ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

  • ಕಾರ್ಕಳ:ದಿನಾಂಕ 17/05/22 ರಂದು ಪಿರ್ಯಾದಿ ಸತೀಶ .ಕೆ ವರು ತನ್ನ ಬಾಬ್ತು ಮೋಟಾರ್ ಸೈಕಲ್ ನಲ್ಲಿ ನಕ್ರೆಯಿಂದ ಕಲ್ಯಾ ಕಡೆಗೆ ಸವಾರಿ ಮಾಡಿಕೊಂಡು   ಹೋಗುತ್ತಿದ್ದ ಸಮಯ  ಸುಮಾರು 16:35 ಗಂಟೆಗೆ ನಿಟ್ಟೆ ಗ್ರಾಮದ ಕಲ್ಲಂಬಾಡಿ ಪದವು ಗುಳಿಗನ  ಕಟ್ಟೆಯ ಬಳಿ ತಿರುವಿನಲ್ಲಿ ಅದೇ ದಿಕ್ಕಿನಲ್ಲಿ ಅಂದರೆ ನಕ್ರೆ ಕಡೆಯಿಂದ ಕಲ್ಯ ಕಡೆಗೆ ಬರುತ್ತಿದ್ದಾಗ ಈಚರ್ ಲಾರಿ ನಂಬ್ರ KA 20 D 3527 ನೇದರ ಚಾಲಕ ಅತೀ ವೇಗ ಹಾಗೂ ಅಜಾರುಕತೆಯಿಂದ ಆತನ ತೀರ ಬಲಬದಿಗೆ ಚಲಾಯಿಸಿಕೊಂಡು ಹೋಗಿ ಕುಂಟಾಡಿಯಿಂದ ನಿಟ್ಟೆ ಪದವು ಕಡೆಗೆ ಪಿರ್ಯಾದಿದಾರರ ಅಣ್ಣ ಸುರೇಶ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಆಟೋ ರಿಕ್ಷಾ ನಂಬ್ರ KA 20 AB1392 ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಎಡಮಗ್ಗುಲಾಗಿ ಬಿದ್ದು ಜಖಂ ಆಗಿದ್ದು ಅಪಘಾತದಿಂದ ಯಾರಿಗೂ ಯಾವುದೇ ಗಾಯ ನೋವು ಆಗಿರುವುದಿಲ್ಲ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 60/2022 ಕಲಂ: 279  ಐಪಿಸಿ ರಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕಾರ್ಕಳ : ಪಿರ್ಯಾದಿ ರಾಮಚಂದ್ರ ಇವರು ದಿನಾಂಕ: 17.05.2022 ರಂದು KA04HS2352 ನೇ ನೋಂದಣಿ ಸಂಖ್ಯೆಯ ಹೊಂಡಾ ಆ್ಯಕ್ಟೀವಾ ಕಂಪನಿಯ ಸ್ಕೂಟರ್ ನಲ್ಲಿ ಪುಲ್ಕೇರಿ ಬೈಪಾಸ್ ನ ಪೆಟ್ರೋಲ್ ಬಂಕ್ ನಿಂದ ಬೋರ್ಕಟ್ಟೆಗೆ ಹೊರಟು  ಸಮಯ ಸುಮಾರು ಮದ್ಯಾಹ್ನ 1:45 ಗಂಟೆಗೆ ಪುಲ್ಕೇರಿ-ಪಡುಬಿದ್ರೆ ರಸ್ತೆಯ ಬೈಪಾಸ್ ವೃತ್ತವನ್ನು ಕ್ರಾಸ್ ಮಾಡಲು ನಿಂತುಕೊಂಡಿರುವಾಗ ಮೂಡಬಿದ್ರೆ ಕಡೆಯಿಂದ ಕಾರ್ಕಳ ಕಡೆಗೆ ಯತೀಶ ಕಿರಣ ಸಿ ರಾವ್ ಎಂಬುವವರು KA70H0517 ನೇ ನೋಂದಣಿ ಸಂಖ್ಯೆಯ ಕೆಂಪು ಬಣ್ಣದ ಪಲ್ಸರ್ ಮೋಟರ್ ಸೈಕಲ್ ನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್ ನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು, ಪರಿಣಾಮ ಪಿರ್ಯಾದಿದಾರರ ಬಲಗಾಲಿನ ಮೊಣಗಂಟಿನ ಕೆಳಗೆ ಹಾಗೂ ಪಾದದ ಹಿಂಭಾಗ ಒಳಜಖಂಗೊಂಡಿರುತ್ತದೆ. ಚಿಕಿತ್ಸೆ ಬಗ್ಗೆ ನಿಟ್ಟೆ ಗಾಜರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 75/2022 ಕಲಂ: 279, 338  ಐಪಿಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕುಂದಾಪುರ: ದಿನಾಂಕ 18/05/2022 ರಂದು  ಬೆಳಿಗ್ಗೆ ಸುಮಾರು 11:50 ಗಂಟೆಗೆ  ಕುಂದಾಪುರ  ತಾಲೂಕಿನ, ಕೋಡಿ ಬೀಚ್‌ ಬಳಿಯ, ಕಿನಾರಾ ಬಾರ್  ಹತ್ತಿರ ರಸ್ತೆಯಲ್ಲಿ, ಆಪಾದಿತ ರೋಶನ್‌  ಪೂಜಾರಿ  ಎಂಬವರು KA20AB-3144 ನೇ ಅಟೋರಿಕ್ಷಾವನ್ನು   ಹಳೆಅಳಿವೆ  ಕಡೆಯಿಂದ  ಕೋಡಿ  ಕಡೆಗೆ  ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು, ರಸ್ತೆ ದಾಟುತ್ತಿದ್ದ  11 ವರ್ಷದ ತ್ರಿಷಾಳಿಗೆ  ಡಿಕ್ಕಿ ಹೊಡೆದ  ಪರಿಣಾಮ,  ತ್ರಿಷಾಳಿಗೆ   ತಲೆಗೆ ಒಳಜಖಂ ರಕ್ತಗಾಯ, ಕೈ ಕಾಲುಗಳಿಗೆ ತರಚಿದ ಗಾಯಗಳಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಪ್ರಥಮ  ಚಿಕಿತ್ಸೆ  ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ  ಉಡುಪಿ ಆದರ್ಶ ಆಸ್ಪತ್ರೆಗೆ   ಹೋಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 64/2022 ಕಲಂ: 279, 338  ಐಪಿಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.  

ಹಲ್ಲೆ ಪ್ರಕರಣ

  • ಕಾರ್ಕಳ: ಪಿರ್ಯಾದುದಾರರಾದ ಶ್ರೀಮತಿ ರುಕ್ಕುರವರು ಪರಿಶಿಷ್ಟ ಜಾತಿಯ ಆದಿದ್ರಾವಿಡ ಜನಾಂಗಕ್ಕೆ ಸೇರಿದವರಾಗಿದ್ದು ಅವರು ದಿನಾಂಕ: 11/05/2022 ರಂದು ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ಕೊಡಿಮಾರು ಗುಂಡಾವು ಎಂಬಲ್ಲಿ ಅಬ್ರಾಹಂ ಎಂಬವರ ಮನೆಯ ತೋಡಿನ ಕಸಕಡ್ಡಿ ತೆಗೆಯುವ ಕೆಲಸಕ್ಕೆ ಹೋಗಿದ್ದು,  ಸಂಜೆ ಸುಮಾರು 5:00 ಗಂಟೆಗೆ ಮಣ್ಣನ್ನು ತೆಗೆಯುತ್ತಿರುವಾಗ ಆರೋಫಿ ಪ್ರಕಾಶ್ ಡಿಸೋಜಾನು ಅಲ್ಲಿಗೆ ಬಂದು ಏಕಾಏಕಿ ಪಿರ್ಯಾದುದಾರರಿಗೆ ಜಾತಿನಿಂದನೆ ಮಾಡಿ ಸೀಯಾಳದ ಚಿಪ್ಪಿನಿಂದ ಹಲ್ಲೆ ಮಾಡಿ ಪಿರ್ಯಾದುದಾರರು ಕೆಲಸ ಮಾಡುತ್ತಿದ್ದ ಹಾರೆಯನ್ನು ಎಳೆದು ಅದರಿಂದ ಹಲ್ಲೆ ಮಾಡಲು ಪ್ರಯತ್ನಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 61/2022 ಕಲಂ: 324 ಭಾದಸಂ ಮತ್ತು ಕಲಂ: 3(1)(s), 3(2)(v-a) SCST Act ರಂತೆ ಪ್ರಕರಣ ದಾಖಲಾಗಿರುತ್ತದೆ. 

ಕೊಲೆ ಪ್ರಕರಣ

  • ಶಂಕರನಾರಾಯಣ: ಆರೋಪಿ ಸುರೇಂದ್ರನಾಯ್ಕ ಕಟ್ಟೆಕೊಡ್ಲು ವಂಡಾರು ಗ್ರಾಮ ಬ್ರಹ್ಮಾವರ ತಾಲೂಕು ಈತನು ಸುಮಾರು 15 ವರ್ಷದ ಹಿಂದೆ  ಫಿರ್ಯಾದಿ ಶ್ರೀಮತಿ   ಜಯಂತಿ   ಇವರ  ಅಕ್ಕ  ಶ್ರೀಮತಿ  ಅನಿತಾ ಇವಳನ್ನು  ಮದುವೆ  ಆಗಿ   ಬ್ರಹ್ಮಾವರ   ತಾಲೂಕಿನ ವಂಡಾರು  ಗ್ರಾಮದ  ಕಟ್ಟೆಕೊಡ್ಲು  ಎಂಬಲ್ಲಿ       ವಾಸವಾಗಿರುತ್ತಾನೆ, ಆರೋಪಿಯು ಅನಿತಾ ಹಾಗೂ ಮಕ್ಕಳಿಗೆ ಯಾವಾಗಲೂ ವಿಪರೀತವಾಗಿ   ಹೊಡೆಯುತ್ತಿದ್ದನು, ಅದರಂತೆ ದಿನಾಂಕ   17.05.2022  ರಂದು ಸುಮಾರು  20;30 ಘಂಟೆಗೆ ಆರೋಪಿಯು ಮನೆಯಲ್ಲಿ  ಅನಿತಾ  ಇವಳಿಗೆ   ಹಲ್ಲೆ ಮಾಡಿ  ಕೊಲೆ  ಮಾಡಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 50/20221   ಕಲಂ:  302,  498(A)  ಐಪಿಸಿ ರಂತೆ ಪ್ರಕರಣ ದಾಖಲಾಗಿರುತ್ತದೆ. 

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿ ರಾಜೇಶ್‌ರಾವ್‌ ಇವರ ಮಾಲೀಕತ್ವದ ಹೊಂಡಾ ಡಿಯೋ ಸ್ಕೂಟರ್‌ ನಂಬ್ರ: KA20EV2357 (Cha ssisNo: ME4JF984CLG007026, Engine No: JF98EG1008303) ನೇದನ್ನು ದಿನಾಂಕ: 17/05/2022 ರಂದು 17:28 ಗಂಟೆಗೆ ಪಿರ್ಯಾದುದಾರರು ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಬನ್ನಂಜೆ ಎಸ್‌ಬಿಐ ಎಟಿಎಂ ಎದುರು ನಿಲ್ಲಿಸಿ ಕೀ ಯನ್ನು ಗಾಡಿಯಲ್ಲಿ ಇಟ್ಟು ಎಟಿಎಂ ಗೆ ಹೋಗಿದ್ದು, 17:30 ಗಂಟೆಗೆ  ವಾಪಾಸು ಬಂದು ನೋಡಿದಾಗ ಸ್ಕೂಟರ್‌ ನಿಲ್ಲಿಸಿದ ಜಾಗದಲ್ಲಿ ಇಲ್ಲದೆ ಇದ್ದು, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸ್ಕೂಟರ್‌ನ ಅಂದಾಜು ಮೌಲ್ಯ ರೂ. 60,000/- ಆಗಬಹುದು ಎಂಬಿತ್ಯಾದಿ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 84/2022 ಕಲಂ : 379  ಐಪಿಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.  

 ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ: ಪಿರ್ಯಾದಿ ಪ್ರಕಾಶ  ಇವರ  ತಮ್ಮ  ಪ್ರತಾಪ್  ಪ್ರಾಯ 32 ವರ್ಷ ಇವರು  ದಿನಾಂಕ 18-05-2022   ರಂದು  ದೋಣಿಯಲ್ಲಿ  ಮೀನುಗಾರಿಕೆ  ಹೋಗಿ ವಾಪಸ್ಸು   ತನ್ನ ಅಕ್ಕನ ಮಗ ಕಿರಣ್ ರವರ ಸ್ಕೂಟಿಯಲ್ಲಿ   ಹಿಂಬದಿಯಲ್ಲಿ  ಕುಳಿತುಕೊಂಡು   ಕಂಬಳತೋಟಕ್ಕೆ  ಹೋಗುವಾಗ   ಬೆಳಿಗ್ಗೆ  8-30  ಗಂಟೆಗೆ  ಪ್ರತಾಪ್ ಒಮ್ಮಲೇ   ಕಿರಣ್  ರವರ ಬೆನ್ನಿಗೆ ಬಿದ್ದು ಮಾತನಾಡದೆ   ಅಸ್ವಸ್ಥ ಗೊಂಡಿದ್ದು  ಆತನನ್ನು  ಕೂಡಲೆ   ಚಿಕಿತ್ಸೆ  ಬಗ್ಗೆ   ಕಲ್ಯಾಣಪುರ  ಗೊರಾಠಿ ಅಸ್ಪತ್ರೆಗೆ   ಕರೆದುಕೊಂಡು  ಬಂದು  ಚಿಕಿತ್ಸೆ  ನೀಡಿ ಹೆಚ್ಚಿನ ಚಿಕಿತ್ಸೆಗೆ  ಬಗ್ಗೆ  ಉಡುಪಿ ಹೈಟೆಕ್ ಆಸ್ಪತ್ರೆಗೆ   ಕರೆದುಕೊಂಡು  ಬಂದಾಗ  ವೈದ್ಯರು ಪರೀಕ್ಷಿಸಿ   ಪ್ರತಾಪ್  ಈಗಾಗಲೇ ಮೃತಪಟ್ಟಿರುವುದಾಗಿ  ಬೆಳಿಗ್ಗೆ 09-15   ಗಂಟೆಗೆ ವೈದ್ಯರು ತಿಳಿಸಿರುತ್ತಾರೆ. ಪ್ರತಾಪ್ ಸುಮಾರು  3 ವರ್ಷಗಳಿಂದ  ಉಸಿರಾಟ ತೊಂದರೆಯಿಂದ  ಬಳಲುತ್ತಿದ್ದು ಈ  ಬಗ್ಗೆ  ಈ ಬಗ್ಗೆ  ಕಲ್ಯಾಣಪುರ  ಗೊರಾಠಿ ಅಸ್ಪತ್ರೆ   ಮತ್ತು  ಹೈಟೆಕ್ ಆಸ್ಪತ್ರೆಯಲ್ಲಿ  ಚಿಕತ್ಸೆ  ಪಡೆದಿರುತ್ತಾರೆ. ಪ್ರತಾಪ್  ರವರು  ಸ್ಕೂಟಿಯಲ್ಲಿ  ಹೋಗುವಾಗ  ಹೃದಯಾಘತ ಆಥವಾ ಇನ್ಯಾವುದೋ   ಕಾರಣದಿಂದ  ಮೃತಪಟ್ಟಿರಬಹುದು.  ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 29/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಇತರ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿ ಪ್ರವೀಣ್‌ ಕುಮಾರ್‌ ಶೆಟ್ಟಿ ಇವರ ಸಂಬಂಧಿಕರಾದ ಆರೋಪಿತ 1] ವಿಜಯ್‌ ಕುಮಾರ್‌ ಶೆಟ್ಟಿ, (54), ತಂದೆ: ದಿ. ಮಹಾಬಲ ಶೆಟ್ಟಿ, ವಾಸ: ಸಂಕಾಡಿ, ಮೇಲ್ಮನೆ, ಕಾವಡಿ ಗ್ರಾಮ & ಅಂಚೆ, ಬ್ರಹ್ಮಾವರ ತಾಲೂಕು. 2] ಮೀನಾ ವಿ ಶೆಟ್ಟಿ (50), ಗಂಡ: ವಿಜಯ್‌ ಕುಮಾರ್‌ ಶೆಟ್ಟಿ, ವಾಸ: ಸಂಕಾಡಿ, ಮೇಲ್ಮನೆ, ಕಾವಡಿ ಗ್ರಾಮ & ಅಂಚೆ, ಬ್ರಹ್ಮಾವರ ತಾಲೂಕು ಇವರುಗಳು ವ್ಯವಹಾರದ ಉದ್ದೇಶಕ್ಕಾಗಿ ಪಿರ್ಯಾದಿದಾರರ ಬಳಿ ರೂ 16,65,000/- ಸಾಲಕ್ಕಾಗಿ ಮನವಿ ಮಾಡಿ ಹಣವನ್ನು ಎಂಟು ತಿಂಗಳ ಒಳಗಾಗಿ ಮರುಪಾವತಿಸುವುದಾಗಿ ವಾಗ್ದಾನ ಮಾಡಿದ್ದರಿಂದ, ಪಿರ್ಯಾದಿದಾರರು ಆರೋಪಿಗಳ ಮಾತನ್ನು ನಂಬಿ 2021ರ ಜನವರಿ ತಿಂಗಳಿನಿಂದ ನಿರಂತರವಾಗಿ ಹಣವನ್ನು ಅವರ ಸ್ಟೇಟ್‌ ಬ್ಯಾಂಕ್‌ ಇಂಡಿಯಾ ಬ್ರಹ್ಮಾವರ  ಶಾಖೆಯ ಖಾತೆಯ ಚೆಕ್‌ ಸಂಖ್ಯೆ 235748 ರ ಮೂಲಕ ರೂ. 4,50,000/- ಹಣವನ್ನು, ಚೆಕ್‌ ಸಂಖ್ಯೆ 235749ರ ಮೂಲಕ ರೂ. 3,00,000/- ಹಣವನ್ನು, ಚೆಕ್‌ ಸಂಖ್ಯೆ 235751 ರ ಮೂಲಕ ರೂ. 3,00,000/- ಹಣವನ್ನು , ಚೆಕ್‌ ಸಂಖ್ಯೆ 235750 ರ ಮೂಲಕ ರೂ. 3,00,000/- ಹಣವನ್ನು 1 ನೇ ಆರೋಪಿತನ ಹೆಸರಿಗೂ ಹಾಗೂ ಎಸ್‌ಬಿಐ  ಬ್ರಹ್ಮಾವರ  ಶಾಖೆಯ ಖಾತೆಯ ಚೆಕ್‌ ಸಂಖ್ಯೆ 674511 ಮೂಲಕ 3,15,000/- ಹಣವನ್ನು 2ನೇ ಆರೋಪಿತೆಯ ಹೆಸರಿಗೂ ಒಟ್ಟು ರೂ. 16,65,000/- ಹಣವನ್ನು ಆರೋಪಿತರರಿಗೆ ಚೆಕ್‌ಗಳ  ಮೂಲಕ ನೀಡಿರುತ್ತಾರೆ. ಆರೋಪಿತರು ಪಿರ್ಯಾದಿದಾರರಿಗೆ ಹೇಳಿದಂತೆ ಎಂಟು ತಿಂಗಳು ಕಳೆದರೂ ಹಣವನ್ನು ಮರು ಪಾವತಿ ಮಾಡದಿದ್ದಾಗ, ಪಿರ್ಯಾದಿದಾರರು ಆರೋಪಿತರ ಬಳಿ ಹಣವನ್ನು ಕೇಳಿದಾಗಲೆಲ್ಲ ಆರೋಪಿಗಳು ಪ್ರತಿ ಬಾರಿಯೂ ಏನಾದರು ಸಬೂಬು ಹೇಳಿ ಪಿರ್ಯಾದಿದಾರರನ್ನು ನಂಬಿಸಿ ಹಣವನ್ನು ವಾಪಾಸ್ಸು ನೀಡಿರುವುದಿಲ್ಲ, ಪಿರ್ಯಾದಿದಾರರು ಹಣವನ್ನು ವಾಪಾಸ್ಸು ನೀಡುವಂತೆ ಪಟ್ಟು ಹಿಡಿದಾಗ, ಆರೋಪಿಗಳು ಪಿರ್ಯಾದಿದಾರರ ವಿರುದ್ದ ಪೊಲೀಸ್‌ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿರುತ್ತಾರೆ. ಆರೋಪಿತರು ಪಿರ್ಯಾದುದಾರರಿಗೆ ಮೋಸ ಮಾಡುವ ಉದ್ಧೇಶದಿಂದ ಅವರಿಂದ ಸಾಲವನ್ನು ಪಡೆದು ಅದನ್ನು ವಾಪಾಸ್ಸು ನೀಡದೆ ವಂಚಿಸಿ ಫಿರ್ಯಾದುದಾರರಿಗೆ ಆರ್ಥಿಕವಾಗಿ ನಷ್ಟವುಂಟು ಮಾಡಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 87/2022 ಕಲಂ : 406, 417, 418, 420 ಐಪಿಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 18-05-2022 06:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080