ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಅಮಾಸೆಬೈಲು: ಪಿರ್ಯಾದಿದಾರರಾಧ ಕಿರಣ ಪೂಜಾರಿ (28) ತಂದೆ: ಸಾದು ಪೂಜಾರಿ  ಕುಂಟಾಮಕ್ಕಿ ಮಡಾಮಕ್ಕಿ ಗ್ರಾಮ ಹೆಬ್ರಿ ತಾಲೂಕು ಉಡುಪಿ ಇವರು ದಿನಾಂಕ 18/04/2022 ನೇ ಬೆಳಿಗ್ಗೆ 00:35 ಗಂಟೆಗೆ ಮನೆಯಲ್ಲಿರುವಾಗ ಸುರಕ್ಷಾ ಎಂಬುವವರು ಕರೆ ಮಾಡಿ 00:30 ಗಂಟೆಗೆ ನನಗೆ ಪರಿಚಯದವರಾದ ರಾಜೇಶ ನಾಯ್ಕ ಎಂಬುವವರು ಅವರ ಸ್ನೇಹಿತ ಮನೋರಂಜನ ಪೂಜಾರಿ ಎಂಬುವವರ KA-03 JZ-3508 ನೇ R-15 ನೇ ಮೋಟಾರ ಸೈಕಲ್ ನಲ್ಲಿ  ಹಿಂಬದಿ ಸೀಟಿನಲ್ಲಿ  ಹೋಗುತ್ತಿರುವಾಗ ಸೋಮೇಶ್ವರ-ಮಾಂಡಿ ಮೂರುಕೈ ರಸ್ತೆಯಲ್ಲಿ ಮಡಾಮಕ್ಕಿ ಶಾಲೆಯ ಬಳಿ ಮನೋರಂಜನ ಎಂಬುವವರು ಮೋಟಾರ್ ಸೈಕಲ್ ಅನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಮೋಟಾರು ಸೈಕಲ್ ನಿಯಂತ್ರಣ ತಪ್ಪಿ ಬಿದ್ದು ಮರಕ್ಕೆ ಡಿಕ್ಕಿ ಹೊಡೆದು ಹಿಂಬದಿ ಸವಾರ  ರಾಜೇಶ ನಾಯ್ಕ ಎಂಬುವವರಿಗೆ ಗಂಬೀರ ಗಾಯವಾಗಿದ್ದು ಕೂಡಲೇ ಬರುವಂತೆ ತಿಳಿದ ಮೇರೆಗೆ ಕಿರಣ ಪೂಜಾರಿ ಇವರು ಅಪಘಾತ ಸ್ಥಳಕ್ಕೆ ಬಂದು ನೋಡುವಾಗ ರಾಜೇಶ ನಾಯ್ಕನಿಗೆ ತಲೆಗೆ ಪೆಟ್ಟಾಗಿ ಕಿವಿಯಲ್ಲಿ ರಕ್ತ ಬರುತ್ತಿದ್ದು, ಮನೋರಂಜನ್ ನಿಗೆ ಕಾಲಿಗೆ ತೀವೃ ಪೆಟ್ಟಾಗಿ ಇಬ್ಬರು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ.ನಂತರ ಕಿರಣ ಪೂಜಾರಿ ಇವರು ಕೃಷ್ಣ ಎಂಬುವವರಿಗೆ ಪೊನ್ ಮಾಡಿ ಕಾರು ತರಿಸಿಕೊಂಡು ಇಬ್ಬರನ್ನು ಹೆಬ್ರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಪರೀಕ್ಷಿಸಿದ ವೈದ್ಯಾಧಿಕಾರಿಯವರು ರಾಜೇಶ ನಾಯ್ಕ ಮೃತ ಪಟ್ಟಿರುವುದಾಗಿ ತಿಳಿಸಿದರು. ಈ ಅಪಘಾತಕ್ಕೆ KA-03 JZ-3508 ನೇ ಮೋಟಾರ್ ಸೈಕಲ್ ನ ಚಾಲಕ ಮನೋರಂಜನ್ ರವರ ಅತೀ ವೇಗ ಮತ್ತು ಅಜಾಗರರೂಕತೆಯ ಚಾಲನೆಯೆ ಕಾರಣವಾಗಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 07/2022 ಕಲಂ: 279, 338, 304 (ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 17/04/2022 ಮಧ್ಯಾಹ್ನ 12:20 ಗಂಟೆಯ ಸುಮಾರಿಗೆ ಪಿರ್ಯಾದಿದಾರರಾದ ಪಾಂಡು  ಪೂಜಾರಿ (47) ತಂದೆ: ದಿ. ಬಡಿಯ ಪೂಜಾರಿ  ವಾಸ: ಮಪಟಾಡಿ ಬಲ್ಜಿ , ಮಟಪಾಡಿ ಗ್ರಾಮ, ಬ್ರಹ್ಮಾವರ ಇವರು ಆಕಾಶವಾಣಿ ಕಡೆಯಿಂದ ಮಟಪಾಡಿ ಕಡೆಗೆ ರಥಬೀದಿ ರಸ್ತೆಯಲ್ಲಿ ತನ್ನ ಸೈಕಲ್ ನಲ್ಲಿ ಬರುತ್ತಿರುವಾಗ ವಾರಂಬಳ್ಳಿ ಗ್ರಾಮದ ಬ್ರಹ್ಮಾವರ ಸಂತೆ ಮಾರ್ಕೆಟ್ ಬಳಿ ಕೃಷ್ಣ ಚಿಕನ್ ಸ್ಟಾಲ್ ಎದುರು ಮಟಪಾಡಿ ಕಡೆಯಿಂದ ಆಕಾಶವಾಣಿ ಕಡೆಗೆ  ಆರೋಪಿತೆಯು ತನ್ನ KA-20 MC-3615 ಹೊಂಡಾ ಜಾಜ್‌ ಕಾರನ್ನು  ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಯ ಅಂಚಿನಲ್ಲಿ  ರಸ್ತೆಯನ್ನು ದಾಟಲು ನಿಂತಿದ್ದ ರಮೇಶ್ ನಾಯ್ಕ ರವರಿಗೆ ಡಿಕ್ಕಿ ಹೊಡೆದಿರುವುದಾಗಿದೆ. ಡಿಕ್ಕಿ ಹೊಡೆದ ಪರಿಣಾಮ ರಮೇಶ್ ನಾಯ್ಕರವರು  ಅಲ್ಲೆ ರಸ್ತೆ ಬದಿಯಲ್ಲಿ ಬಿದ್ದು ಅವರ ತಲೆಯ ಹಿಂಬದಿಗೆ  ತೀವ್ರ ಒಳಗುದ್ದಿದ ನೋವು ಆಗಿ, ಪ್ರಜ್ಞಾಹೀನ ಸ್ಥಿತಿಯಲ್ಲಿರುವುದಾಗಿದೆ. ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ  ಬ್ರಹ್ಮಾವರ ಪ್ರಣವ್ ಆಸ್ಪತ್ರೆಗೆ  ದಾಖಲಿಸಿರುವುದಾಗಿದೆ, ಪಾಂಡು ಪೂಜಾರಿ ಇವರು ಸದ್ರಿ ಅಪಘಾತದ ಬಗ್ಗೆ ಯಾರಾದರೂ ಪೊಲೀಸ್‌ ಠಾಣೆಗೆ ದೂರು ನೀಡಿರಬಹುದೆಂದು ತಿಳಿದು ಆದರೆ ಇದೂವರೆಗೂ ಯಾರೂ ದೂರು ನೀಡದೇ ಇರುವ ವಿಷಯ ತಿಳಿದು ಠಾಣೆಗೆ ಬಂದು ದೂರು ನೀಡುವಾಗ ವಿಳಂಬವಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 65/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ರವಿ ಆಚಾರ್ಯ (36) ತಂದೆ: ಸುಬ್ರಾಯ ಆಚಾರ್ಯ , ವಾಸ: ಕಾಳಿಕಾಂಬಾ ನಿಲಯ, ಅಶೋಕನಗರ, ಕಲ್ಯಾ ಗ್ರಾಮ, ಕಾರ್ಕಳ ಇವರು ದಿನಾಂಕ 17/04/2022 ರಂದು ಸಂಜೆ 4:45 ಗಂಟೆ ಸಮಯಕ್ಕೆ ಕಾರ್ಕಳ ಬಸ್ಸು ಸ್ಟ್ಯಾಂಡ್‌ ಹತ್ತಿರ ಇರುವ ದುರ್ಗಾ ಮೆಡಿಕಲ್ ಮುಂಭಾಗ ತನ್ನ ನೀಲಿ ಬಣ್ಣದ KA-20 Y-4080 ನೇ ನಂಬ್ರ ಬಜಾಜ್‌ ಡಿಸ್ಕವರಿ 150 ಬೈಕ್‌ನ್ನು ನಿಲ್ಲಿಸಿ ಬೈಕಿನಲ್ಲಿಯೇ ಕೀಯನ್ನು ಮರೆತು ಬಿಟ್ಟು ಹೋಗಿದ್ದು ವಾಪಾಸ್ಸು 5:30 ಗಂಟೆಗೆ ಬಂದು ನೋಡಿದಾಗ ಬೈಕ್‌ ನಿಲ್ಲಿಸಿದ ಜಾಗದಲ್ಲಿ ಇರದೇ ಇರುವುದನ್ನು ನೋಡಿ ಯಾರಾದರೂ ಆಟವಾಡಿಸುತ್ತಿರುವುದಾಗಿ ತಿಳಿದು ಹುಡುಕಾಡಿದ್ದು ಬೈಕ್‌ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಬೈಕ್‌ನ ಅಂದಾಜು ಮೌಲ್ಯ 15,000/ ಆಗಬಹುದಾಗಿದೆ.  ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 53/2022 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಚಂದ್ರಶೇಖರ (49) ತಂದೆ: ದಿ. ರಾಜು ಬಿ ವಾಸ: ಮಾನಸ ಮಟ್ಟು ಅಣೆಕಟ್ಟಿನ ಬಳಿ ಮಟ್ಟು ಗ್ರಾಮ ಇವರ ತಮ್ಮ ಕಮಲಾಕರ (43) ರವರು ಜೆಸಿಬಿ ಆಪರೇಟರ್ ಕೆಲಸ ಮಾಡಿಕೊಂಡಿದ್ದು, ಕಮಲಾಕರವರು ಕುಟುಂಬ ಸಮೇತ ಒಂದೇ ಮನೆಯಲ್ಲಿ ವಾಸ ಮಾಡಿಕೊಂಡಿರುತ್ತಾರೆ. ಅವರಿಗೆ ಬಿಪಿ ಖಾಯಿಲೆ ಇದ್ದು ಈ ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದರು. ಕಮಲಾಕರ ರವರು ದಿನಾಂಕ 17/04/2022 ರಂದು ರಾತ್ರಿ 9:30 ಗಂಟೆಗೆ ಊಟ ಮಾಡಿ ಮಲಗಿದ್ದು, ಬೆಳಿಗ್ಗೆ 6:00 ಗಂಟೆಗೆ ಕಮಲಾಕ ರರವರ ಹೆಂಡತಿ ಸಂಧ್ಯಾ ರವರು ತನ್ನ ಗಂಡ ಮನೆಯಲ್ಲಿ ಇಲ್ಲ ಎಂದು ಚಂದ್ರ ಶೇಖರ ಇವರನ್ನು ಎಬ್ಬಿಸಿ ಹುಡುಕಾಡಿದ್ದಲ್ಲಿ ಕಮಲಾಕರ ರವರು ಮನೆಯ ಮೇಲ್ಛಾವಣಿಯ ಕಬ್ಬಿಣದ ಪಕ್ಕಾಸಿಗೆ ವಯರ್‌ನಿಂದ ಒಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿದ್ದುದ್ದನ್ನು ಕಂಡು ಚಂದ್ರಶೇಖರ ಇವರು ಹಾಗೂ ಕಮಲಾಕರ ರವರ ಹೆಂಡತಿ ಹೋಗಿ ನೋಡುವಾಗ ಕಮಲಾಕರ ರವರು ನೇಣು ಬಿಗಿದುಕೊಂಡು ಮೃತಪಟ್ಟಿರುವುದು ಕಂಡು ಬಂದಿರುತ್ತದೆ. ಕಮಲಾಕರ ರವರು ಬಿಪಿ ಖಾಯಿಲೆಯಿಂದ ಬಳಲುತ್ತಿದ್ದು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 17/04/2022 ರಂದು 21:30 ಗಂಟೆಯಿಂದ ದಿನಾಂಕ 18/04/2022 ರ 06:00 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಮೇಲ್ಚಾವಣಿಯ  ಕಬ್ಬಿಣದ ಪಕ್ಕಾಸಿಗೆ ವಯರ್‌ನಿಂದ ಒಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 08/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಮಲ್ಪೆ: ದಿನಾಂಕ 18/04/2022 ರಂದು ಪಿರ್ಯಾದಿದಾರರಾದ ಜಯಕರ ಪೂಜಾರಿ ತಂದೆ: ಕುಮಾರ ಪೂಜಾರಿ ವಾಸ:  ಮೂಡುಕುಟ್ಕಡೆ ಮನೆ ,ಹೊನ್ನಾಳ ಪೋಸ್ಟ್ ಹಾರಾಡಿ ಗ್ರಾಮ ಬ್ರಹ್ಮಾವರ ಇವರು ಮತ್ತು ಶ್ರೀಕಾಂತ ರವರು  ದೋಣಿಯಲ್ಲಿ ಮೀನುಗಾರಿಕೆ ಬಗ್ಗೆ  ಬಾಳಿಗಕುದ್ರು  ಸುವರ್ಣ ನದಿಯಿಂದ  ಸುಮಾರು 1 ಕೀ.ಮೀ  ದೂರದಲ್ಲಿ ಮೀನಿನ ಬಲೆಯನ್ನು  ಬಿಟ್ಟು  ಸ್ವಲ್ಪ ಸಮಯದ ನಂತರ ಅಂದರೆ ಬೆಳಿಗ್ಗೆ  08:00 ಗಂಟೆಯ ಸುಮಾರಿಗೆ  ಬಲೆಯನ್ನು ಎಳೆಯಲು ಹೋಗಿ ಬಲೆ ಎಳೆಯುತ್ತಿರುವಾಗ ಶ್ರೀಕಾಂತ (39) ನು  ತಲೆ  ತಿರುಗಿ  ಅಸ್ವಸ್ಥಗೊಂಡವರನ್ನು ಕೂಡಲೆ ಜಯಕರ ಇವರು ದೋಣೆಯಲ್ಲಿ ಕುಳ್ಳಿರಿಸಿ ಉಪಚರಿಸಿ  ಬಾಳಿಗ ಕುದ್ರು ದಡಕ್ಕೆ  ಬಂದು ನಂತರ ಶ್ರೀಕಾಂತ ಅಣ್ಣನಾದ ಸುಧಾಕರ ರವರಿಗೆ ಮಾಹಿತಿ ತಿಳಿಸಿ, ಸುಧಾಕರರವರೊಂದಿಗೆ   ಶ್ರೀಕಾಂತನನ್ನು ಆಟೋ ರಿಕ್ಷಾ ದಲ್ಲಿ ಉಡುಪಿ ಜಿಲ್ಲಾಸ್ಪತ್ರೆಗೆ  ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದು, ಚಿಕಿತ್ಸೆ ಫಲಕಾರಿಯಾಗಿದೆ ಬೆಳಿಗ್ಗೆ 09:40 ಗಂಟೆಗೆ ಮೃತಪಟ್ಟಿರುವುದಾಗಿ ವೈದ್ಯಾಧಿಕಾಯವರು ತಿಳಿಸಿರುತ್ತಾರೆ.  ದಿನಾಂಕ 18/04/2022 ರಂದು ಬೆಳಿಗ್ಗೆ  08:00 ಗಂಟೆಯ ಸಮಯಕ್ಕೆ ನದಿಯಲ್ಲಿ ಬಲೆ ಎಳೆಯುವಾಗ  ತಲೆ ತಿರುಗಿ ಅಸ್ವಸ್ಥಗೊಂಡು ಅಥವಾ ಇನ್ಯಾವುದೊ ಕಾಯಿಲೆದಿಂದಲೂ  ಮೃತಪಟ್ಟಿರಬಹುದುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 25/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 18-04-2022 06:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080