ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು: ಪಿಯಾ೯ದಿ: ಪಿ ಭವಾನಿ (56)    ಗಂಡ:ಕೆ.ಸುಂದರ    ವಾಸ:”ಸುಪ್ರಭಾತ” ತೆಂಕು ಕಲ್ಯಾ, ಉಳಿಯಾರಗೋಳಿ ಗ್ರಾಮ, ಇವರು ದಿನಾಂಕ:18/02/2023 ರಂದು ಬೆಳಿಗ್ಗೆ 08.00 ಗಂಟೆ ಸುಮಾರಿಗೆ ಅವರ ಮನೆಯ ಮುಂದಿನ ಗೇಟಿನ ಬಳಿ ಹಾಲು ಖರಿದಿಸುವರೇ ನಿಂತುಕೊಂಡಿರುವಾಗ, ಜಮಾಲ್ ರವರು ಹಾಲಿನ ಪ್ಯಾಕೇಟ್‌ಗಳನ್ನು ತೆಗೆದುಕೊಂಡು ಮನೆ ಮೆನಗೆ ಹಾಕಿ ಮನ್ಸೂರ್‌ ಎಂಬುವರ ಮನೆಗೆ ಹಾಕುವರೇ ಕಾಪು ಕಲ್ಯ ರಸ್ತೆಯನ್ನು ದಾಟುತ್ತಾ ರಸ್ತೆಯ ದಕ್ಷಿಣ ಅಂಚಿನಲ್ಲಿರುವಾಗ  ಕಲ್ಯಾ ಕಡೆಯಿಂದ ಕಾಪು ಪೇಟೆ ಕಡೆಗೆ ಶಿವಣ್ಣ ರವರು ತನ್ನ  ಕೆ.ಎ-20 ಇ ವೈ-4233 ಮೋಟಾರು ಸೈಕಲ್‌ನಲ್ಲಿ ಸಹಸವಾರನನ್ನು ಕುಳ್ಳಿರಿಸಿಕೊಂಡು ಅತೀ ವೇಗ ಹಾಗೂ ನಿಲ೯ಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು  ಜಮಾಲ್‌ ರವರ ಬಲಕೈಗೆ ಮೋಟಾರ್‌ ಸೈಕಲ್ಲಿನ ಹ್ಯಾಂಡಲ್‌ ಬಾರನ್ನು ಡಿಕ್ಕಿ ಪಡಿಸಿದನು. ಈ ಅಪಘಾತವಾಗುವ ಸಮಯ ಹಿಂಬದಿ ಸವಾರ ಬೈಕಿನಿಂದ ಕೆಳಗೆ ಜಿಗಿದಿದ್ದು, ಬೈಕ್‌ ಸವಾರನು  ಸ್ವಲ್ಯ ದೂರಕ್ಕೆ ಹೋಗಿ ಬೈಕ್‌ ಸಹಿತ ಕೆಳಗೆ ಬಿದ್ದಿದ್ದು. ಪರಿಣಾಮ ಜಮಾಲ್‌ ರವರ ಬಲಕೈ ಗಂಟಿನ ಬಳಿ ಮೂಳೆ ಮುರಿತವಾಗಿದ್ದು, ಬೈಕ್‌ ಸವಾರನಿಗೆ ಬಲ ಕೆನ್ನೆಯ ಬಳಿ ಹಾಗೂ ತುಟಿಗೆ ಗಾಯಗಳಾಗಿರುತ್ತವೆ. ಬೈಕ್‌ ಸವಾರನು ಚಿಕಿತ್ಸೆಯ ಬಗ್ಗೆ ಜಮಾಲ್‌ ರವರನ್ನು ಒಂದು ವಾಹನದಲ್ಲಿ ಉಡುಪಿಯ ಕಡೆಗೆ ಕರೆದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕಾಪು ಠಾಣಾ ಅಪರಾಧ ಕ್ರಮಾಂಕ 28/2023 ಕಲಂ 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಕುಂದಾಪುರ: ಪಿರ್ಯಾದಿ: ಭುಜಂಗ ಪ್ರಾಯ 58 ವರ್ಷ ತಂದೆ: ದಿ.ಮಹಾಬಲ ಶೆಟ್ಟಿ ವಾಸ:ಚಿಕ್ಕಮ್ಮ ನಿಲಯ ಬಡಾಡಿಮನೆ ಕೆದೂರು ಗ್ರಾಮ ಇವರು  ದಿನಾಂಕ:18-02-2023 ರಂದು ಬೆಳಿಗ್ಗೆ 08:00 ಗಂಟೆಗೆ ಮನೆಯ ಹತ್ತಿರದ ತೆಂಗಿನಕಾಯಿ ಶೆಡ್ಡಿನ ಒಳಗೆ ಹೋದಾಗ ತಮ್ಮ ಮಂಜುನಾಥ ಶೆಟ್ಟಿ (56 ವರ್ಷ) ಅಂಗಾತನೆ ಮಲಗಿಕೊಂಡಿದ್ದ ಸ್ಥಿತಿಯಲ್ಲಿ ಇದ್ದದ್ದನ್ನು ನೋಡಿ ಹತ್ತಿರ ಹೋಗಿ ಗಮನಿಸಿದಾಗ ಆತನು ಯಾವುದೋ ವಿಷ ಪದಾರ್ಥ ಸೇವಿಸಿ ಮೃತಪಟ್ಟಿದ್ದು ಕಂಡುಬಂದಿದ್ದು ಅಲ್ಲದೇ ಆತನ ಬಳಿಯಲ್ಲಿ Aquafina ನೀರಿನ ಬಾಟಲಿ ಇದ್ದು ಅದರಿಂದ ವಿಷ ಪದಾರ್ಥದ ವಾಸನೆ ಬಂದಿರುವುದು ಕಂಡುಬಂದಿರುತ್ತದೆ. ಮಂಜುನಾಥ ಶೆಟ್ಟಿರವರು ವ್ಯವಹಾರದ, ಹಣಕಾಸಿನ ಅಥವಾ ಯಾವುದೋ ಕಾರಣಕ್ಕೆ ಮನನೊಂದು ಕೀಟನಾಶಕ ವಿಷ ಪದಾರ್ಥವನ್ನು ನೀರಿನ ಬಾಟಲಿಗೆ ಹಾಕಿ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಕುಡಿದು   ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಠಾಣಾ ಯು.ಡಿ.ಆರ್ ನಂಬ್ರ 05/2023 ಕಲಂ:174 CRPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ

  • ಕುಂದಾಪುರ: ದಿನಾಂಕ 17/02/2023 ರಂದು ಕುಂದಾಪುರ ಪೊಲೀಸ್ ಠಾಣಾ ಪೊಲೀಸ್‌ ನಿರೀಕ್ಷಕನಾದ  ಯು ಬಿ ನಂದಕುಮಾರ್‌ ರವರಿಗೆ ಠಾಣೆಯಲ್ಲಿರುವಾಗ 15:45 ಗಂಟೆಗೆ ಕುಂದಾಪುರ ತಾಲೂಕು ವಕ್ವಾಡಿ ಹೆಗ್ಗರ್‌ ಬೈಲು, ಚಿಕ್ಕು ಅಮ್ಮ ದೇವಸ್ಥಾನದ ಬಳಿ ಕೆಲವು ಜನರು ಸೇರಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಎಂಬ ಜುಗಾರಿ ಆಡುತ್ತಿರುವುದಾಗಿ ಬಾತ್ಮೀದಾರರಿಂದ ಬಂದ ಮಾಹಿತಿ ಮೇರೆಗೆ ಪ್ರಸಾದ್‌ ಕುಮಾರ್‌ ಕೆ ಪಿಎಸೈ ಐ (ತನಿಖೆ) ಮತ್ತು  ಸಿಬ್ಬಂಧಿಯವರೊಂದಿಗೆ   16.00 ಗಂಟೆಗೆ ಠಾಣೆಯಿಂದ ಹೊರಟು 16.45 ಕುಂದಾಪುರ ತಾಲೂಕು ವಕ್ವಾಡಿ ಹೆಗ್ಗರ್‌ ಬೈಲು, ಚಿಕ್ಕು ಅಮ್ಮ ದೇವಸ್ಥಾನದ ಸಮೀಪ ತಲುಪಿ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ಸ್ಥಳದಲ್ಲಿ ಸುಮಾರು ಜನರು ಸಾರ್ವಜನಿಕರು ಒಟ್ಟು ಸೇರಿಕೊಂಡಿದ್ದು, ಕೋಳಿಗಳಿಗೆ ಹಿಂಸಾತ್ಮಕವಾಗಿ ಅದರ ಕಾಲಿಗೆ ಬಾಳು ಕತ್ತಿಯನ್ನು ಕಟ್ಟಿ ಕೋಳಿ ಅಂಕ ಎಂಬ ಜುಗಾರಿ ಹೇಳಿಕೊಂಡು ಹಣವನ್ನು ಪಣವಾಗಿ ಕಟ್ಟಿಕೊಳ್ಳುತ್ತಿರುವುದನ್ನು ಖಚಿತಪಡಿಸಿಕೊಂಡು, ಸ್ಥಳಕ್ಕೆ ಪಂಚಾಯತುದಾರರನ್ನು ಬರಮಾಡಿಕೊಂಡು 17.00 ಗಂಟೆಗೆ ಸಿಬ್ಬಂದಿಯವರ ಸಹಾಯದಿಂದ ದಾಳಿ ನಡೆಸಿದಾಗ ಕೆಲವರು ವ್ಯಕ್ತಿಯು  ಓಡಿ ಹೋಗಿದ್ದು, ಅವರೊಂದಿಗೆ ಇದ್ದ ಇಬ್ಬರು ವ್ಯಕ್ತಿಗಳನ್ನು ಸಿಬ್ಬಂದಿಯವರ ಸಹಾಯದಿಂದ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು 1).ಮಂಜುನಾಥ್‌  ಪ್ರಾಯ: 31 ವರ್ಷ, ತಂದೆ: ಭಾಸ್ಕರ್‌ ಪೂಜಾರಿ ವಾಸ: ಸಮನ್ವಿ ನಿಲಯ, ತಲ್ಲೂರ್‌ ನೆಟ್ಟಿಬೈಲ್‌, ತಲ್ಲೂರ್‌ ಗ್ರಾಮ, ಕುಂದಾಪುರ ತಾಲೂಕು  ಉಡುಪಿ ಜಿಲ್ಲೆ,, 2). ಆದಿತ್ಯ ಪ್ರಾಯ:  25 ವರ್ಷ,  ತಂದೆ:  ಮಂಜುನಾಥ, ವಾಸ:  ಶರತ್‌ ನಿಲಯ, ಗಾಣಿಗರ ಬೆಟ್ಟು, ಆನಗಳ್ಳಿ ಗ್ರಾಮ, ಕುಂದಾಪುರ ತಾಲೂಕು. ಉಡುಪಿ  ಜಿಲ್ಲೆ   ಎಂಬುದಾಗಿ ತಿಳಿಸಿರುತ್ತಾರೆ. ನಾವುಗಳು ಹಣವನ್ನು ಪಣವಾಗಿ ಇಟ್ಟು, ತಮ್ಮ ಸ್ವಂತ ಲಾಭಕ್ಕೋಸ್ಕರ ಕೋಳಿ ಅಂಕ ಎಂಬ ಜುಗಾರಿ ಆಟ  ಆಡುತ್ತಿರುವುದಾಗಿ ತಿಳಿಸಿದಂತೆ  ಜುಗಾರಿ ಆಟಕ್ಕೆ ಬಳಸಿದ ಹಣವನ್ನು ಹಾಜರುಪಡಿಸಿದ್ದು,  ಮಂಜುನಾಥ್‌ ಈತನ ವಶದಲ್ಲಿ  600/- , ಆದಿತ್ಯ ಈತನ ವಶದಲ್ಲಿ 300/- ರೂ, ಇದ್ದು,  ಒಟ್ಟು ನಗದು ರೂಪಾಯಿ 900 /- ಇರುತ್ತದೆ.  ಹಿಂಸಾತ್ಮಕವಾಗಿ ಜುಗಾರಿ ಆಟಕ್ಕೆ ಬಳಸಿದ 13 ಹುಂಜ ಕೋಳಿಗಳು ಅದೇ ಸ್ಥಳದಲ್ಲಿದ್ದು, ಅವುಗಳ  ಒಟ್ಟು ಅಂದಾಜು ಮೌಲ್ಯ ರೂ. 8000/- ಆಗಬಹುದು.  ಕೋಳಿಯ ಕಾಲಿಗೆ  ಕಟ್ಟಿದ ಬಾಳು (ಕತ್ತಿ) – 2,   ನಗದು 900/- ರೂಪಾಯಿ, 13 ಜೀವಂತ ಕೋಳಿ ಹುಂಜ ಇವುಗಳನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನ ಪಡಿಸಿಕೊಂಡಿದ್ದು  ಠಾಣಾ  ಎನ್‌ ಸಿ ನಂಬ್ರ 56/PTN/KND/2023 ರಂತೆ ಠಾಣೆಯಲ್ಲಿ ಸ್ವೀಕರಿಸಿ ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಲು ಅನುಮತಿ ಪಡೆದು ಪ್ರಕರಣ ದಾಖಲಿಸಿರಿವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ಠಾಣೆ  ಅಪರಾಧ ಕ್ರಮಾಂಕ 22/2023 ಕಲಂ: 87, 93 KP Act ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 18-02-2023 05:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080