ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಹೆರಿಯಾ ಕುಲಾಲ್(61), ತಂದೆ:ದಿ ನಾರಾಯಣ ಕುಲಾಲ್, ವಾಸ: ಜಡ್ಡಿನ ಮನೆ ಆವರ್ಸೆ ಗ್ರಾಮ ಮತ್ತುಅಂಚೆ. ಬ್ರಹ್ಮಾವರ ತಾಲೂಕು ಇವರು ದಿನಾಂಕ 17/04/2022 ರಂದು ಆವರ್ಸೆ ಗ್ರಾಮದ ಮಾವಿನಕಟ್ಟೆ ಬಳಿ ಇರುವ ಹಾಲು ಡೈರಿಗೆ ಹೋಗಿ ವಾಪಾಸ್ಸು ಮನೆಗೆ ಬರುವಾಗ ಸಂಜೆ 4:50 ಗಂಟೆಗೆ ಆವರ್ಸೆ ಗ್ರಾಮದ ಮಾವಿನಕಟ್ಟೆಯ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘದ ಎದುರು ಮಾವಿನಕಟ್ಟೆ ಕಡೆಯಿಂದ ಗೋಳಿ ಅಂಗಡಿ ಕಡೆಗೆ ಹಾದು ಹೋಗುವ ರಸ್ತೆಯ ಪಶ್ಬಿಮದ ಅಂಚಿನಲ್ಲಿ ರಸ್ತೆ ದಾಟಲು ಹೋಗುತ್ತಿದ್ದ ಆನಂದ ಮರಕಾಲ (77) ರವರಿಗೆ ಮಾವಿನಕಟ್ಟೆ ಕಡೆಯಿಂದ ಗೋಳಿ ಅಂಗಡಿ ಕಡೆಗೆ ಬರುತ್ತಿದ್ದ  KA-20-EH-6905 ನೇ ಆಕ್ಟಿವ್ ಸವಾರ ಶಂಕರ ಪೂಜಾರಿ ತನ್ನ ಆಕ್ಟಿವ್ ಮೋಟಾರ್ ಸೈಕಲ್ ನ್ನು ಅತಿ ವೇಗ ಹಾಗೂ ಅಜಾಗೂರಕತೆಯಿಂದ ಚಲಾಯಿಸಿಕೊಂಡು ಬಂದು ಆನಂದ ಮರಕಾಲ ರವರಿಗೆ ಡಿಕ್ಕಿ ಹೊಡೆದು ಸ್ವಲ್ಪ ಮುಂದಕ್ಕೆ ಹೋಗಿ ಬಿದ್ದಿರುತ್ತಾನೆ. ಇದರಿಂದ ಆನಂದ ಮರಕಲ ಅವರು ಕೂಡ ರಸ್ತೆಗೆ ಬಿದ್ದಿರುತ್ತಾರೆ. ಪಿರ್ಯಾದಿದಾರರು ಹೋಗಿ ನೋಡಲಾಗಿ ಆನಂದ ಮರಕಾಲರ ತಲೆಯ ಹಿಂಬಾಗ ರಕ್ತ ಗಾಯವಾಗಿದ್ದು ಅವರು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ಆಕ್ಟಿವ್ ಹೊಂಡಾಗ ಸವಾರನಿಗೂ ಕೂಡ ಕೈ ಕಾಲಿಗೆ ತರಚಿದ ಗಾಯವಾಗಿರುತ್ತದೆ. ಕೂಡಲೇ ಅಂಬುಲೆನ್ಸ ನಲ್ಲಿ ಪಿರ್ಯಾದಿದಾರರು ಗಾಯಾಳುಗಳನ್ನು ಚಿಕಿತ್ಸಯ ಬಗ್ಗೆ ಕಳುಹಿಸಿಕೊಟ್ಟಿದ್ದುಆನಂದ ಮರಕಾಲ ರವರನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ಅಲ್ಲಿ ಪರೀಕ್ಷಿಸಿದ ವೈದ್ಯರುಆನಂದ ಮರಕಾಲ ಮೃತಪಟ್ಟಿರುವುದಾಗಿ ತಿಳಿಸಿದ್ದು  ಅಲ್ಲದೇ ಆಪಾದಿತ ಆಕ್ಟಿವ್ ಸ್ಕೂಟಿ ಸವಾರ ಚಿಕಿತ್ಸೆಯ ಉಡುಪಿ ಜಿಲ್ಲಾ ಆಸ್ಪತ್ರೆ ಬಗ್ಗೆ ಒಳರೋಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 53/2022  ಕಲಂ: 279,  304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಶಿರ್ವಾ: ದಿನಾಂಕ 16/04/2022 ರಂದು ಪಿರ್ಯಾದಿದಾರರಾದ ಚಂದ್ರಶೇಖರ ಭಟ್ (58), ತಂದೆ: ದಿ.ಲಕ್ಷ್ಮೀನಾರಾಯಣ ಎಸ್ ಭಟ್, ವಾಸ: ಮನೆ ನಂ 307,ಹೆಬ್ಬಾರನಕೇರಿ,ಕಡ್ಲೆ ಗ್ರಾಮ, ಹೊನ್ನಾವರ ತಾಲೂಕು, ಉತ್ತರಕನ್ನಡ ಜಿಲ್ಲೆ ಇವರು ತನ್ನ ಮೋಟಾರು ಸೈಕಲ್ ನಂಬ್ರ KA-47-Q-2097ನೇದರಲ್ಲಿ ಕಟಪಾಡಿಯಿಂದ ಶಿರ್ವಾ ಕಡೆಗೆ ಹೊರಟು ಶಿರ್ವಾ ಗ್ರಾಮದ ಪಾಲಮೆ ಬಸ್ ನಿಲ್ದಾಣದ ಬಳಿ ತಲುಪುವಾಗ ಮಧ್ಯಾಹ್ನ  4:15 ಗಂಟೆಗೆ ಎದುರುಗಡೆಯಿಂದ ಶಿರ್ವಾ ಕಡೆಯಿಂದ ಕಟಪಾಡಿ ಕಡೆಗೆ KA-20-C-3585ನೇ ಟೆಂಪೋ ಚಾಲಕ ಪ್ರದೀಪ ಒಂದು ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಅತಿವೇಗ ಹಾಗೂ ಅಜಾಗರೂಕತೆಯಿಂದ ತನ್ನ ವಾಹನವನ್ನು ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರು ಸೈಕಲ್ ಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು, ಟೆಂಪೋ ಕೂಡಾ ಮಗುಚಿ ಬಿದ್ದಿತು. ಈ ಅಫಘಾತದಿಂದ ಪಿರ್ಯಾದಿದಾರರ ಬಲಕೈ ಮೊಣಗಂಟಿಗೆ ರಕ್ತಗಾಯ,ಬಲಕಾಲು ಮೊಣಗಂಟಿನಿಂದ ಕೆಳಗೆ ತೀವ್ರ ಜಖಂಗೊಂಡಿದ್ದು, ಬಲಕಾಲಿನ ಪಾದ ಬೇರ್ಪಟ್ಟಿರುತ್ತದೆ. ಅಲ್ಲದೇ ಟೆಂಪೋದಲ್ಲಿದ್ದ ವಿನೋದ ಎನ್ನುವವರಿಗೂ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 21/2022, ಕಲಂ: 279,  337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ದಿನಾಂಕ 17/04/2022 ರಂದು ಲಕ್ಷ್ಮಣ, ಪೊಲೀಸ್ ಉಪನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ ಇವರಿಗೆ ದೊರೆತ  ಮಾಹಿತಿ ಮೇರೆಗೆ ಉಡುಪಿ ತಾಲೂಕು, ಪುತ್ತೂರು ಗ್ರಾಮದ ನೇಜಾರು ರಸ್ತೆಯಲ್ಲಿರುವ ಎಕ್ತಾ ಹೈಡ್ಸ್ ಕಟ್ಟಡದ ಬಳಿಯ ಸಾರ್ವಜನಿಕ ಸ್ಥಳದಲ್ಲಿ  ಆರೋಪಿ ಅಬ್ದುಲ್ ಜಬ್ಬಾರ್ (24), ತಂದೆ: ಅಬ್ದುಲ್ ಹಮೀದ್, ವಾಸ: ನಂಬ್ರ 1-33A, ತೃಪ್ತಿ ಲೇಔಟ್, ಸಂತೆಕಟ್ಟೆ, ಕಳಾರ್ಕಳಬೆಟ್ಟು ಗ್ರಾಮ, ಉಡುಪಿ ತಾಲೂಕು ಎಂಬಾತನನ್ನು ಗಂಟೆಗೆ ದಸ್ತಗಿರಿಗೊಳಿಸಿ, ಆತನಿಂದ ಯಾವುದೇ ಪರವಾನಿಗೆ ಇಲ್ಲದೇ, ಕಾನೂನು ಬಾಹಿರವಾಗಿ ಮಾರಾಟ ಮಾಡಲು ಹೊಂದಿದ್ದ‌ 240 ಗ್ರಾಂ ತೂಕದ, ಗಾಂಜಾ (  ಮೌಲ್ಯ ರೂಪಾಯಿ 10,000/-) ವನ್ನು, ಗಾಂಜಾ ತೂಕ ಮಾಡಲು ಬಳಸಿದ ತೂಕ ಸಾಧನ-1 ( ಮೌಲ್ಯ ರೂಪಾಯಿ 200/-) ನ್ನು, ಗಿರಾಕಿ ಕುದುರಿಸಲು ಆರೋಪಿ ಬಳಸುತ್ತಿದ್ದ 2 ಮೊಬೈಲ್ ಹ್ಯಾಂಡ್ ಸೆಟ್ (ಮೌಲ್ಯ ರೂಪಾಯಿ 5,000/- + 500/- ) ನ್ನು ಮತ್ತು ಕೃತ್ಯಕ್ಕೆ ಬಳಸಿದ KA-20-EP-8218 ನೇ ಸುಜುಕಿ ಎಕ್ಸಸ್ ಮೋಟಾರ್ ಸೈಕಲ್ (ಮೌಲ್ಯ 30,000/-) ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಸ್ವಾಧೀನಪಡಿಸಿಕೊಂಡಿರುವ ಸ್ವತ್ತುಗಳ ಮೌಲ್ಯ ರೂಪಾಯಿ 45,700/- ಆಗಿರುತ್ತದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 17/2022 ಕಲಂ: 8(ಸಿ), 20(B)(ii)(A) ಎನ್.ಡಿ.ಪಿ.ಎಸ್. ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 18-04-2022 09:58 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080