ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 17/03/2021 ರಂದು ಸಂಜೆ 4:40  ಗಂಟೆಗೆ ಕಾರ್ಕಳ ತಾಲೂಕು ಮುಡಾರು ಗ್ರಾಮದ  ಬಜಗೋಳಿ ಚಿರಾಗ್ ಬಾರ್ ಎಂಡ್ ರೆಸ್ಟೊರೆಂಟ್ ಎದುರು  ಧರ್ಮಸ್ಥಳ ಕಡೆಯಿಂದ ಕಾರ್ಕಳ ಕಡೆಗೆ KA-41-Z–2485 ನೇ ನಂಬ್ರದ ಕಾರು ಚಾಲಕ  ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಭಾಗಕ್ಕ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಿಂತಿದ್ದ ರಾಜು ಎಂಬುವವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದಿದ್ದು, ಅವರ ಬಲ ಭುಜಕ್ಕೆ  ಬಲಕಾಲಿನ ಮೊಣಗಂಟಿಗೆ ಹಾಗೂ ತಲೆಯ ಎಡಭಾಗಕ್ಕೆ ಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ನಂತರ ಹೆಚ್ಚಿನ ಚಿಕಿತ್ಸೆಗೆ ನಿಟ್ಟೆ ಗಾಜ್ರಿಯಾ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 32/2021 ಕಲಂ: 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ಅರುಣ್‌ ಕುಮಾರ್‌(31), ತಂದೆ: ಸೇಖರ ಕುಲಾಲ್‌, ವಾಸ: ಮನೆ ನಂಬ್ರ3-71 ಮೂದಾರಿ ಹಾಲಾಡಿ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 16/03/2021 ರಂದು ಕೆಲಸದ ನಿಮಿತ್ತ ತನ್ನ KA-20-EF-2111ನೇ ನಂಬ್ರದ ಟಿವಿಎಸ್  ಕಂಪೆನಿಯ ವಿಗೋ ಸ್ಖೂಟಿಯಲ್ಲಿ ಹುಣ್ಸೆಮಕ್ಕಿಗೆ ಹೋಗಿ ಕೆಲಸ ಮುಗಿಸಿ ವಾಪಾಸು ಕುಂದಾಪುರ ಕಡೆಯಿಂದ ಹಾಲಾಡಿ ಕಡೆಗೆ ಸಂಜೆ 5:20 ಗಂಟೆಗೆ ಕುಂದಾಪುರ ತಾಲೂಕು ಯಡ್ಯಾಡಿ ಮತ್ಯಾಡಿ ಗ್ರಾಮದ ಪೆಟ್ರೋಲ್ ಬಂಕ್ ಬಳಿ ಬರುತ್ತಿರುವಾಗ  ಎದುರಿನಿಂದ KA-02-Z-5188 ನೇ ಆಲ್ಟೋ ಕಾರಿನ ಚಾಲಕನು ತನ್ನ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೇ ಒಮ್ಮಲೇ ತನ್ನ ಕಾರನ್ನು ಬಲಕ್ಕೆ ಚಲಾಯಿಸಿ ವಿಗೋ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದು, ಇದರಿಂದ ಪಿರ್ಯಾದಿದಾರರು ಸ್ಕೂಟಿ ಸಮೇತ ರಸ್ತೆಗೆ ಬಿದ್ದಿದ್ದು ಅವರನ್ನು ಅಲ್ಲೇ ಇದ್ದ ರಘುರಾಮ ಎಂಬುವವರು ಉಪರಿಸಿದ್ದು ಕೂಡಲೇ ಪಿರ್ಯಾದಿದಾರರನ್ನು  ರಘುರಾಮ ಹಾಗೂ ಕಾರಿನ ಚಾಲಕ ಗಣೇಶರವರು ಚಿಕಿತ್ಸೆಯ ಬಗ್ಗೆ ಕೋಟೇಶ್ವರ ಎನ್ಆರ್ ಆಚಾರ್ಯ ಆಸ್ಪತ್ರಗೆ ಕರೆದುಕೊಂಡು ಬಂದು ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ. ಈ ಅಪಘಾತದಿಂದ ಪಿರ್ಯಾದಿದಾರರ ಎಡ ಕಾಲಿನ ಮೊಣಗಂಟಿನ ಬಳಿ ತೀವ್ರ ಸ್ವರೂಪದ ಮೂಳೆ ಮುರಿತವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 47/2021  ಕಲಂ: 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣಗಳು

  • ಬೈಂದೂರು: ದಿನಾಂಕ 17/03/2021 ರಂದು ಸಂಗೀತ, ಪೊಲೀಸ್ ಉಪನಿರೀಕ್ಷಕರು, ಬೈಂದೂರು ಪೊಲೀಸ್ ಠಾಣೆ ಇವರಿಗೆ ಶಿರೂರು ಗ್ರಾಮದ ಶಿರೂರು ಮಾರ್ಕೆಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ನಡೆಯುತ್ತಿದೆ ಎಂದು ಮಾಹಿತಿ ಬಂದ ಮೇರೆ ದಾಳಿ ನಡೆಸಿ ಆರೋಪಿತ ಪಾಂಡುರಂಗ ಮೇಸ್ತ (48), ತಂದೆ;ಹೂವಯ್ಯ ಮೇಸ್ತ, ವಾಸ; ಚಾಟಿನಗದ್ದೆ, ಶಿರೂರು ಗ್ರಾಮ,ಬೈಂದೂರು ತಾಲೂಕು ಎಂಬಾತನನ್ನು ವಶಕ್ಕೆ ಪಡೆದು ಆತನ ಕೈಯಲ್ಲಿದ್ದ ಮಟ್ಕಾ ಜುಗಾರಿ ಆಟದಿಂದ ಅಕ್ರಮವಾಗಿ ಸಂಗ್ರಹಿಸಿದ ನಗದು ಹಣ ರೂಪಾಯಿ 1240/-, ಮಟ್ಕಾ ನಂಬ್ರ ಬರೆದ ಚೀಟಿ-1 ಹಾಗೂ ಬಾಲ್ ಪೆನ್ನು-1 ನ್ನು ಸ್ವಾದೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 60/2021 ಕಲಂ: 78(I)(III) KP Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಿರ್ವಾ: ದಿನಾಂಕ 16/03/2021 ರಂದು ಶ್ರೀಮತಿ ವೇದಾವತಿ, ಪೊಲೀಸ್ ಉಪನಿರೀಕ್ಷಕರು, ಶಿರ್ವ ಪೊಲೀಸ್ ಠಾಣೆ ಇವರು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಕುರ್ಕಾಲು ಗ್ರಾಮದ ಗಿರಿನಗರ ಎಂಬಲ್ಲಿರುವ ಸ್ವಂದನ ಬಿಲ್ಡಿಂಗ್ ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದಾರೆ ಎಂಬುದಾಗಿ ವರ್ತಮಾನ ಬಂದ ಮೇರೆಗೆ ದಾಳಿ ನಡೆಸಿ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ  1) ಮುಖೇಶ (33), ತಂದೆ: ಸದಾಶಿವ ಪೂಜಾರಿ, ವಾಸ: ಮೂಡುಬೆಳ್ಳೆ ಅಂಚೆ, ಬೆಳ್ಳೆ ಗ್ರಾಮ, 2) ವಿತೇಶ್‌(33), ತಂದೆ: ಭಾಸ್ಕರ ಪೂಜಾರಿ, ವಾಸ: ಕುರ್ಕಾಲು ತೋಟದ ಮನೆ, ಸುಭಾಸ್‌ನಗರ ಅಂಚೆ, ಕುರ್ಕಾಲು ಗ್ರಾಮ, 3) ಕಿಶೋರ್‌(28), ತಂದೆ: ಸದಾಶಿವ ಪೂಜಾರಿ, ವಾಸ: ಮೂಡುಬೆಟ್ಟು ರೈಲ್ವೆ ಬ್ರಿಡ್ಜ್‌ ಬಳಿ, ಶಂಕರಪುರ ಅಂಚೆ, ಮೂಡುಬೆಟ್ಟು ಗ್ರಾಮ, 4) ಪವನ್‌ (28), ತಂದೆ: ರವಿ ಪೂಜಾರಿ, ವಾಸ: ಬೇಬಿ ನಿಲಯ, ಸುಭಾಸ್‌ನಗರ ಅಂಚೆ, ಕುರ್ಕಾಲು ಗ್ರಾಮ, 5) ಪ್ರದೀಪ (22), ತಂದೆ: ಧರ್ಮ, ವಾಸ: ಗಿರಿನಗರ, ಕುರ್ಕಾಲು ಗ್ರಾಮ,  6) ವಿಶಾಲ್‌(30), ತಂದೆ: ಕುಂಞಣ್ಣ, ವಾಸ: ಕುಂಜಾರುಗಿರಿ ಅಂಚೆ, ಕುರ್ಕಾಲು ಗ್ರಾಮ, 7) ಮ್ಯಾಕ್ಸನ್‌ (27), ತಂದೆ: ಪೌಲ್‌ಸೋನ್ಸ್‌, ವಾಸ: ಸೋನ್ಸ್ ವಿಲ್ಲಾ , ಸುಭಾಸ್‌ನಗರ ಅಂಚೆ, ಕುರ್ಕಾಲು ಗ್ರಾಮ, 8) ರೋಶನ್‌(29), ತಂದೆ: ಜಯ, ವಾಸ: ಎಲ್ಲೂರು ದೇವಸ್ಥಾನದ ಹತ್ತಿರ, ಎಲ್ಲೂರು ಗ್ರಾಮ ಮತ್ತು ಅಂಚೆ,  9) ಪ್ರಶಾಂತ್‌(35), ತಂದೆ: ಚೋಂಗ, ವಾಸ: ಕುಂಜಾರುಗಿರಿ ಅಂಚೆ, ಕುರ್ಕಾಲು ಗ್ರಾಮ ಇವರನ್ನು ವಶಕ್ಕೆ ಪಡೆದು ಅವರ ವಶದಲ್ಲಿದ್ದ ನಗದು ಹಣ 7250/-, 52 ಇಸ್ಪೀಟು ಎಲೆಗಳು ಮತ್ತು ನೆಲಕ್ಕೆ ಹಾಸಿದ ಹಳೆ ಪೇಪರ್-1 ನೇದನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 17/2021, ಕಲಂ: 87 ಕೆ.ಪಿ.ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತ್ತೀಚಿನ ನವೀಕರಣ​ : 18-03-2021 09:41 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080