ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಶಿರ್ವಾ: ದಿನಾಂಕ 17/02/2021 ರಂದು 6:25 ಗಂಟೆಗೆ  ಆರೋಪಿ KA-27-EB-1537 ಮೋಟಾರ್ ಸೈಕಲ್ ಸವಾರ ಚಂದ್ರು ಶಿರ್ವಾ ಕಡೆಯಿಂದ ಶಂಕರಪುರ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಎದುರುಗಡೆ ಹಾದು ಹೋಗಿರುವ ಸಾರ್ವಜನಿಕ ರಸ್ತೆಯ  ಬದಿಯಲ್ಲಿ ಅಳವಡಿಸಿದ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎಡ ಕೈ ಮತ್ತು ಎಡ ಕಾಲಿಗೆ ಗಂಭೀರ ಸ್ವರೂಪದ ರಕ್ತಗಾಯವಾಗಿದ್ದವರನ್ನು ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 09/2021, ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ಕಿರಣ್ ಕುಮಾರ್ (55), ತಂದೆ: ದಿ. ಪಿ. ನಾಗೇಶ್ ಭಂಡಾರಿ, ವಾಸ: ಜಿ 1403, ಲಾರೆಲ್ ಹೈಟ್ಸ್ ಅಪಾರ್ಟ್‌ಮೆಂಟ್ , ಹೆಸರಘಟ್ಟ ಮೈನ್ ರೋಡ್, ಯುಕೋ ಬ್ಯಾಂಕ್ಎದುರು ಬೆಂಗಳೂರು ಇವರ ಎರಡನೇ ಅಣ್ಣ ಪದ್ಮನಾಭ ಭಂಡಾರಿ (66) ರವರು ಉಡುಪಿಯ ಅಂಬಲಪಾಡಿಯಲ್ಲಿ ವಾಸವಾಗಿದ್ದು,  ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಅಧಿಕಾರಿ ಯಾಗಿರುತ್ತಾರೆ. ಅವರಿಗೆ ಹೃದಯ ಸಂಬಂಧಿ ಮತ್ತು ಮೂತ್ರಕೋಶದ ಖಾಯಿಲೆ ಇದ್ದು ಈ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಅವರಿಗೆ ಹೃದಯದ ಬೈ ಪಾಸ್ ಸರ್ಜರಿ ಹಾಗೂ ಮೂತ್ರಾಂಗಕ್ಕೆ ಟ್ಯೂಬ್ ಅಳವಡಿಸಿರುವುದರಿಂದ  ಅವರು ತುಂಬಾ ಚಿಂತೆಯಿಂದ ಇದ್ದು , ಅದೇ ಚಿಂತೆಯಿಂದ  ಮನನೊಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ 17/02/2021 ರಂದು ಬೆಳಿಗ್ಗೆ 11:45  ಗಂಟೆಯಿಂದ ದಿನಾಂಕ 18/02/2021 ರಂದು ಬೆಳಿಗ್ಗೆ  07:30 ಗಂಟೆಯ ಮಧ್ಯಾವಧಿಯಲ್ಲಿ ತನ್ನ KA-20-Z-9806 ನಂಬ್ರದ ಕಾರನ್ನು ಬ್ರಹ್ಮಾವರ ತಾಲೂಕು ಹಾವಂಜೆ ಗ್ರಾಮದ ಇರ್ಮಾಡಿ ಶೇಡಿ ಗುಳಿ ಎಂಬಲ್ಲಿ ನಿಲ್ಲಿಸಿ ಶೇಡಿಗುಳಿ ವನ್ಯ ಜೀವಿ ಮೀಸಲು ಅರಣ್ಯ ಪ್ರದೇಶದಲ್ಲಿರುವ ಅಕೇಶಿಯಾ ಮರಕ್ಕೆ ನೈಲಾನ್ ಹಗ್ಗ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 11/2021 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

 • ಮಲ್ಪೆ: ದಿನಾಂಕ 13-02-2021 ರಂದು 15-30 ಗಂಟೆಗೆ ಪಿರ್ಯಾದಿ ಶ್ರೀಮತಿ ಪ್ರಮೀಳಾ ಪ್ರಾಯ 38 ವರ್ಷ ಗಂಡ ನಾಗೇಶ್ ಡಿ ಕುಂದರ್ ವಾಸ ದಿಯಾ ನಿವಾಸ  ದುರ್ಗಾಪರಮೇಶ್ವರಿ  ದೇವಸ್ಥಾನ ಬಳಿ ಕೋಡಿಬೆಂಗ್ರೆ ಇವರು ಹಾಗೂ ಅವರ ಗಂಡ ಮನೆಯಲ್ಲಿ ಇರುವಾಗ ಕರುಣಾಕರ ಮತ್ತು  ಅವಿನಾಶ್ ಇವರು ಪಿರ್ಯಾದಿದಾರರ ಅಂಗಳಕ್ಕೆ ಅಕ್ರಮ   ಪ್ರವೇಶ ಮಾಡಿ ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿದ್ದಾಗ ಪಿರ್ಯಾದಿದಾರರು ಮತ್ತು ಅವರ ಗಂಡ ಮನೆಯಿಂದ  ಹೊರೆಗೆ  ಬಂದು  ಯಾಕೆ  ಬೈಯುತ್ತೀರಿ ಎಂದು  ಕೇಳಿದಾಗ  ಕರುಣಾಕರ ಏಕಾಏಕಿ  ಪಿರ್ಯಾದಿದಾರರ ತಲೆಗೆ ಕಲ್ಲಿನಿಂದ ಜಜ್ಜಿದ್ದ ಪರಿಣಾಮ ಪಿರ್ಯಾದಿದಾರರ ತಲೆಗೆ  ರಕ್ತ ಗಾಯ ಆಗಿರುತ್ತದೆ. ಆ ಸಮಯ  ಪಿರ್ಯಾದಿದಾರರ ಗಂಡ ತಡೆಯಲು ಬಂದಾಗ ಅವಿನಾಶ್ ಪಿರ್ಯಾದಿದಾರರ ಗಂಡನಿಗೆ ಕೈಯಿಂದ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕೊಂದೇ ತೀರುತ್ತೇವೆ ಎಂದು ಬೆದರಿಕೆ ಹಾಕಿರುತ್ತಾನೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 18/2021 ಕಲಂ. 447,504,324,506,323 ಜೊತೆಗೆ 34 ಐ.ಪಿ.ಸಿರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 • ಮಲ್ಪೆ: ದಿನಾಂಕ 13-02-2021ರಂದು ಸಂಜೆ 3-30 ಗಂಟೆಗೆ ಕೋಡಿ ಗ್ರಾಮ ಪಂಚಾಯತ್ ಪಿ.ಡಿ.ಓ ರವರು ವಿದ್ಯುತ್ ಸಂಪರ್ಕದ ವಿಚಾರ ಹಾಗೂ ಶೌಚಾಲಯದ ಪಿಟ್ ವಿಚಾರದ ಬಗ್ಗೆ ಸ್ಥಳ ಪರಿಶೀಲನೆ ಬಗ್ಗೆ ಪಿರ್ಯಾದಿ ಕರುಣಾಕರ ಎ.ಕುಂದರ್ (42) ತಂದೆ ಅಂಗರ ಬಂಗೇರ ವಾಸ ಹರಿಣಾಕ್ಷಿ ನಿಲಯ ಕೋಡಿಬೆಂಗ್ರೆ ಇವರ ಮನೆ ಬಳಿ ಬಂದಾಗ ನಾಗೇಶ್ ಕುಂದರ್ ಮತ್ತು ಅವರ ಪತ್ನಿ ಪ್ರಮೀಳಾ ಇವರು ಮನೆಯಿಂದ ಹೊರಗೆ ಬಂದು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಅವರ ಕೈ ಯಲ್ಲಿದ್ದ ಶಿಲೆ ಕಲ್ಲಿನಿಂದ ಪಿರ್ಯಾದಿದಾರರ ತಲೆಗೆ  ಹೊಡೆದ ಪರಿಣಾಮ ರಕ್ತ ಗಾಯ ಆಗಿರುತ್ತದೆ. ನಾಗೇಶ್ ಕುಂದರ್ ಪಿರ್ಯಾದಿದಾರರ ತಮ್ಮ ಅವಿನಾಶ್ ಕುಂದರ್ ಇವರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈ ಯಿಂದ ಬೆನ್ನಿಗೆ ಗುದ್ದಿ ಹಲ್ಲೆ ಮಾಡಿರುತ್ತಾರೆ. ಪ್ರಮೀಳಾ ಎಂಬವರು ಪಿರ್ಯಾದಿದಾರರ ಪತ್ನಿ ಶ್ರೀಮತಿ ಮೀನಾಕ್ಷಿರವರಿಗೆ ಕೈಯಿಂದ ಹೊಡೆದು ಹಲ್ಲೆ ಮಾಡಿರುತ್ತಾರೆ. ವಿದ್ಯುತ್ ಕಂಬ ಹಾಗೂ ಶೌಚಾಲಯದ ಪಿಟ್ ವಿಚಾರದಲ್ಲಿ ಮತ್ತು  ಮನೆಗೆ ವಾಲಿಕೊಂಡಿರುವ ಮರದ ವಿಚಾರದಲ್ಲಿ ತಕರಾರು ಇದ್ದು, ಇದೇ ಕಾರಣದಿಂದ ಹಲ್ಲೆ ಮಾಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 19/2021 ಕಲಂ. 324,323,504 ಜೊತೆಗೆ 34 ಐ.ಪಿ.ಸಿರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 18-02-2021 06:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ