ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಕೋಟ: ಪಿರ್ಯಾದಿದಾರರಾಧ ರಾಘವೇಂದ್ರ ಪೂಜಾರಿ (31) ತಂದೆ: ನರಸಿಂಹ ಪೂಜಾರಿ, ವಾಸ: ಶಿವಕೃಪಾ, ಬಾರಾಳಿಬೆಟ್ಟು, ತೆಕ್ಕಟ್ಟೆ ಗ್ರಾಮ, ಕುಂದಾಪುರ ಇವರು ದಿನಾಂಕ 15/12/2022 ರಂದು ಮಧ್ಯಾಹ್ನ ರಾ.ಹೆ . 66 ಉಡುಪಿ - ಕುಂದಾಪುರ ಮುಖ್ಯರಸ್ತೆಯಲ್ಲಿ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದು, ಮಧ್ಯಾಹ್ನ ಸುಮಾರು 12:45 ಗಂಟೆಗೆ ಕಣ್ಣುಕೆರೆ ಬಳಿ ತಲುಪುವಾಗ ರಾಘವೇಂದ್ರ ಪೂಜಾರಿ ರವರ ಹಿಂದಿನಿಂದ ಉಡುಪಿ ಕಡೆಯಿಂದ ಕಪ್ಪು ಬಣ್ಣದ ನಂ: KA-14 MA-5676 ನೇ ಟಾಟಾ ಸಫಾರಿ ಕಾರನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಾಘವೇಂದ್ರ ಪೂಜಾರಿ ರವರನ್ನು ಓವರ್‌ಟೇಕ್‌ಮಾಡಿಕೊಂಡು ಮುಂದೆ ಹೋಗಿ, ಕಣ್ಣುಕೆರೆ ಬಳಿ ಪಶ್ಚಿಮ ಪಥದ ರಸ್ತೆಯಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ರಸ್ತೆ ದಾಟುತ್ತಿದ್ದ ಪಾದಾಚಾರಿ ಲಕ್ಷ್ಮಣ ಪೂಜಾರಿರವರಿಗೆ ಢಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ರಸ್ತೆಗೆ ಬಿದ್ದು ತಲೆಗೆ ತೀವ್ರ ಗಾಯ ಹಾಗೂ ಮೈಕೈಗೆ ತರಚಿದ ಗಾಯಗಳಾಗಿರುವುದು ಕಂಡು ಬಂದಿರುತ್ತದೆ. ಕಾರು ಚಾಲಕರ ಬಗ್ಗೆ ವಿಚಾರಿಸಿದಾಗ ಅದರ ಚಾಲಕಿ ಸ್ನೇಹ ಎಂಬುದಾಗಿ ತಿಳಿಯಿತು. ಗಾಯಾಳುವಿನ ಮನೆಯವರು ಆರೈಕೆಯಲ್ಲಿದ್ದುದರಿಂದ ಹಾಗೂ ಈ ಅಪಘಾತದ ಬಗ್ಗೆ ಈವರೆಗೂ ಯಾರೂ ದೂರು ನೀಡದ ಕಾರಣ ಘಟನೆಯನ್ನು ಕಂಡ ಪ್ರತ್ಯಕ್ಷ ಸಾಕ್ಷಿಯಾದ ರಾಘವೇಂದ್ರ ಪೂಜಾರಿ ರವರು  ಠಾಣೆಗೆ ಬಂದು ವಿಳಂಬವಾಗಿ ದೂರು ದಾಖಲು ಮಾಡಿರುವುದಾಗಿದೆ.  ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 224/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  ಅಮಾಸೆಬೈಲು: ಪಿರ್ಯಾದಿದಾರರಾಧ ಶ್ರೀಮತಿ ಶೋಭಾ ಶೆಟ್ಟಿ (43) ಗಂಡ: ಮಂಜುನಾಥ ಶೆಟ್ಟಿ ವಾಸ: ಮುತ್ತಿನಕಟ್ಟೆ ಹೊಸಂಗಡಿ ಗ್ರಾಮ ಕುಂದಾಪುರ ಇವರ ಮಗಳು ಮೇಹಾ (15) ಸಿದ್ದಾಪುರ ಸರಕಾರಿ ಪ್ರೌಢಶಾಲೆಯಲ್ಲಿ  ವ್ಯಾಸಂಗ ಮಾಡುತ್ತಿದ್ದು ದಿನಾಂಕ 15/12/2022 ರಂದು ಶಾಲಾ ವತಿಯಿಂದ ಮಂಗಳೂರಿಗೆ ಶೈಕ್ಷಣಿಕ ಪ್ರವಾಸ ಇದ್ದು ಪ್ರವಾಸ ಮುಗಿಸಿ ಸಿದ್ದಾಪುರಕ್ಕೆ ಬಂದು ಸಿದ್ದಾಪುರದಿಂದ ಮನಗೆ ಬರಲೆಂದು ತನ್ನ ತಂದೆಯ ಅಟೋರಿಕ್ಷಾ ನಂಬ್ರ  KA-20 AB-2072   ರಲ್ಲಿ ಸಿದ್ಧಾಪುರದಿಂದ ಸಹಪಾಠಿ ಐಶ್ವರ್ಯಾ ಶೆಟ್ಟಿ (15) ಮತ್ತು  ಶಿಕ್ಷಕಿ ರೇಶ್ಮಾ ಬಿ( 35) ಪ್ರಯಾಣಿಸಿಕೊಂಡು ಸಿದ್ದಾಪುರದಿಂದ ಹೊಸಂಗಡಿ ಕಡೆಗೆ ಬರುತ್ತಿರುವಾಗ ರಾತ್ರಿ 20:30 ಗಂಟೆ ಸಮಯಕ್ಕೆ  ಹೊಸಂಗಡಿ ಗ್ರಾಮದ  ಹೊಸಂಗಡಿ ಜೂನಿಯರ್‌ ಕಾಲೇಜ್‌ ಬಳಿ ತಲುಪುವಾಗ   ಸಿದ್ದಾಪುರ – ಹೊಸಂಗಡಿ   ರಸ್ತೆಯಲ್ಲಿ ಅಟೋ ರಿಕ್ಷಾ ಚಾಲಕನು ಅಟೋ ರಿಕ್ಷಾವನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ರಸ್ತೆಯಲ್ಲಿ ದನವೊಂದು ಅಡ್ಡ ಬಂದಿದ್ದು ರಿಕ್ಷಾ ಚಾಲಕ ಮಂಜುನಾಥ ಶೆಟ್ಟಿ ಅವರು  ಒಮ್ಮೆಲೆ ಬ್ರೇಕ್‌ ಹಾಕಿದ ಪರಿಣಾಮ ರಿಕ್ಷಾ ಸ್ಕಿಡ್‌ ಆಗಿ ಹತೋಟಿ ತಪ್ಪಿ ಪಲ್ಟಿಯಾಗಿ ಬಿದ್ದಿದ್ದು. ಅಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮೇಹಾ ಎಂಬವರಿಗೆ ಕುತ್ತಿಗೆಯ ಎಡಭಾಗಕ್ಕೆ ಗುದ್ದಿದ ನೋವಾಗಿದ್ದು ಹಾಗೂ ಮೂಗಿನ ಮೇಲೆ ತರಚಿದ ಗಾಯವಾಗಿದ್ದು ಐಶ್ವರ್ಯಾ ಎಂಬವರಿಗೆ ಬಲಬದಿ ಹುಬ್ಬಿನ ಮೇಲೆ ರಕ್ತ ಗಾಯವಾಗಿದ್ದು ರಿಕ್ಷಾ ಚಾಲಕನಿಗೂ ಎಡಬದಿಯ ಸೊಂಟ ಹಾಗೂ ಎಡ ತೊಡೆಯ ಬಳಿ ಗುದ್ದಿದ ನೋವುಂಟಾಗಿ ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 32/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.      

ಗಂಡಸು ಕಾಣೆ ಪ್ರಕರಣ

 • ಮಣಿಪಾಲ: ಪಿರ್ಯಾದಿದಾರರಾಧ ಲೀಲಾವತಿ (36) ಗಂಡ: ಕೃಷ್ಣಪ್ಪ ವಾಸ: ಶಾರದಾ ನಿವಾಸ ಬೀರಲ್‌ಪೇಟೆ, ನಲ್ಲೂರು ಗ್ರಾಮ ಕಾರ್ಕಳ ತಾಲೂಕು, ಉಡುಪಿ ಇವರ ಗಂಡ ಕೃಷ್ಣಪ್ಪ ರವರು ಮಣಿಪಾಲ ಆಶ್ಲೇಶ್ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ 12/12/2022 ರಂದು 13:00 ಗಂಟೆಗೆ ಆಶ್ಲೇಶ್‌ ಹೋಟೆಲ್‌ ಸಿಬ್ಬಂದಿಯವರು ದೂರವಾಣಿ ಕರೆಮಾಡಿ ನಿಮ್ಮ ಗಂಡ ಹೆಳದೇ ಬ್ಯಾಗ ತೆಗೆದುಕೊಂಡು ಹೋಗಿರುತ್ತಾರೆ ಎಂದು ತಿಳಿಸಿರುತ್ತಾರೆ ನಂತರ ಲೀಲಾವತಿ ರವರು ಸಂಬಂದಿಕರಿಗೆ, ಪರಿಚಯದವರಿಗೆ ಮತ್ತು ಹಿಂದೆ ಕೆಲಸಮಾಡಿದ ಹೋಟೆಲ್‌ಗಳಲ್ಲಿ ವಿಚಾರಿಸಿದ್ದು ಪತ್ತೆಯಾಗಿರುವುದಿಲ್ಲ, ಕಾಣೆಯಾದವರ ವಿವರ ಈ ಕೆಳಗಿನಂತಿದೆ. ವಿದ್ಯಾಬ್ಯಾಸ: ಎಸ್‌  ಎಸ್‌ ಎಲ್‌ ಸಿ,  ಕಪ್ಪು ಮೈ ಬಣ್ಣ,  ಕಪ್ಪು ಕೂದಲು , ಚಹರೆ: ದುಂಡು ಮುಖ, ಸಾದಾರಣ ಶರೀರ, ಎತ್ತರ 5.6, ಧರಿಸಿದ ಬಟ್ಟೆಗಳು: ನೀಲಿ ಬಣ್ಣದ ಟೀ ಶರ್ಟ್‌, ಕಪ್ಪು ಬಣ್ಣದ ಪ್ಯಾಂಟ್‌ ಹಾಕಿರುತ್ತಾನೆ. ಚಪ್ಪಲಿ ಧರಿಸಿರುತ್ತಾನೆ.  ಕುತ್ತಿಗೆಯಲ್ಲಿ ಚೈನ್ ಇರುತ್ತದೆ. ಬಾಷೆಗಳು:  ತುಳು, ಕನ್ನಡ ಹಿಂದಿ, ಮರಾಠಿ, ಕೊಂಕಣಿ ಮತ್ತು ಇಂಗ್ಲೀಷ್‌ ಮಾತನಾಡುತ್ತಾಳೆ ಹಾಗೂ ಕನ್ನಡ ಓದುತ್ತಾನೆ ಮತ್ತು ಬರೆಯುತ್ತಿತುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 01/2022 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.  

     
ಅಸ್ವಾಭಾವಿಕ ಮರಣ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾಧ ಹರೀಶ (48)  ವರ್ಷ ತಂದೆ: ದಿ. ಮಾಧವ ಪೂಜಾರಿ ವಾಸ: ಮಾರ್ಪಳ್ಳಿ ಮಹಾಲಿಂಗೇಶ್ವರ ದೇವಸ್ಥಾನದ ಬಳಿ, ಮಾರ್ಪಳ್ಳಿ, ಕೊರಂಗ್ರಪಾಡಿ, ಉಡುಪಿ ಇವರ ಅಣ್ಣ ವೆಂಕಟೇಶ ಪೂಜಾರಿ (55) ಎಂಬವರು ಅಕ್ಕ ಕಲ್ಯಾಣಿರವರ ಮನೆಯಲ್ಲಿವಾಸವಾಗಿದ್ದು, ವಿಪರೀತ ಕುಡಿತದ ಚಟ ಹೊಂದಿದ್ದು, ಮದ್ಯಪಾನ ಮಾಡಿ ಕೆಲವೊಮ್ಮೆ 3-4 ದಿನ ಮನೆಗೆ ಬರುತ್ತಿರಲಿಲ್ಲ. ದಿನಾಂಕ12/12/2022 ರಂದು ಮನೆಯಿಂದ ಹೋದವರು ವಾಪಾಸು ಮನೆಗೆ ಬಾರದೇ ಇದ್ದು, ದಿನಾಂಕ 16/12/2022 ರಂದು ಬೆಳಿಗ್ಗೆ11:30 ಗಂಟೆಯ ಸಮಯಕ್ಕೆ ಹರೀಶ ರವರ ಪರಿಚಯದ ಹರೀಶ್‌ಎಂಬವರು ಕರೆಮಾಡಿ  ಉಡುಪಿ ತಾಲೂಕು ಕೊರಂಗ್ರಪಾಡಿ ಗ್ರಾಮದ ಮಾರ್ಪಳ್ಳಿಯ ರೈಲ್ವೇ ಟ್ಯ್ರಾಕ್‌ ಬಳಿ ವೆಂಕಟೇಶ ಪೂಜಾರಿರವರ ಮೃತ ದೇಹ ಇರುವುದಾಗಿ ತಿಳಿಸಿದಂತೆ ಹರೀಶ ರವರು ಕೂಡಲೇ ಸ್ದಳಕ್ಕೆ ಹೋಗಿ ನೋಡಲಾಗಿ ಅದು ಹರೀಶ ರವರ ಅಣ್ಣನಾದ ವೆಂಕಟೇಶ್‌ ಪೂಜಾರಿ ಆಗಿರುವುದಾಗಿ ಗುರುತಿಸಿದ್ದು, ವೆಂಕಟೇಶ್‌ ಪೂಜಾರಿ ರವರು ಕುಡಿತದ ಚಟವಿದ್ದು ಯಾವುದೋ ಖಾಯಿಲೆಯಿಂದ ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟಿರಬಹುದಾಗಿದೆ. ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 48/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಕಾರ್ಕಳ: ಪಿರ್ಯಾದಿದಾರರಾಧ ಸುಧಾ ಕೆ. ಎಸ್‌, (55) ಗಂಡ: ದಿ. ಟಿ ಕೆ ಗೋಪಿನಾಥನ್ ನಾಯರ್, ವಾಸ: ತಜಾತೆಕುಟ್ಟು ಹೌಸ್‌, ಎನ್ನಕ್ಕರಕ್ಕಳ್ಳಿ, ಮೋತೆಡಮ್‌, ಎಡಕ್ಕಾರ್‌, ಮಲಪ್ಪುರಂ, ಕೇರಳ ಇವರ  ಗಂಡ ಟಿ ಕೆ ಗೋಪಿನಾಥನ್ ನಾಯರ್ ರವರು ರಬ್ಬರ್  ಎಸ್ಟೇಟ್‌ಗಳಲ್ಲಿ  ಟ್ಯಾಪಿಂಗ್ ಮಾಡುವ ಕೆಲಸ ಮಾಡಿಕೊಂಡಿದ್ದು 2022 ರ ಜೂನ್  ತಿಂಗಳಿನಲ್ಲಿ ಅಪಾದಿತರಾದ ಆರ್ ವಿವೇಕಾನಂದ  ಶೆಣೈ ಮತ್ತು  ದಿಲೀಪ್  ಜಿ ಎಂಬವರು ಸಾಣೂರು ಗ್ರಾಮದ  ಶುಂಟಿಗುಡ್ಡೆ  ಎಂಬಲ್ಲಿರುವ  ರಬ್ಬರ್  ಪ್ಲಾಂಟೇಷನ್‌ನಲ್ಲಿ ಟ್ಯಾಪರ್   ಕೆಲಸಕ್ಕೆ ನೇಮಕ  ಮಾಡಿ ಅಲ್ಲಿಯೇ ಗುಡಿಸಲಿನಲ್ಲಿ ಉಳಿದುಕೊಳ್ಳಲು  ಬಿಟ್ಟಿದ್ದರು ನಂತರ  ಸುಧಾ ಕೆ.ಎಸ್‌ ರವರು ತಿಳಿಯಲಾಗಿ ಅಪಾದಿತ 1.ಆರ್ ವಿವೇಕಾನಂದ  ಶೆಣೈ,  2.  ದಿಲೀಪ್  ಜಿ, 3. ಮತ್ತು ಇತರರು ಇವರು ಸುಧಾ ಕೆ. ಎಸ್‌ ಇವರ ಗಂಡನಿಗೆ ಸರಿಯಾಗಿ ಸಂಬಳವನ್ನು ನೀಡದೇ ಹಾಗೂ  ಅಗತ್ಯವಿದ್ದಾಗ ರಜೆಯನ್ನು ನೀಡದೇ ತೊಂದರೆ ನೀಡುತ್ತಿದ್ದು ಹಾಗೂ ಕೆಲಸವನ್ನು ಬಿಟ್ಟರೆ  ಕೊಲೆ ಮಾಡುವುದಾಗಿ ಅಪಾದಿತರು ಬೆದರಿಕೆ ಹಾಕುತ್ತಿದ್ದರು. ಸುಧಾ ಕೆ. ಎಸ್‌ ರವರ  ಗಂಡ ಫೋನ್ ಕರೆ ಮಾಡಿ ಮಾತನಾಡುತ್ತಿದ್ದಾಗ ತಾನು ಒಬ್ಬನೇ ಇಲ್ಲಿ ಇದ್ದು ಜೊತೆಯಲ್ಲಿ ಕೆಲಸ ಮಾಡುತ್ತಿದ್ದವರೆಲ್ಲ ಅಪಾದಿತರ ಕಿರುಕುಳದಿಂದ  ಬಿಟ್ಟುಹೋಗಿರುತ್ತಾರೆ.  ಕೆಲವು ದಿನಗಳ  ಹಿಂದೆ   ಕೇರಳದಿಂದ  ಕೆಲಸಕ್ಕೆಂದು ಬಂದವರೊಬ್ಬರು ಅಪಾದಿತರ ಕಿರುಕುಳದಿಂದ ತಾನು ಇಲ್ಲಿ ಇರುವುದಿಲ್ಲ ಒಂದೆರಡು ದಿನಗಳಲ್ಲಿ   ಬಿಟ್ಟುಹೋಗುತ್ತೇನೆಂದು ಹೇಳುತ್ತಿದ್ದು ಇದರಿಂದ  ಹೆದರಿದ  ಸುಧಾ ಕೆ. ಎಸ್‌ ರವರ ಗಂಡ ದಿನಾಂಕ  17/10/2022 ರಂದು ವಾಯ್ಸ್ ಮೆಸೇಜ್‌ಗಳನ್ನು ಕಳುಹಿಸಿ 2-3  ಮೊಬೈಲ್  ನಂಬರ್‌‌ಗಳನ್ನು ಕಳುಹಿಸುತ್ತೇನೆ ಇವುಗಳನ್ನು ಮೊಬೈಲ್ ನಲ್ಲಿ ಸೇವ್ ಮಾಡಿ ಇಟ್ಟುಕೊಂಡು ಸಂಜೆಯ ಸಮಯ ತಾನು ಫೋನ್ ಕರೆ  ಸ್ವೀಕರಿಸದಿದ್ದರೆ ಈ ನಂಬರ್‌ಗಳನ್ನು ಪೋಲೀಸರಿಗೆ ತಿಳಿಸಿ ದೂರು ನೀಡುವಂತೆ ತಿಳಿಸಿರುತ್ತಾರೆ. ದಿನಾಂಕ 19/10/2022 ರಂದು ಅಪಾದಿತ ದಿಲೀಪ್  ಫೋನ್  ಮಾಡಿ ಗಂಡ  ಕಾಣಿಸುತ್ತಿಲ್ಲ ಮಿಸ್ಸಿಂಗ್   ದೂರು ನೀಡಲು  ಅವರ  ಆಧಾರ್  ಕಾರ್ಡ್ ಕಳುಹಿಸಿ ಎಂದು ಹೇಳಿ  ನಂತರ  ಗಂಡ  ಆತ್ಮಹತ್ಯೆ  ಮಾಡಿಕೊಂಡಿರುತ್ತಾರೆಂದು ತಿಳಿಸಿದ್ದು  ಸುಧಾ ಕೆ. ಎಸ್‌ ರವರ  ಮಗ ಕೂಡಲೇ ಬಂದು  ನೋಡಿದಾಗ ಸುಧಾ ಕೆ. ಎಸ್‌ ರವರ ಗಂಡ ಎಸ್ಟೇಟ್‌ನಲ್ಲಿ ಸುಟ್ಟ ಸ್ಥಿತಿಯಲ್ಲಿ  ಮೃತಪಟ್ಟ  ಬಗ್ಗೆ  ತಿಳಿಯಿತು.ಮೃತರ ಗಂಡನಿಗೆ ಪೆಟ್ರೋಲ್  ಸುರಿದುಕೊಂಡು ಕ್ರೂರ ರೀತಿಯಲ್ಲಿ ಆತ್ಮಹತ್ಯೆ ಮಾಡುವ ಯಾವುದೇ ಮನಸ್ಥಿತಿ ಇಲ್ಲದಿದ್ದು ಅಪಾದಿತರು ತಮ್ಮ ಕ್ರಿಮಿನಲ್ ಹಿನ್ನೆಲೆಯ  ಅಪಾದಿತರೊಂದಿಗೆ ಸುಧಾ ಕೆ. ಎಸ್‌ ಇವರ ಗಂಡನಿಗೆ   ಹಿಂಸೆ ನೀಡಿ ಆತ್ಮಹತ್ಯೆ  ಮಾಡಲು ಪ್ರಚೋದಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 152/2022 ಕಲಂ  306, 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ದಿನಾಂಕ 15/12/2022 ರಂದು 17:00 ಗಂಟೆಗೆ ಪಿರ್ಯಾದಿದಾರರಾಧ ಮಹಮ್ಮದ್‌ ರಿಯಾಜ್  (40) ತಂದೆ:ಇಸ್ಮಾಯಿಲ್‌  ವಾಸ: ಫ್ಲ್ಯಾಟ್‌ ನಂ:204,ಮಾಂಡವಿ ಗ್ರೀನ್ಸ್‌ಸರಸ್ವತಿ ಸ್ಕೂಲ್‌ಹಿಂಭಾಗ ಸಿಟಿ ಬಸ್‌ ನಿಲ್ದಾಣ ಬಳಿ, ಸಿರಿಬೀಡು,  ಮೂಡನಿಡಂಬೂರು ಗ್ರಾಮ, ಉಡುಪಿ ಇವರು ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಮಾಂಡವಿ ಗ್ರೀನ್ಸ್‌ಸರಸ್ವತಿ ಸ್ಕೂಲ್‌ಹಿಂಭಾಗದ ತನ್ನ ಮನೆಗೆ ಬರುವಂತೆ ಆರೋಪಿ ರಶೀದ್ ಹೇಳಿದ್ದು, ಬಂದ ಮಹಮ್ಮದ್‌ ರಿಯಾಜ್ ರವರನ್ನು ಅಡ್ಡಗಟ್ಟಿ ತನ್ನ ಬಿಳಿ ಬಣ್ಣದ ಫಾರ್ಚೂನರ್‌ ಕಾರಿನಲ್ಲಿ ಕುಳ್ಳಿರಿಸಿಕೊಂಡು, ನೀನು ಹಣವನ್ನು ಕೊಡು ಎಂದು ಕೇಳಿದ್ದು, ಮಹಮ್ಮದ್‌ ರಿಯಾಜ್  ರವರು ಎಲ್ಲಾ ಹಣ ಈಗಾಗಲೇ ಕೊಟ್ಟಿರುವುದಾಗಿ ಹೇಳಿದಾಗ, ಮಹಮ್ಮದ್‌ ರಿಯಾಜ್  ರವರ ತಲೆ ಹಾಗೂ ಮುಖಕ್ಕೆ ಕೈಯಿಂದ ಹೊಡೆದು ಕಾರಿನಲ್ಲಿ ಮಲ್ಪೆಗೆ ಕರೆದುಕೊಂಡು ಹೋಗಿ ಒತ್ತಾಯಪೂರ್ವಕವಾಗಿ ಬೋಟ್‌ಮಾರುವಂತೆ ದಾಖಲಾತಿಗೆ ಸಹಿ ಹಾಕಿಸಿ, ಚೆಕ್‌ಗಳನ್ನು ತೆಗೆದುಕೊಂಡು ನೀನು ಹಣ ಕೊಡುವವರೆಗೆ ಬಿಡುವುದಿಲ್ಲ ಎಂದು ಹೊಡೆದಿದ್ದು,  ನಂತರ ಆರೋಪಿಯು ಅಲ್ಲಿಂದ ಅಂಬಾಗಿಲಿನ ಸೆಕೆಂಡ್‌ಹ್ಯಾಂಡ್‌ ಬಜಾರ್‌ಬಳಿ ಕರೆದುಕೊಂಡು ಬಂದು ತನ್ನ  ಮೊಬೈಲ್‌ನಿಂದ  ಸೈಫ್‌ಮತ್ತು ಅಕ್ರಂ ಎಂಬವರಿಗೆ ಫೋನ್‌ಮಾಡಿದ್ದು ʼʼಆ ಸಮಯ ಮಹಮ್ಮದ್‌ ರಿಯಾಜ್ ರವರಿಗೆ ನೀನು ರಶೀದ್‌ಗೆ ಹಣ ಕೊಡದೇ ಇದ್ದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲʼʼ ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 185/2022 ಕಲಂ:  341,323,384,506 Rw 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.       

ಇತ್ತೀಚಿನ ನವೀಕರಣ​ : 17-12-2022 10:26 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080