ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಫು:ಪಿರ್ಯಾದಿದಾರರಾದ ಗಿರಿಜಾ ಶಂಕರ್ ಕೋಟ್ಯಾನ್(64) ಗಂಡ: ಶಂಕರ್ ಕೋಟ್ಯಾನ್, ವಾಸ: ಶಿವಗಿರಿ, ಕರ್ಕೆರಾ ಮೂಲ ಸ್ಥಾನದ ಹತ್ತಿರ ಕಾಪು ಪಡು ಗ್ರಾಮ ಇವರು  ದಿನಾಂಕ 16/01/2023 ರಂದು ಬೆಳಿಗ್ಗೆ 11:30 ಗಂಟೆಗೆ ಕಾಪು ಪಡು ಗ್ರಾಮದ ಬಬ್ಬು ಸ್ವಾಮಿ ದೇವಸ್ಥಾನದ ಎದುರು ಇರುವ ಗೂಡಂಗಡಿಯಲ್ಲಿದ್ದ, ತನ್ನ ಮಗನಿಗೆ ತಿಂಡಿ ಕೊಟ್ಟು ವಾಪಸ್ಸು ಮನೆ ಕಡೆ ಹೋಗುತ್ತಿರುವಾಗ,  ಮಗನು ದೂರವಾಣಿ ಕರೆ ಮಾಡಿ ತನಗೆ ಮತ್ತು ತನ್ನ ತಂದೆಗೆ ಎಕ್ಸಿಡೆಂಟ್ ಆಗಿದೆ. ನಾವು ಗೂಡಂಗಡಿಯ ಒಳಗೆ ಇದ್ದೆವು ಬೇಗ ಬನ್ನಿ ಎಂದು ತಿಳಿಸಿದಂತೆ ನಾನು ಕೂಡಲೇ ಗೂಡಂಗಡಿ ಕಡೆಗೆ ಬಂದೆನು. ನಾನು ಬಂದು ನೋಡುವಾಗ ಒಬ್ಬ ಲಾರಿ ಚಾಲಕನು ತನ್ನ  ಲಾರಿಯನ್ನು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸರ್ವೀಸ್ ರೋಡ್ ನಲ್ಲಿ ಚಲಾಯಿಸಿಕೊಂಡು ಬಂದು ಕಾಪು ಬಬ್ಬು ಸ್ವಾಮಿ ದೈವಸ್ಥಾನದ ಎದುರಿನ ಕಾಪು  ಸರ್ವಿಸ್ ರಸ್ತೆಯ ಬದಿಯಲ್ಲಿರುವ ನನ್ನ ಮಗನ ಗೂಡಂಗಡಿಗೆ ಡಿಕ್ಕಿ ಹೊಡೆದಿರುತ್ತಾನೆ. ಡಿಕ್ಕಿ ಹೊಡೆದ ಪರಿಣಾಮ ಗೂಡಂಗಡಿ ಜಖಂ ಆಗಿರುತ್ತದೆ. ಗೂಡಂಗಡಿಯ ಸಾಮಾನು ಹಾಳಾಗಿರುತ್ತದೆ. ಗೂಡಂಗಡಿಯಲ್ಲಿ ಇದ್ದ ತನ್ನ ಗಂಡನಾದ ಶಂಕರ್ ಕೋಟ್ಯಾನ್ ರವರಿಗೆ ಗೂಡಂಡಿಯ ಒಳಗೆ ಇಟ್ಟಿದ್ದ ಕಪಾಟು ತಲೆಯ ಮೇಲೆ ಬಿದ್ದು ತಲೆ ನೋವಾಗಿರುತ್ತದೆ ಎಂದು ಹೇಳಿರುತ್ತಾರೆ. ಮಗನು ಗೂಡಂಗಡಿಯ ಪಕ್ಕದಲ್ಲಿದ್ದು ಮಗನಿಗೆ ಯಾವುದೇ ಪೆಟ್ಟಾಗಿರುವುದಿಲ್ಲ. ನನ್ನ ಗಂಡನನ್ನು ಕಾಪು ಪುರಸಭೆ ಸದಸ್ಯ ಅನಿರಲ್ ರವರು ಒಂದು ಆ್ಯಂಬುಲೆನ್ಸ್ ನಲ್ಲಿ ಚಿಕಿತ್ಸೆ ಬಗ್ಗೆ ಉಡುಪಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಕಳುಹಿಸಿದ್ದು,  ಆಸ್ಪತ್ರೆಯಲ್ಲಿ  ವೈದ್ಯರು ಚಿಕಿತ್ಸೆ ನೀಡಿ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ. ಈ ಅಪಘಾತದಿಂದ ನನ್ನ ಮಗನ ಗೂಡಂಗಡಿಯಲ್ಲಿದ್ದ ಕೆಲವು ತಂಪು ಪಾನೀಯಗಳು, ಕೆಲವು ತಿನ್ನುವ ಸಾಮಾನುಗಳು, ಮತ್ತು ಗ್ಯಾಸ್ ಸ್ಟವ್ ಹಾಳಾಗಿದೆ. ಅಲ್ಲದೆ ಗೂಡಂಗಡಿ ಕೂಡ ಜಖಂ ಆಗಿರುತ್ತದೆ. ಇದರಿಂದ ಅಂದಾಜು ಸುಮಾರು 1,20, 000 ನಷ್ಟವುಂಟಾಗಿರುತ್ತದೆ. ಈ ಘಟನೆಗೆ ಕಾರಣವಾದ ಲಾರಿಯನ್ನು ನಾನು ನೋಡಿದ್ದು ಅದರ ನಂಬ್ರವನ್ನು ನೋಡಲಾಗಿ ಕೆಎ-20 ಡಿ-6109 ಆಗಿರುತ್ತದೆ. ಸದ್ರಿ ಲಾರಿ ಚಾಲಕನನ್ನು ನೋಡಿರುತ್ತೇನೆ. ಮುಂದಕ್ಕೆ ನೋಡಿದರೆ ಲಾರಿ ಚಾಲಕನನ್ನು ಗುರುತು ಹಿಡಿಯುತ್ತೇನೆ.  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನನ್ನ ಗಂಡನಿಗೆ ಜಕಮ್ ಮಾಡಿ ನನ್ನ ಮಗನ ಗೂಡಂಗಡಿಗೆ ನಷ್ಟ ಉಂಟು ಮಾಡಿರುವುದಾಗಿದೆ.  ಈ ಬಗ್ಗೆ ನನ್ನ ಮನೆಯವರಲ್ಲಿ ವಿಚಾರಿಸಿ ಈ ದಿನ ಠಾಣೆಗೆ ಬಂದು ದೂರು ನೀಡಿರುವುದಾಗಿದೆ. ಈ ಬಗ್ಗೆ ಕಾಫು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 09/2023 ಕಲಂ 279, 337, 427 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ದೀಪೇಶ್ ಖಾರ್ವಿ (22) ತಂದೆ: ಮಂಜುನಾಥಖಾರ್ವಿ  ವಾಸ: ಮೇಲ್ ಕೇರಿ ಮನೆ , ಕಾಸನಾಡಿ , ಉಪ್ಪುಂದ ಗ್ರಾಮ ಬೈಂದೂರು ಇವರು ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು ದಿನಾಂಕ17/01/2023 ರಂದು ಬೆಳಿಗ್ಗೆ  ಮರವಂತೆಯಲ್ಲಿ ಮೀನುಗಾರಿಕೆ ಕೆಲಸ ಮುಗಿಸಿ ಸ್ನೇಹಿತನಾದ ಮಂಜುನಾಥ ಖಾರ್ವಿ  ರವರ ಬಾಬ್ತು KA-20 ED-3560 ನೇ ನಂಬ್ರದ ಅಪಾಚಿ ಮೋಟಾರು ಸೈಕಲ್ ನಲ್ಲಿ ಹಿಂಬದಿ ಸಹ ಸವಾರರಾಗಿ ಕುಳಿತುಕೊಂಡು ಮರವಂತೆ ಕಡೆಯಿಂದ ಉಪ್ಪುಂದ ಕಡೆಗೆ ರಾಹೆ 66 ರ ಪಶ್ಚಿಮ ಬದಿಯ ರಸ್ತೆಯಲ್ಲಿ  ಬರುತ್ತಿರುವಾಗ  ಬೆಳಿಗ್ಗೆ  11:00 ಗಂಟೆಗೆ ಕೆರ್ಗಾಲ್ ಗ್ರಾಮದ ನಾಯ್ಕನ ಕಟ್ಟೆ ಯು ಟರ್ನ ತಲುಪಿದ  ಸಮಯ ಹೊಸ್ಕೋಟೆ ಕಡೆಯಿಂದ ಉಪ್ಪುಂದ ಕಡೆಗೆ  KA-20 ME-1841 ನೇ ಟಾಟಾ Nexon ಕಾರು ಚಾಲಕನು ಆತನ ಬಾಬ್ತು ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೇ ಯು ಟರ್ನ ಮಾಡಿ  ಮಂಜುನಾಥ  ಖಾರ್ವಿ ರವರು ಚಲಾಯಿಸಿಕೊಂಡಿದ್ದ ಮೋಟಾರು ಸೈಕಲ್ ಗೆ ಡಿಕ್ಕಿ  ಹೊಡೆದ ಪರಿಣಾಮ ಫಿರ್ಯಾದಿದಾರರು ಹಾಗೂ ಮೋಟಾರು ಸೈಕಲ್ ಸವಾರ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದಿದ್ದು ,ಅಪಘಾತದ ಪರಿಣಾಮ  ಮಂಜುನಾಥ ಖಾರ್ವಿ ರವರ  ಬಲ ಕೈ ಕಿರುಬೆರಳಿಗೆ ರಕ್ತಗಾಯ ಹಾಗೂ ಒಳ ಜಖಂ ಉಂಟಾಗಿದ್ದು ಮತ್ತು ದೀಪೇಶ್ ಖಾರ್ವಿ ರವರಿಗೆ ಸಣ್ಣ ಪುಟ್ಟ ತರಚಿದ ಗಾಯವಾಗಿದ್ದು ಕುಂದಾಪುರ ನ್ಯೂ ಮೆಡಿಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆದಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 10/2023 ಕಲಂ: 279, 337, ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 17/01/2023 ರಂದು ಪಿರ್ಯಾದಿದಾರರಾದ ಪ್ರದೀಪ ಕುಮಾರ್‌ (36), ತಂದೆ: ಜಗನ್ನಾಥ, ವಾಸ: “ಅಕ್ಷತಾ”, ಕಾನಂಗಿ, ಕೊಡವೂರು ಗ್ರಾಮ, ಉಡುಪಿ ತಾಲೂಕು ರವರು ಅವರ ಕಾರಿನಲ್ಲಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಕ್ರಾಸ್‌ ನಿಂದ ಬ್ರಹ್ಮಾವರ ಕಡೆಗೆ ಸುಮಾರು 50 ಮೀಟರ್‌ ದೂರ ಬರುತ್ತಾ  ರಾತ್ರಿ ಸುಮಾರು 8:30 ಗಂಟೆಗೆ ಬೈಕಾಡಿ ಗ್ರಾಮದ, ಬ್ರಹ್ಮಾವರ ಮಂಜುನಾಥ ಪೇಟ್ರೋಲ್‌ ಬಂಕ್‌ ಎದುರು, ಉಡುಪಿ – ಬ್ರಹ್ಮಾವರ ರಾ.ಹೆ 66 ರಲ್ಲಿ ತಲುಪುವಾಗ  ಉಡುಪಿ ಕಡೆಯಿಂದ KA-20 EN-8358 ನೇ ಮೋಟಾರ್‌ ಸೈಕಲ್‌ನ್ನು ಓರ್ವ ಮೋಟಾರ್‌ ಸೈಕಲ್‌ ಸವಾರ, ಒಬ್ಬ ಸಹ ಸವಾರನೊಂದಿಗೆ ಸವಾರಿ ಮಾಡಿಕೊಂಡು ಬಂದು ಪ್ರದೀಪ ಕುಮಾರ್‌ ರವರ ಕಾರನ್ನು ಹಿಂದಿಕ್ಕಿ ಮುಂದೆ ಹೋಗಿದ್ದು, ಅದೇ ಸಮಯದಲ್ಲಿ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ  ಯಾವುದೋ ಒಂದು ವಾಹನದ ಚಾಲಕ ಸದ್ರಿ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದಿದ್ದು, ಆಗ ಮೋಟಾರ್‌ ಸೈಕಲ್‌ ಸವಾರ ಮೋಟಾರ್‌ ಸೈಕಲ್‌ನ್ನು ಅವರ ಬಲಭಾಗಕ್ಕೆ ಸವಾರಿ ಮಾಡಿದಾಗ, ರಸ್ತೆಯ ಬಲಭಾಗದಲ್ಲಿ ಕುಂದಾಪುರ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಆರೋಪಿ ಆಕಾಶ್‌ ಎಂಬವರು ಚಲಾಯಿಸುತ್ತಿದ್ದ MH-11 CJ-5549 ನೇ ಲಾರಿಯು ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್‌ ಸೈಕಲ್‌ ನಲ್ಲಿದ್ದ ಸವಾರ ವಾಗೇಶ ಕೆದ್ಲಾಯ ಹಾಗೂ ಸಹಸವಾರ ಸಮಿತ್‌ ಎಮ್‌ಜಿ ಇಬ್ಬರೂ ಮೋಟಾರ್‌ ಸೈಕಲ್‌ ಸಮೇತ  ಡಾಂಬಾರು ರಸ್ತೆಗೆ ಬಿದ್ದು,ಇಬ್ಬರಿಗೂ ತಲೆಗೆ ಪೆಟ್ಟಾಗಿ ಸ್ಥಳದಲ್ಲಿ ತೀವ್ರ ರಕ್ತ ಸ್ರಾವವಾಗಿ ಸ್ಥಳದಲ್ಲಿಯೇ ಇಬ್ಬರೂ ಮೃತಪಟ್ಟಿರುತ್ತಾರೆ. ಈ ಅಪಘಾತಕ್ಕೆ ಆರೋಪಿಗಳಾದ ಕುಂದಾಪುರ ಕಡೆಗೆ ಹೋಗುತ್ತಿದ್ದ ಯಾವುದೋ ಒಂದು ವಾಹನದ ಚಾಲಕ ಹಾಗೂ ಲಾರಿ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 06/2023 ಕಲಂ: 279, 304 (ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಅಜೆಕಾರು: ಪಿರ್ಯಾದಿದಾರರಾಧ ಕೃಷ್ಣ ಪರವ  (52) ತಂದೆ: ಕೋಟಿ ಪರವ ವಾಸ: ದರ್ಕಾಸು ಮನೆ, ಬಂಗ್ಲೆಗುಡ್ಡೆ, ಕೆರ್ವಾಶೆ ಗ್ರಾಮ & ಅಂಚೆ  ಕಾರ್ಕಳ ಇವರು ದಿನಾಂಕ:17/01/2023 ರಂದು ಸಂಜೆ 4:00   ಕೆರ್ವಾಶೆ ಗ್ರಾಮದ ಬಂಗ್ಲೆಗುಡ್ಡೆ ಎಂಬಲ್ಲಿ ತನ್ನ ಅಂಗಡಿಯಲ್ಲಿ ಸೈಕಲ್‌ ರಿಪೇರಿ ಅಂಗಡಿ ಮಾಡಿಕೊಂಡಿರುವಾಗ್ಗೆ  ದೇವರಾಜ್‌ ಜೈನ್‌ ಎಂಬವರು ಕರೆ ಮಾಡಿ ತನ್ನ ಸ್ಕೂಟರ್‌ ನ್ನು ನ್ನು ರಿಪೇರಿ ಮಾಡಿ ಕೊಡುವಂತೆ ತಿಳಿಸಿದ ಮೇರೆಗೆ ಕೃಷ್ಣ ಪರವ  ಇವರು  ತನ್ನ ಅಂಗಡಿಯಿಂದ  ಅವರ ಬಾಬ್ತು ಕೆಎ-20 ಇಇ-4128 ನೇ ಹೀರೋ ಪ್ಲೆಸರ್‌  ಸ್ಕೂಟರ್‌  ನಲ್ಲಿ  ಕೆವಾಶೆ –ಕೆಂಪ್ಲಾಜೆ ಎಂಬಲ್ಲಿಗೆ ಹೋಗುತ್ತಿರುವಾಗ್ಗೆ  ಸಂಜೆ 4:30 ಗಂಟೆ ಸುಮಾರಿಗೆ  ಕೆರ್ವಾಶೆ ಪೇಟೆಯ ಮುಂದೆ  ಜಾರ್ಕಳ-ಮುಂಡ್ಲಿ  ತಿರುವಿನ ಬಳಿ ತಲುಪುವಾಗ್ಗೆ ಕೃಷ್ಣ ಪರವ  ರವರ ಹಿಂದಿನಿಂದ ಕೆಎ-20 ಡಿ-4795 ನೇ ನಂಬ್ರದ ಟಿಪ್ಪರ್‌ ಚಾಲಕ ನು ತನ್ನ ಬಾಬ್ತು ಟಪ್ಪರ್‌ ನ್ನು ಅತೀ ವೇಗ ಮತ್ತು ನಿಲಕ್ಷ್ಯತನದಿಂದ ಚಲಾಯಿಸಿ ಕೃಷ್ಣ ಪರವ  ರವರು ಚಲಾಯಿಸುತ್ತಿದ್ದ ಕೆಎ-20 ಇಇ-4128 ನೇ ಹೀರೋ ಪ್ಲೆಸರ್‌  ಸ್ಕೂಟರ್‌  ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಕೃಷ್ಣ ಪರವ  ರವರು ಸ್ಕೂಟಿ ಸಮೇತ ರಸ್ತೆಗೆ ಬಿದ್ದು ಸ್ಕೂಟಿ  ಜಖಂ ಗೊಂಡಿದ್ದು ಕೃಷ್ಣ ಪರವ  ರವರಿಗೆ ಬಲಕಾಲು ಪಾದದ ಬಳಿ, ಬಲಭುಜ , ಬಲ ಕೈಗೆ ಗುದ್ದಿದ ಗಾಯವಾಗಿದ್ದು  ಸಾರ್ವಜನಿಕರು ಹಾಗೂ ಟಿಪ್ಪರ್‌ ಲಾರಿ ಚಾಲಕನು ಕೃಷ್ಣ ಪರವ  ರವರನ್ನು  ಚಿಕಿತ್ಸೆ ಬಗ್ಗೆ  ಕಾರ್ಕಳ ಆಸ್ಪತ್ರಗೆ ಒಳರೋಗಿಯಾಗಿ  ದಾಖಲಿಸಿದ್ದು  ಅಪಘಾತಕ್ಕೆ ಕೆಎ-20 ಡಿ-4795 ನೇ ನಂಬ್ರದ ಟಿಪ್ಪರ್‌ ಚಾಲಕ ನಿತಿನ್‌ ರವರ ನಿರ್ಲಕ್ಷ್ಯತನದ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 03/2023ಕಲಂ:279, 337, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಾಧಕ ವಸ್ತು ಸೇವನೆ ಪ್ರಕರಣ

  • ಮಣಿಪಾಲ: ದಿನಾಂಕ 15/01/2023 ರಂದು 13:00 ಗಂಟೆಗೆ ಮಣಿಪಾಲ ಪೊಲೀಸ್‌ ಠಾಣಾ ಸುಕುಮಾರ  ಶೆಟ್ಟಿ ಹೆಚ್‌ ಸಿ ಮತ್ತು ಶುಭ  ರವರು ರೌಂಡ್ಸ  ಕರ್ತವ್ಯದಲ್ಲಿರುವ ಸಮಯ ಸುಮಾರು 13:00ಗಂಟೆಗೆ  ಉಡುಪಿ ತಾಲೂಕು ಶಿವಳ್ಳಿ ಗ್ರಾಮದ  ಮಣಿಪಾಲ  ಶಿರೂರು  ಶ್ರೀ  ಲಕ್ಷ್ಮೀ ಸಮ್ಮಿತ್‌ ಅಪಾರ್ಟಮೆಂಟ್‌ ಬಳಿ ಅಂಜಲಿ ಶರ್ಮ (21) ತಾಯಿ ;ಜೆಸ್ಸಿ  ಪುನ್ನೂಸ್‌ ಡೋರ್‌ ನಂ . 4092   ಪ್ರಸ್ಟೀಜ್‌ ಶಾಂತಿನಿಕೇತನ  ವೈಟ್‌ಫೀಲ್ಡ್‌ ಮೇನ್‌ ರಸ್ತೆ  ಮಣಿಪಾಲ  ಹಾಸ್ಪಿಟಲ್‌ ಎದುರು  ಬೆಂಗಳೂರು  ಉತ್ತರ-560048  ಪ್ರಸ್ತುತ  ವಿಳಾಸ   ಪ್ಲಾಟ್‌ ನಂ 106  ಶಿರೂರು  ಶ್ರೀ  ಲಕ್ಷ್ಮೀ ಸಮ್ಮಿತ್‌ ಅಪಾರ್ಟಮೆಂಟ್‌  ಮಣಿಪಾಲ ಎಂಬಾಕೆ  ಮಾದಕ ವಸ್ತು ಗಾಂಜಾವನ್ನು ಸೇವನೆ ಮಾಡಿರುವ ಅನುಮಾನದ ಮೇರೆಗೆ ವಶಕ್ಕೆ ಪಡೆದು ಠಾಣೆಗೆ ಕರೆತಂದಿರುತ್ತಾರೆ. ಅದೇ ದಿನ ಮಣಿಪಾಲ ಪೊಲೀಸ್‌ ಠಾಣಾ ಪ್ರಭಾರದಲ್ಲಿದ್ದ ಪೊಲೀಸ್ ನಿರೀಕ್ಷಕರು ರವರು ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಸುಕುಮಾರ  ಶೆಟ್ಟಿ ಮತ್ತು ಶುಭ  ರವರು ರವರ ಜೊತೆಯಲ್ಲಿ ಅಂಜಲಿ ಶರ್ಮರವರನ್ನು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಲು ಕಳುಹಿಸಿಕೊಟ್ಟಿರುತ್ತಾರೆ.  ಆರೋಪಿ ಅಂಜಲಿ  ಶರ್ಮ ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದಿನಾಂಕ 17/01/2023 ರಂದು ದೃಢಪತ್ರವನ್ನು ನೀಡಿರುವುದಾಗಿದೆ , ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 13/2023, ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾಧ ನಿರಂಜನ ಗೌಡ ಬಿ ಎಸ್ ಪೊಲೀಸ್ ಉಪನಿರೀಕ್ಷಕರು ಬೈಂದೂರು ಪೊಲೀಸ್ ಠಾಣೆ ಇವರು ದಿನಾಂಕ 17/01/2023 ರಂದು ರೌಂಡ್ಸ್  ಕರ್ತವ್ಯದಲ್ಲಿರುವಾಗ  15:45 ಗಂಟೆಗೆ ಸಾರ್ವಜನಿಕರೊಬ್ಬರು  ಕರೆ ಮಾಡಿ  ಹೇರೂರು ಗ್ರಾಮದ ಯರುಕೋಣೆ ಸೋಲಾರ್ ಸರ್ಕಲ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಯಾರೋ 4-5 ಜನರು ಒಬ್ಬರಿಗೊಬ್ಬರು ಕೈಗಳಿಂದ ದೂಡಾಡಿಕೊಂಡು ಗಲಾಟೆ ಮಾಡುತ್ತಿರುವುದಾಗಿ ನೀಡಿದ  ಖಚಿತ ಮಾಹಿತಿ ಮೇರೆಗೆ ಇವರು ಸಿಬ್ಬಂದಿಯವರೊಂದಿಗೆ  16;15 ಗಂಟೆಗೆ ಸ್ಥಳಕ್ಕೆ ಬಂದಾಗ  5 ವ್ಯಕ್ತಿಗಳು  ಒಬ್ಬರಿಗೊಬ್ಬರು ಕೈಗಳಿಂದ ದೂಡಾಡಿಕೊಂಡು ಗಲಾಟೆ ಮಾಡಿಕೊಂಡು ಸಾರ್ವಜನಿಕರ ಶಾಂತಿ ನೆಮ್ಮದಿಗೆ ಭಂಗ ಉಂಟು ಮಾಡುತ್ತಿರುವುದನ್ನು ಕಂಡು ಸ್ಥಳಕ್ಕೆ ಧಾವಿಸಿ, ಸಿಬ್ಬಂದಿಯವರುಗಳ ಸಹಾಯದಿಂದ ಗಲಾಟೆ ಮಾಡುತ್ತಿದ್ದ ಆರೋಪಿತರಾದ 1) ರಾಜೇಶ (25) ತಂದೆ: ಮಣಿಯ ವಾಸ: ಯಡಕಂಠ ಹೇರೂರು ಗ್ರಾಮ ಬೈಂದೂರು ತಾಲೂಕು, 2) ಅಭಿಷೇಕ(20) ತಂದೆ: ಮಾಲ್ತೇಶ್ ವಾಸ: ಗುಂಜಾನುಗುಡ್ಡೆ ನಾಗೂರು ಕಿರಿಮಂಜೇಶ್ವರ ಗ್ರಾಮ ಬೈಂದೂರು ತಾಲೂಕು, 3) ಚೇತನ (19) ತಂದೆ: ಆನಂದ ದೇವಾಡಿಗ ವಾಸ: ಮಂಜುನಾಥ ನಿಲಯ ಗುಂಜಾನುಗುಡ್ಡೆ ನಾಗೂರು ಕಿರಿಮಂಜೇಶ್ವರ ಗ್ರಾಮ ಬೈಂದೂರು ತಾಲೂಕು. 4) ಸುನೀಲ್ (20) ತಂದೆ: ನರಸಿಂಹ ವಾಸ: ಕಲ್ಯಾಣಿ ಮನೆ ಹಳಗೇರಿ ಕಂಬದಕೋಣೆ ಗ್ರಾಮ ಬೈಂದೂರು ತಾಲೂಕು 5] ಲಕ್ಷ್ಮಿಕಾಂತ (25) ತಂದೆ: ರಾಮ ಪೂಜಾರಿ ವಾಸ: ನಡುಮನೆ ಗೋರ್ಕಲ್ ಕಾಲ್ತೋಡು ಗ್ರಾಮ ಬೈಂದೂರು ರವರನ್ನು  ವಶಕ್ಕೆ ಪಡೆದು  ಸಾರ್ವಜನಿಕ ಸ್ಥಳದಲ್ಲಿ ಬೈದಾಡಿ ಗಲಾಟೆ  ಮಾಡಿಕೊಂಡು ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗಮಾಡಿದ ಆಪಾದಿತರ  ವಿರುದ್ದ  ಕ್ರಮ ಕೈಗೊಳ್ಳುವಂತೆ  ದೂರು ನೀಡಿರುವುದಾಗಿದೆ.  ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 11/2023 ಕಲಂ: 160 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹಿರಿಯಡ್ಕ: ಪಿರ್ಯಾದಿದಾರರಾಧ ಶ್ರೀಮತಿ ಬೇಬಿ (39) ಗಂಡ:ಶೇಖರ ವಾಸ: ಲಕ್ಷ್ಮೀ ನಿವಾಸ ಪಾಲಾಜೆ ರಸ್ತೆ ವಡ್ಡಮೇಶ್ವ ರ ಪೆರ್ಡೂರು ಗ್ರಾಮ ಉಡುಪಿ ಇವರ ಗಂಡ  ಶೇಖರ ಎಂಬುವನು ದಿನಾಂಕ 17/01/2023 ರಂದು ರಾತ್ರಿ 08:20  ಗಂಟೆಯ ವೇಳೆಗೆ ಶ್ರೀಮತಿ ಬೇಬಿ ರವರಿಗೆ ಯಾವುದೋ ಒಂದು ಕಾರಣಕ್ಕೆ ಅವಾಛ್ಯ ಶಬ್ದಗಳಿಂದ ಬೈದು ಕೈಯಿಂದ ಎಡಬದಿಯ ಕೆನ್ನೆಗೆ ಹೊಡೆದು ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಕೊಲೆ ಮಾಡುವ ಉದ್ದದೇಶದಿಂದ ಅಡುಗೆ ಕೋಣೆಯಲ್ಲಿದ್ದ ತರಕಾರಿ  ಹಚ್ಚುವ ಚೂರಿಯಿಂದ ಶ್ರೀಮತಿ ಬೇಬಿ ರವರ ಬಲ ಬದಿಯ ಗಲ್ಲಕ್ಕೆ ಹಾಗೂ ಎಡಬದಿಯ ಭುಜಕ್ಕೆ ಇರಿದು ತೀವ್ರ ತರದ ಗಾಯವನ್ನುಂಟು ಮಾಡಿದ್ದು ನಂತರ ತಾನು ಚೂರಿಯನ್ನು ಕೈಯಲ್ಲಿ ಹಿಡಿದುಕೊಂಡು ಓಡಿಹೋಗಿದ್ದು ನಂತರ ಶ್ರೀಮತಿ ಬೇಬಿ ರವರು ಹೆಬ್ರಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗಿ ಚಿಕಿತ್ಸೆ ಪಡೆದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆಂದು ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 01/2023  ಕಲಂ:323,307,504,506  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 18-01-2023 10:30 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080