ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣಗಳು

 • ಬ್ರಹ್ಮಾವರ: ಪಿರ್ಯಾದಿ: ಗಂಗಾಧರ ಜೋಷಿ (63), ತಂದೆ:  ದಿವಂಗತ ಲಕ್ಷ್ಮಣ ಜೋಷಿ , ವಾಸ: ಹರ್ಷದೀಪ ಸರಕಾರಿ ಆಸ್ಪತ್ರೆ ಎದುರು  ಹೊಸಾಳ ಗ್ರಾಮ  ದಿನಾಂಕ:  15/01/2023 ರಂದು ಬೆಳಗಿನ ಜಾವ 04:30 ಗಂಟೆಗೆ ಮನೆಗೆ ಬೀಗ ಹಾಕಿ ಹೊಸಗದ್ದೆಯಲ್ಲಿ ಫಿರ್ಯಾದಿದಾರರ ತಂದೆಯ ಶ್ರಾದ್ಧ ಕಾರ್ಯ  ಮುಗಿಸಿ  ದಿನಾಂಕ: 18/01/2023 ರಂದು ಬೆಳಿಗ್ಗೆ 10:40 ಗಂಟೆಗೆ  ಮನೆಗೆ ಬಂದು ನೋಡಿದಾಗ ಯಾರೋ ಕಳ್ಳರು  ಮನೆಯ ಎದುರಿನ ಪ್ರವೇಶ ಬಾಗಿಲಿನ ಚಿಲಕದ ಕೊಂಡಿ  ಮುರಿದು  ಸಿಟ್‌ ಔಟ್‌ನಲ್ಲಿ ಬಿದ್ದಿದ್ದು ಚಿಲಕಕ್ಕೆ ಹಾಕಿದ  ಬೀಗ ಹಾಕಿದ  ಸ್ಥಿತಿಯಲ್ಲಿ ಇದ್ದು ಬಟ್ಟೆಯ ದಾರದಿಂದ ಕಟ್ಟಿರುವುದು ಕಂಡು ಬಂದಿರುತ್ತದೆ.   ಫಿರ್ಯಾದಿದಾರರು ಮನೆ ಬಾಗಿಲು ತೆರೆದು ಒಳಗೆ ಹೋಗಿ ನೋಡಿದಾಗ  ಮನೆಯ ಎಲ್ಲಾ ಕೋಣೆಯಲ್ಲಿರುವ ವಸ್ತುಗಳು ಚೆಲ್ಲಾಪಿಲ್ಲಿಯಾಗಿ  ಬಿದ್ದಿದ್ದು  2 ಬೆಡ್‌ ರೂಂ ಕಪಾಟುಗಳನ್ನು ತೆರೆದು ಜಾಲಾಡಿ ಕಪಾಟುಗಳಲ್ಲಿ ಇದ್ದ ಸುಮಾರು  4 ಗ್ರಾಂ ತೊಕದ ಚಿನ್ನದ ಕಿವಿಯ ಬೆಂಡೋಲೆ 1, ರೂ 16,000 /-, ಸುಮಾರು 3 ಗ್ರಾಂ ತೊಕದ ಚಿನ್ನದ ಕಿವಿಯ ಬೆಂಡೋಲೆ 1 ಜೊತೆ ರೂ 10,000 /-, 4 ಸಣ್ಣ ಬೆಳ್ಳಿಯ ಕುಂಕುಮದ ಕರಡಿಗೆ - 50 ಗ್ರಾಂ  ರೂ  3500 /-,   2 ಬೆಳ್ಳಿಯ ಲೋಟ - 50 ಗ್ರಾಂ ರೂ 3500/-, 1 ಬೆಳ್ಳಿಯ ಕವಳಿಗೆ ಸೌಟು  - 75 ಗ್ರಾಂ  ರೂ 5000/- , ½ ಪವನ  ತೂಕದ  ಬೆಳ್ಳಿಯ ಮುತ್ತಿನ ಸರ – ರೂ  3000 /-, ಬೆಳ್ಳಿಯ ಕೀ ಬಂಚ್‌ -50 ಗ್ರಾಂ ರೂ 4500/-,  ಸುಮಾರು 12 ಗ್ರಾಂ ತೂಕದ ಬೆಳ್ಳಿಯ ದೀಪ -1 ರೂ 8500/- ಹಾಗೂ ನಗದು  ರೂ 50,000 ಇವುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು  ಹೋಗಿರುತ್ತಾರೆ, ಕಳವಾದ ನಗದು ಹಾಗೂ ಒಟ್ಟು ಸೊತ್ತಿನ ಬೆಲೆ ರೂ. 1,04,000/- ಆಗಿರುತ್ತದೆ. ಈ ಬಗ್ಗೆ  ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ  07/2023 ಕಲಂ : 454, 457, 380 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಪಡುಬಿದ್ರಿ :ಪಿರ್ಯಾದಿ: ಬಶೀರ್ ಅಬ್ದುಲ್ ಖಾದರ್, ಪ್ರಾಯ: 60 ವರ್ಷ, ತಂದೆ: ಯು.ಇದ್ದಿನಬ್ಬ, ವಾಸ: ಹಿಲ್‌‌ಸೈಡ್, 7ನೇ ಬ್ಲಾಕ್, ಕೃಷ್ಣಾಪುರ, ಕಾಟಿಪಳ್ಳ, ಸುರತ್ಕಲ್, ಇವರು ಉಡುಪಿ ಜಿಲ್ಲೆ ಕಾಪು ತಾಲೂಕು ನಡ್ಸಾಲು ಗ್ರಾಮ  ಇವರು ಪಡುಬಿದ್ರಿಯ ಮಾರ್ಕೆಟ್ ರಸ್ತೆಯಲ್ಲಿರುವ ಕೆ.ಎಸ್.ಬಜಾರ್ ಹೆಸರಿನ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದು, ಎಂದಿನಂತೆ ನಿನ್ನೆ ದಿನ ದಿನಾಂಕ: 17.01.2023 ರಂದು ರಾತ್ರಿ 20:05 ಗಂಟೆಯ ವೇಳೆಗೆ ಅಂಗಡಿಯ ಶೆಟರಿಗೆ ಬೀಗ ಹಾಕಿ ಹೋಗಿದ್ದು, ನಂತರ ಯಾರೋ ಕಳ್ಳರು ನಿನ್ನೆ ದಿನ ದಿನಾಂಕ: 17.01.2023 ರಂದು ರಾತ್ರಿ 20:05 ಗಂಟೆಯಿಂದ ಈ ದಿನ ದಿನಾಂಕ: 18.01.2023 ರ ಬೆಳಿಗ್ಗೆ 08:30 ಗಂಟೆಯ ಮಧ್ಯಾವಧಿಯಲ್ಲಿ ಕೆ.ಎಸ್.ಬಜಾರ್ ಅಂಗಡಿಗೆ ಹಾಕಿದ್ದ ಶೆಟರ್‌‌ನ ಬೀಗವನ್ನು ಮುರಿದು ಬಾಗಿಲನ್ನು ತೆರೆದು ಒಳ ಪ್ರವೇಶಿಸಿ, ಅಂಗಡಿಯ ಕ್ಯಾಷ್ ಕೌಂಟರನ್ನು ಜಾಲಾಡಿಸಿ, ಬಿಲ್ಲಿಂಗ್‌‌ನ ಉಪಯೋಗಕ್ಕೆ ಇರಿಸಿದ್ದ ಅಂದಾಜು 15,000/- ರೂ ಮೌಲ್ಯದ DELL ಕಂಪನಿಯ ಲ್ಯಾಪ್‌‌ಟಾಪ್-01 ಹಾಗೂ ಅಂದಾಜು 5,000/- ರೂ ಮೌಲ್ಯದ ಸ್ಯಾಮ್‌ಸಂಗ್ ಕಂಪನಿಯ ಮೊಬೈಲ್‌‌ಫೋನ್-01 ನ್ನು ಕಳ್ಳತನ ಮಾಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  04/2023, ಕಲಂ:  457,  380, IPC  ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಪ್ರಕರಣಗಳು

 • ಕಾಪು: ಪಿರ್ಯಾದಿ ನಾರಾಯಣ ಪ್ರಾಯ : 60 ವರ್ಷ ತಂದೆ  : ದಿ. ಸುಬ್ರಾಯ್  ವಾಸ : ಸುಶೀಲಾ ರವರ ಬಾಡಿಗೆ ಮನೆ, ಕೊರಂಗ್ರಪಾಡಿ, ಉಡುಪಿ ತಾಲ್ಲೂಕು ಮತ್ತು ಜಿಲ್ಲೆ ಇವರು ದಿನಾಂಕ 17-01-2023 ರಂದು 18.30 ಗಂಟೆಯ ಸುಮಾರಿಗೆ ಉದ್ಯಾವರ ಗ್ರಾಮದ ಗುಡ್ಡೆಯಂಗಡಿಯ ಅಶೋಕರವರ ಗ್ಯಾರೇಜ್‌ಬಳಿ ರಾ ಹೆ 66 ರ ಉಡುಪಿ ಮಂಗಳೂರು ರಸ್ತೆಯ ಪೂರ್ವ ಬದಿಯ ಅಂಚಿನಲ್ಲಿ  ಉದ್ಯಾವರದಿಂದ ಮನೆಗೆ  ನಡೆದುಕೊಂಡು ಹೋಗುತ್ತಿರುವಾಗ ಅದೇ ರಸ್ತೆಯಲ್ಲಿ ಪ್ರೇಮಚಂದ್ರ ರವರು ತನ್ನ ಬಾಬ್ತು ಕೆ.ಎ. 20 ಎಮ್‌.ಎ. 5142 ನೇ ಕಾರನ್ನು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗ ಹಾಗೂ ತೀವೃ ಅಜಾಗರೂಕತೆಯಿಂದ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಢಿಕ್ಕಿ ಹೊಡೆದಿದ್ದು ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು, ಅವರಿಗೆ ಬಲಕಾಲಿನ ಮೂಳೆ ಮುರಿತದ ಗಾಯ, ಎಡಕಾಲಿನ ಮೊಣಗಂಟಿಗೆ, ಎಡಕೈಯ ಗಂಟಿಗೆ ಹಾಗೂ ಬಲಭಾಗದ ಮುಖದಲ್ಲಿ  ತರಚಿದ ಗಾಯವಾಗಿದ್ದು, ಸ್ಥಳದಲ್ಲಿದ್ದ ತೀಲಕರಾಜ್‌‌ರವರು ಚಿಕಿತ್ಸೆಯ ಬಗ್ಗೆ ಢಿಕ್ಕಿ ಹೊಡೆದ ಕಾರಿನಲ್ಲಿ ಪ್ರೇಮಚಂದ್ರ ರವರೊಂದಿಗೆ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆತಂದಲ್ಲಿ ಪರೀಕ್ಷಿಸಿದ ಇಲ್ಲಿನ ವೈದ್ಯರು ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುವುದಾಗಿದೆ.  ಈ ಬಗ್ಗೆ ಕಾಪು ಠಾಣಾ ಅಪರಾಧ ಕ್ರಮಾಂಕ . 10/2023 ಕಲಂ 279, 338  ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಕುಂದಾಪುರ: ದಿನಾಂಕ 18/01/2023 ರಂದು ಬೆಳಿಗ್ಗೆ ಸುಮಾರು 9:30  ಗಂಟೆಗೆ, ಕುಂದಾಪುರ  ತಾಲೂಕಿನ, ಕುಂದಾಪುರದ ಭಂಡಾರ್ಸ್‌‌‌ಕಾರ್ಸ್‌‌ ಕಾಲೇಜಿನ ಗೇಟ್‌ಬಳಿ ರಸ್ತೆಯಲ್ಲಿ,  ಆಪಾದಿತ ಶಶಾಂಕ್‌ ಎಂಬವರು,  KA12-L-2323ನೇ, KTM ಬೈಕನ್ನು ವಿಠಲ್‌ವಾಡಿ  ಕಡೆಯಿಂದ ಕುಂದಾಪುರ ಶಾಸ್ತ್ರಿ ಸರ್ಕಲ್‌ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ  ಮಾಡಿಕೊಂಡು ಬಂದು, ಕುಂದಾಪುರ ಶಾಸ್ತ್ರಿ ಸರ್ಕಲ್‌ಕಡೆಯಿಂದ ರಸ್ತೆಯ ಎಡಬದಿಯಲ್ಲಿ KA20ED-6249ನೇ Honda Activa ಸ್ಕೂಟರ್‌ಸವಾರಿ ಮಾಡಿಕೊಂಡು  ಬರುತ್ತಿದ್ದ ಚಂದ್ರಶೇಖರ್‌ಎಂಬವರಿಗೆ  ಎದುರಿನಿಂದ ಡಿಕ್ಕಿ ಹೊಡೆದ  ಪರಿಣಾಮ, ಶಶಾಂಕ್‌ರವರ  ಮುಖಕ್ಕೆ ತರಚಿದ  ರಕ್ತಗಾಯ, ಚಂದ್ರಶೇಖರ್‌ರವರ ತಲೆಗೆ, ಮುಖಕ್ಕೆ, ರಕ್ತಗಾಯ ಹಾಗೂ ಒಳಜಖಂ ಉಂಟಾದ ಗಾಯವಾಗಿದ್ದು,  ಚಂದ್ರಶೇಖರ್‌ರವರು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು  ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ  ಆಸ್ಪತ್ರೆಗೆ ಹೋಗಿದ್ದು,  ಆಪಾದಿತ  ಶಶಾಂಕ್‌ರವರು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಸನತ್‌ ಶೆಟ್ಟಿ  ಪ್ರಾಯ  21   ವರ್ಷ   ತಂದೆ  ಅಶೋಕ್‌ಶೆಟ್ಟಿ    ವಾಸ: ನಾಡಾ ಗುಡ್ಡೆಯಂಗಡಿ, ನಾಡಾ ಗ್ರಾಮ ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ, ಅಪರಾಧ ಕ್ರಮಾಂಕ  07/2023 ಕಲಂ 279, 338    IPC ಯಂತೆ ಪ್ರಕರಣ ದಾಖಲಿಸಲಾಗಿದೆ.

ವಾಹನ ಕಳವು ಪ್ರಕರಣ

 • ಉಡುಪಿ: ಪಿರ್ಯಾದಿ: ಸಂತೋಷ್‌ ಪ್ರಾಯ: 29 ವರ್ಷ ತಂದೆ: ದಿ. ಸೋಮಪ್ಪ ಸಾಲ್ಯಾನ್‌  ವಾಸ: ವಜ್ರಕಾಯ, ಶಾಂತಿನಗರ, ಪಡುಕೆರೆ ರವರು  KSP App ಮುಖೇನ ನೀಡಿದ E-FIR ಸಾರಾಂಶವೇನೆಂದರೆ,  ತಮ್ಮ ಬಾಬ್ತು YAMAHA FZS ಮೋಟಾರ್‌ ಸೈಕಲ್‌  ನಂಬ್ರ KA20EN8081 (Chassis No: ME1RG0721H0275943 & Engine No: G3C8E0415765) ನೇದನ್ನು ದಿನಾಂಕ 14/01/2023 ರಂದು 18:00 ಗಂಟೆಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಉಡುಪಿ ಸರ್ವೀಸ್‌ ಬಸ್‌ ನಿಲ್ದಾಣದ ಬಳಿ ಇರುವ ಹೂವಿನ ಅಂಗಡಿ ಎದುರು ನಿಲ್ಲಿಸಿ, ಕೆಲಸದ ನಿಮಿತ್ತ ಮಂಗಳೂರಿಗೆ ಹೋಗಿ ವಾಪಾಸು ದಿನಾಂಕ 17/01/2023 ರಂದು 16:00 ಗಂಟೆಗೆ ಬಂದು ನೋಡಿದಾಗ ಮೋಟಾರ್‌ ಸೈಕಲ್‌ ನಿಲ್ಲಿಸಿದ ಸ್ಥಳದಲ್ಲಿ ಇಲ್ಲದೆ ಇದ್ದು, ಯಾರೋ ಕಳ್ಳರು ಮೋಟಾರ್‌ ಸೈಕಲ್‌ ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟಾರ್‌ ಸೈಕಲ್‌ ನ ಅಂದಾಜು ಮೌಲ್ಯ ರೂ. 55,000/- ಆಗಬಹುದು.  ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  13/2023 ಕಲಂ:  379  IPC ಯಂತೆ ಪ್ರಕರಣ ದಾಕಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಉಡುಪಿ: ಪಿರ್ಯಾದಿ: ಮಾಯಾ. ಎಂ  ಪ್ರಾಯ: 58  ವರ್ಷ ತಂದೆ:  ಕೆ. ರಘುರಾಮ್‌ ಕಾಮತ್‌ ವಾಸ:  5-12-1118/13, ಶ್ರೀ ಗಣೇಶ್‌, ಭಗವತಿ ಲೇನ್‌, ಕೊಡಿಯಾಲ್‌ಗುತ್ತು, ಮಂಗಳೂರು. ಇವರ ಅಣ್ಣನಾದ ಎಂ. ರಾಮಕೃಷ್ಣ ಪಡಿಯಾರ್‌ ಪ್ರಾಯ 64 ವರ್ಷ ಎಂಬವರು ಮದುವೆಯಾಗದೇ ಒಬ್ಬಂಟಿಯಾಗಿ ಉಡುಪಿ ತಾಲೂಕು 76-ಬಡಗುಬೆಟ್ಟು ಗ್ರಾಮದ ಮಾಧವ ನಿಲಯ ಎಂಬಲ್ಲಿ ವಾಸ್ತವ್ಯವಿದ್ದು, ದಿನಾಂಕ 17/01/2023 ರಂದು 15:00 ಗಂಟೆಗೆ ಮನೆಯ ಮಾಡಿನ ರಿಪೇರಿ ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ ಕೈ ಜಾರಿ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿದ್ದು, ಅದನ್ನು ಯಾರೂ ನೋಡದೇ ಇದ್ದು, ತದನಂತರ ಚಿಕತ್ಸೆಗೆ ಬಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಲ್ಲಿ ಪರೀಕ್ಷಿಸಲಾಗಿ, ಎಂ. ರಾಮಕೃಷ್ಣ ಪಡಿಯಾರ್‌ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ  ಉಡುಪಿ ನಗರ ಪೊಲೀಸ್ ಠಾಣೆ ಯುಡಿ ಆರ್  04/2023 ಕಲಂ 174 CrPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 18-01-2023 06:47 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080