ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾಪು: ಪಿರ್ಯಾದಿ: ಇಶ್ರತ್ ಬಾನು ಪ್ರಾಯ : 50 ವರ್ಷ  ಗಂಡ : ಮಕ್ಬುಲ್ ಅಹಮ್ಮದ್ ವಾಸ : ಮನೆ ನಂಬ್ರ 3-127(3ಸಿಎ) ಭರತನಗರ, ಊಳಿಯಾರಗೋಳಿ ಗ್ರಾಮ ಇವರು ದಿನಾಂಕ 17-02-2023 ರಂದು ಪಡು ಗ್ರಾಮ ಮಸೀದಿ ಎದುರು ರಾ ಹೆ 66 ರ ಮಂಗಳೂರು ಉಡುಪಿ ರಸ್ತೆಯ ಪಶ್ಚಿಮ ಬದಿಯ ಅಂಚಿನಿಲ್ಲಿರುವಾಗ ಸಮಯ ಸುಮಾರು ಮದ್ಯಾಹ್ನ 3.20 ಗಂಟೆಗೆ  ಸೀನ ಪೂಜಾರಿ ಬೈಂದೂರು ರವರು ತನ್ನ KA-47-H-5463 ನೇ ಸ್ಕೂಟರನ್ನು ಅದೇ ರಸ್ತೆಯಲ್ಲಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ತೀರಾ ರಸ್ತೆಯ ಎಡಕ್ಕೆ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರಿಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಪಿರ್ಯಾದಿದಾರರು ಹಾಗೂ ಸೀನ ಪೂಜಾರಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು,  ಪಿರ್ಯಾದಿದಾರರಿಗೆ ಬಲಕಾಲಿನ ಮೂಳೆ ಜಖಂ ಆಗಿದ್ದು, ತಲೆಯ ಹಿಂಭಾಗಕ್ಕೆ ತರಚಿದ ಗಾಯವಾಗಿದ್ದು, ಹಾಗೂ ಸೀನ ಪೂಜಾರಿ ರವರಿಗೆ ಎಡಗೈಗೆ ಪೆಟ್ಟಾಗಿದ್ದು,  ಸ್ಥಳಕ್ಕೆ ಬಂದ ವಾಹನವೊಂದರಲ್ಲಿ ಸೀನ ಪೂಜಾರಿ ರವರು ಪಿರ್ಯಾದಿದಾರರಿಗೆ ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಕಾಪು ಠಾಣಾ ಅಪರಾಧ ಕ್ರಮಾಂಕ. 26/2023 ಕಲಂ 279, 337, 338 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಕೊಲ್ಲೂರು:  ಪಿರ್ಯಾದಿ: ಪ್ರಶಾಂತ್ ಪೂಜಾರಿ (29) ತಂದೆ: ಮಹಾಬಲ ಪುಜಾರಿ  ವಾಸ: ವೆಂಕಮ್ಮ ನಿಲಯ ಮಣೆಗಾರ ಮನೆ ಹಳೆ ಅಳಿವೆ ಬಿಜಾಡಿ ಕೋಟೇಶ್ವರ ಅಂಚೆ ಕುಂದಾಪುರ ಇವರು ದಿನಾಂಕ 17-02-2023 ರಂದು 12-30  ರಂದು  ಕೆಲಸದ ನಿಮಿತ್ತ  ತನ್ನ  KA20 HA 3409 ನೇ ರಾಯಲ್ ಎನ್ ಫಿಲ್ಡ್ ಹಂಟರ್  ಮೋಟಾರ್ ಸೈಕಲ್ ನ್ನು  ಕುಂದಾಫುರ – ಕಡೆಯಿಂದ ಮಾರಣಕಟ್ಟೆ  ದೇವಸ್ಥಾನದ ಕಡೆಗೆ ಚಲಾಯಿಸಿಕೊಂಡು ಹೋಗುವಾಗ ಚಿತ್ತೂರು ಜಂಕ್ಷನ್ ನಲ್ಲಿ ಬಲಗಡೆ ಇಂಡಿಕೇಟರ್ ಹಾಕಿ ಚಲಾಯಿಸಿಕೊಂಡು ಹೋಗುತ್ತಿರುವಾಗ ಪಿರ್ಯಾದಿದಾರರ ಹಿಂದಿನಿಂದ ಆರೋಪಿ ಸಂತೋಷ್  ನ್ನು ತೀರ ಬಲ ಬದಿಗೆ ಚಲಾಯಿಸಿ  KA20 EZ 9002 ನೇ ಮೋಟಾರ್ ಸೈಕಲ್  ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ  ರಸ್ತೆಯ ತೀರ ಬಲ ಬದಿಗೆ ಚಲಾಯಿಸಿ  ಪಿರ್ಯಾದಿದಾರರ  ಬೈಕ್ ಗೆ ಹಿಂದಿನಿಂದ ಡಿಕ್ಕಿ  ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು  ಬಲಕಾಲಿನ ಪಾದದ ಬಳಿ, ಬಲ ಮೊಣಕಾಲು, ಬಲ ಮೊಣ ಕೈಗೆ  ತರಚಿದ ಗಾಯವಾಗಿದ್ದು  ಚಿಕಿತ್ಸೆಬಗ್ಗೆ ಕುಂದಾಪುರ ವಿನಯ್ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ. ಪ್ರಕರಣದ 2 ವಾಹನಗಳು ಜಖಂಗೊಂಡಿರುತ್ತದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ  09/2023 ಕಲಂ: 279,  337 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಶಂಕರನಾರಾಯಣ: ಪಿರ್ಯಾದಿ: ಪ್ರಾಯ 31 ವರ್ಷ ಗಂಡ. ಉದಯ ಮೊಗವೀರ ವಾಸ,  ಹೆಸ್ಕುಂದಾ ನಂಚಾರು ಗ್ರಾಮ    ಇವರ  ಗಂಡ   ಉದಯ  ಮೊಗವೀರ  ಇವರು  ಗೋಳಿಯಂಗಡಿಯಲ್ಲಿ ಕೆಲಸ  ಮಾಡಿಕೊಂಡಿದ್ದು, ಅವರು ದಿನಾಂಕ 16.02.2023 ರಂದು  20;15  ಘಂಟೆಗೆ  ಕೆಎ.20 ಇಕ್ಯೂ, 8202 ನೇ ನಂಬ್ರದ  ಮೋಟಾರ್  ಸೈಕಲ್‌‌ನಲ್ಲಿ ಬ್ರಹ್ಮಾವರ   ತಾಲೂಕಿನ  ಹಿಲಿಯಾಣ ಗ್ರಾಮದ  ಹಿಲಿಯಾಣ ಜೆಡ್ಡು  ಎಂಬಲ್ಲಿ   ಹೋಗುತ್ತಿರುವಾಗ  ಆರೋಪಿಯು ಕೆಎ.19 ವಿ. 4060 ನೇ ನಂಬ್ತದ  ಮೋಟಾರ್ ಸೈಕಲ್‌ನ್ನು  ಮಂದರ್ತಿ ಕಡೆಯಿಂದ  ಹಿಲಿಯಾಣ  ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು  ಬಂದು ಉದಯ  ಮೊಗವೀರ  ಇವರು  ಚಲಾಯಿಸಿಕೊಂಡು ಹೋಗುತ್ತಿದ್ದ  ಮೋಟಾರ್  ಸೈಕಲ್‌‌ಗೆ  ಡಿಕ್ಕಿ  ಹೊಡೆದಿರುತ್ತಾನೆ , ಇದರ ಪರಿಣಾಮ  ಕೆಎ. 20 ಇಕ್ಯೂ. 8202 ನೇ ನಂಬ್ರದ  ಮೋಟಾರ್  ಸೈಕಲ್ ಸವಾರ   ಉದಯ ಮೊಗವೀರ ಇವರ  ಮುಖಕ್ಕೆ  ಗಂಭೀರ  ಗಾಯವಾಗಿರುತ್ತದೆ,   ಹಾಗೂ  ಕೆಎ.19  ವಿ, 4060 ನೇ ನಂಬ್ರದ ಮೋಟಾರ್  ಸೈಕಲ್  ಸವಾರ  ರಂಜೀತ್ ಹಾಗೂ ಅದರಲ್ಲಿ  ಪ್ರಯಾಣ  ಮಾಡುತ್ತಿದ್ದ  ಇತರ  ಮೂರು ಜನರಿಗೆ ಸಹ   ರಕ್ತಗಾಯವಾಗಿರುತ್ತದೆ, ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 16/2023  ಕಲಂ:279,337,338 . ಐ.ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಕಳವು ಪ್ರಕರಣ

 • ಬೈಂದೂರು: ಪಿರ್ಯಾದಿ: ಸುರೇಂದ್ರ ಪೂಜಾರಿ ಪ್ರಾಯ: 48 ವರ್ಷ ತಂದೆ: ದೇವಪ್ಪ ಪೂಜಾರಿ ವಾಸ: ಗುರಮಕ್ಕಿ ಯಡೇರಿ ಕಾಲ್ತೋಡು ಗ್ರಾಮ ಇವರು ಕಾಲ್ತೋಡು ಗ್ರಾಮದ ಯಡೇರಿ ಗುರಮಕ್ಕಿ ಎಂಬಲ್ಲಿ ತಾಯಿ ಹಾಗೂ ತಂಗಿಯೊಂದಿಗೆ ವಾಸ ಮಾಡಿಕೊಂಡಿದ್ದು  ಸುಮಾರು 3 ತಿಂಗಳ ಹಿಂದೆ ಮಹಾಂತೇಶ್ ಎಂಬವರಿಗೆ ಮನೆಯ ಮೇಲ್ಚಾವಣಿಯ ಅಡ್ಡಗೋಡೆ ಕಟ್ಟಲು ಮತ್ತು  ಗಾರೆ ಕೆಲಸ ಮಾಡಲು ಮನೆಗೆ ಕರೆಯಿಸಿಕೊಂಡಿದ್ದು  ಮಹಾಂತೇಶ್ ರವರು ಡಿಸೆಂಬರ್ 20 ರ ಒಳಗೆ ಮನೆ ಕೆಲಸ ಮುಗಿಸಿದ್ದು  ಫಿರ್ಯಾದುದಾರರು ಮಹಾಂತೇಶ್ ರವರಿಗೆ ಮನೆ ಕೆಲಸದ ಲೆಕ್ಕಾಚಾರ ಮಾಡಿ ಬಾಕಿ ಹಣ ನೀಡಿ ಕಳುಹಿಸಿರುತ್ತಾರೆ. ಬಳಿಕ ಸುಮಾರು 15 ದಿನಗಳ ನಂತರ ಮಹಾಂತೇಶ್ ನು  ವಾಪಾಸ್ಸು ಫಿರ್ಯಾದುದಾರರ ಮನೆಗೆ ಬಂದಿದ್ದು ಆ ಸಮಯ ಫಿರ್ಯಾದುದಾರರು ಮಹಾಂತೇಶನ ಬಳಿ ತನ್ನ ಮನೆ ಕೆಲಸ ಮಗಿದಿದ್ದು ಈಗಾಗಲೇ ಲೆಕ್ಕಾಚಾರ ಮಾಡಿ ನಿನಗೆ ಕೊಡಬೇಕಾದ ಬಾಕಿ ಹಣವನ್ನು  ನೀಡಲಾಗಿದೆ. ನೀನು ಪದೇ ಪದೇ ಮನೆಗೆ  ಬರುವದು ಸರಿಯಲ್ಲ  ಎಂದು ಹೇಳಿ ಕಳುಹಿಸಿರುತ್ತಾರೆ.   ದಿನಾಂಕ 31/01/2023 ರಂದು ಮಹಾಂತೇಶ ನು ರಾತ್ರಿ 8:15 ಗಂಟೆಗೆ ಫಿರ್ಯಾದುದಾರರ ತಂಗಿ  ಲಕ್ಷ್ಮೀ  ಹಾಗೂ ತಾಯಿ ಇಬ್ಬರೇ ಹೆಂಗಸರು ಮನೆಯಲ್ಲಿರುವುದನ್ನು ನೋಡಿ ಮನೆಯ ಒಳಗಡೆ ಬಂದಿದ್ದು  ಫಿರ್ಯಾದುದಾರರ ತಂಗಿ ಮನೆಯ ಬಾತ್ ರೂಂ ನಲ್ಲಿ ಸ್ನಾನ ಮಗಿಸಿ  ಹೊರಗಡೆ ಬರುವ ಸಮಯ ಅವರನ್ನು ನೋಡಿ  ಮಹಾಂತೇಶನು ಮನೆಯ ಕೋಣೆಯಿಂದ ಓಡಿ ಹೋಗಿದ್ದು ದಿನಾಂಕ 01/02/2023 ರಂದು ಫಿರ್ಯಾದಿದಾರರ ತಂಗಿ ಲಕ್ಷ್ಮೀ ಯು ಕೋಣೆಯ ಪೆಟ್ಟಿಗೆಯಲ್ಲಿಟ್ಟಿದ್ದ  ಚಿನ್ನದ ಕರಿಮಣಿ ಸರವನ್ನು ನೋಡಿದಾಗ ಚಿನ್ನದ ಸರ ಕಾಣಿಸದೇ ಇದ್ದು  ಮಹಾಂತೇಶನು ಕೋಣೆಯ  ಪೆಟ್ಟಿಗೆಯಲ್ಲಿಟ್ಟಿದ್ದ 24 ಗ್ರಾಂ ತೂಕದ 1,20,000 ರೂ  ಬೆಲೆಬಾಳುವ ಚಿನ್ನದ ಕರಿಮಣಿ ಸರವನ್ನು ಕಳವುಮಾಡಿಕೊಂಡು ಹೋಗಿರುತ್ತಾನೆ ಎಂಬಿತ್ಯಾದಿ ದೂರಿನ ಸಾರಾಂಶವಾಗಿರುತ್ತದೆ . ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  30/2023 ಕಲಂ: 457, 380 ಐ.ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಕಾಪು: ಪಿರ್ಯಾದಿ: ಪೂಜಾ (31) ತಂದೆ: ಬೋಜ ಪೂಜಾರಿ, ವಾಸ: ಸಗ್ರಿ ಕುಂಜಿಬೆಟ್ಟು ಅಂಚೆ, ಶಿವಳ್ಳಿ ಗ್ರಾಮ ಇವರು ದಿನಾಂಕ 17-02-2023 ರಂದು 16:30 ಗಂಟೆಗೆ ತನ್ನ ದೊಡ್ಡಮ್ಮನ ಮಗಳಾದ ಉಷಾರೊಂದಿಗೆ ಕಾಪುವಿನ ಮಲ್ಲಾರು ಗ್ರಾಮದ  ಕೊಪ್ಪಲಂಗಡಿಗೆ ತನ್ನ ಬಾಬ್ತುಹೊಂಡ  ಡಿಯೋ ಸ್ಕೂಟರ್‌ ನಂಬ್ರ ಕೆ.ಎ.-20-ಇಪಿ-0913 ನೇಯದರಲ್ಲಿ ಉಡುಪಿಯಿಂದ ಹೊರಟು 16:55 ಗಂಟೆ ಸುಮಾರಿಗೆ ಕಾಪುವಿಗೆ ಬಂದು ಇಲ್ಲಿನ ಮೋರ್‌ ಅಂಗಡಿಯಲ್ಲಿ  ಉಷಾಳ ಸಂಬಂಧಿಕರ ಮಗುವಿಗೆ ಪೆನ್ಸಿಲ್‌ ಸೆಟ್ಟ ತೆಗೆದುಕೊಳ್ಳುವರೇ ಹೋಗಿದ್ದು ಅಲ್ಲಿ ತಮಗೆ ಬೇಕಾದ ಪೆನ್ಸಿಲ್‌ ಸಿಗದ ಕಾರಣ ಸ್ಟೇಷನರಿ ಅಂಗಡಿಗೆ ಹೋಗಿ ಅಲ್ಲಿ ಪೆನ್ಸಿಲನ್ನು ತೆಗೆದುಕೊಂಡು ಮರಳಿ ಸ್ಕೂಟರ್‌ ಇಟ್ಟಲ್ಲಿಗೆ ಸುಮಾರು 17:15 ಗಂಟೆಗೆ  ಬಂದು ಮೊಬೈಲನ್ನು ಸ್ಕೂಟರ್‌ನ ಸೀಟಿನ ಕೆಳಗಿರುವ ಡಿಕ್ಕಿಯಲ್ಲಿ ಇಡುವರೇ ಸೀಟ್‌ ಓಪನ್‌ ಮಾಡಿ ನೋಡುವಾಗ  ಅಲ್ಲಿ ಬೆಸುಗೆ ಹಾಕಿಸುವುದಕ್ಕಾಗಿ  ತಂದಿದ್ದ ಚಿನ್ನದ ಸರ ಹಾಗೂ ಪೆಂಡೆಂಟ್‌ ಇಟ್ಟಿದ್ದ ಸಣ್ಣ ಪಸ೯ ಕಾಣದೇ ಇದ್ದು ಅಕ್ಕ ಪಕ್ಕದವರಲ್ಲಿ ಹಾಗೂ ಹತ್ತಿರದ ಅಂಗಡಿಯಲ್ಲಿ ವಿಚಾರಿಸಿದಾಗ ಯಾವುದೇ ಮಾಹಿತಿ ತಿಳಿಯದೇ ಇದ್ದು, ಯಾರೋ ಕಳ್ಳರು 16:55 ಗಂಟೆಯಿಂದ 17:15 ಗಂಟೆಯ ನಡುವೆ ಪಿಯಾ೯ದಿದಾರರ  ಸ್ಕೂಟರ್‌ನ ಸೀಟಿನ ಲಾಕ್‌ ಓಪನ್‌ ಮಾಡಿ ಒಳಗೆ ಇಟ್ಟಿದ್ದ  16 ಗ್ರಾಂ ತೂಕದ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿದ್ದು ಸದ್ರಿ ಸರದ ಅಂದಾಜು ಮೌಲ್ಯ ಸುಮಾರು 48,000/- ರೂಪಾಯಿಗಳಾಗಬಹುದು. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ. 27/2023 ಕಲಂ 379 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಮಾದಕ ವಸ್ತು ಸೇವನೆ ಪ್ರಕರಣ

 • ಕೊಲ್ಲೂರು: ದಿನಾಂಕ16/02/20 23 ರಂದು ಮಧ್ಯಾಹ್ನ 12:15 ಗಂಟೆಗೆ  ಪಿರ್ಯಾದಿ : ಈರಣ್ಣ ಶಿರಗುಂಪಿ ಪಿ.ಎಸ್‌.ಐ ಕೊಲ್ಲೂರು ಪೊಲೀಸ್‌ ಠಾಣೆ  ಇವರು ಕೊಲ್ಲೂರು ದೇವಸ್ಥಾನ ಬಂದೋಬಸ್ತ್ ಕರ್ತವ್ಯದಲ್ಲಿರುವಾಗ  ಬಾತ್ಮೀದಾರ ರೊಬ್ಬರು ಕರೆ ಮಾಡಿ ಬೈಂದೂರು ತಾಲೂಕು ಕೊಲ್ಲೂರು  ಗ್ರಾಮದ ದಳಿ ಬಳಿ ಓರ್ವ ವ್ಯಕ್ತಿ ಗಾಂಜಾ ಸೇವನೆ ಮಾಡುತ್ತಿರುವುದಾಗಿ ಮಾಹಿತಿ ನೀಡಿದಂತೆ  ಠಾಣಾ ಸಿಬ್ಬಂದಿ ಎ.ಎಸ್‌.ಐ ರವೀಶ ಹೊಳ್ಳ, ಪಿ.ಸಿ.1188 ಪ್ರಶಾಂತ ಹಾಗೂ ಇಲಾಖಾ ಜೀಪು ಚಾಲಕ ಎಪಿಸಿ 1591 ನಾಗರಾಜ ರವರೊಂದಿಗೆ  ಮಾಹಿತಿ ಬಂದ ಸ್ಥಳಕ್ಕೆ12:30 ಗಂಟೆಗೆ ಹೋದಾಗ ಅಲ್ಲಿ ಒಬ್ಬವ್ಯಕ್ತಿಯು ಅಮಲಿನಲ್ಲಿರುವುದು ಕಂಡು ಬಂದಿದ್ದು, ಆತನನ್ನು   ಸೂಕ್ಷ್ಮವಾಗಿ ಪರಿಶೀಲಿಸಿದಾಗ ಆತನು ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ  ಆತನನ್ನು ವಶಕ್ಕೆ ಪಡೆದು ಕೊಂಡು ವಿಚಾರಿಸಿ ವಿಳಾಸ ತಿಳಿದುಕೊಳ್ಳಲಾಗಿ ಗಣಪತಿ ಭಟ್‌(29 ವರ್ಷ) ತಂದೆ: ಲಕ್ಷ್ಮೀ ನಾರಾಯಣ  ಭಟ್‌ವಾಸ: ದಳಿ  ಕೊಲ್ಲೂರು ಗ್ರಾಮ ಬೈಂದೂರು ತಾಲೂಕು ಉಡುಪಿ ಜಿಲ್ಲೆ ಎಂಬುದಾಗಿ ತಿಳಿಸಿರುತ್ತಾನೆ. ಈತನು ಗಾಂಜಾ ದಂತಹ ಅಮಲು ಪದಾರ್ಥ ಸೇವಿಸಿರುವ ಬಗ್ಗೆ  ಅನುಮಾನ ಇದ್ದು ಆತನನ್ನು ವಶಕ್ಕೆ ತೆಗೆದುಕೊಂಡು ಆತನಿಗೆ ತಿಳುವಳಿಕೆ ನೋಟಿಸ್‌ ನೀಡಿ  ವೈದ್ಯಕೀಯ ತಪಾಸಣೆ ಬಗ್ಗೆ ಠಾಣಾ ಸಿಬ್ಬಂದಿಯವರಾದ ಪಿ.ಸಿ.1188 ಪ್ರಶಾಂತ  ರವರೊಂದಿಗೆ  ಕುಂದಾಪುರ ಶ್ರೀಮಾತಾ ಆಸ್ಪತ್ರೆಯ ವೈಧ್ಯಾಧಿಕಾರಿ ರವರ  ಮುಂದೆ ಹಾಜರುಪಡಿಸಿದ್ದು,  ಆತನನ್ನು  ಪರೀಕ್ಷಿಸಿದ ವೈದ್ಯರು ಆತನು ಗಾಂಜಾ ಸೇವಿಸಿರುವುದು ದೃಢಪಟ್ಟಿರುವುದಾಗಿ ವರದಿ ನೀಡಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ಠಾಣೆ ಅಪರಾಧ ಕ್ರಮಾಂಕ 08/2023 ಕಲಂ:27(b)   NDPS Act ರಂತೆ  ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಮಲ್ಪೆ: ಪಿರ್ಯಾದಿ: ಮಂಜುಳಾ (39) ಗಂಡ: ಹನುಮಂತಪ್ಪವಾಸ:ಸೊರಬ ತಾಲೂಕು ಶಿವಮೊಗ್ಗ ಇವರ ಗಂಡ  ಹನುಮಂತಪ್ಪ(39)  ರವರು  1 ತಿಂಗಳ ಹಿಂದೆ ಊರಿಗೆ ಬಂದು 1 ವಾರ ಮನೆಯಲ್ಲಿದ್ದು ಉಡುಪಿ ಕಡೆಗಳಲ್ಲಿ ಮಾರ್ಕೆಟ್ ನಲ್ಲಿ ಕೂಲಿ ಕೆಲಸ ಮಾಡಿಕೊಂಡಿರುತ್ತೇನೆ ಎಂದು ಹೇಳಿ  ಉಡುಪಿಗೆ ಹೋಗಿರುತ್ತಾರೆ, ಅವರ ಬಳಿ ಮೊಬೈಲ್ ಇರುವುದಿಲ್ಲ ಹಾಗೂ ಅವರು ಉಡುಪಿಯಲ್ಲಿ ಎಲ್ಲಿದ್ದರು ಎಂಬ ಬಗ್ಗೆ ನನಗೆ ಮಾಹಿತಿ ಇರುವುದಿಲ್ಲ, ಅವರು ಆಗಾಗ ಬೇರೆಯವರ ಮೊಬೈಲ್ ನಿಂದ ನನ್ನ ಮಗನ ಮೊಬೈಲ್ ಕರೆ ಮಾಡಿ ಮಾತನಾಡುತ್ತಿದ್ದರು, ದಿನಾಂಕ:16-02-2023 ರಂದು ಸಂಜೆ 4:30 ಗಂಟೆ ಸುಮಾರಿಗೆ ಮಲ್ಪೆ ಪೊಲೀಸರು ನನ್ನ ಮಗನಾದ ಅಜಿತ್ ರವರಿಗೆ ಕರೆ ಮಾಡಿ ನಿಮ್ಮ ತಂದೆಯವರು ಮೃತಪಟ್ಟಿದ್ದಾರೆ ಎಂದು ವಿಷಯ ತಿಳಿಸಿರುತ್ತಾರೆ, ನನ್ನ ಮಗನ ಮೊಬೈಲ್ ವಾಟ್ಸ್ ಆಪ್‌ಗೆ ನನ್ನ ಗಂಡನ ಮೃತ ದೇಹದ ಫೋಟೊ ಬಂದಿದ್ದು ಅದು ನನ್ನ ಗಂಡ ಹನುಮಂತಪ್ಪ ಅವರದ್ದೇ ಆಗಿರುತ್ತದೆ, ದಿನಾಂಕ:17-02-2023 ರಂದು ಬೆಳಿಗ್ಗೆ 9:00 ಗಂಟೆಗೆ ಜಿಲ್ಲಾಸರಕಾರಿ ಆಸ್ಪತ್ರೆ ಉಡುಪಿಗೆ ಬಂದು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದ ಮೃತ ದೇಹವನ್ನು ನೋಡಿಗುರುತಿಸಿರುತ್ತಾರೆ. ಪಿರ್ಯಾದಿದಾರರು  ಗಂಡನ ಮರಣದ ಬಗ್ಗೆ ಅವರೊಂದಿಗೆ ಕೂಲಿ ಕೆಲಸ ಮಾಡಿಕೊಂಡಿದ್ದ ಬಸವರಾಜ್ ನಾಗಪ್ಪ ಹಳೆಮನೆ ಇವರ ಬಳಿ ವಿಚಾರಿಸಿದಾಗ  ದಿನಾಂಕ:16-02-2023 ರಂದು ಬೆಳಿಗ್ಗೆ 9:00 ಗಂಟೆಗೆ ಹನುಂತಪ್ಪ ರವರೊಂದಿಗೆ  ಗೂಡ್ಸ್ ರಿಕ್ಷಾದಲ್ಲಿ ಕೂಲಿ ಕೆಲಸ ಮಾಡಲು ಕೆಮ್ಮಣ್ಣುವಿನ ಸಂತೆಗೆ ಹೋಗಿದ್ದು ಆ ಸಮಯ ಹನುಮಂತಪ್ಪನು ಎದೆನೋವು ಜ್ವರ ತಲೆನೋವು ಎಂದು ಹೇಳಿದಾಗ ಬಸವರಾಜ್ ನಾಗಪ್ಪ ಹಳೆಮನೆರವರು ಜ್ವರದ ಮಾತ್ರೆ ಹಾಗೂ ಜಂಡು ಬಾಂಬ್ ಅನ್ನು ತಂದು ಕೊಟ್ಟಿದ್ದು,  ನಂತರ ಮಧ್ಯಾಹ್ನ ಸುಮಾರು 1;30 ಗಂಟೆಗೆ ನಾನು ಕೂಲಿ ಕೆಲಸ ಮಾಡಿಕೊಂಡು ರಿಕ್ಷಾದ ಬಳಿ ಬಂದಾಗ ಮಲಗಿದ್ದ ಹನುಮಂತಪ್ಪ ರವರನ್ನು ಎಬ್ಬಿಸಲು ಹೋದಾಗ ಆತನು ಏಳದೇ ಇದ್ದು ಮಧ್ಯಪಾನನ ಮಾಡಿ ಮಲಗಿರಬಹುದು ಎಂದು ನಾನು ಆತನನ್ನು ರಿಕ್ಷಾದಿಂದ ಕೆಳಗೆ ಇಳಿಸಿ ರಸ್ತೆಯ ಬದಿ ಮರದ ನೆರಳಿನಲ್ಲಿ ಮಲಗಿಸಿ ಹೋಗಿರುವುದಾಗಿ ತಿಳಿಸಿರುತ್ತಾನೆ. ಪಿರ್ಯಾದಿದಾರರ  ಗಂಡ  ಹನುಮಂತಪ್ಪ ದಿನಾಂಕ:16-01-2023 ರಂದು ಕೂಲಿ ಕೆಲಸ ಮಾಡಲು ಹೋದಾಗ ಬೆಳಿಗ್ಗೆ ಸುಮಾರು 9:00 ಗಂಟೆಯಿಂದ ಮಧ್ಯಾಹ್ನ 3:30 ಗಂಟೆ ಮಧ್ಯಾವದಿಯಲ್ಲಿ ಕೆಮ್ಮಣ್ಣು ರಸ್ತೆಯ ಬದಿಯಲ್ಲಿ ಮರದ ಕೆಳಗೆ  ಮಲಗಿದ್ದವರು  ಯಾವುದೋ ಕಾರಣದಿಂದ ಸ್ಥಳದಲ್ಲಿಯೇ ಮೃತಪಟ್ಟಿಬಹುದು ,ಪಿರ್ಯಾದಿದಾರರ ಗಂಡನ ಮರಣದ ಕಾರಣದಲ್ಲಿ ಸಂದೇಹವಿದ್ದು ಅವರ ಮರಣದ ಸರಿಯಾದ ಕಾರಣವನ್ನು ಪತ್ತೆ ಮಾಡಿವಂತೆ ದೂರು ನೀಡಿದ್ದು, ಈ ಬಗ್ಗೆ ಮಲ್ಪೆಠಾಣಾ ಯು.ಡಿ. ಆರ್ ನಂ 15/2022 ,ಕಲಂ 174(3)&  (iv) ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 18-02-2023 10:32 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080