ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಲಲಿತ ದೇವಾಡಿಗ (37), ಗಂಡ: ಸುರೇಶ ದೇವಾಡಿಗ, ವಾಸ: ಕೆದಿಗೆ ಬೈಲ್ ಮನೆ, ಉಪ್ಪುಂದ ಗ್ರಾಮ ಬೈಂದೂರು ತಾಲೂಕು ಇವರ  ತಮ್ಮ ಲಕ್ಷ್ಮಣ (28) ಎಂಬುವವರು ಕಳೆದ 3 ವರ್ಷಗಳಿಂದ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದು  ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದವರು  ಅದೇ ಕಾರಣಕ್ಕಾಗಿ  ಜೀವನದಲ್ಲಿ  ಜಿಗುಪ್ಸೆಗೊಂಡು “ನನ್ನ ಸಾವಿಗೆ ನಾನೇ ಕಾರಣ  ನನ್ನ  ಮನೆಯವರು ಎಲ್ಲರೂ ನನ್ನನ್ನು  ಚೆನ್ನಾಗಿ ನೋಡಿಕೊಂಡಿದ್ದಾರೆ”  ಎಂದು ಸಣ್ಣ ಹಾಳೆಯಲ್ಲಿ ಬರೆದಿಟ್ಟು  ದಿನಾಂಕ 18/02/2022 ರಂದು  ಬೆಳಿಗ್ಗೆ  9:45 ಗಂಟೆಯಿಂದ 10:00 ಗಂಟೆಯ ಮಧ್ಯಾವಧಿಯಲ್ಲಿ  ತಾನು ವಾಸವಾಗಿರುವ ಉಪ್ಪುಂದ ಗ್ರಾಮದ ಕೆದಿಗೆ ಬೈಲ್ ಮನೆಯ ಮಹಡಿಯಲ್ಲಿನ ಪಕಾಸಿಗೆ ನೈಲಾನ್ ಸೀರೆಯನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ  ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 08/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ : ಪಿರ್ಯಾದಿದಾರರಾದ ಈಶ್ವರ ಪುತ್ರನ್ (47), ತಂದೆ:  ಆನಂದ ಪುತ್ರನ್, ವಾಸ: ಶಾರದಾ ನಿಲಯ  ಬಲರಾಮನಗರ ಮಲ್ಪೆ ,ಕೊಡವೂರು ಗ್ರಾಮ ಇವರಿಗೆ ದಿನಾಂಕ 17/02/2022 ರಂದು  11:00 ಗಂಟೆಯ ಸಮಯಕ್ಕೆ  ಪಾತ್ರಾ  ಬೋಟ್   ದೋಣಿಯ ವಸಂತ  ಎಂಬುವವರು  ಕರೆ  ಮಾಡಿ  ಸೈಂಟ್ ಮೇರಿಸ್ ಐಲ್ಯಾಂಡ್ ನಿಂದ ಸುಮಾರು 5  ಕಿಮೀ  ದೂರದಲ್ಲಿ  ನೇಲಂಬದ  ಕರೆಯ ಕಲ್ಲಿನ  ಬಳಿ  ಒಂದು ಮೃತ  ದೇಹ  ಇರುವುದಾಗಿ  ತಿಳಿಸಿದಂತೆ , ಪಿರ್ಯಾದಿದಾರರು  ಪ್ರತಾಪ ರವರ ಜೊತೆ  ಬೋಟಿನಲ್ಲಿ  ಹೋಗಿ ನೋಡಲಾಗಿ  35-40 ವರ್ಷದ  ಪ್ರಾಯದ ಗಂಡಸಿನ  ಮೃತ ದೇಹ  ಕೊಳೆತ ಸ್ಥಿತಿಯಲ್ಲಿದ್ದು  ನೀರಿನಲ್ಲಿ ತೇಲಾಡುತ್ತಿದ್ದು , ಪ್ರತಾಪ್   ಹಾಗೂ ಬೋಟಿನವರ  ಸಹಾಯದಿಂದ  ಮಲ್ಪೆ  ಬೀಚ್ ದಡಕ್ಕೆ  ಕರೆ ತಂದಿದ್ದು , ಶವದ ಮುಖವು  ಸಂಪೂರ್ಣ  ಕೊಳೆದು ಸ್ಥಿತಿಯಲ್ಲಿದ್ದು ,  ಮೃತನ  ಕೈಯಲ್ಲಿ  ವಾಚ್, ಗ್ರೇ ಕಲರ್ ಶರ್ಟ್‌, ನೀಲಿಬಣ್ಣದ  ಜೀನ್ಸ್ ಪ್ಯಾಂಟ್ , ಮತ್ತು  ಕಾಲಿಗೆ  ಶೂ ವನ್ನು  ಧರಿಸಿದ್ದು  ವ್ಯಕ್ತಿಯ  ಪರಿಚಯ ಇರುವುದಿಲ್ಲ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 07 /2022  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾರ್ಕಳ: ಕಾರ್ಕಳ ತಾಲೂಕು ಬೋಳ ಗ್ರಾಮದ ಮಹಾಲಚ್ಚಿಲ್ ಎಂಬಲ್ಲಿಯ ಜಾಗಕ್ಕೆ ಸಂಬಂದಿಸಿದಂತೆ  ಪಿರ್ಯಾದಿದಾರರಾದ ಬಿ ವಿ ದಿನೇಶ್  ಪ್ರಾಯ: 38 ವರ್ಷ, ತಂದೆ: ದಿ: ಬಿ ಹೆಚ್ ವಿಶ್ವನಾಥ ಆಚಾರ್ಯ , ವಾಸ: ವಿಶ್ವನಾಥ ಅನುಗ್ರಹ , ಬೋಳ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ  ಹಾಗೂ ಆಪಾದಿತರಾದ 1), ಶಿವ ರಾಮ್ ಆಚಾರ್ಯ, 2) ಜ್ಯೋತಿ , 3) ಅನುಷಾ, 4) ಅಭಿಷೇಕ್  ಇವರಿಗೂ ತಕರಾರು ಇದ್ದು, ದಿನಾಂಕ 17/02/2022 ರಂದು ಬೆಳಿಗ್ಗೆ 9:00 ಗಂಟೆಗೆ ಪಿರ್ಯಾದಿದಾರರ ಚಿಕ್ಕಪ್ಪ ಶಿವರಾಮ ಆಚಾರ್ಯ ಇವರು ತಕರಾರು ಇರುವ ಜಾಗದಲ್ಲಿ ಕೆಲಸದವರನ್ನು ಕರೆದು ಕೆಲಸ ಮಾಡಿಸುತ್ತಿದ್ದಾಗ, ಪಿರ್ಯಾದಿದಾರರು ಕೆಲಸಕ್ಕೆ ಬಂದವರಲ್ಲಿ ಕೆಲಸ ನಿಲ್ಲಿಸುವಂತೆ ತಿಳಿಸಿದಾಗ, ಶಿವರಾಮ ಆಚಾರ್ಯರವರು ಕೈಯ್ಯಲ್ಲಿ ಕತ್ತಿಯನ್ನು ಕೈಯ್ಯಲ್ಲಿ ಹಿಡಿದುಕೊಂಡು ಸ್ಥಳಕ್ಕೆ ಬಂದು, ಪಿರ್ಯಾದಿದಾರರನ್ನು ಉದ್ದೇಶಿಸಿ “ ಇದು ನನ್ನ ಜಾಗ, ಕೆಲಸ ನಿಲ್ಲಿಸುವುದಕ್ಕೆ ನೀನು ಯಾರು ಎಂದು ಅವಾಚ್ಯ ಶಬ್ದಗಳಿಂದ ಬೈಯ್ದು, ಕೈಯ್ಯಲ್ಲಿದ್ದ ಕತ್ತಿಯನ್ನು ಪಿರ್ಯಾದಿದಾರರ ಮೇಲೆ ಬೀಸಿದಾಗ, ಪಿರ್ಯಾದಿದಾರರು ಕತ್ತಿಯನ್ನು ಕೈಯ್ಯಿಂದ ಕಿತ್ತು, ಕೆಳಕ್ಕೆ ಬಿಸಾಡಿದ್ದು, ಈ ಸಮಯ ಸ್ಥಳಕ್ಕೆ ಬಂದ ಅಭಿಷೇಕ್  ಪಿರ್ಯಾದಿದಾರರನ್ನು ಹಿಡಿದುಕೊಂಡಿದ್ದು, ಆಗ ಶಿವರಾಮ ಆಚಾರ್ಯ ಸ್ಥಳದಲ್ಲಿ ಬಿದ್ದಿದ ಪೈಪಿನ ತುಂಡಿನಿಂದ ಪಿರ್ಯಾದಿದಾರರ ತಲೆಗೆ ಹೊಡೆದು, ಪೈಪನ್ನು ಅಲ್ಲಿಯೇ ಬಿಸಾಡಿದ್ದು, ಈ ಸಮಯ ಸ್ಥಳಕ್ಕೆ ಬಂದ ಶಿವರಾಮ ಆಚಾರ್ಯರವರ ಪತ್ನಿ ಜ್ಯೋತಿ, ಮಗಳು ಅನುಷಾರವರೊಂದಿಗೆ ಶಿವರಾಮ ಆಚಾರ್ಯ ಮತ್ತು ಆತನ ಮಗ ಸೇರಿ ಪಿರ್ಯಾದಿದಾರರಿಗೆ ಹಲ್ಲೆ ನಡೆಸಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 19/2022 ಕಲಂ: 504,323, 324, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 18-02-2022 06:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080