಪಿ ತಾಲೂಕು ಇವರ ತಂದೆ ಗೋಪಾಲ ಶೆಟ್ಟಿ ರವರೊಂದಿಗೆ ವಾಕಿಂಗ್‌‌‌ಗೆ ಹೋರಟು ಡಿ.ಸಿ ಕಛೇರಿ ಕಡೆಯಿಂದ ಸಿಂಡಿಕೇಟ್ ಸರ್ಕಲ್ ಕಡೆಗೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೊಗುತ್ತಿದ್ದಾಗ ಇಂದಿರಾ ಕ್ಯಾಂಟಿನ್  ಬಳಿ 18:30 ಗಂಟೆಗೆ KA-20-C-6303 DTDC Parcel ವಾಹನದ ಚಾಲಕರು ವಾಹನವನ್ನು ಡಿ.ಸಿ ಕಚೇರಿ ಕಡೆಯಿಂದ ಸಿಂಡಿಕೇಟ್ ಸರ್ಕಲ್ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಗೋಪಾಲ ಶೆಟ್ಟಿಯವರಿಗೆ ಡಿಕ್ಕಿ ಹೊಡೆದು ನಿಲ್ಲಿಸದೇ ಪರಾರಿಯಾಗಿದ್ದು,  ಡಿಕ್ಕಿ ಹೊಡೆದ ಪರಿಣಾಮ ಗೋಪಾಲ ಶೆಟ್ಟಿಯವರು ರಸ್ತೆಗೆ ಬಿದ್ದು ತಲೆಯ ಹಿಂಬದಿಗೆ ರಕ್ತ ಗಾಯವಾಗಿರುತ್ತದೆ, ಅವರು ಕೆಎಂಸಿ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 67/2022 ಕಲಂ: 279, 338 ಐಪಿಸಿ ಮತ್ತು 134 (A)(B) ಜೊತೆಗೆ 187 IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ.  

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಪರಶುರಾಮ್‌ ಸಾಲಿಯಾರ್‌ (29), ತಂದೆ: ನಿಂಗಪ್ಪ ಕೊಳಿಹಾಳ, ವಾಸ: ಆಜನೇಯ ದೇವಸ್ಥಾನದ ಬಳಿ, ಕೊಳಿಹಾಳ ಗ್ರಾಮ, ಹುಣಸಗಿ ತಾಲೂಕು, ಯಾದಗಿರಿ ಜಿಲ್ಲೆ ಇವರ ಮಾಲೀಕತ್ವದ ಹೀರೋ ಹೊಂಡಾ ಸ್ಪ್ಲೆಂಡರ್‌ಪ್ರೋ ನಂಬ್ರ KA-33-R-2584 (Chassis No: MBLHA10A3EHG69638, Engine No: HA10ELEHG31765) ನೇದನ್ನು ಪಿರ್ಯಾದಿದಾರರ ಬಾವ ಶಂಕ್ರಪ್ಪ ಇಸಾಂಪುರ ರವರು ಕೆಲಸದ ನಿಮಿತ್ತ ಉಡುಪಿಗೆ ತೆಗೆದುಕೊಂಡು ಬಂದಿದ್ದು, ದಿನಾಂಕ 20/04/2022 ರಂದು ಬೆಳಿಗ್ಗೆ 07:00 ಗಂಟೆಯಿಂದ ಬೆಳಿಗ್ಗೆ 10:00 ಗಂಟೆ ಮಧ್ಯಾವಧಿಯಲ್ಲಿ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಉಡುಪಿ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಬಳಿ ಪಾರ್ಕ್‌ ಮಾಡಿರುವುದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟಾರ್‌ಸೈಕಲ್‌ನ  ಮೌಲ್ಯ ರೂಪಾಯಿ 35,000/- ಆಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 81/2022 ಕಲಂ : 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಶಿರ್ವಾ: ದಿನಾಂಕ 17/05/2022  ರಂದು ರಾಘವೇಂದ್ರ ಸಿ, ಪೊಲೀಸ್ ಉಪನಿರೀಕ್ಷಕರು (ಕಾ&ಸು), ಶಿರ್ವಾ ಪೊಲೀಸ್‌ ಠಾಣೆ ಇವರು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಶಿರ್ವ ಗ್ರಾಮದ ಮುಟ್ಲುಪಾಡಿ ಎಂಬಲ್ಲಿ ಗುಡ್ಡ ಪ್ರದೇಶದಲ್ಲಿ ಮೊಹಮ್ಮದ್ ಇಸ್ಮಾಯಿಲ್‌ಸರ್ಪರಾಜ್‌ ಎಂಬಾತನು ದನವನ್ನು ಮಾಂಸ  ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಕಟ್ಟಿ ಹಾಕಿರುತ್ತಾನೆ  ಎಂಬುದಾಗಿ ಬಂದ ಮಾಹಿತಿ ಮೇರೆಗೆ ಮುಟ್ಲುಪಾಡಿ ಎಂಬಲ್ಲಿಗೆ ತಲುಪಿದಾಗ ಒಬ್ಬ ವ್ಯಕ್ತಿ ಸ್ಥಳದಲ್ಲಿದ್ದು ಆಸುಪಾಸು  ನೋಡಿದಾಗ ಒಂದು ಕಂದು ಬಣ್ಣದ  ದನ ಮಲಗಿರುವ ಸ್ಥಿತಿಯಲ್ಲಿ ಇರುವುದು ಕಂಡು  ಬಂದಿದ್ದು, ಸ್ಥಳದಲ್ಲಿದ್ದ ವ್ಯಕ್ತಿಯಲ್ಲಿ ವಿಚಾರಿಸಲಾಗಿ ಆತನು ತನ್ನ ಹೆಸರು ಮೊಹಮ್ಮದ್ ಇಸ್ಮಾಯಿಲ್ ಸರ್ಪರಾಜ್ (22 ), ತಂದೆ: ಅಬ್ದುಲ್ ಹಮೀದ್, ವಾಸ: ದಾರುಲ್ಲಾ ಅಮೀನ್ ತೋಪನಂಗಡಿ , ಶಿರ್ವಾ  ಗ್ರಾಮ ಮತ್ತು ಅಂಚೆ  ಕಾಪು ತಾಲೂಕು ಉಡುಪಿ ಜಿಲ್ಲೆ ಎಂದು  ತಿಳಿಸಿದ್ದಲ್ಲದೆ  ಈತನಲ್ಲಿ ಸ್ಥಳದಲ್ಲಿದ್ದ ದನದ ಬಗ್ಗೆ  ಕೂಲಂಕುಷವಾಗಿ ವಿಚಾರಿಸಿದಾಗ ಆತನು ತನ್ನ ಸ್ನೇಹಿತ ಮೊಹಮ್ಮದ್‌ಖಾಲಿದ್ (38), ತಂದೆ: ಕೈರುನ್ ಬಾವ, ವಾಸ: ತೋಪನಂಗಡಿಹೌಸ್, ಶಿರ್ವಾ ಅಂಚೆ   ಮತ್ತು  ಗ್ರಾಮ ಕಾಪು  ತಾಲೂಕು. ಉಡುಪಿ ಜಿಲ್ಲೆ ಮತ್ತು ತಾನು ಸೇರಿ ದಿನಾಂಕ 17/05/2022 ರಂದು ಬೆಳಿಗ್ಗೆ 09:00  ಗಂಟೆ  ಸುಮಾರಿಗೆ   ಎಡ್ಮೇರ್‌ಜುಮಾದಿ ಸಾನದ ಸಮೀಪ ರಸ್ತೆ  ಬಳಿ ಇದ್ದ ದನವನ್ನು ಕಳವು ಮಾಡಿ ಓಮಿನಿ ಕಾರಿಗೆ ತುಂಬಿಸಿ ಮಾಂಸ ಮಾಡಿ ಮಾರಾಟ ಮಾಡಲು ಇಲ್ಲಿಗೆ  ತಂದಿರಿಸಿರುವುದಾಗಿ  ತಿಳಿಸಿದನು. ಮೊಹಮ್ಮದ್‌ ಖಾಲಿದ್‌ ಬಗ್ಗೆ ವಿಚಾರಿಸಿದಾಗ ಆತನು  ದನವನ್ನು  ತುಂಬಿಸಿಕೊಂಡು  ಬಂದಿದ್ದ ಓಮಿನಿ  ಕಾರಿನಲ್ಲಿ  ಮನೆಗೆ  ಹೋಗಿ  ಬರುವುದಾಗಿ ತಿಳಿಸಿ ಹೋಗಿರುತ್ತಾನೆ ಎಂದು  ತಿಳಿಸಿದನು. ಸ್ಥಳದಲ್ಲಿದ್ದ  ದನವನ್ನು ಪರಿಶೀಲಿಸಲಾಗಿ ಕಂದು ಬಣ್ಣದಿಂದ ಕೂಡಿದ ಹೆಣ್ಣು ದನ ಆಗಿರುತ್ತದೆ.  ಹೆಣ್ಣು ದನದ ಕುತ್ತಿಗೆಯು ಉಳಿಕಿದ್ದು ನಿತ್ರಾಣ ಸ್ಥಿತಿಯಲ್ಲಿರುವುದು  ಕಂಡು ಬಂದಿರುತ್ತದೆ.  ಹೆಣ್ಣು ದನದ ಮೌಲ್ಯ 5,000/- ಆಗಿರುತ್ತದೆ.  ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 25/2022, ಕಲಂ: 4, 5, 12 THE KARNATAKA PREVENTION OF SLAUGHTER AND PRESERVATION OF CATTLE ACT-2020, 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 16/05/2022 ರಂದು ಬೆಳಿಗ್ಗೆ 11:00 ಗಂಟೆಗೆ ಪಿರ್ಯಾದಿದಾರರಾದ ಗೋಪಿ (82), ಗಂಡ: ಪಿ.ಆನಂದದಾಸ್‌, ವಾಸ: ರಾಜರಾಜೇಶ್ವರಿ ನಿಲಯ, ನಿಟ್ಟೂರು ಶಾಲೆಯ ಬಳಿ, ತಾಂಗದಗಡಿ, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಇವರು ಮನೆಯಲ್ಲಿರುವಾಗ ಆರೋಪಿತರಾಧ 1) ಪೂರ್ಣಿಮ, 2) ಸಂಧ್ಯಾ, 3) ವಿಠಲದಾಸ ಇವರು ಒಟ್ಟು ಸೇರಿ ಪಿರ್ಯಾದಿದಾರರ ಮನೆಗೆ ಬಂದು ಪಿರ್ಯಾದಿದಾರರಿಗೆ ಹಾಗೂ ಅವರ ಮಗ ವೆಂಕಟರಾಜ್‌ರವರಿಗೆ ಮರದ ಕೋಲಿನಿಂದ ಹಲ್ಲೆ ಮಾಡಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 83/2022 ಕಲಂ : 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಮಣಿಪಾಲ: ಪಿರ್ಯಾದಿದಾರರಾದ ಪಿ.ಎನ್ ರವಿಂದ್ರ ರಾವ್ (56), ತಂದೆ: ಪಿ.ಎನ್ ಕೃಷ್ಣಮೂರ್ತಿ ರಾವ್, ವಾಸ: ಭಗತ್ಸಿಂಗ್ ಮಾರ್ಗ 4-4-121 ಅಜ್ಜರಕಾಡು ಉಡುಪಿ ತಾಲೂಕು ಮತ್ತು ಜಿಲ್ಲೆ  ಹಾಗೂ ಅವರ ಸ್ನೇಹಿತ ಜಗದೀಶ ಶೆಟ್ಟಿಗಾರ ರವರು ಪಿರ್ಯಾದಿದಾರರ ತಂದೆಯ ಪೆರಂಪಳ್ಳಿಯ ಅಂಬಡೆಬೆಟ್ಟಿ ಎಂಬಲ್ಲಿನ ಜಾಗಕ್ಕೆ ದಿನಾಂಕ 17/05/2022 ರಂದು ಹೋಗಿದ್ದು ಸಂಜೆ 15:45 ಗಂಟೆಗೆ ಹೆರಾಲ್ಡ್ ಡಿಸೋಜಾ ಒಂದು ಮರದ ಸೊಂಟೆ ಹಿಡಿದುಕೊಂಡು ಪಿರ್ಯಾದಿದಾರರು ಇದ್ದಲ್ಲಿಗೆ ಬಂದು  ಅವಾಚ್ಯವಾಗಿ ಬೈದು ಜಗದೀಶ್ ಶೆಟ್ಟಿಗಾರವರಿಗೆ ಹೊಡೆದಿದ್ದು ತಡೆಯಲು ಹೋದ ಪಿರ್ಯಾದಿದಾರರಿಗೆ ಹಣೆಗೆ ಮೂಗಿಗೆ ಹಾಗೂ ಮೈ ಕೈಗೆ ಹೋಡೆದು ರಕ್ತ ಗಾಯಪಡಿಸಿರುತ್ತಾರೆ , ಪಿರ್ಯಾದಿದರರು ಚಿಕಿತ್ಸೆ ಬಗ್ಗೆ ಅಜ್ಜರಕಾಡು ಆಸ್ಪತ್ರೆಗೆ ದಾಖಲಾಗಿರುತ್ತಾರೆ, ಅಲ್ಲದೆ ಜಗದೀಶ ಶೆಟ್ಟಿಗಾರ ರವರನ್ನು  ಹೆರಾಲ್ಡ್ ಡಿಸೋಜಾ ಹಾಗೂ ಇತರರು ಸೇರಿ ಹಿಡಿದುಕೊಂಡಿದ್ದರು ಎಂಬುದಾಗಿ ನೀಡಿದ ದೂರಿನಂತೆ 68/2022, ಕಲಂ: 504, 324 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 18-05-2022 09:59 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080