ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಕಾಪು: ದಿನಾಂಕ 17/02/2021 ರಂದು 12:50 ಗಂಟೆಗೆ ಪಿರ್ಯಾದಿದಾರರಾದ ಶೇಖ್ ಮುಶ್ತಾಕ್ ಅಹಮದ್ (58), ತಂದೆ : ದಿ. ಬಿ ಬಾಪು ಸಾಹೇಬ್, ವಾಸ : ಮಾಶಾ ಅಲ್ಲಾ ಕಂಪೌಂಡ್ ಪಕೀರನಕಟ್ಟೆ, ಮಲ್ಲಾರು ಗ್ರಾಮ ಕಾಪು ತಾಲೂಕು ಇವರು ತನ್ನ ಆಟೋ ರಿಕ್ಷಾದಲ್ಲಿ ಉಡುಪಿ ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ  ಮಲ್ಲಾರು  ಗ್ರಾಮದ ಕಮ್ಯುನಿಟಿ ಹಾಲ್ ಸಮೀಪ ಹೋಗುತ್ತಿರುವಾಗ ಪಿರ್ಯಾದಿದಾರರ ಸಂಬಂಧಿ  ಯು. ಶಾಬುದ್ದೀನ್ ಸಾಹೇಬ್  ರವರು ಉಡುಪಿ ಮಂಗಳೂರು ಪೂರ್ವ ಬದಿಯಲ್ಲಿ ರಸ್ತೆ ದಾಟುತ್ತಿರುವಾಗ  ಅದೇ ರಸ್ತೆಯಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಓರ್ವ ಕಾರು ಚಾಲಕ ತನ್ನ ಕಾರನ್ನು ಅತೀ ವೇಗ ಹಾಗೂ  ಅಜಾಗರೂಕತೆಯಿಂದ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ಯು. ಶಾಬುದ್ದೀನ್ ಸಾಹೇಬ್‌ರವರಿಗೆ ಢಿಕ್ಕಿ ಹೊಡೆದು ಕಾರನ್ನು ನಿಲ್ಲಿಸದೇ ಮಂಗಳೂರು ಕಡೆಗೆ ಪರಾರಿಯಾಗಿದ್ದು, ಕಾರು ಢಿಕ್ಕಿ ಹೊಡೆದ ಪರಿಣಾಮ  ಯು. ಶಾಬುದ್ದೀನ್ ಸಾಹೇಬ್  ರವರು ರಸ್ತೆಗೆ ಬಿದ್ದಿದ್ದು, ಪಿರ್ಯಾದಿದಾರರು ಕೂಡಲೇ ಹೋಗಿ ಸಾರ್ವಜನಿಕರ ಸಹಾಯದಿಂದ ಅವರನ್ನು ಉಪಚರಿಸಿ ನೋಡುವಾಗ ಯು. ಶಾಬುದ್ದೀನ್ ಸಾಹೇಬ್  ರವರಿಗೆ ತಲೆಗೆ ತೀವೃ ಗಾಯವಾಗಿದ್ದು, ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಪಿರ್ಯಾದಿದಾರರು ಯು. ಶಾಬುದ್ದೀನ್ ಸಾಹೇಬ್ ರವರನ್ನು ಒಂದು ವಾಹನದಲ್ಲಿ ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಯು. ಶಾಬುದ್ದೀನ್ ಸಾಹೇಬ್  ರವರು ಈಗಾಗಲೇ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 23/2021  ಕಲಂ: 279, 304(A) ಐಪಿಸಿ & 134(A&B) IMV Act ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಶಿರ್ವಾ: ದಿನಾಂಕ 17/02/2021 ರಂದು ಮದ್ಯಾಹ್ನ 3:30 ಗಂಟೆಗೆ ಶಿರ್ವಾ ಗ್ರಾಮದ ಪಾಲೆಮೆ ಎಂಬಲ್ಲಿ ಆರೋಪಿ KA-20-X-319 ನೇ ಮೋಟಾರ್ ಸೈಕಲ್ ಸವಾರ ರಾಕೇಶ್ ತಾನು ಚಲಾಯಿಸಿಕೊಂಡು ಬರುತ್ತಿದ್ದ  ಮೋಟಾರ್ ಸೈಕಲನ್ನು ಶಂಕರಪುರ ಕಡೆಯಿಂದ ಶಿರ್ವಾ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬೇರೊಂದು ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಪಿರ್ಯಾದಿದಾರರಾದ ಬೆಂಜಮಿನ್ ಡಿಸೋಜಾ (66), ತಂದೆ: ದಿ. ಜಾನ್ ಡಿಸೋಜಾ, ವಾಸ: ಡಿಸೋಜಾ ಕ್ವಾಟೇಜ್, ಹಳೆ ಅಂಚೆ ಕಛೆರಿ ಹತ್ತಿರ ಕುತ್ಯಾರು ಗ್ರಾಮ ಮತ್ತು ಅಂಚೆ ಶಿರ್ವಾ ಕಡೆಯಿಂದ ಶಂಕರಪುರ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-20-W-1637 ನೇ ದ್ವಿಚಕ್ರವಾಹನಕ್ಕೆ ಡಿಕ್ಕಿ  ಹೊಡೆದ ಪರಿಣಾಮ ಪಿರ್ಯಾದಿದಾರರು ದ್ವಿಚಕ್ರವಾಹನ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲಕೈಯ ಎಲ್ಲಾ ಬೆರಳಿಗೆ ಮೂಳೆ ಮುರಿತದ ಒಳ ಜಖಂ ಹಾಗೂ ಬಲಕಾಲಿನ ಹೆಬ್ಬರಳಿಗೆ ತೀವ್ರ ತರಹದ ಮೂಳೆ ಮುರಿತದ ಜಖಂ ಆಗಿದ್ದು ಎಡಕಾಲಿನ ಹೆಬ್ಬೆರಳಿಗೆ ತರಚಿದ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 08/2021, ಕಲಂ: 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ರಶ್ಮಿ ಅರ್ ಪೈ (39), ಗಂಡ: ರವೀಂದ್ರ ಪೈ, ವಾಸ: ಡೋರ್ ನಂ 001, 1 ನೇ ಮಹಡಿ , ಧನಂಜಯ ಅಪಾರ್ಟ್‌‌ಮೆಂಟ್,  ಕೆ ಸಿ ರೋಡ್ ಅಜ್ಜರಕಾಡು ಉಡುಪಿ ಇವರ ಚಿಕ್ಕಪ್ಪ ಪದ್ಮನಾಭ ಭಂಡಾರಿ (63) ರವರು ತನ್ನ ಮನೆಯಯಾದ ಅಂಬಲಪಾಡಿ  ಎಂಬಲ್ಲಿ ವಾಸವಿದ್ದು ದಿನಾಂಕ 17/02/2021 ಪಿರ್ಯಾದಿದಾರರ  ಅಣ್ಣನ ಅಂಗಡಿಗೆ 11:45 ಗಂಟೆಗೆ ತನ್ನ ಕಾರಿನಲ್ಲಿ ಬಂದು ಹೋಗಿದ್ದು ವಾಪಾಸು ಬಾರದೆ ಇದ್ದು ಕಾಣೆಯಾಗಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 25/2021 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

 • ಉಡುಪಿ: ಪಿರ್ಯಾದಿದಾರರಾದ ಶಿವರಾಜ್ ಸುನಿಲ್ ಪ್ರಭು(32), ತಂದೆ: ಸುನಿಲ್ ಪ್ರಭು, ವಾಸ: ಎ-6, 402, ವೈಭವ್ ಸೋಸೈಟಿ, ಆನಂದ ನಗರ , ನ್ಯೂ ಲಿಂಕ್ ರೋಡ್, ದಹಿಸರ್  ಇಸ್ಟ್ , ಮುಂಬಾಯಿ ಮಹಾರಾಷ್ಟ್ರ ಇವರ ಮದುವೆಯ ಸಲುವಾಗಿ ಮುಂಬೈಯಿಂದ ಉಡುಪಿಗೆ ಬಂದಿದ್ದ  ಪಿರ್ಯಾದಿದಾರರಾದ ಅಣ್ಣ  ಸೂರಜ್‌ ಸುನಿಲ್‌ ಪ್ರಭು(42) ರವರು ಉಡುಪಿ  ತಾಲೂಕು ಮೂಡನಿಡಂಬೂರು ಗ್ರಾಮದ  ತ್ರಿವೇಣಿ ಜಂಕ್ಷನ್‌ ಬಳಿಯ  ಲಂಡನ್‌ಪ್ಲಾಝಾ ಕಾಂಫ್ಲೆಕ್ಸನ ಎರಡನೇ ಮಹಡಿಯಲ್ಲಿನ ಸಂಬಂಧಿಕರ  ಮನೆಯಲ್ಲಿದ್ದವರು ದಿನಾಂಕ 17/02/2021 ರಂದು ಮುಂಜಾನೆ 1:00  ಗಂಟೆಗೆ  ತೀವ್ರ  ಉಸಿರಾಟದ ತೊಂದರೆಯಿಂದ  ಅಸ್ವಸ್ಥರಾದವರನ್ನು ಚಿಕಿತ್ಸೆಯ  ಬಗ್ಗೆ  ಹತ್ತಿರದ  ಆದರ್ಶ  ಆಸ್ಪತ್ರೆಗೆ  ಕರೆದುಕೊಂಡು  ಹೋದಲ್ಲಿ , 2:30  ಗಂಟೆಗೆ  ಪರೀಕ್ಷಿಸಿದ ವೈದ್ಯರು ಸೂರಜ್‌ ಸುನಿಲ್‌ ಪ್ರಭುರವರು ಅದಾಗಲೇ  ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 06/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿದಾರರಾದ ಹರ್ಷವರ್ಧನ್ ಕೆ, ತಂದೆ: ಅರ್. ಎಂ ಕೃಷ್ಣ ವಾಸ: ವಾರಂಬಳ್ಳಿ ಗ್ರಾಮ,  ಬ್ರಹ್ಮಾವರ  ಉಡುಪಿ ಇವರ ಪರಿಚಯದ ಶ್ರೀಲಂಕಾ ದೇಶದ ಪ್ರಜೆಯಾದ ಕಬಿಲನ್ (59) ರವರು ಮೀನು ರಪ್ತು ಕೆಲಸ ಮಾಡಿಕೊಂಡಿದ್ದು ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಉಡುಪಿಗೆ ಬಂದಿರುತ್ತಾರೆ. ಆಗ ಪಿರ್ಯಾದಿದಾರರು ಕರಾವಳಿ ಜಂಕ್ಷನ್‌ಲ್ಲಿರುವ ಪಾರ್ಥ ಲಾಡ್ಜ್‌‌ನಲ್ಲಿ ತನ್ನ ಹೆಸರಿಗೆ ರೂಂ ಬುಕ್ ಮಾಡಿ ಕಬಿಲನ್‌ರವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿರುತ್ತಾರೆ. ಕಬಿಲನ್‌ರವರು ಅಲ್ಲಿಂದ ಇಲ್ಲಿಯವರೆಗೆ ಉಳಿದುಕೊಂಡಿದ್ದು ದಿನಾಂಕ 16/02/2021 ರಂದು ರಾತ್ರಿ  9:23 ಗಂಟೆಗೆ ಕಬಿಲನ್‌ರವರು ಪಿರ್ಯಾದಿದಾರರಿಗೆ ಮೊಬೈಲ್‌‌ಗೆ ಕರೆ ಮಾಡಿ ತನ್ನ ಆರೋಗ್ಯದಲ್ಲಿ ಏರುಪೇರಾಗಿರುವುದಾಗಿ ತಿಳಿಸಿದ್ದು ಆಗ ಕೂಡಲೇ ಪಿರ್ಯಾದಿದಾರರು ತನ್ನ ಸ್ನೇಹಿತ ಸುದರ್ಶನ್ ರವರೊಂದಿಗೆ ಕಬಿಲನ್ ರವರು ಉಳಿದುಕೊಂಡ ರೂಂ ಗೆ ಹೋಗಿ ಅವರನ್ನ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿದ್ದು ಕಬಿಲನ್ ರವರು ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 17/02/2021 ರಂದು ಬೆಳಿಗ್ಗೆ 1:26 ಗಂಟೆಗೆ ಹೃದಯಾಘಾತದಿಂದಲೋ ಅಥವಾ ಇತರೇ ಕಾರಣಗಳಿಂದ  ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 07/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 18-02-2021 10:16 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ