ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

 • ಬ್ರಹ್ಮಾವರ: ದಿನಾಂಕ 17/01/2022 ರಂದು ಪಿರ್ಯಾದಿ ರೊಯ್ಸ್‌‌‌ ಮೆರ್ವಿನ್‌‌‌ ಫೆರ್ನಾಂಡಿಸ್‌‌ ಇವರು ಕೆಲಸದ ನಿಮಿತ್ತ ಅವರ ಮೋಟಾರ ಸೈಕಲ್‌‌ನಂಬ್ರ KA.53 X 8401ರಲ್ಲಿ ರಾ.ಹೆ 66 ರಲ್ಲಿ ಕೆಲಸದ ನಿಮಿತ್ತ  ಬ್ರಹ್ಮಾವರದ ಕಡೆಗೆ ಬರುತ್ತಿರುವಾಗ 52ನೇ ಹೇರೂರು ಗ್ರಾಮದ ಹೊಸದಾಗಿ ನಿರ್ಮಿಸುತ್ತಿರುವ ಪೆಂಟ್ರೋಲ್‌‌ಬಂಕ್‌‌‌ಎದುರು ರಾ.ಹೆ 66 ರಲ್ಲಿ ಸಮಯ ಸುಮಾರು 11:00 ರಿಂದ 11:20 ಗಂಟೆಗೆ ಫಿರ್ಯಾದಿದಾರರ ಎದುರಿನಿಂದ ಬ್ರಹ್ಮಾವರ ಕಡೆಗೆ KA-20-EK-1077 ನೇ ಆಕ್ಟೀವ್‌‌ಹೊಂಡಾ ಸವಾರ ಅನಿಲ್‌‌ಕಿರಣ್‌‌ಪಿಂಟೋ ರವರು ಹಿಂಬದಿ ಅವರ ಹೆಂಡತಿ ಸರಿತ ಮತ್ತು ಮಗ ಆಡ್ರೀಲ್‌‌‌ನನ್ನು ಕುಳ್ಳಿರಿಸಿಕೊಂಡು ಅತೀ  ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಒಮ್ಮೇಲೆ ಬ್ರೇಕ್‌‌‌ ಹಾಕಿರುವುದರಿಂದ ದ್ವಿಚಕ್ರ ಸವಾರನ ಹತೋಟಿ ತಪ್ಪಿ ಸ್ಕಿಡ್‌‌ಆಗಿ ರಸ್ತೆ ದ್ವಿಚಕ್ರ ವಾಹನದ ಸಮೇತ ರಸ್ತೆಗೆ ಬಿದ್ದಿರುತ್ತಾರೆ. ಕೂಡಲೇ ಫಿರ್ಯಾದಿದಾರರು ತಮ್ಮ ಬೈಕ್‌‌ಯನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಅಪಘಾತ ನಡೆದ ಸ್ಧಳಕ್ಕೆ  ಹೋದಾಗ ಅಲ್ಲಿ ಸೇರಿದ ಇತರ ಸಾರ್ವಜನಿಕರ  ಸಹಾಯದಿಂದ ರಸ್ತೆಯ ಮೇಲೆ ಬಿದ್ದ ಅನಿಲ್‌‌ಕಿರಣ್‌‌ಪಿಂಟೋ, ಸರಿತಾ ಹಾಗೂ ಸರಿತಾರವರ ಸೊಂಟದಲ್ಲಿ ಬೆಲ್ಟ್‌‌ಹಾಕಿ ಕಟ್ಟಿ ಕೊಂಡಿರುವ ಅವರ ಮಗ ಆಡ್ರೀಲ್‌ನ್ನು ಎತ್ತಿ ಉಪಚರಿಸಿ  ನೋಡಿದಾಗ ಈ ಅಪಘಾತದಿಂದ ಅನಿಲ್‌‌ಕಿರಣ್‌‌ ಪಿಂಟೋನ ಎಡ ಕೈ ಮತ್ತು ಎಡ ಕಾಲಿಗೆ ರಕ್ತಗಾಯ ಹಾಗೂ ತರಚಿದ ಗಾಯವಾಗಿರುತ್ತದೆ. ಸರಿತಾರವರು ಈ ಅಪಘಾತದ ತೀವ್ರತೆಯಿಂದ  ಮಾತನಾಡುತ್ತಿರಲ್ಲಿ ಅವರ ತಲೆಗೆ ತೀವ್ರ ಒಳ ನೋವಾಗಿರುತ್ತದೆ. ಹಾಗೂ ಅವರ ಮಗ ಆಡ್ರೀಲ್‌‌ನಿಗೆ ಎಡ ಕೈ ಗೆ ತರಚಿದ ಗಾಯವಾಗಿರುತ್ತದೆ. ಈ ಅಪಘಾತದಿಂದ ಅವರು ಚಲಾಯಿಸುತ್ತಿದ್ದ ದ್ವಿಚಕ್ರದ ಹಿಂಬದಿಯ ಟಯರ್‌‌ ಕಳುಚಿ ಹೋಗಿರುತ್ತದೆ.  ಕೂಡಲೇ ಗಾಯಾಳುಗಳನ್ನು ಒಂದು ಕಾರಿನಲ್ಲಿ  ಹತ್ತಿರದ ಮಹೇಶ ಆಸ್ಪತ್ರೆಗೆ ಕರೆದುಕೊಂಡು ಹೋದಾಗ  ಅಲ್ಲಿನ  ವೈದ್ಯರು ಪರೀಕ್ಷಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಕೆ.ಎಂ.ಸಿ ಆಸ್ಪತ್ರೆ ಮಣಿಪಾಲಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಇವರುಗಳನ್ನು ಪರೀಕ್ಷಿಸಿ ಒಳ ರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ 10/2022 ಕಲಂ 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
 • ಬೈಂದೂರು: ಪಿರ್ಯಾದಿ ಸಂತೋಷ್ ಶೇಟ್ ಇವರು ದಿನಾಂಕ 18-01-2022 ರಂದು ಬೆಳಗಿನ ಜಾವ 4:45 ಗಂಟೆಗೆ ಬೈಂದೂರಿನಿಂದ ಭಟ್ಕಳಕ್ಕೆ ಕಾರಿನಲ್ಲಿ ಹೋಗುತ್ತಿರುವಾಗ  ರಾ.ಹೆ 66 ರಲ್ಲಿ ಒತ್ತಿನೆಣೆಯಿಂದ ಸ್ವಲ್ಪ ಮುಂದೆ ಇಳಿಜಾರು ರಸ್ತೆಯಲ್ಲಿ  ಹೋಗುತ್ತಿರುವಾಗ ಪಿರ್ಯಾದಿದಾರರ ಮುಂದಿನಿಂದ ಅಂದರೆ ಬೈಂದೂರಿನಿಂದ ಭಟ್ಕಳ ಕಡೆಗೆ KA 47 M 9904 ವ್ಯಾಗನರ್ ಕಾರು ಚಾಲಕನು ಆತನ ಬಾಬ್ತು ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದು ಪಡುವರಿ ಗ್ರಾಮದ ಸೆಳ್ಳೆಕುಳ್ಳಿ ಬಳಿ ತಲುಪುವಾಗ್ಗೆ ಸಮಯ ಸುಮಾರು  05:00 ಗಂಟೆಗೆ  ಸೆಳ್ಳೆಕುಳ್ಳಿ ಕಡೆಯಿಂದ ಒಮ್ಮೇಲೆ ರಸ್ತೆಗೆ ಅಡ್ಡವಾಗಿ 2-3 ಕಾಡು ಹಂದಿಗಳು  ಕಾರಿನ ಮುಂದೆ ಓಡಿ ಬಂದಿದ್ದು, ಕಾರು ಚಾಲಕನು ಹಂದಿಗಳನ್ನು ತಪ್ಪಿಸುವ ಸಲುವಾಗಿ ಕಾರನ್ನು ರಸ್ತೆಯ ತೀರಾ ಎಡ ಬದಿಗೆ ಚಲಾಯಿಸಿದ ಪರಿಣಾಮ ಕಾರು ಚಾಲಕನ ಹತೋಟಿ ತಪ್ಪಿ ರಸ್ತೆಯ ಎಡ ಬದಿಯ ಹೊಂಡಕ್ಕೆ ಹಾರಿ ಮಣ್ಣಿನ ಧರೆಗೆ ಡಿಕ್ಕಿ ಹೊಡೆದು ಕಾರು ರಸ್ತೆಯ ಮೇಲೆ ಬಂದು ನಿಂತಿದ್ದು, ಪಿರ್ಯಾದುದಾರರು ತಮ್ಮ ಕಾರನ್ನು ನಿಲ್ಲಿಸಿ ಅಲ್ಲಿಗೆ  ನೋಡಿದಾಗ ಕಾರಿನಲ್ಲಿ ಚಾಲಕನು ಸೇರಿ 4 ಜನರಿದ್ದು, ಕಾರಿನ ಎದುರುಗಡೆ ಕುಳಿತ ಗುಲಾಬಿ ಪ್ರಭು ರವರ ಎಡ ಕಣ್ಣಿನ ಕೆಳಭಾಗಕ್ಕೆ ರಕ್ತಗಾಯವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ,ಕಾರಿನ ಚಾಲಕ ಕಿರಣ ಪ್ರಭು ಹಾಗೂ ಕಾರಿನ ಹಿಂಬದಿ ಸೀಟಿನಲ್ಲಿದ್ದ ಕವಿತಾ ಪ್ರಭು & ರೇಷ್ಮಾ ಪ್ರಭು ರವರಿಗೆ ರಕ್ತಗಾಯವಾಗಿದ್ದು ಗಾಯಗೊಂಡವರನ್ನು ಪಿರ್ಯಾದುದಾರರು ಚಿಕಿತ್ಸೆ ಬಗ್ಗೆ ತಮ್ಮ ಕಾರಿನಲ್ಲಿ ಬೈಂದೂರು ಸರಕಾರಿ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಬಂದು ಪರೀಕ್ಷಿಸಿದಾಗ ಗುಲಾಬಿ ಪ್ರಭು (70) ವರ್ಷರವರು 05:15 ಗಂಟೆಗೆ ಮೃತಪಟ್ಟಿರುದಾಗಿ ವೈದ್ಯರು ದೃಡೀಕರಿಸಿರುತ್ತಾರೆ ಹಾಗೂ ಉಳಿದ ಗಾಯಾಳುಗಳಿಗೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಅಂಬುಲೆನ್ಸ್ ವಾಹನದಲ್ಲಿ ಕುಂದಾಪುರಕ್ಕೆ ಕಳುಹಿಸಿಕೊಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 18/2022 ಕಲಂ: 279, 337 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಲ್ಪೆ: ಪಿರ್ಯಾಧಿ ನಾರ್ಣಪ್ಪ ಕೆ ಜತ್ತನ್ ಇವರು ಕೆಲಸದ ಬಗ್ಗೆ ಉಡುಪಿಗೆ ಹೋಗಿದ್ದು ಕೆಲಸ ಮುಗಿಸಿ ವಾಪಸ್ಸು ಪಿರ್ಯಾದಿದಾರರ ಬಾಬ್ತು KA 20 EH 8150 ನೇ ಮೋಟಾರು ಸೈಕಲ್ ನಲ್ಲಿ ಉಡುಪಿಯಿಂದ ಮನೆಗೆ ಹೋಗುತ್ತಿರುವಾಗ ಸಮಯ ಸುಮಾರು  ರಾತ್ರಿ 9:30 ಗಂಟೆಗೆ ಕಲ್ಮಾಡಿ ಚರ್ಚ್ ಎದುರುಗಡೆ ಹೋಗುತ್ತಿರುವಾಗ ಪಿರ್ಯಾದಿದಾರರ ಎದುರಿನಿಂದ ಅಂದರೆ ಮಲ್ಪೆ ಕಡೆಯಿಂದ ಓರ್ವ ಆಟೋ ರಿಕ್ಷಾ ಚಾಲಕ ಇನ್ನೊಂದು ಆಟೋ ರಿಕ್ಷಾವನ್ನು ಓವರ್ ಟೆಕ್ ಮಾಡಲು ಅತೀವೇಗ ಹಾಗೂ ಅಜಾಗರೂಕತೆ ನಿರ್ಲಕ್ಷ್ಯತನದಿಂದ ರಸ್ತೆಯ ತೀವ್ರ ಬಲಬದಿಗೆ ಸವಾರಿ ಮಾಡಿಕೊಂಡು ಪಿರ್ಯಾಧಿದಾರರ ಮೋಟಾರು ಸೈಕಲ್ ಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ಪರಿಣಾಮ ಪಿರ್ಯಾದಿದಾರರ ತಲೆಯ ಬಲಬದಿಗೆ  ರಕ್ತಗಾಯ,ಬಲಭುಜ ಹಾಗೂ ಬಲಕೈ ಮೊಣಗಂಟಿಗೆ ಒಳಜಖಂ ಹಾಗೂ ಬಲಕಾಲಿನ ಹಿಂಬದಿಗೆ ತೀವ್ರತರದ ಒಳಜಖಂ  ಆಗಿರುತ್ತದೆ, ಅಪಘಾತಗೊಳಿಸಿದ ಆಟೋ ರಿಕ್ಷಾ ಚಾಲಕ ಮತ್ತು ಪಿರ್ಯಾಧಿದಾರರ ಸಂಬಂಧಿ ರಮೇಶ ಎಂಬವರು ಸೇರಿ ಪಿರ್ಯಾದಿದಾರರನ್ನು ಚಿಕಿತ್ಸೆಯ ಬಗ್ಗೆ ಆದರ್ಶ ಆಸ್ಪತ್ರೆ ಉಡುಪಿಗೆ ಕರೆದುಕೊಂಡು ಹೋಗಿ ಒಳ ರೋಗಿಯಾಗಿ ದಾಖಲಿಸಿರುತ್ತಾರೆ. ಈ ಅಪಘಾತಗೊಳಿಸಿದ ಆಟೋ ರಿಕ್ಷಾ ನಂಬ್ರ KA-20-EB – 1137 ಆಗಿದ್ದು ಚಾಲಕನ ಹೆಸರು  ಅಶೋಕ ಎಂಬುದಾಗಿದ್ದು ಈ ಅಪಘಾತಕ್ಕೆ ಆಟೋ ರಿಕ್ಷಾ ಚಾಲಕನ ಅತೀವೇಗ ಮತ್ತು ಅಜಾಗರೂಕತೆಯ ನಿರ್ಲಕ್ಷ್ಯತನದ ಚಾಲನೆಯೆ ಕಾರಣವಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 08/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಅಸ್ವಾಭಾವಿಕ ಮರಣ ಪ್ರಕರಣ

 • ಬ್ರಹ್ಮಾವರ: ಬ್ರಹ್ಮಾವರ ತಾಲೂಕು ಹೇರಾಡಿ ಗ್ರಾಮದ, ಬಾರ್ಕೂರು ರಂಗನಕೆರೆ ಜನತಾ ಕಾಲೋನಿ, ಇಮ್ಯಾನುವೆಲ್‌‌‌ ಹೌಸ್‌‌ ಎಂಬಲ್ಲಿ ಪಿರ್ಯಾದಿ ರೀನಾ ಡಿಸೋಜಾ ಇವರೊಂದಿಗೆ ಅವರ ಅಕ್ಕ ರೀಮಾ ಡಿಸೋಜಾ(32 ವರ್ಷ) ಹಾಗೂ ಅವರ ಮಗ ರೈಡನ್‌‌(4ತಿಂಗಳು) ಎಂಬವರುಗಳು ವಾಸವಾಗಿದ್ದು, ರೀಮಾ ಡಿಸೋಜಾರವರ ಗಂಡ ಸುಮಾರು 2 ತಿಂಗಳ ಹಿಂದೆ ವಿದೇಶಕ್ಕೆ ಹೋಗಿರುವುದಾಗಿದೆ. ರೀಮಾ ಡಿಸೋಜಾರವರಿಗೆ ಸುಮಾರು 12 ವರ್ಷದಿಂದ ಫೀಡ್ಸ್‌ ಖಾಯಿಲೆಯಿದ್ದು ಪ್ರತಿದಿನ ರಾತ್ರಿ ಮಾತ್ರೆ ತೆಗೆದುಕೊಳ್ಳುತ್ತಿದ್ದು, ಖಾಯಿಲೆ ನಿಯಂತ್ರಣದಲ್ಲಿತ್ತು. ದಿನಾಂಕ:18/01/2022 ರಂದು ಎಂದಿನಂತೆ ಬೆಳಿಗ್ಗೆ 9:00 ಗಂಟೆಗೆ ರೀಮಾ ಡಿಸೋಜಾರವರು ಬಾತ್‌‌ರೂಮ್‌‌ಗೆ ಹೋಗಿದ್ದು, ಸ್ವಲ್ಪ ಹೊತ್ತಿನಲ್ಲಿ ಬಾತ್‌‌ರೂಮ್‌‌ನಲ್ಲಿ ಬಕೆಟ್‌‌ ಬಿದ್ದ ಶಬ್ಧ ಕೇಳಿದ್ದು, ಕೂಡಲೇ ಬಾತ್‌‌ರೂಮ್‌ ಬಳಿ ಹೋಗಿ ಬಾಗಿಲು ಬಡಿದಾಗ ಒಳಗಡೆಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲದೇ ಇದ್ದು, ನೆರೆಕೆರೆಯವರ ಸಹಾಯದಿಂದ ಬಾಗಿಲನ್ನು ಒಡೆದು ನೋಡಿದಾಗ ರೀಮಾ ಡಿಸೋಜಾ ಕವುಚಿ ಬಿದ್ದಿದ್ದು ಮೈ ತಣ್ಣಗಾಗಿತ್ತು ಮಾತನಾಡುತ್ತಿರಲಿಲ್ಲ. ನಂತರ ಕೂಡಲೇ ಅವರನ್ನು ಚಿಕಿತ್ಸೆ ಬಗ್ಗೆ ಮಹೇಶ್‌ ಆಸ್ಪತ್ರೆ ಬ್ರಹ್ಮಾವರಕ್ಕೆ ಕರೆದುಕೊಂಡು ಹೋಗಿದ್ದು ವೈಧ್ಯರು ಪರೀಕ್ಷಿಸಿ ಮೃತ ಪಟ್ಟಿರುವ ಬಗ್ಗೆ ತಿಳಿಸಿದ್ದು, ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 03/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

 • ಕಾರ್ಕಳ: ಪಿರ್ಯಾದಿ ಶ್ರೀ ಸಾಧು ಇವರು ಆರೋಪಿ 1ನೇ ಅರುಣ್ ಎಂಬವರಿಂದ 400 ರೂಪಾಯಿ ಸಾಲ ಪಡೆದುಕೊಂಡಿದ್ದು ದಿನಾಂಕ: 17/01/2022 ರಂದು ರಾತ್ರಿ 10:00 ಗಂಟೆಯಿಂದ  11:00 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದುದಾರರು ಕಾರ್ಕಳ ತಾಲೂಕು ಚಿರಾಗ್ ಬಾರ್ ನ ಎದುರು ನಿಂತುಕೊಂಡು ಆರೋಪಿ 1ನೇ ಅರುಣ್ ರವರಿಗೆ ಪೋನ್ ಮಾಡಿ ನಾನು ತೆಗೆದುಕೊಂಡ 400 ರೂಪಾಯಿ ಕೊಡುತ್ತೇನೆ ಎಂದು ಹೇಳಿದ್ದು ಸ್ವಲ್ಪ ಸಮಯದ ಬಳಿಕ ಆರೋಪಿ 1ನೇಯವರು ಪಿರ್ಯಾದುದಾರರ ಬಳಿ ಬಂದು 400 ರೂಪಾಯಿಯನ್ನು ತೆಗೆದುಕೊಂಡು ಹೋಗಿದ್ದು, ಇದಾದ ಸ್ವಲ್ಪ ಸಮಯದ ಬಳಿಕ ಆರೋಪಿ ಅರುಣ್ ರವರು ಪಿರ್ಯಾದುದಾರರಿಗೆ ಫೋನ್ ಮಾಡಿ ಬಾಯಿಗೆ ಬಂದ ಹಾಗೆ ಮಾತನಾಡಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದು ಸ್ವಲ್ಪ ಸಮಯದ ಬಳಿಕ ಆರೋಪಿ ಅರುಣ್ ಈತನು ಮುರಳಿ ಪೂಜಾರಿ, ಸುರೇಶ್ ಶೆಟ್ಟಿ, ಜಗ್ಗು ಪೂಜಾರಿ, ಮುಕ್ ಬುಲ್ ಯಾನೆ ಮಕ್ಕು  ಎಂಬವರುಗಳನ್ನು ಪಿರ್ಯಾದುದಾರರು ಇದ್ದಲ್ಲಿಗೆ ಕಳುಹಿಸಿ ಅವರಿಂದ ಪಿರ್ಯಾದುದಾರರಿಗೆ ಹಾಗೂ ಅವರ ತಮ್ಮ ಸದಾನಂದನಿಗೆ ಕೈಯಿಂದ ಮುಖಕ್ಕೆ, ಎದೆಗೆ, ಕಣ್ಣಿಗೆ ಹಾಗೂ ಮೂಗಿಗೆ ಹಲ್ಲೆ ಮಾಡಿದ್ದು ಅಲ್ಲದೇ ನಿಮ್ಮನ್ನು ಕುದುರೆಮುಖ ಕಾಡಿಗೆ ಕೊಂಡು ಹೋಗಿ ಕೊಲ್ಲುವುದಾಗಿಯೂ, ಜಾತಿ ನಿಂದನೆ ಮಾಡಿ ಕೊಲೆಬೆದರಿಕೆ ಹಾಕಿದ್ದು ಅಲ್ಲದೇ ರಾತ್ರಿ 12:00 ಗಂಟೆಗೆ ಅವರೆಲ್ಲಾ ಸೇರಿ ಪಿರ್ಯಾದುದಾರರ ಮನೆಯ ಬಳಿ ಬಂದು ಪಿರ್ಯಾದುದಾರಿಗೆ ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 06/2022 ಕಲಂ: 504,506,323,507 ಜೊತೆಗೆ 34 ಐ,ಪಿ,ಸಿ, ಹಾಗೂ ಕಲಂ: 3(1),(s) (f), 3(2)(v-a) SCST Act 1989   ಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 18-01-2022 06:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080