ಅಭಿಪ್ರಾಯ / ಸಲಹೆಗಳು

ಮಾಧಕ ವಸ್ತು ಸೇವನೆ ಪ್ರಕರಣ

  • ಉಡುಪಿ: ದಿನಾಂಕ 15/04/2023 ರಂದು 10:00 ಗಂಟೆ ಸುಮಾರಿಗೆ ಉಡುಪಿ ತಾಲೂಕು, ಶಿವಳ್ಳಿ ಗ್ರಾಮದ ಪ್ರಥಮ್ ಪ್ರೈಡ್ ಅಪಾರ್ಟ್‌ಮೆಂಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತುವನ್ನು ಸೇವಿಸಿರುವಂತೆ ಕಂಡು ಬಂದ ವ್ಯಕ್ತಿಯನ್ನು ಅಶೋಕ್ ಪೊಲೀಸ್ ಉಪ-ನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ ರವರು ವಶಕ್ಕೆ ಪಡೆದ್ದು, ಆತನ ಸಮ್ಮತಿ ಪಡೆದು, ಮೆಡಿಕಲ್ ತಪಾಸಣೆಗೊಳಪಡಿಸಿ, ದಿನಾಂಕ 18/04/2023  ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ಬಂದಿರುವ ತಜ್ಞ ವರದಿಯನ್ನು ಸ್ವೀಕರಿಸಿ, ವರದಿಯಲ್ಲಿ ಆರೋಪಿ ಮೊಹಮ್ಮದ್ ಇಮಾದ್ ಈತನು ಗಾಂಜಾ ಸೇವನೆ ಮಾಡಿರುವುದು ಧೃಡಪಟ್ಟಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 66/2023 ಕಲಂ: 27 (b) ಎನ್‌.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 15/04/2023 ರಂದು ಉಡುಪಿ ತಾಲೂಕು, ಶಿವಳ್ಳಿ ಗ್ರಾಮದ ಪ್ರಥಮ್ ಪ್ರೈಡ್ ಅಪಾರ್ಟ್‌ಮೆಂಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತುವನ್ನು ಸೇವಿಸಿರುವಂತೆ ಕಂಡು ಬಂದ ವ್ಯಕ್ತಿಯನ್ನು ಅಶೋಕ್ ಪೊಲೀಸ್ ಉಪ-ನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ ರವರು ವಶಕ್ಕೆ ಪಡೆದ್ದು, ಆತನ ಸಮ್ಮತಿ ಪಡೆದು, ಮೆಡಿಕಲ್ ತಪಾಸಣೆಗೊಳಪಡಿಸಿ, ದಿನಾಂಕ 18/04/2023  ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ಬಂದಿರುವ ತಜ್ಞ ವರದಿಯನ್ನು ಸ್ವೀಕರಿಸಿ, ವರದಿಯಲ್ಲಿ ಆರೋಪಿ ಜೋಯ್ ರಾಥಿ ಈತನು ಗಾಂಜಾ ಸೇವನೆ ಮಾಡಿರುವುದು ಧೃಡಪಟ್ಟಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 67/2023 ಕಲಂ: 27 (b) ಎನ್‌.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾಧ ರಾಜೀವ್‌ ಕಿಶೋರ್‌ (30) ತಂದೆ: ರವಿ ವಾಸ: ಕುದ್ಮಲ್‌ರಂಗರಾವ್‌ನಗರ ಸರಕಾರಿ ಸ್ಕೂಲ್‌ಎದುರು    ಪುತ್ತೂರು ಗ್ರಾಮ ಉಡುಪಿ ಇವರು ದಿನಾಂಕ 17/04/2023 ರಂದು ಅಂಬಾಗಿಲಿನಿಂದ ದಿನಸಿ ಸಾಮಾಗ್ರಿಗಳನ್ನು ತೆಗೆದುಕೊಂಡು ತನ್ನ ತಂದೆಯೊಂದಿಗೆ ಮನೆಗೆ ಹೋಗುವರೇ ರಾ.ಹೆ 66 ರ ಸಾರ್ವಜನಿಕ ಡಾಮಾರು ರಸ್ತೆಯ ಬದಿಯಿಂದ ಅಂದರೆ ಅಂಬಾಗಿಲು ಕಡೆಯಿಂದ ಕರಾವಳಿ ಕಡೆಗೆ ನಡೆದುಕೊಂಡು ಬರುತ್ತಿರುವಾಗ ಸಮಯ ಸುಮಾರು ರಾತ್ರಿ 20.15 ಗಂಟೆಗೆ ಕರಾವಳಿ ಕಡೆಯಿಂದ ಅಂಬಾಗಿಲು ಕಡೆಗೆ  KA-20 EY-1570 ನೇ ಸ್ಕೂಟರ್‌ ಸವಾರಳಾದ ಅನ್ನಪೂರ್ಣ ಎಂಬುವವರು ತನ್ನ ಸ್ಕೂಟರ್‌ ನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಬದಿಗೆ ಬಂದು ರಾಜೀವ್‌ ಕಿಶೋರ್‌ ರವರ ತಂದೆಗೆ ಡಿಕ್ಕಿ ಹೊಡೆದ ಪರಿಣಾಮ, ಇವರ ತಂದೆ ರಸ್ತೆಗೆ ಬಿದ್ದು ಬಲಕಾಲಿನ ಮೊಣಗಂಟಿನ ಕೆಳಗೆ ಗುದ್ದಿದ ಜಖಂ ಆಗಿದ್ದು ಅವರನ್ನು ರಾಜೀವ್‌ ಕಿಶೋರ್‌ ರವರು ಹಾಗೂ ಅಲ್ಲಿ ಸೇರಿದ ಸಾರ್ವಜನಿಕರು ಎತ್ತಿ ಉಪಚರಿಸಿ ತಕ್ಷಣ ಚಿಕಿತ್ಸೆ ಬಗ್ಗೆ ಹೈಟೆಕ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 37/2023 ಕಲಂ: 279, 338 ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾಧ ಶ್ರೀಮತಿ ಲಿಲ್ಲಿ ಇಲ್ಡಾ ಮಸ್ಕರೇನಸ್‌ (60) ಗಂಡ: ಪಿಯೂಸ್‌ಮಸ್ಕರೇನಸ್‌,  ವಾಸ: ಹೌಸ್‌ನಂ. 4-1(3), ಗಾಡ್ಸ್‌ವಿಲ್ಲಾ, ನರ್ನಾಡು, ಉಪ್ಪೂರು ಗ್ರಾಮ, ಬ್ರಹ್ಮಾವರ ಇವರ ಗಂಡನಾದ ಪಿಯೂಸ್‌ ಮಸ್ಕರೇನಸ್‌, (68) ಎಂಬವರು ಒಬ್ಬಂಟಿಯಾಗಿ ವಾಸವಾಗಿದ್ದು, ಶ್ರೀಮತಿ ಲಿಲ್ಲಿ ಇಲ್ಡಾ ಮಸ್ಕರೇನಸ್‌ ರವರು ಹಾಗೂ ಮಕ್ಕಳು ಕುವೈಟ್‌ ದೇಶದಲ್ಲಿ ಇರುವುದಾಗಿದೆ. ಪಿಯೂಸ್‌ ಮಸ್ಕರೇನಸ್‌ರವರಿಗೆ ಬಿ.ಪಿ ಹಾಗೂ ಸಕ್ಕರೆ ಖಾಯಿಲೆ ಇದ್ದು, ಈ ಬಗ್ಗೆ ಔಷಧ ತೆಗೆದುಕೊಳ್ಳುತ್ತಿದ್ದರು. ಪಿಯೂಸ್‌ ಮಸ್ಕರೇನಸ್‌ರವರು ಹೃದಯಾಘಾತದಿಂದಲೊ ಅಥವಾ ವಯೋ ಸಹಜವಾಗಿ ಅಥವಾ ತನಗಿರುವ ಬಿ.ಪಿ. ಸಕ್ಕರೆ ಖಾಯಿಲೆ ಉಲ್ಬಣಗೊಂಡು  ದಿನಾಂಕ 16/04/2023 ರಂದು ರಾತ್ರಿ 7:47 ಗಂಟೆಯಿಂದ ದಿನಾಂಕ 17/04/2023 ರಂದು ಬೆಳಿಗ್ಗೆ 09:00 ಗಂಟೆಯ ಮಧ್ಯಾವಧಿಯಲ್ಲಿ  ಮನೆಯಲ್ಲಿ ಮಲಗಿದ್ದಲ್ಲಿಯೇ ಮೃತಪಟ್ಟಿರುತ್ತಾರೆ. ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 30/2023 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾಧ ಮುತ್ತುವೇಡಿ (42) ಗಂಡ: ಅಪ್ಪದೊರೈ ವಾಸ: ಮನೆ ನಂಬ್ರ 2ಬಿ-38, ಇಂದಿರಾನಗರ 2ನೇ ಅಡ್ಡರಸ್ತೆ, 76-ಬಡಗುಬೆಟ್ಟು, ಉಡುಪಿ ಇವರ ಗಂಡ ಅಪ್ಪದೊರೈ (47) ಎಂಬವರು ಸುಮಾರು 30 ವರ್ಷಗಳ ಹಿಂದೆ ಉಡುಪಿಗೆ ಬಂದು ಕೂಲಿ ಕೆಲಸ ಮಾಡಿಕೊಂಡಿದ್ದು, ಇವರು ಅಧಿಕ ರಕ್ತದೊತ್ತಡ ಖಾಯಿಲೆಯಿಂದ ಬಳಲುತ್ತಿದ್ದು, ಗುಂಡಿಬೈಲು ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದರು. ದಿನಾಂಕ 17/04/2023 ರಂದು ಸಂಜೆ ಕೆಲಸ ಮುಗಿಸಿ ಬಂದು, 19:45 ಗಂಟೆಗೆ ವಾಷ್ ರೂಮ್ಗೆ ಹೋಗಿ ಹಿಂದೆ ಬರುವಾಗ ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದವರನ್ನು ಉಡುಪಿ ಲೊಂಬಾರ್ಡ್ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿಂದ ಅಜ್ಜರಕಾಡು ಆಸ್ಪತ್ರೆಗೆ ಕರೆ ತರುವಾಗ ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 16/2023 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕೊಲ್ಲೂರು: ಪಿರ್ಯಾದಿದಾರರಾಧ ಲೀಲಾವತಿ @ ನೀಲಾವತಿ (73) ಗಂಡ: ಶಂಕರ ಶೆಟ್ಟಿ ವಾಸ: ಈರನಮಕ್ಕಿ ಹಾರ್ಮಣ್ಣು ಚಿತ್ತೂರು ಗ್ರಾಮ ಕುಂದಾಪುರ ಇವರು ದಿನಾಂಕ 17/04/2023 ರಂದು ಬೆಳಗ್ಗೆ 11:30 ಗಂಟೆಗೆ  ಚಿತ್ತೂರು  ಗ್ರಾಮದ ಈರನಮಕ್ಕಿ ಹಾರ್ಮಣ್ಣು ಎಂಬಲ್ಲಿ  ವಾಸವಾಗಿರುವ ಮನೆಯ ಜಾಗದ ಸುತ್ತಲು ಧರೆ ನಿರ್ಮಿಸಲು ಕೆಲಸದವರನ್ನು ಕರೆಯಿಸಿ  ಕೆಲಸ  ಮಾಡಿಸುತ್ತಿರುವಾಗ ನೆರೆಕರೆಯ ನಿವಾಸಿಗಳಾದ 1] ಚಂದ್ರ ಶೆಟ್ಟಿ, 2] ಸುಮಿತ್ರಾ, 3] ಸುಗುಣ ವಾಸ: ಈರನಮಕ್ಕಿ ಹಾರ್ಮಣ್ಣು ಚಿತ್ತೂರು ಗ್ರಾಮ ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಇವರು ಲೀಲಾವತಿ ರವರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ  ಕೆಲಸಗಾರರಿಗೆ ಹಲ್ಲೆಮಾಡಲು ಮುಂದಾದಗ ಲೀಲಾವತಿ ರವರು ಆರೋಪಿಗಳಲ್ಲಿ ಯಾಕೆತೂಂದರೆ ಕೊಡುತ್ತಿರಿ ಎಂದು ಕೇಳಿದ್ದು ಆ ವೇಳೆ ಆರೋಪಿ ಚಂದ್ರ ಶೆಟ್ಟಿ ಲೀಲಾವತಿ ರವರನ್ನು  ದೂಡಿ ಕೆಳಕ್ಕೆ ಬಿಳಿಸಿ ಇವರಿಗೆ ಎದೆಗೆ ಮತ್ತು ಕೈಗೆ ಗುದ್ದಿದ ಒಳನೋವು ಉಂಟು ಮಾಡಿರುತ್ತಾರೆ. ಆ ವೇಳೆ ಗಲಾಟೆ  ಬಿಡಿಸಲು  ಹೋದ ಲೀಲಾವತಿ ರವರ ಮಗಳು  ಮಂಜುಳ ರವರಿಗೆ ಆರೋಪಿ ಚಂದ್ರ ಶೆಟ್ಟಿಯು ಕೈಯಿಂದ  ದೂಡಿ ಅವಳು ಧರಿಸಿದ ನೈಟಿಯನ್ನು ಹರಿದು ಹಾಕಿದ್ದು ಆರೋಪಿಗಳಾದ ಸುಮಿತ್ರಾ  ಮತ್ತು ಸುಗುಣ ಕೈಯಿಂದ ಮುಂಜುಳರವರಿಗೆ ಹೊಡೆದಿರುತ್ತಾರೆ. ಆರೋಪಿಗಳ  ಹಲ್ಲೆಯಿಂದ ಲೀಲಾವತಿ ರವರಿಗೆ ನೋವು ಉಂಟಾಗಿ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿ ಚಿಕಿತ್ಸಗೆ  ದಾಖಲಾಗಿರುತ್ತಾರೆ. ಕಳೆದ 2 ವರ್ಷ ಗಳಿಂದ  ಜಾಗಕ್ಕೆ ಸಂಬಂಧಿಸಿದ ವಿಚಾರದಲ್ಲಿ ತಕರಾರು ಇದ್ದು ಜಾಗದಲ್ಲಿ ಧರೆ ನಿರ್ಮಾಣ ಮಾಡಬಾರದೆಂಬ ಉದ್ದೇಶದಿಂದ  ಆರೋಪಿಗಳು ಈ ತಕ್ಷೀರು  ಮಾಡಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 22/2023 ಕಲಂ: 447, 323 ,354 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೊಲ್ಲೂರು: ಪಿರ್ಯಾದಿದಾರರಾಧ ಸುಮಿತ್ರಾ ಶೆಟ್ಟಿ (33) ಗಂಡ: ಚಂದ್ರಶೇಖರ ಶೆಟ್ಟಿ ವಾಸ: ಈರನಮಕ್ಕಿ ಹಾರ್ಮಣ್ಣು ಚಿತ್ತೂರು ಗ್ರಾಮ ಕುಂದಾಪುರ ತಾಲೂಕು ಉಡುಪಿ ಇವರು ದಿನಾಂಕ 17/04/2023 ರಂದು ಮಧ್ಯಾಹ್ನ 12:00 ಗಂಟೆಗೆ  ಚಿತ್ತೂರು  ಗ್ರಾಮದ ಈರನಮಕ್ಕಿ ಹಾರ್ಮಣ್ಣು ಎಂಬಲ್ಲಿ  ವಾಸವಾಗಿರುವ ಮನೆಯಜಾಗದ ಸಮೀಪನೆರೆಕರೆಯ ನಿವಾಸಿಗಳಾದ  1] ಉದಯ, 2]ಸಂಪತ್, 3] ಶಂಕರ ಶೆಟ್ಟಿ, 4] ಮಂಜುಳ 5] ಲೀಲಾವತಿ ವಾಸ: ಈರನಮಕ್ಕಿ ಹಾರ್ಮಣ್ಣು ಚಿತ್ತೂರು ಗ್ರಾಮ ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಇವರು ಕೆಲಸಗಾರರೊಂದಿಗೆ ಕಂಪೌಂಡ ನಿರ್ಮಿಸಲು ಪ್ರಾರಂಭಿಸಿದಾಗ ಸುಮಿತ್ರಾ ಶೆಟ್ಟಿ ರವರು ಸ್ಥಳಕ್ಕೆ ಹೋಗಿ  ಕಂಪೌಂಡ ರಚನೆಗೆ ಆಕ್ಷೇಪ ಮಾಡಿದಾಗ ಆರೋಪಿಗಳಾದ ಉದಯ,ಸಂಪತ್‌, ಶಂಕರ ಶೆಟ್ಟಿಯವರು ಪಿರ್ಯಾಧಿದಾರರ ರಟ್ಟೆಯನ್ನು ಕೈಯಿಂದ ಹಿಡಿದು  ಎಳೆದಿರುತ್ತಾರೆ. ಆರೋಪಿಗಳಾದ ಮಂಜುಳ ಮತ್ತು ಲೀಲಾವತಿ ಕೋಲಿನಿಂದ ಸುಮಿತ್ರಾ ಶೆಟ್ಟಿ ರವರಿಗೆ ಹೊಡೆದು ಆರೋಪಿಗಳು ಹಾರೆ, ಪಿಕ್ಕಾಸು, ಗಾರೆ ಕೋಲು ತೋರಿಸಿ ಜೀವ ಸಹಿತ ಬಿಡುವುದಿಲ್ಲವಾಗಿ ಕೂಲೆ ಬೆದರಿಕೆ ಹಾಕಿರುತ್ತಾರೆ. ಗಲಾಟೆ  ಬಿಡಿಸುವ ವೇಳೆ ಪಿರ್ಯಾಧಿದಾರರ ಗಂಡ ಚಂದ್ರಶೇಖರ ಶೆಟ್ಟಿಯವರನ್ನು ಆರೋಪಿಗಳು  ಕೈಯಿಂದ  ದೂಡಿ   ಹೊಡೆದಿರುತ್ತಾರೆ. ಅಲ್ಲದೇ ಆರೋಪಿಗಳು ಸುಮಿತ್ರಾ ಶೆಟ್ಟಿ ರವರಿಗೆ ಮತ್ತು ಚಂದ್ರಶೇಖರ ಶೆಟ್ಟಿಯವರಿಗೆ ಅವಾಚ್ಯ ಶಬ್ಥಗಳಿಂದ ನಿಂದಿಸಿರುತ್ತಾರೆ. ಆರೋಪಿಗಳ  ಹಲ್ಲೆಯಿಂದ ಸುಮಿತ್ರಾ ಶೆಟ್ಟಿ ರವರಿಗೆ ನೋವು ಉಂಟಾಗಿ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿ ಚಿಕಿತ್ಸಗೆ  ದಾಖಲಾಗಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 23/2023 ಕಲಂ: 143,147, 323, 324,354504, 506 r/w 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 19-04-2023 06:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080