ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ 

  • ಮಣಿಪಾಲ : ದಿನಾಂಕ 16/04/2021 ರಂದು ರಾತ್ರಿ 9:00 ಗಂಟೆಯಿಂದ ದಿನಾಂಕ 17/04/2021ರಂದು ರಾತ್ರಿ 01:30 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಪಿರ್ಯಾದಿದಾರರಾದ ಗಣೇಶ್ ‌ಕುಲಾಲ್ (‌36), ತಂದೆ: ದಿ.ಗೋಪಾಲ ಮೂಲ್ಯ, ವಾಸ:ದೇಶಿಂಗಬೆಟ್ಟು,ಗುಡ್ಡೆಯಂಗಡಿ, ಅಲೆವೂರು ಗ್ರಾಮ, ಉಡುಪಿ ಇವರ ಮನೆಯ ಮಾಡಿನ ಹಂಚನ್ನು ತೆಗೆದು ಮನೆಯ ಒಳಗೆ ಪ್ರವೇಶಿಸಿ ಮನೆಯ ಕಪಾಟಿನ ಲಾಕರ್‌‌‌‌ನ್ನಲ್ಲಿಟ್ಟಿದ 46 ಗ್ರಾಂ ನ 1,38,000/- ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 3000/- ನಗದನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 1,41,000/- ಆಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 52/2021 ಕಲಂ :457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ 03/04/2021 ರಂದು 18:00 ಗಂಟೆಯಿಂದ ದಿನಾಂಕ 04/03/2021 ರಂದು ಬೆಳಿಗ್ಗೆ 9:00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಕುಂದಾಪುರ ತಾಲೂಕಿನ ಹೆಂಗವಳ್ಳಿ ಗ್ರಾಮದ ಹೆಂಗವಳ್ಳಿ ರಸ್ತೆಯ ಡಾಮಾರಿಕರಣ ಕೆಲಸ ಮಾಡಿ ರಸ್ತೆಯ ಬದಿಯಲ್ಲಿ ಡಾಮಾರು ಸ್ಪ್ರೇ ಮಾಡಲು ಉಪಯೋಗಿಸುವ ಬಾಯ್ಲರ್ ಮೇಶಿನ್‌‌‌‌‌ ನಿಲ್ಲಿಸಿದ್ದು, ಈ ಮೆಶೀನಿಗೆ ಅಳವಡಿಸಿದ 50,000/- ರೂಪಾಯಿ ಮೌಲ್ಯದ ಕಿಲೋಸ್ಕರ್ ಕಂಪೆನಿಯ ಡಿಸೇಲ್ ಮೋಟಾರ್‌‌ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 40/2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ

 ಇತರ ಪ್ರಕರಣ 

  • ಕಾಪು: ಆರೋಪಿತರಾದ 1) ಬಿಂದು ಮೋಹನ ಶೆಟ್ಟಿ, 2) ಮುಕ್ತಿ ಶೆಟ್ಟಿ ,3) ಮೋಹನ ಶೆಟ್ಟಿ ,4) ಶ್ರವಣ ಶೆಟ್ಟಿ ,5) ಸುನಂದಾ ಶೆಟ್ಟಿ ,6) ಭವಾನಿ ಶೆಟ್ಟಿ ಇವರು ಪಿರ್ಯಾದಿದಾರರಾದ ರಮೇಶ ವಿ ಶೆಟ್ಟಿ (62), ತಂದೆ : ದಿ. ವಾಸು ಶೆಟ್ಟಿ, ವಾಸ : ಬಡಗು ಮನೆ ಮಣಿಪುರ ಗ್ರಾಮ, ಮಣಿಪುರ ವೆಸ್ಟ್ ಅಂಚೆ ಉಡುಪಿ ತಾಲೂಕು ಇವರ ರಕ್ತ ಸಂಬಂಧಿಕರಾಗಿದ್ದು, ಪಿರ್ಯಾದಿದಾರರ ಮನೆಯಲ್ಲಿ ವಾಸವಾಗಿರುತ್ತಾರೆ. ಪಿರ್ಯಾದಿದಾರರನ್ನು ಮನೆಯಿಂದ ಓಡಿಸುವ ವೈಯಕ್ತಿಕ ಉದ್ದೇಶದಿಂದ ದಿನಾಂಕ 11/122020 ರಿಂದ ಒಳಸಂಚನ್ನು ನಡೆಸುತ್ತಾ ಮೊಬೈಲನ್ನು ಜಖಂ ಗೊಳಿಸಿ ದೈಹಿಕ ಹಲ್ಲೆ ನಡೆಸಿದ್ದು 50,000/- ನಷ್ಟ ಉಂಟಾಗಿರುತ್ತದೆ. ಆದರೆ ಪಿರ್ಯಾದಿದಾರರು ಈ ಬಗ್ಗೆ ಠಾಣೆಯಲ್ಲಿ ಯಾವುದೇ ದೂರು ನೀಡಿರುವುದಿಲ್ಲ. ಆರೋಪಿತರು ಈ ಬಗ್ಗೆ ದೂರು ನೀಡಿದ್ದು, ಕಾಪು ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ. ದಿನಾಂಕ 22/12/2020 ರಂದು ಪಿರ್ಯಾದಿದಾರರು ಮನೆಗೆ ಬಂದಾಗ ಆರೋಪಿಗಳೆಲ್ಲಾ ಪಿರ್ಯಾದಿದಾರರಿದ್ದ ಮನೆಗೆ ಬಂದು ಕಬ್ಬಿಣದ ರಾಡ್, ತಲವಾರ್, ಚಾಕು, ಮರದ ತುಂಡು ಇತ್ಯಾದಿ ಆಯುಧಗಳನ್ನು ತೆಗೆದುಕೊಂಡು ಪಿರ್ಯಾದಿದಾರರ ಜೀವ ತೆಗೆಯುವ ಉದ್ದೇಶದಿಂದ ಹಲ್ಲೆ ನಡೆಸಿ, ಕೊಲೆಗೆ ಪ್ರಯತ್ನ ಮಾಡಿರುತ್ತಾರೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ಬೈದು, ಪಿರ್ಯಾದಿದಾರರನ್ನು ಜೀವಂತ ಸುಡುವುದಾಗಿ, ಜೀವ ಬೆದರಿಕೆ ಹಾಕಿದ್ದು, ಪಿರ್ಯಾದಿದಾರರನ್ನು ಕೊಲೆ ಮಾಡಿ, ಅವರ ಆಸ್ತಿ ಮತ್ತು ಸೋತ್ತುಗಳನ್ನು ಸುಲಿಗೆ ಮಾಡುವ ಉದ್ದೇಶ ಹೊಂದಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 54/2021 ಕಲಂ: 143 ,147, 148, 323, 324 ,386 307 ,427 ,504, 506 ,120B ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 18-04-2021 08:16 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080