ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 15/03/2022 ರಂದು ಪಿರ್ಯಾದಿದಾರರಾಧ ವಾಸು ನಾಯ್ಕ, (೪೮), ತಂದೆ- ಅಣ್ಣಯ್ಯ ನಾಯ್ಕ, ವಾಸ- ಮನೆ ನಂ. ೧-೯೧, ಕೊಳಲಗಿರಿ 5 ಸೆಂಟ್ಸ್, ಕೊಳಲಗಿರಿ ಅಂಚೆ, ಉಪ್ಪೂರು ಗ್ರಾಮ, ಬ್ರಹ್ಮಾವರ ತಾಲೂಕು. ಇವರು ತನ್ನ ಸೈಕಲ್‌ನ್ನು ಕೊಳಲಗಿರಿ- ಮಣಿಪಾಲ ಡಾಮರು ರಸ್ತೆಯಲ್ಲಿ ಸವಾರಿ ಮಾಡಿಕೊಂಡು ರಾತ್ರಿ 7:30 ಗಂಟೆಯ ಸಮಯಕ್ಕೆ ಉಪ್ಪೂರು ಗ್ರಾಮದ ಪರಾರಿ ಪ್ರೆಸಿಲ್ಲಾ ಟೀಚರ್ ಮನೆಯ ಎದುರುಗಡೆ ಇಳಿಜಾರಿನಲ್ಲಿ ಹೋಗುತ್ತಿರುವಾಗ ಮಣಿಪಾಲ ಕಡೆಯಿಂದ ಕೊಳಲಗಿರಿ ಕಡೆಗೆ ಆರೋಪಿಯು  ಆತನ ಮೋಟಾರ್ ಸೈಕಲ್‌ನ್ನು ಅತೀವೇಗ ಹಾಗೂ ಅಜಾಗರೂಕತೆ ಸವಾರಿ ಮಾಡಿಕೊಂಡು ಬಂದು ವಾಸು ನಾಯ್ಕ ರವರು ಸವಾರಿ ಮಾಡುತ್ತಿದ್ದ ಸೈಕಲ್‌ನ ಎದುರುಗಡೆಗೆ ಡಿಕ್ಕಿ ಹೊಡೆದ ಪರಿಣಾಮ ವಾಸು ನಾಯ್ಕ ರವರು ಡಾಮಾರು ರಸ್ತೆಗೆ ಬಿದ್ದು ಅವರ ಎಡಕೆನ್ನೆ, ತಲೆ, ಕಣ್ಣಿನ ಮೇಲು ಭಾಗಕ್ಕೆ ತೀವ್ರ ರಕ್ತಗಾಯ ಹಾಗೂ ಬಲ ಕೈ ಹಸ್ತದ ಮೇಲ್‌ಭಾಗ ತರಚಿದ ಗಾಯ, ಎಡ ಭುಜ, ಎಡ  ಪಕ್ಕೆಲುಬುಗೆ ಗುದ್ದಿದ ಗಾಯವಾಗಿರುತ್ತದೆ, ಅಲ್ಲದೇ ಸೈಕಲ್‌ನ ರಿಮ್‌ಬೆಂಡ್‌ ಅಗಿರುತ್ತದೆ. ಸದ್ರಿ ಅಪಘಾತವೇಸಗಿದ ಆರೋಪಿಯು ತನ್ನ ಮೋಟಾರ್ ಸೈಕಲ್‌‌ನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ.  ಗಾಯಗೊಂಡ ವಾಸು ನಾಯ್ಕ ರವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  41/2022 ಕಲಂ 279, 338 ಐಪಿಸಿ & 134 (A & B) ಜೊತೆಗೆ 187 ಐಎಮ್ವಿ ಆ್ಯಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ. 

ಕೊಲೆ ಪ್ರಕರಣ

  • ಮಣಿಪಾಲ: ದಿನಾಂಕ 16/03/2022 ರಂದು ಸಂಜೆ 06:30 ಗಂಟೆಗೆ ಉಡುಪಿ ತಾಲೂಕು 80 ಬಡಗುಬೆಟ್ಟು ಗ್ರಾಮದ ಕಬ್ಯಾಡಿ ಕಂಬಳಕಟ್ಟ ಎಂಬಲ್ಲಿ ಮನೆಯ ವಾಸ್ತವ್ಯದ ವಿಚಾರದಲ್ಲಿ ಬಾಲಕೃಷ್ಣ ಮತ್ತು ಅವನ ಸಹೋದರ ದಯಾನಂದರವರಿಗೆ ಗಲಾಟೆ ಯಾಗಿದ್ದು ಇದೇ ದ್ವೇಷದಿಂದ ದಯಾನಂದನು ಮನೆಯಲ್ಲಿದ್ದ ಕತ್ತಿಯಿಂದ ಬಾಲಕೃಷ್ಣನ ತಲೆಗೆ ಹಲ್ಲೆ ಮಾಡಿದ್ದು ಆ ಗಾಯದಿಂದ ರಕ್ತ ಸ್ರಾವವಾಗಿ ಬಾಲಕೃಷ್ಣನು ಮೃತಪಟ್ಟಿರುವುದಾಗಿದೆ. ಎಂಬುದಾಗಿ ನಿತ್ಯಾನಂದ ನಾಯ್ಕ (37) ತಂದೆ: ಪಾಂಡು ನಾಯ್ಕ ವಿಳಾಸ: ಕಂಬಳಕಟ್ಟ ಕಬ್ಯಾಡಿ. 80 ಬಡಗುಬೆಟ್ಟು ಗ್ರಾಮ ಉಡುಪಿ ತಾಲೂಕು ಇವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  41/2022, ಕಲಂ; 302 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಕಳವು ಪ್ರಕರಣ

  • ಬೈಂದೂರು: ಫಿರ್ಯಾದಿದಾರರಾದ ಶ್ರೀಮತಿ ಗೋಪಿಕಾ ವಿಷ್ಣು ಮೂರ್ತಿ (65). ಗಂಡ:ದಿ.ಕೃಷ್ಣಮೂರ್ತಿ ಕೆ.ಜಿ ವಾಸ; ಶ್ರಾವಣಮನೆ, ಗೋವಿಂದ ದೇವಸ್ಥಾನದ ಬಳಿ, ಕಂಬದಕೋಣೆ ಗ್ರಾಮ, ಬೈಂದೂರು ಇವರು ದಿನಾಂಕ 12/03/2022 ರಂದು ಕಂಬದಕೋಣೆಯಲ್ಲಿರುವ ತನ್ನ ಮನೆಗೆ ಬೀಗ ಹಾಕಿ ಅವರ ತವರು ಮನೆ ಕಾಸರಗೋಡಿಗೆ ಹೋಗಿದ್ದು. ದಿನಾಂಕ 17/03/2022 ರಂದು ಬೆಳಿಗ್ಗೆ 10:00 ಗಂಟೆ ಸುಮಾರಿಗೆ ನೆರೆಮನೆಯ ಸೀತಾರಾಮ ರವರು ಶ್ರೀಮತಿ ಗೋಪಿಕಾ ವಿಷ್ಣು ಮೂರ್ತಿ ರೌರಿಗೆ ದೂರವಾಣಿ ಕರೆ ಮಾಡಿ ಇವರ ಮನೆಯ ಬಾಗಿಲಿನ ಬೀಗ ಮುರಿದಿರುವುದಾಗಿ ತಿಳಿಸಿದಂತೆ ಇವರು ಮಧ್ಯಾಹ್ನ 02:30 ಗಂಟೆ ಸುಮಾರಿಗೆ  ಮನೆಗೆ ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಎದುರಿನ ಚಿಲಕ ಮುರಿದು ಒಳಗೆ ಪ್ರವೇಶಿಸಿ ಮನೆಯೊಳಗಿನ ಬೀರುಗಳನ್ನು ಒಡೆದು ಅದರಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ, ಕಪಾಟಿನಲ್ಲಿದ್ದ 1) 24 ಗ್ರಾಂ ತೂಕದ ಚಿನ್ನದ 1 ಕರಿಮಣಿ ಸರ, 2) 12 ಗ್ರಾಂ ತೂಕದ ಚಿನ್ನದ 1 ರೋಪ್ ಚೈನ್, 3) 4 ಗ್ರಾಂ ತೂಕದ 2 ಉಂಗುರಗಳು, 4) ಬೆಳ್ಳಿಯ ದೀಪ, ಬೆಳ್ಳಿಯ ತಟ್ಟೆ, ಪಂಚಪಾತ್ರೆಗಳಾದ ಕೌಳಿಗೆ, ಸೌಟುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ, ಒಟ್ಟು ಅಂದಾಜು ಮೌಲ್ಯ 1,48,000 ರೂಪಾಯಿ ಆಗಬಹುದುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 62 /2022 ಕಲಂ. 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ

 ಅಸ್ವಾಭಾವಿಕ ಮರಣ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ಸುಮಿತ್ರ, (45), ಗಂಡ: ಜನಾರ್ಧನ, ವಾಸ: ದರ್ಖಾಸು ಹೌಸ್, ಶ್ರೀ ಮಹಾದೇಶ್ವರ ಭಜನಾ ಮಂದಿರದ ಬಳಿ, ಪಲಿಮಾರು ಗ್ರಾಮ. ಕಾಪು ತಾಲೂಕು, ಉಡುಪಿ ಇವರ ತಮ್ಮ ಜಗದೀಶ(40) ಎಂಬವರು ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದು, ವಿಪರೀತ ಕುಡಿತದ ಚಟ ಹೊಂದಿದವರಾಗಿರುತ್ತಾರೆ. ಅವರು ಕಳೆದ ಒಂದು ವಾರದಿಂದ ಯಾವುದೇ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದು  ದಿನಾಂಕ 17/03/2022 ರಂದು 16:00 ಗಂಟೆಯಿಂದ 16:15 ಗಂಟೆಯ ಮದ್ಯಾವಧಿಯಲ್ಲಿ ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿದ್ದ ಹರಿತವಾದ ಕತ್ತಿಯಿಂದ ತನ್ನ ಕುತ್ತಿಗೆಯನ್ನು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ.  ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಯು.ಡಿ.ಆರ್ ನಂಬ್ರ 07/2022 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

  • ಕುಂದಾಪುರ: ದಿನಾಂಕ 17/03/2022 ರಂದು ಸದಾಶಿವ ಆರ್ ಗವರೋಜಿ ಪಿ.ಎಸ್.ಐ. ಕುಂದಾಪುರ ಪೊಲೀಸ್ ಠಾಣೆ ರವರು ಸಿಬ್ಬಂದಿಯವರೊಂದಿಗೆ  ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ 10:00 ಗಂಟೆಗೆ ಕುಂದಾಪುರ ತಾಲೂಕು ವಡೇರಹೋಬಳಿ ಗ್ರಾಮದ ವಿನಾಯಕ ಜಂಕ್ಷನಿನ ರಿಕ್ಷಾ ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ  ಮಾಹಿತಿ ಬಂದಿದ್ದು ಈ ಬಗ್ಗೆ ಸದ್ರಿ ಸ್ಥಳಕ್ಕೆ 10:15 ಗಂಟೆಗೆ ತಲುಪಿ ಮರೆಯಲ್ಲಿ ನಿಂತು ನೋಡಲಾಗಿ ವಿನಾಯಕ ಜಂಕ್ಷನಿನ ರಿಕ್ಷಾ ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರನ್ನು ಸೇರಿಸಿಕೊಂಡಿದ್ದು, 00 ರಿಂದ 99 ರ ಒಳಗೆ ಯಾವುದೇ ನಂಬರ್‌ ಬಂದರೆ 1/-ರೂಪಾಯಿಗೆ 70/-ರೂಪಾಯಿ ಕೊಡುವುದಾಗಿ ಹೇಳಿಕೊಂಡು ಸಾರ್ವಜನಿಕರಿಂದ ಹಣವನ್ನುಪಣವಾಗಿ ಸ್ವೀಕರಿಸಿಕೊಂಡು ಮಟ್ಕಾ ನಂಬ್ರ ಬರೆದು ಕೊಡುತ್ತಿದ್ದು, ಮಟ್ಕಾ ಜುಗಾರಿ ಆಟ ಆಡುತ್ತಿದ್ದುದನ್ನು  ಖಚಿತಪಡಿಸಿಕೊಂಡು, ಸ್ಥಳಕ್ಕೆ ಪಂಚಾಯತುದಾರರನ್ನು ಬರಮಾಡಿಕೊಂಡು 10:30 ಗಂಟೆಗೆ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿದಾಗ ಸಾರ್ವಜನಿಕರು ಓಡಿ ಹೋಗಿದ್ದು , ಮಟ್ಕಾ ಬರೆಯುತ್ತಿದ್ದು ವ್ಯಕ್ತಿಯನ್ನುಹಿಡಿದಾಗ ಆತನು ಸ್ವಂತ ಲಾಭಕ್ಕಾಗಿ ಮಟ್ಕಾ ಜುಗಾರಿಆಡುತ್ತಿರುವುದಾಗಿ ತನ್ನ ತಪ್ಪಿತತ್ವವನ್ನು ಒಪ್ಪಿಕೊಂಡಿದ್ದು  ಆತನ  ಹೆಸರು  ಮಂಜುನಾಥ ಬಿ, (66), ತಂದೆ: ದಿ ಬಚ್ಚ  ಮೊಗವೀರ,  ವಾಸ: ಹೊಸಹೊಕ್ಲು ಮನೆ,  ಕಟ್ ಬೇಲ್ತೂರು ಗ್ರಾಮ, ಕುಂದಾಪುರ ಇತನಿಂದ ಮಟ್ಕಾ ಜುಗಾರಿ ಆಟದಿಂದ ಸಂಗ್ರಹಿಸಿದ  ನಗದು ರೂಪಾಯಿ 620/-, ಬಾಲ್ ಪೆನ್-1 ಮತ್ತು ಮಟ್ಕಾ ನಂಬ್ರ ಬರೆದ ಚೀಟಿ -1 ನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿ ಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  30/2022 ಕಲಂ: 78 (i) (iii) KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಮಲ್ಪೆ: ದಿನಾಂಕ16/03/2022 ರಂದು ರಾತ್ರಿ ವೇಳೆ ವಡಭಾಂಡೇಶ್ವರದ ಸಯ್ಯದ್ ಅಕ್ಬರ್ ಅಲಿ ರವರ ಮನೆಯ ಕಾಂಪೌಂಡ್ ಮೇಲೆ ಯಾರೋ ಕಿಡಿಗೇಡಿಗಳು HIJAB IS DIGNITY , HIJAB MOVEMENT , HIJAB IS RIGHT ಎಂದು ಕೆಂಪು ಬಣ್ಣದ ಶಾಯಿಯಿಂದ ಬರೆದಿರುತ್ತಾರೆ, ಮಾನ್ಯ ಉಚ್ಛ ನ್ಯಾಯಾಲಯದ ಆದೇಶದ ವಿರುದ್ದವಾಗಿ ಸಮಾಜದಲ್ಲಿ ವಿವಿದ ಕೋಮುಗಳ ನಡುವೆ ದ್ವೇಷ  ಮನೋಬಾವನೆಯನ್ನು ಬಿತ್ತುವ ಮತ್ತು ಗಲಭೆ ಸೃಷ್ಟಿಸುವ ಉದ್ದೇಶದಿಂದ ಈ ಬರಹವನ್ನು ಬರೆದಿದ್ದು, ಸದ್ರಿ ಬರಹವು ಸಾರ್ವಜನಿಕರಿಗೆ ತೋರುವ ರೀತಿಯಲ್ಲಿದ್ದು ಸಾರ್ವಜನಿಕರಿಗೆ ಅಶಾಂತಿಯನ್ನು ಉಂಟು ಮಾಡುವ ಉದ್ದೇಶದಿಂದ HIJAB IS DIGNITY, HIJAB MOVEMENT , HIJAB IS RIGHT ಈ ರೀತಿಯಾಗಿ ಕಾಂಪೌಂಡ್ ಮೇಲೆ ಬರೆದಿರುವುದಾಗಿದೆ, ಎಂಬುದಾಗಿ ರಾಕೇಶ್ , ತಂದೆ:ಸಾಧು ಕಾಂಚನ್ , ಬೈಲಕೆರೆ, ಮಲ್ಪೆ, ಮತ್ತು ನಾಗರಿಕರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 25/2022 ಕಲಂ: 505 (1)(c) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  •  ಗಂಗೊಳ್ಳಿ: ಫಿರ್ಯಾದಿದಾರರಾದ ರಾಜೇಶ್ ಕುಂದರ್ (44) ತಂದೆ: ಬಚ್ಚು ಮೊಗವೀರ, ಎ.ಹೆಚ್.ಸಿ 104 ಡಿ.ಎ.ಆರ್ ಉಡುಪಿ ಇವರು ಗಂಗೊಳ್ಳಿ ಠಾಣಾ ವ್ಯಾಪ್ತಿಯ ಗಂಗೊಳ್ಳಿಯಲ್ಲಿ ಪ್ರಹಾರ ದಳದಲ್ಲಿ ಉಸ್ತುವಾರಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿಕೊಂಡಿರುತ್ತಾರೆ. ದಿನಾಂಕ 15/03/2022 ರಂದು ಪ್ರಹಾರ ದಳದ ಸಿಬ್ಬಂದಿ ಎಪಿಸಿ 227  ನೇಯವರು ಗೈರು ಹಾಜರಾಗಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಠಾಣೆಗೆ ಮತ್ತು ಉಡುಪಿ ಡಿ.ಎ.ಆರ್ ಕೇಂದ್ರ ಸ್ಥಾನದ ಕರ್ತವ್ಯಾಧಿಕಾರಿ ಹಾಗೂ ಪೊಲೀಸ್ ಉಪಾಧೀಕ್ಷಕರಿಗೆ ಫೋನ್ ಮೂಲಕ ತಿಳಿಸಿರುವುದಾಗಿದೆ. ದಿನಾಂಕ 16/03/2022 ರಂದು ರಾತ್ರಿ 10:30 ಗಂಟೆಗೆ ಪ್ರಹಾರ ದಳದ ಕರ್ತವ್ಯ ಮುಗಿಸಿ ರಾತ್ರಿ ವಿಶ್ರಾಂತಿ ಬಗ್ಗೆ ಕುಂದಾಪುರ ತಾಲೂಕು ಗುಜ್ಜಾಡಿ ಗ್ರಾಮದ ನಾಯಕ್ ವಾಡಿಯ ನಾರಾಯಣ ಗುರು ಸಭಾಭವನದಲ್ಲಿ ಊಟ ಮಾಡಿ ಮಲಗುವ ಸಮಯದಲ್ಲಿ ಎಪಿಸಿ 227  ಹಾಗೂ ಎಪಿಸಿ 1407 ರವರು ಅವಾಚ್ಯ ಶಬ್ದಗಳಿಂದ ಮಾತಾಡಿ ಉದ್ವೇಗಕ್ಕೆ ಒಳಪಡಿಸಿ ಮೊಬೈಲ್ ಕಸಿದುಕೊಂಡು ಹತ್ತಿರದ ಗೇರುಬೀಜದ ಹಾಡಿಗೆ ಎಸೆದಿರುತ್ತಾರೆ. ನಂತರ ಮೊಬೈಲ್ ಹುಡುಕಿಕೊಂಡು ಗಂಗೊಳ್ಳಿ ಠಾಣೆಗೆ ನಡೆದುಕೊಂಡು ಬರುತ್ತಿರುವಾಗ ತ್ರಾಸಿಯಿಂದ ಸ್ವಲ್ಪ ದೂರ ಕ್ರಮಿಸಿ ಹೋಗುತ್ತಿರುವಾಗ  ಎದುರುಗಡೆಯಿಂದ ಎಪಿಸಿ 227 ರವರು ಹೀರೋ ಹೋಂಡಾ ಬೈಕ್ ನಲ್ಲಿ ಬಂದು ಡಿಕ್ಕಿ ಹೊಡೆದಿದ್ದು ರಾಜೇಶ್ ಕುಂದರ್ ರವರು ಅಲ್ಲೇ ರಸ್ತೆಗೆ ಬಿದ್ದಿರುವುದಾಗಿದೆ. ನಂತರ ಆಪಾದಿತ ಎಪಿಸಿ 227 ರವರು  ಹಲ್ಲೆಗೆ ಪ್ರಯತ್ನಿಸಿದ್ದು ಇದರಿಂದ ರಾಜೇಶ್ ಕುಂದರ್ ರವರು ತನ್ನ ಎಡಕೈ ಸ್ವಾಧೀನ ಕಳೆದುಕೊಂಡಿರುವುದಾಗಿದೆ.  ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 24/2022 ಕಲಂ:323, 324, 506 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

  • ಗಂಗೊಳ್ಳಿ: ಫಿರ್ಯಾದಿದಾರರಾದ ಉಮೇಶ್ ಕೆ (34) ತಂದೆ: ಸೂರ ಕುಲಾಲ್ ಕಲಬೆಟ್ಟು ಶಿರಿಯಾರ ಗ್ರಾಮ ಬ್ರಹ್ಮವರ ತಾಲೂಕು ಇವರು ಗಂಗೊಳ್ಳಿ ಠಾಣಾ ವ್ಯಾಪ್ತಿಯ ಗಂಗೊಳ್ಳಿಯಲ್ಲಿ ಪ್ರಹಾರ ದಳದಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿರುತ್ತಾರೆ. ದಿನಾಂಕ16/03/2022 ರಂದು ಕರ್ತವ್ಯದಲ್ಲಿರುವಾಗ ಸುಮಾರು 22:30 ಗಂಟೆಗೆ ಕುಂದಾಪುರ ತಾಲೂಕು  ಗುಜ್ಜಾಡಿ ಗ್ರಾಮದ ನಾಯಕ್ ವಾಡಿಯ ನಾರಾಯಣಗುರು ಬಳಿ ಸಹ ಸಿಬ್ಬಂದಿಯೊಂದಿಗೆ ಕರ್ತವ್ಯದಲ್ಲಿರುವಾಗ ಪ್ರಹಾರ ದಳದ ಉಸ್ತವಾರಿ ಅಧಿಕಾರಿಯಾದ ಆರೋಪಿ ರಾಜೇಶ್ ಕುಂದರ್ ಎ.ಹೆಚ್.ಸಿ 104 ನೇಯವರು ಕರ್ತವ್ಯದ ವಿಚಾರವಾಗಿ ಉಮೇಶ ರವರೊಂದಿಗೆ ಮಾತಿನ ಚಕಮಕಿ ಮಾಡಿ ಉಮೇಶ ರವರ ಕೆನ್ನೆಗೆ ಹಾಗೂ ಬೆನ್ನಿಗೆ ಕೈಯಿಂದ ಹಲ್ಲೆ ಮಾಡಿ ರೈಪಲ್‌ನಿಂದ ಗುಂಡು ಹಾಕುತ್ತೇನೆಂದು ಬೆದರಿಕೆ ಹಾಕಿರುವುದಾಗಿದೆ. ನಂತರ ಉಮೇಶ್‌ ರವರು ಗಾಬರಿಗೊಂಡು ಗಂಗೊಳ್ಳಿ ಠಾಣೆ ಕಡೆಗೆ ಓಡಿಬಂದು ಠಾಣೆಗೆ ಮಾಹಿತಿ  ನೀಡಿ ವಾಪಾಸ್‌ ಹೋಗುವಾಗ ತ್ರಾಸಿ ರಸ್ತೆಯ ಅಂಡರಪಾಸ್‌ ಬಳಿ  ಆರೋಪಿಯು ಉಮೇಶ ರವರನ್ನು ಅಡ್ಡಗಟ್ಟಿ  ನಿಲ್ಲಿಸಿ  ಹಿಡಿದುಕೊಂಡು  ಸ್ಟೇಶನ್‌‌ಗೆ ಮಾಹಿತಿ ಕೊಡುತ್ತೀಯಾ ಎಂದು ಹೇಳಿ ಕೈಯಿಂದ ಹೊಡೆದು ಕಾಲಿನಿಂದ ತುಳಿದು  ಎಡಕೈಯ ಬೆರಳನ್ನು ಬಲವಾಗಿ ಕಚ್ಚಿ ತೀವ್ರ ಸ್ವರೂಪದ ಗಾಯ ಮಾಡಿದ್ದು ಹಾಗೂ ಬಲಕಾಲಿಗೂ ಕಚ್ಚಿ ಗಾಯ ಮಾಡಿ ಕುತ್ತಿಗೆ ಒತ್ತಿ ಹಿಡಿದು ಹಲ್ಲೆ ಮಾಡಿರುತ್ತಾನೆ. ಆರೋಪಿಯು ಪಿರ್ಯಾದಿದಾರರಿಗೆ ಕರ್ತವ್ಯದ ವಿಚಾರದಲ್ಲಿ ಗಲಾಟೆ ಮಾಡಿ ಹಲ್ಲೆ ಮಾಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 25/2022 ಕಲಂ: 341, 323, 325, 504,  506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 18-03-2022 11:37 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080