ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

  • ಉಡುಪಿ: ಪಿರ್ಯಾದಿ ಪರಶುರಾಮ ಇವರು ತನ್ನ  ಪರಿಚಯಸ್ಥರಾದ ಅರೋಪಿ ರಾಘವೇಂದ್ರ ಭಂಡಾರಿ ಯವರಿಗೆ 5,000 ರೂ ಹಣವನ್ನು ಸಾಲವಾಗಿ ನೀಡಿದ್ದು ಅರೋಪಿಯು ಪಿರ್ಯಾದುದಾರರಿಗೆ ಇದುವರೆಗೂ ವಾಪಾಸು ನೀಡಿರುವುದಿಲ್ಲ ಅಲ್ಲಿದೆ ಪಿರ್ಯಾದುದಾರರು ಹಣ ಕೇಳಲು ಹೋದಾಗ ನಿನಗೂ ನನಗೂ ಯಾವುದೆ ಸಂಬಂಧವಿಲ್ಲ ನಿನ್ನ ಹಣ ಕೊಡಲು ಆಗುವುದಿಲ್ಲ ಎಂದು ಹೇಳಿದ್ದು ಅಲ್ಲದೆ ಪಿರ್ಯಾದುದಾರರ ಮನೆಗೆ 10 ಜನ ಅಪರಿಚಿತರನ್ನು ಕರೆದುಕೊಂಡು ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಇನ್ನು ಮುಂದೆ  ಹಣದ ವಿಚಾರಕ್ಕೆ ಬಂದರೆ ನಿನ್ನ ಕೈಕಾಲು ಕಡಿದು ಹಾಕಿ ಕೊಂಡು ಹಾಕುವುದಾಗಿ ಜೀವ ಬೆದರಿಕೆ  ಹಾಕಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 47/2021 ಕಲಂ: 420,504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ಫಿರ್ಯಾದಿ ಶ್ರೀಮತಿ. ಜಯಶ್ರೀ ಇವರ ಗಂಡ ಹಾಗೂ ಅವರ ಕುಟುಂಬದವರಿಗೆ ಕುಂದಾಪುರ  ತಾಲೂಕಿನ   ಕುಳ್ಳುಂಜೆ  ಗ್ರಾಮದ  ಹುಳಿಮಾವಿನಕೊಡ್ಲು   ಎಂಬಲ್ಲಿ  ಇರುವ  ಮನೆಯನ್ನು   2005 ನೇ ಇಸ್ವಿಯಲ್ಲಿ   ವಿಭಾಗ   ಪತ್ರ  ಆಗಿದ್ದು, ಅದರ ಒಂದು  ಅಂಶದಲ್ಲಿ  ಫಿರ್ಯಾದುದಾರರ  ಸಂಸಾರ ವಾಸವಾಗಿರುತ್ತದೆ,  ಈ  ವಾಸದ  ಮನೆಗೆ  ಪಂಚಾಯತ್‌ನವರು   ಪ್ರತೇಕವಾಗಿ  2-1 (ಬಿ)  ಎಂದು    ಮನೆ  ನಂಬ್ರ  ನೀಡಿರುತ್ತಾರೆ, ಸದ್ರಿ ಮನೆಯ  ಹಾಗೂ ಆಸ್ತಿಯಬಗ್ಗೆ  ಫಿರ್ಯಾಧುದಾರರ  ಗಂಡ   ಹಾಗೂ ಆರೋಪಿತ 1. ಪದ್ಮಾವತಿ ಕಟ್ಟೆ.ಗಂಡ. ರತ್ನಾಕರ ಕಟ್ಟಿ ವಾಸ. ಹುಳಿಮಾವಿನಕೊಡ್ಲು ಕುಳ್ಳುಂಜೆ  ಗ್ರಾಮ 2. ವಿಷ್ನುಮೂರ್ತಿ ತಂದೆ.  ಶ್ರೀಕರ   ಕಟ್ಟೆ  ವಾಸ. ಹುಳಿಮಾವಿನಕೊಡ್ಲು ಕುಳ್ಳುಂಜೆ  ಗ್ರಾಮ 3 ಗಣೇಶ.ಮೂರ್ತಿ  ತಂದೆ.  ಶ್ರೀಕರ   ಕಟ್ಟೆ  ವಾಸ. ಹುಳಿಮಾವಿನಕೊಡ್ಲು ಕುಳ್ಳುಂಜೆ  ಗ್ರಾಮ 4. ಶ್ರೀಮತಿ ಶ್ರೀದೇವಿ ಕಟ್ಟೆ  ಗಂಡ. ಮಾಧವ ಹೆಜಮಾಡಿ ವಾಸ. ಚರ್ಚರಸ್ತೆ  ಕುಂದಾಪುರ5. ಮಾಧವ ಹೆಜಮಾಡಿ ವಾಸ. ಚರ್ಚರಸ್ತೆ  ಕುಂದಾಪುರ 6.ನಾಗಾರ್ಜುನ ತಂದೆ  ಮಾಧವ ಹೆಜಮಾಡಿ ವಾಸ. ಚರ್ಚರಸ್ತೆ  ಕುಂದಾಪುರ ಇವರುಗಳಿಗೆ  ತಕರಾರು  ಇದ್ದು, ಮಾನ್ಯ   ಹೆಚ್ಚುವರಿ ಸಿವಿಲ್  ನ್ಯಾಯಾಲಯ   ಕುಂದಾಪುರದಲ್ಲಿ  ಓ,ಎಸ್‌  ನಂಬ್ರ  381/2020 ರಂತೆ  ಸಿವಿಲ್   ಪ್ರಕರಣ   ವಿಚಾರಣೆಯಲ್ಲಿ ಇರುತ್ತದೆ,   ಸದ್ರಿ  ಮನೆಯ  ಕರೆಂಟ್   ಕಡಿತ ಮಾಡಿದ ಕಾರಣ  ರಾತ್ರಿ ಸಮಯ   ಸದ್ರಿ  ಮನೆಯಲ್ಲಿ  ಯಾರೂ  ಇರುವುದಿಲ್ಲ,  ಮನೆಯಲ್ಲಿ   ಅವರ  ಸೊತ್ತುಗಳು ಇರುತ್ತದೆ,   ದಿನಾಂಕ 03.01.2021  ರಂದು   19:00  ಘಂಟೆಗೆ ಮನೆಯಲ್ಲಿ  ಯಾರೂ  ಇಲ್ಲದ ಸಮಯ   ಆರೋಪಿಗಳು  ಅಕ್ರಮಕೂಟ  ಕೂಡಿಕೊಂಡು  ಸದ್ರಿ   ಮನೆಗೆ  ಅಕ್ರಮ ಪ್ರವೇಶ  ಮಾಡಿ  ಅವರ    ವಾಸದ  ಮನೆಯ   ಕೋಣೆಯ  ದ್ವಾರ ಬಾಗಿಲನ್ನು  ಒಡೆದು  ಹಾಕಿ  ಕಿಟಕಿಯನ್ನು  ಮುರಿದು ಆ  ಭಾಗಕ್ಕೆ  ಗೋಡೆಯನ್ನು ಕಟ್ಟಿ   ಮನೆಯ  ಒಳಗೆ ಇದ್ದ   ಒಂದು ಲಕ್ಷ   ರೂಪಾಯಿ  24 ಗ್ರಾಂ ಚಿನ್ನದ ನೆಕ್ಲೇಸ್  , ಹಾಗೂ   ಕೃಷಿ ಉಪಕರಣಗಳನ್ನು  ಬಟ್ಟೆ ಬರೆ , ಕಪಾಟು ಹಾಗೂ   6 ಕುರ್ಚಿಗಳನ್ನು   ದೋಚಿಕೊಂಡು  ಹೋಗಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ 29/2021  ಕಲಂ:143,147,148,448,427,395,504,506   ಜೊತೆಗೆ  149   ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ : ಫಿರ್ಯಾದಿ ಶ್ರೀಪಾದ ಕಟ್ಟೆ ಇವರು  ಕುಂದಾಪುರ  ತಾಲೂಕಿನ   ಕುಳ್ಳುಂಜೆ  ಗ್ರಾಮದ  ಹುಳಿಮಾವಿನಕೊಡ್ಲು  ಎಂಬಲ್ಲಿ ಅವರ   ಸಂಸಾರದೊಂದಿಗೆ  ವಾಸವಾಗಿರುತ್ತಾರೆ, ಅವರ   ಮನೆಯ   ಇನ್ನೊಂದು ಬದಿಯಲ್ಲಿ ಅವರ  ತಾಯಿ  ಶ್ರೀಮತಿ  ಪದ್ಮಾವತಿ  ಕಟ್ಟೆ ಹಾಗೂ  ಇತರ   ಆರೋಪಿತ 1. ವಿಷ್ಣುಮೂರ್ತಿ ತಂದೆ.  ಶ್ರೀಕರ   ಕಟ್ಟೆ  ವಾಸ. ಹುಳಿಮಾವಿನಕೊಡ್ಲು ಕುಳ್ಳುಂಜೆ  ಗ್ರಾಮ  2 ಗಣೇಶ.ಮೂರ್ತಿ  ತಂದೆ.  ಶ್ರೀಕರ   ಕಟ್ಟೆ  ವಾಸ. ಹುಳಿಮಾವಿನಕೊಡ್ಲು ಕುಳ್ಳುಂಜೆ  ಗ್ರಾಮ 3. ಶ್ರೀಮತಿ ಶ್ರೀದೇವಿ ಕಟ್ಟೆ  ಗಂಡ. ಮಾಧವ ಹೆಜಮಾಡಿ ವಾಸ. ಚರ್ಚರಸ್ತೆ  ಕುಂದಾಪುರ 4. ಮಾಧವ ಹೆಜಮಾಡಿ ವಾಸ. ಚರ್ಚರಸ್ತೆ  ಕುಂದಾಪುರ 5.ನಾಗಾರ್ಜುನ ತಂದೆ  ಮಾಧವ ಹೆಜಮಾಡಿ ವಾಸ. ಚರ್ಚರಸ್ತೆ  ಕುಂದಾಪುರ ಇವ ರುಗಳು ಮನೆ  ನಂಬ್ರ   2-1 ರಲ್ಲಿ  ವಾಸವಾಗಿರುತ್ತಾರೆ  .  ಆರೋಪಿಗಳು ಫಿರ್ಯಾಧುದಾರರಲ್ಲಿ  ಪದೇ ಪದೇ  ಮನೆ  ಬಿಟ್ಟು ಹೋಗುವಂತೆ   ಸತಾಯಿಸಿರುತ್ತಾರೆ, ಇದಕ್ಕೆ  ಫಿರ್ಯಾಧುದಾರರು  ಒಪ್ಪದೇ ಇದ್ದಾಗ ಆರೋಪಿಗಳು  ಅವರನ್ನು ಹಾಗೂ ಅವರ  ಹೆಂಡತಿ  ಮಕ್ಕಳನ್ನು   ಜೀವ ಸಹಿತ  ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆ. ದಿನಾಂಕ  06.12.2020  ರಂದು    ಸುಮಾರು  15;00  ಗಂಟೆಗೆ  ಫಿರ್ಯಾಧುದಾರರು  ಮನೆಯ  ಹತ್ತಿರ  ಇರುವಾಗ   ಆರೋಪಿಗಳು  ಅವರಿಗೆ ಹಾಗೂ ಅವರ  ಹೆಂಡತಿಗೆ  ನಿಮ್ಮ ಕೈ  ಕಾಲು ಮುರಿಯುತ್ತೇವೆ,ನಿಮ್ಮನ್ನು ಕೊಲೆ ಮಾಡುತ್ತೇವೆ ಎಂದು  ಬೆದರಿಕೆ ಹಾಕಿ  ಅವಾಚ್ಯ ಶಬ್ದದಿಂದ ಬೈದು  ನಿಂದಿಸಿರುತ್ತಾರೆ ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ 30/2021 ಕಲಂ: ,504,506  ಜೊತೆಗೆ  34    ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

    ಅಫಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ: 18/03/2021 ರಂದು ಮಧ್ಯಾಹ್ನ ಸುಮಾರು 1:00 ಗಂಟೆಯ ಸಮಯಕ್ಕೆ ಪಿರ್ಯಾದಿ ಸುಧೀರ್ ಕೆ. ಶೆಟ್ಟಿ ಇವರು ಅವರ ಮಾಲಕತ್ವದ ಚೇರ್ಕಾಡಿ ಗ್ರಾಮದ, ಪೇತ್ರಿ, ಗೊದ್ದನಕಟ್ಟೆ ನ್ಯೂ ಕುಬೇರಾ ಬಾರ್ & ರೆಸ್ಟೊರೆಂಟ್ ಎದುರುಗಡೆ ನಿಂತಿರುವಾಗ ಬ್ರಹ್ಮಾವರ ಕಡೆಯಿಂದ ಆರೋಪಿ ಸನತ್‌ ಶೆಟ್ಟಿ ಎಂಬವರು ತನ್ನ ಬಾಬ್ತು KA.41.W.7028  ನೇ ನಂಬ್ರದ ಮೋಟಾರ್ ಸೈಕಲ್‌ನ್ನು ಬ್ರಹ್ಮಾವರ ಹೆಬ್ರಿ ರಸ್ತೆಯಲ್ಲಿ ಹೆಬ್ರಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಬಾರ್‌ನ ಸ್ವಲ್ಪ ಹಿಂದೆ ರಸ್ತೆಯ ಎಡಬದಿಯಿಂದ ಬಾರ್‌ನ ಕಡೆಗೆ ಬರಲು ರಸ್ತೆ ದಾಟಲು ನಿಂತಿದ್ದ ಐತ ಎಂಬವರಿಗೆ ಡಿಕ್ಕಿ ಹೊಡೆದು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದರು.  ಈ ಅಪಘಾತದ ಪರಿಣಾಮ ಐತ ರವರು ರಸ್ತೆಗೆ ಬಿದ್ದು  ಅವರ ತಲೆಯ ಹಿಂಬದಿಗೆ ಗಾಯವಾಗಿ ತೀವ್ರ ಅಸ್ವಸ್ಥಗೊಂಡಿರುತ್ತಾರೆ. ಅಲ್ಲದೇ ಆರೋಪಿ ಸನತ್‌ ಶೆಟ್ಟಿ ರವರ ಬಲಕಾಲಿನ ಮೊಣ ಗಂಟಿನ ಬಳಿ ಹಾಗೂ ಬೆನ್ನಿನ ಬಳಿ ತರಚಿದ ಗಾಯವಾಗಿರುತ್ತದೆ. ಗಾಯಾಳು ಐತ ರವರನ್ನು ಹಾಗೂ ಸನತ್‌ ಶೆಟ್ಟಿ ರವರನ್ನು ಚಿಕಿತ್ಸೆ ಬಗ್ಗೆ  ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿ,  ಐತ ರವರನ್ನು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 42/2021 ಕಲಂ 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

  • ಹಿರಿಯಡ್ಕ:  ಪಿರ್ಯಾಧಿ ಪದ್ಮನಾಭ ಭಟ್  ಇವರು ದಿನಾಂಕ:17-03-2021 ರಂದು ಕೆಲಸದ ನಿಮಿತ್ತ ತನ್ನ ಬಾಬ್ತು KA-20-EU-0515 ನೇ ಸ್ಕೂಟರ್ ನ್ನು ಪೆರ್ಡೂರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಬೆಳಿಗ್ಗೆ ಸಮಯ  ಸುಮಾರು 11:00  ಗಂಟೆ ವೇಳೆಗೆ ಪಕ್ಕಾಲು ಕಿರು ಸೇತುವೆ ಬಳಿ ತಲುಪುವಾಗ್ಗೆ ಪಿರ್ಯಾಧಿದಾರರ ಹಿಂದಿನಿಂದ ಅಂದರೆ  ಹಿರಿಯಡ್ಕದಿಂದ ಪೆರ್ಡೂರು ಕಡೆಗೆ ಹೋಗುವ ಗೂಡ್ಸ್ ವಾಹನವನ್ನು ಅದರ ಚಾಲಕ ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ಸ್ಕೂಟರನ್ನು  ಓವರ್ ಟೇಕ್ ಮಾಡುವ ಭರದಲ್ಲಿ ತೀರಾ ಎಡಕ್ಕೆ ಬಂದು ಸ್ಕೂಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ಬಿದ್ದ ಪರಿಣಾಮ ಬಲಕಾಲಿನ ಮಣಿಗಂಟಿಗೆ, ಬಲ ಭುಜಕ್ಕೆ ಗುದ್ದಿದ ನೋವುಂಟಾಗಿರುವುದಲ್ಲದೆ, ಎರಡು ಕಾಲುಗಳಿಗೆ ಮತ್ತು  ಕೈಗಳಿಗೆ ಹಾಗೂ ಹಣೆಗೆ ತರಚಿದ ರಕ್ತಗಾಯವಾಗಿರುತ್ತದೆ.. ಪಿರ್ಯಾಧಿದಾರರಿಗೆ ಅಪಘಾತ ಮಾಡಿದ ವಾಹನ ಗೂಡ್ಸ್ ವಾಹನದ ಚಾಲಕ ವಾಹನವನ್ನು ನಿಲ್ಲಿಸದೇ ಹೋಗಿರುತ್ತಾರೆ. ಪಿರ್ಯಾದಿದಾರರು ಗೂಡ್ಸ್ ವಾಹನದ ನಂಬ್ರ ತಿಳಿಯಲಾಗಿ ಕೆಎ-68-1516 ಆಗಿರುವುದಾಗಿಯೂ, ಈ ಅಪಘಾತಕ್ಕೆ ಕೆಎ-68-1516 ನೇ ಗೂಡ್ಸ್ ವಾಹನದ ಚಾಲಕನ ಅತೀ ವೇಗದ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 11/2021   ಕಲಂ: 279,337  ಐಪಿಸಿ 134 (ಎ)(ಬಿ) ಐಎಂವಿ ಕಾಯ್ದೆ   ಯಂತೆ ಪ್ರಕರಣ ದಾಖಲಾಗಿರುತ್ತದೆ.

  • ಕಾಪು: ಪಿರ್ಯಾದಿ ಅನೀಶ್ ಇವರು ದಿನಾಂಕ 18/03/2021 ರಂದು ಬೆಳಗ್ಗೆ 10.00 ಗಂಟೆಗೆ ತನ್ನ ಬಾಬ್ತು ಮೋಟಾರ್ ಸೈಕಲ್ ಚಲಾಯಿಸಿಕೊಂಡು ಪೊಲಿಪು ಡಿವೈಡರ್ ಬಳಿ ನಿಲ್ಲಿಸಿ ಉಡುಪಿ ಮಂಗಳೂರು ರಾ. ಹೆ 66 ನೇ ರಸ್ತೆ  ದಾಟಲು  ಪಿರ್ಯಾದಿದಾರರು ಮತ್ತು ಪಿರ್ಯಾದಿದಾರರ ಮುಂದೆ ಜಾನಕಿ ಎಂಬವರು ಏಕಮುಖ ರಸ್ತೆಯ ಬದಿಯಲ್ಲಿ ನಿಂತು ವಾಹನಗಳನ್ನು ಅವಲೋಕಿಸುತ್ತಿರುವಾಗ ಉಡುಪಿ ಮಂಗಳೂರು  ರಾ ಹೆ  66 ರಲ್ಲಿ ಉಡುಪಿ ಕಡೆಯಿಂದ  ಮಂಗಳೂರು ಕಡೆಗೆ  ರಾಜೇಂದ್ರ ಪ್ರಸಾದ ಯಾದವ್‌ ಎಂಬವನು ತನ್ನ ಬಾಬ್ತು ಎಮ್. ಹೆಚ್. 03 ಬಿ. ಜೆ. 4350  ನೇ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಜಾನಕಿ ರವರಿಗೆ ಢಿಕ್ಕಿ ಹೊಡೆದ  ಪರಿಣಾಮ ಜಾನಕಿ ರವರು ರಸ್ತೆಗೆ ಬಿದ್ದಿದ್ದು, ಕೂಡಲೇ ಪಿರ್ಯಾದಿದಾರರ ಹೋಗಿ ಅಲ್ಲಿ ಸೇರಿದ ಜನರ ಸಹಾಯದಿಂದ ಜಾನಕಿ ರವರನ್ನು ಎತ್ತಿ ಆರೈಕೆ ನೋಡಿ ಅವರಿಗೆ ಎರಡು ಕಾಲುಗಳಿಗೆ ತೀವೃತರವಾದ ರಕ್ತಗಾಯ ಮತ್ತು ದೇಹದ ಕೆಲವು ಕಡೆ ತರಚಿದ ಗಾಯಗಳಾಗಿದ್ದು, ಅಲ್ಲಿ ಸೇರಿದ ಜನರು ಚಿಕಿತ್ಸೆಯ ಬಗ್ಗೆ ಜಾನಕಿ ರವರನ್ನು  ಒಂದು ವಾಹನದಲ್ಲಿ ಉಡುಪಿ ಕಡೆಗೆ ಕರೆದುಕೊಂಡು ಹೋಗಿರುತ್ತಾರೆ.  ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 40/2021  ಕಲಂ 279 338   ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

    ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ:  ಉಡುಪಿ ತಾಲೂಕು  ಕುತ್ಪಾಡಿ  ಗ್ರಾಮದ ನಿತ್ಯಾನಂದ ಐಸ್‌  ಪ್ಲಾಂಟ್‌ ಎದುರಿಗಿರುವ ಮನೆನಂಬ್ರ  12-58ಎ,  'ಸೌಮ್ಯ  ನಿಲಯ'ದಲ್ಲಿ  ವಾಸವಿರುವ ಫಿರ್ಯಾದಿ ಬೋಳ  ಪೂಜಾರಿ ಇವರ  ಮಗನಾದ  ವಿಠ್ಠಲ್‌ ಪೂಜಾರಿ(36 ವರ್ಷ)ಯು ಅವಿವಾಹಿತನಾಗಿದ್ದು,  ಕಳೆದ ಹತ್ತು  ವರ್ಷಗಳಿಂದ ಮಾನಸಿಕ  ಖಾಯಿಲೆಯಿಂದ  ಬಳಲುತ್ತಿದ್ದು, ಈ ಬಗ್ಗೆ  ಚಿಕಿತ್ಸೆ ಪಡೆದರೂ  ಗುಣಮುಖನಾಗದ  ಚಿಂತೆಯಿಂದ ಜೀವನದಲ್ಲಿ  ಜಿಗುಪ್ಸೆ  ಹೊಂದಿ,  ದಿನಾಂಕ: 18/03/2021ರಂದು  ಬೆಳಿಗ್ಗೆ  9:00  ಗಂಟೆಯಿಂದ  10:15  ಗಂಟೆಯ  ಮಧ್ಯಾವಧಿಯಲ್ಲಿ ಮನೆಯ  ಬಳಿಯ  ಮನೋಹರ ಶೆಟ್ಟಿರವರ  ಬಾಬ್ತು  ಹಾಡಿ ಜಾಗದಲ್ಲಿನ ನೇಣು  ಬಿಗಿದುಕೊಂಡು  ಆತ್ಮಹತ್ಯೆ  ಮಾಡಿಕೊಂಡಿರುತ್ತಾನೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 11/2021 ಕಲಂ:174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 18-03-2021 06:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080