ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಶೇಖರ ಪೂಜಾರಿ (37), ತಂದೆ: ವೆಂಕ್ಟ ಪೂಜಾರಿ, ವಾಸ: ಸದಿನ ಮನೆ ಉಪ್ಪುಂದ ಗ್ರಾಮ ಬೈಂದೂರು ತಾಲೂಕು ಇವರು ಉಪ್ಪುಂದ ಗ್ರಾಮ ಪಂಚಾಯತ್ ಸದಸ್ಯರಾಗಿದ್ದು ಇವರು ದಿನಾಂಕ 17/02/2022 ರಂದು ಬೆಳಿಗ್ಗೆ 9:00 ಗಂಟೆಗೆ ಮನೆಯಲ್ಲಿರುವಾಗ  ಪರಿಚಯದವರೊಬ್ಬರು ಪಿರ್ಯಾದಿದಾರರಿಗೆ ಮೊಬೈಲ್ ಕರೆ ಮಾಡಿ ಬಿಜೂರು ಗ್ರಾಮದ ಸುಮನಾವತಿ ಹೊಳೆಯ ದಡದಲ್ಲಿ   ಗಂಡಸಿನ ಶವ ತೇಲುತ್ತಿರುವುದಾಗಿ ಮಾಹಿತಿ ತಿಳಿಸಿದ ಮೇರೆಗೆ ಪಿರ್ಯಾದಿದಾರರು ಸ್ಥಳಕ್ಕೆ ಹೋಗಿ ನೋಡಲಾಗಿ 45 ವರ್ಷದ ಅಪರಿಚಿತ ಗಂಡಸಿನ ಮೃತದೇಹವಾಗಿದ್ದು ಮೃತನು 16/02/2022 ರಿಂದ ದಿನಾಂಕ 17/02/2022 ರಂದು ಬೆಳಿಗ್ಗೆ 9:00  ಗಂಟೆಯ ಮಧ್ಯಾವಧಿಯಲ್ಲಿ  ಆಕಸ್ಮಿಕವಾಗಿ ಕಾಲುಜಾರಿ ಅಥವಾ ಇನ್ಯಾವುದೋ ಕಾರಣದಿಂದ ಸುಮನಾವತಿ ಹೊಳೆಗೆ ಬಿದ್ದು ನೀರನಲ್ಲಿ ಮುಳಗಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 07/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹಿರಿಯಡ್ಕ: ಪಿರ್ಯಾದಿದಾರರಾದ ಸುದರ್ಶನ್ (22) , ತಂದೆ: ನರಸಿಂಹ ಶೇರಿಗಾರ, ವಾಸ: ‘’ ಅಪ್ಪಿ ನಿವಾಸ’’ , ಮೂಡುಮನೆ ಶಿರೂರು , ಗ್ರಾಮ ಉಡುಪಿ ಇವರ ತಂದೆ ನರಸಿಂಹ (62) ರವರು ದಿನಾಂಕ 17/02/2022  ರಂದು 12:00 ಗಂಟೆಗೆ ಕಟ್ಟಿಗೆ ತರಲೆಂದು  ಗದ್ದೆಗೆ ಹೋಗಿದ್ದು, ಕಟ್ಟಿಗೆ ತರದೆ ವಾಪಾಸು ಮನೆಗೆ ಬಂದಿರುತ್ತಾರೆ. ಪಿರ್ಯಾದಿದಾರರು ವಿಚಾರಿಸಿದಾಗಿ ನನಗೆ ಎದೆ ನೋವಾಗುತ್ತದೆ ಎಂದು ತಿಳಿಸಿದ್ದು , ಕೂಡಲೆ ಪಿರ್ಯಾದಿದಾರರು ತನ್ನ ಅಟೋದಲ್ಲಿ ಕಾಮತ್ ನರ್ಸಿಂಗ ಹೋಂಗೆ ಕರೆದುಕೊಂಡು ಹೋಗಿದ್ದು ವೈದ್ಯರು  ಮಣಿಪಾಲ ಅಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು ಅದರಂತೆ ಪಿರ್ಯಾದಿದಾರರು ಮಣಿಪಾಲ ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ನರಸಿಂಹರವರು ದಾರಿಮಧ್ಯೆ ಬರುತ್ತಿರುವಾಗ 1:45 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 04/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಕಾಣೆ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಕೇಶವ ಖಾರ್ವಿ (39), ತಂದೆ:ನಾರಾಯಣ ಖಾರ್ವಿ, ವಾಸ: ಅಮ್ಮನವರ ತೊಪ್ಪಲು  ಉಪ್ಪುಂದ  ಗ್ರಾಮ ಬೈಂದೂರು ತಾಲೂಕು ಇವರ ಅಕ್ಕ ಸುನಂದ(45) ರವರು ಮಗಳು ಅಶ್ಮಿತಾ (8)  ಳೊಂದಿಗೆ ಪಿರ್ಯಾದಿದಾರರ ಜೊತೆಯಲ್ಲಿ ಉಪ್ಪುಂದ  ಗ್ರಾಮದ ಅಮ್ಮನವರ ತೊಪ್ಪಲು ಎಂಬಲ್ಲಿ  ವಾಸವಾಗಿದ್ದವರು  ದಿನಾಂಕ 14/02/2022 ರಂದು ಮಧ್ಯಾಹ್ನ 12:00 ಗಂಟೆಗೆ ಮನೆಗೆ ಯಿಂದ ಆಸ್ಪತ್ರೆಗೆ  ಹೋಗಿ ಬರುವುದಾಗಿ ಹೇಳಿ ಹೋದವರುಮನೆಗೆ ವಾಪಾಸ್ಸು ಬಾರದೇ ಇದ್ದು , ಪಿರ್ಯಾದಿದಾರರು ಸಂಬಂಧಿಕರು ಹಾಗೂ ನೆರೆಕೆರೆಯವರಲ್ಲಿ ವಿಚಾರಿಸಿ ಹುಡುಕಾಡಿದಲ್ಲಿ ಪತ್ತೆಯಾಗದೇ ಇರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 45/2022 ಕಲಂ: ಹೆಂಗಸು ಮತ್ತು ಮಗು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 18-02-2022 09:43 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080