ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಕೋಟ: ಪಿರ್ಯಾದಿ: ನಾರಾಯಣ ಕೆ. ಸಾಲಿಯಾನ್‌ ((52 ತಂದೆ: ದಿ. ಕೃಷ್ಣಪ್ಪ ಅಮೀನ್‌,ವಾಸ: ಶ್ರೀಸತ್ಯನಾರಾಯಣ, ಕೊರ್‌ನೆಟ್‌ಕ್ಯಾನಿಂಗ್‌ಕಂಪೆನಿ ಹತ್ತಿರ, ಕೊಡವೂರು ಗ್ರಾಮ, ಇವರು ದಿನಾಂಕ: 16.12.2022 ರಂದು ರಾತ್ರಿ ಸಮಯ ಪೂಜೆ ಮುಗಿಸಿ ತಮ್ಮ . KA 20 MA 3450 ನೇ Eco Sports ಕಾರನ್ನು ಕೋಟ ಹೈಸ್ಕೂಲ್‌- ಸೈಬ್ರಕಟ್ಟೆ ರಸ್ತೆಯಲ್ಲಿ ಸೈಬ್ರಕಟ್ಟೆ ಕಡೆಯಿಂದ ಕೋಟ ಹೈಸ್ಕೂಲ್‌ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದು, ಅವರು ರಾತ್ರಿ ಸುಮಾರು 8:40 ಗಂಟೆಗೆ ಬನ್ನಾಡಿ ಉಪ್ಲಾಡಿ ಬಯಲು ಎಂಬಲ್ಲಿ ತಲುಪುವಾಗ ಎದುರುಗಡೆಯಿಂದ ಅಂದರೆ ಕೋಟ ಹೈಸ್ಕೂಲ್‌ಕಡೆಯಿಂದ ನಂ: KA 45 EA 5591 ನೇ ಮೋಟಾರ್‌ಸೈಕಲ್‌ಅನ್ನು ಆರೋಪಿ ಸವಾರ ಗಂಗಾಧರ ಪುಣೇಕರ್‌ಎಂಬಾತನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿ ತನ್ನ ಮುಂದೆ ಸಾಗುತ್ತಿದ್ದ ನಂ: KA 20 S 1223 ನೇ ಮೋಟಾರ್‌ಸೈಕಲ್‌ಅನ್ನು ಓವರ್‌ಟೇಕ್‌ಮಾಡುವ ಭರದಲ್ಲಿ ಅದಕ್ಕೂ ಢಿಕ್ಕಿ ಹೊಡೆದು, ಢಿಕ್ಕಿ ಹೊಡೆದ ರಭಸಕ್ಕೆ ಆರೋಪಿ ಸವಾರನಿಗೆ ಬೈಕ್‌ನಿಯಂತ್ರಿಸಲಾಗದೇ ರಸ್ತೆಯ ವಿರುದ್ದ ದಿಕ್ಕಿಗೆ ಚಲಿಸಿ ಫಿರ್ಯಾದುದಾರರು ಚಲಾಯಿಸಿಕೊಂಡಿದ್ದ ಕಾರಿಗೆ ಮುಖಾಮುಖಿ ಢಿಕ್ಕಿ ಹೊಡೆದನು. ಪರಿಣಾಮ ಆರೋಪಿ ಸವಾರ ಗಂಗಾಧರ ಪುಣೇಕರ್‌ಎಂಬಾತನು ಬೈಕ್‌ಸಮೇತ ರಸ್ತೆಗೆ ಬಿದ್ದಾಗ ಫಿರ್ಯಾದುದಾರರ ಕಾರು ಆರೋಪಿ ಸವಾರನ ಮೇಲೆ ಹರಿದಿದ್ದು ಇದರಿಂದ ಆತನು ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುತ್ತಾನೆ. ಹಾಗೂ ಆರೋಪಿ ಸವಾರನು ಢಿಕ್ಕಿಪಡಿಸಿದ ನಂ: KA 20 S 1223 ನೇ ಮೋಟಾರ್‌ಸೈಕಲ್‌ಅನ್ನು ಚಲಾಯಿಸಿಕೊಂಡಿದ್ದ ಸವಾರ ಪ್ರಕಾಶ್‌ಮತ್ತು ಅದರಲ್ಲಿ ಹಿಂಬದಿ ಕುಳಿತಿದ್ದ ಸಹಸವಾರಿಣಿ ಗೀತಾ ರವರಿಗೆ ಸಣ್ಣಪುಟ್ಟ ತರಚಿದ ಗಾಯಗಳಾಗಿರುತ್ತದೆ. ಗಾಯಗೊಂಡ ಪ್ರಕಾಶ್‌ಮತ್ತು ಗೀತಾ ರವರನ್ನು ಚಿಕಿತ್ಸೆಯ ಬಗ್ಗೆ ಕೋಟೇಶ್ವರ ಎನ್‌.ಆರ್‌. ಆಚಾರ್ಯ ಆಸ್ಪತ್ರೆಗೂ ಹಾಗೂ ಸ್ಥಳದಲ್ಲಿ ಮೃತಪಟ್ಟ ಗಂಗಾಧರ ಪುಣೇಕರ್‌ರವರ ಮೃತದೇಹವನ್ನು ಕುಂದಾಪುರ ಸರಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ . ಈ  ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ   225/2022 ಕಲಂ: 279, 337, 304 (A) ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕೋಟ: ದಿನಾಂಕ: 16.12.2022 ರಂದು ರಾತ್ರಿ ಸಮಯ ಫಿರ್ಯಾದಿ ನಾಗರಾಜ ((24 ತಂದೆ: ಮಲ್ಲಪ್ಪ,ವಾಸ: ಚಿಂಚಲಿ, ಮಲ್ಲಿಕಾರ್ಜುನ ನಗರ, ಗದಗ ಇವರ ತಮ್ಮ ಸವಾರ ಗಂಗಾಧರ ಪುಣೇಕರ್‌ಎಂಬಾತನು ಕರಾಟೆ ತರಬೇತಿ ಮುಗಿಸಿ ಮನೆಗೆಂದು ತನ್ನ : KA 45 EA 5591 ನೇ ಮೋಟಾರ್‌ಸೈಕಲ್‌ನಲ್ಲಿ ಕೋಟ ಹೈಸ್ಕೂಲ್‌ - ಸೈಬ್ರಕಟ್ಟೆ ರಸ್ತೆಯಲ್ಲಿ ಕೋಟ ಹೈಸ್ಕೂಲ್‌ಕಡೆಯಿಂದ ಸೈಬ್ರಕಟ್ಟೆ ಕಡೆಗೆ ಹೋಗುತ್ತಿರುವಾಗ ಎದುರುಗಡೆ ಸಾಗುತ್ತಿದ್ದ ನಂ: KA 20 S 1223 ನೇ ಮೋಟಾರ್‌ಸೈಕಲ್‌ಅನ್ನು ಒವರ್‌ಟೇಕ್‌ಮಾಡುವ ಸಮಯ, ಆ ಮೋಟಾರ್‌ಸೈಕಲ್ ಸವಾರನು ಒಮ್ಮೆಲೆ ತನ್ನ ಬಲಕ್ಕೆ ಚಲಾಯಿಸಿದ ಪರಿಣಾಮ ಎರಡೂ ಬೈಕ್‌ಗಳ ಹ್ಯಾಂಡಲ್‌ಬಾರ್‌ಗಳು ಒಂದಕ್ಕೊಂದು ಢಿಕ್ಕಿ ಹೊಡೆದಿದ್ದು, ಆಗ ಗಂಗಾಧರ ಪುಣೇಕರ್‌ರವರು ಬೈಕ್‌ಸಮೇತ ರಸ್ತೆಗೆ ಬಿದ್ದು ಮುಂದಕ್ಕೆ ರಸ್ತೆಯಲ್ಲಿ ಎಳೆದುಕೊಂಡು ಹೋಗಿ, ರಸ್ತೆಯಲ್ಲಿ ಸೈಬ್ರಕಟ್ಟೆ ಕಡೆಯಿಂದ ಬರುತ್ತಿದ್ದ ನಂ. KA 20 MA 3450 ನೇ Eco Sports ಕಾರು ಗಂಗಾಧರ ಪುಣೇಕರ್‌ರವರ ಮೇಲೆ ಹರಿದು ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಈ ಅಪಘಾತಕ್ಕೆ ನಂ: KA 20 S 1223 ನೇ ಮೋಟಾರ್‌ಸೈಕಲ್‌ಸವಾರ ಹಾಗೂನಂ. KA 20 MA 3450 ನೇ Eco Sports ಕಾರಿನ ಚಾಲಕನ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ  226/2022 ಕಲಂ: 279, 304 (A) ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಉಡುಪಿ: ದಿನಾಂಕ 11/12/2022 ರಂದು ರಾಕೇಶ್ ಭಟ್ ಎಂಬಾತನು ತನ್ನ ಬುಲೆಟ್ ನಂಬ್ರ KA20EL9412  ನೇದರಲ್ಲಿ ತನ್ನ ತಾಯಿಯಾದ ವನಿತಾ (50) ರವರನ್ನು ಸಹಸವಾರಳಾಗಿ ಕುಳ್ಳಿರಿಸಿಕೊಂಡು ಕೃಷ್ಣಮಠಕ್ಕೆ ಕಾರ್ಯಕ್ರಮದ ನಿಮಿತ್ತ ಹೋಗುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 10:45 ಗಂಟೆಗೆ ಶಿವಳ್ಳಿ ಗ್ರಾಮದ ಕೃಷ್ಣ ಮಠದ ಬಳಿ ಇರುವ ವಿದ್ಯೋದಯ ಶಾಲೆಯ ಬಳಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಬುಲೆಟ್ ಸವಾರನು ತನ್ನ ಬುಲೆಟ್ ನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ತಿರುವಿನಲ್ಲಿ ವನಿತಾ ರವರು ನಿಯಂತ್ರಣ ತಪ್ಪಿ ಬುಲೆಟ್‌ನಿಂದ ರಸ್ತೆಗೆ ಬಿದ್ದು, ಪರಿಣಾಮ ವನಿತಾ ರವರ ತಲೆಗೆ ರಕ್ತಗಾಯವಾಗಿರುತ್ತದೆ. ಕೂಡಲೇ ಅಲ್ಲಿ ಸೇರಿದ ಸಾರ್ವಜನಿಕರು ಹಾಗೂ ರಾಕೇಶ್ ಭಟ್ ರವರು ಚಿಕಿತ್ಸೆಯ ಬಗ್ಗೆ ಗಾಂಧಿ ಆಸ್ಪತ್ರೆಗೆ ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಯಲ್ಲಿದ್ದವರು, ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ 17/12/2022 ರಂದು ಬೆಳಿಗ್ಗೆ 09:45 ಗಂಟೆಗೆ ಕೆಎಮ್‌ಸಿ ಆಸ್ಪತ್ರೆಯಲ್ಲಿ ವನಿತಾ (50) ರವರು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಪಿರ್ಯಾದಿ ಕಿರಣ್ ಭಟ್ ಪ್ರಾಯ: 27 ವರ್ಷ ತಂದೆ: ಕೆ. ವಾಸುದೇವ ಭಟ್ ವಾಸ: ಮನೆ ನಂಬ್ರ 3/133 ಕೆರೆಕಟ್ಟೆ ಹೌಸ್, ಪಡುಅಲೆವೂರು ರವರು ದೂರು ನೀಡಿದ್ದು ಉಡುಪಿ ಸಂಚಾರ ಠಾಣೆ  ಅಪರಾಧ ಕ್ರಮಾಂಕ  104/2022 ಕಲಂ: 279, 304(ಎ) ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.   


ಅಸ್ವಾಭಾವಿಕ ಮರಣ ಪ್ರಕರಣಗಳು

  • ಕುಂದಾಪುರ: ಪಿರ್ಯಾದಿ ಗಣೇಶ ದೇವಾಡಿಗ  ಪ್ರಾಯ: (55) ತಂದೆ: ದಿ” ಅಣ್ಣಪ್ಪ  ವಾಸ;  ಮಲ್ಲಾಣ ಹಿತ್ಲು  ಕೊಟೇಶ್ವರ ಗ್ರಾಮ  ಇವರ ತಮ್ಮ ರಾಘು (37) ಎಂಬುವವರು ವಿಪರೀತ ಶರಾಬು ಸೇವನೆ ಮಾಡುವ ಹವ್ಯಾಸ ಹೊಂದಿದ್ದು, ಕೋಟೇಶ್ವರ ಪರಿಸರದಲ್ಲಿ ತಿರುಗಾಡಿಕೊಂಡು ಅಲ್ಲಿಯೇ ಮಲಗುತ್ತಿದ್ದು ದಿನಾಂಕ: 16/12/2022 ರಂದು ರಾತ್ರಿ 11:೦೦ ಗಂಟೆಯಿಂದ 17/12/2022 ರಂದು ಬೆಳಿಗ್ಗೆ 7:00 ಗಂಟೆಯ ನಡುವಿನ ಸಮಯದಲ್ಲಿ ಪಿರ್ಯಾದಿದಾರರ ತಮ್ಮ ರಾಘು ವಿಪರೀತ ಶರಾಬು ಕುಡಿತದಿಂದ ಅನ್ನ ನೀರನ್ನು ಸರಿಯಾಗಿ ಸೇವಿಸದೇ ಅಸ್ವಸ್ಥಗೊಂಡು ಅಥವಾ ಯಾವುದೋ ಖಾಯಿಲೆ ಉಲ್ಬಣಗೊಂಡು ಮಲಗಿದಲ್ಲಿಯೇ ಮೃತಪಟ್ಟಿರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ  UDR No 45-2022 ಕಲಂ: 174 CrPC  ಯಂತೆ ಪ್ರಕರಣ ದಾಖಲಿಸಲಾಗಿದೆ.  
  • ಕಾಪು: ಪಿರ್ಯಾದಿ ಅಬ್ದುಲ್ ರಹುಫ್  ಪ್ರಾಯ : 62 ವರ್ಷ  ತಂದೆ : ದಿ. ಮಹಮ್ಮದ್ ಅಲಿ  ವಾಸ :  ಮನೆ ನಂಬ್ರ 5-36/1 ಗುಜ್ಜಿ ಹೌಸ್, ತೆಂಕ ಎರ್ಮಾಳ, ಕಾಫು ಇವರ ತಾಯಿ ಚಾಂದ್ ಬಿ(82) ರವರು ಪಿರ್ಯಾದಿದಾರ ತಮ್ಮನ ಮನೆಯಾದ ತಮ್ಮನ ಹೆಂಡತಿ ಮಕ್ಕಳೊಂದಿಗೆ ಮಲ್ಲಾರು ಗ್ರಾಮದ ಉಗ್ರಾಣಿ ಹೌಸ್‌‌ಎಂಬಲ್ಲಿ ವಾಸಮಾಡಿಕೊಂಡಿದ್ದು,  ತಾಯಿಗೆ ದಿನಾಂಕ 14-12-2022 ರಂದು ಸಂಜೆ 7.45 ಗಂಟೆಗೆ ಹಾವು ಕಚ್ಚಿರುವುದಾಗಿ  ಪಿರ್ಯಾದಿದಾರರ ಅತ್ತಿಗೆ ಶಾಹಿದಾ ರವರು ಫೋನ್ ಕತೆ ಮಾಡಿ  ತಿಳಿಸಿದ್ದು, ತಾಯಿ ಚಾಂದ್ ಬಿ ರವರನ್ನು ಒಂದು ಆಟೋ ರಿಕ್ಷಾದಲ್ಲಿ ಶಾಹಿದಾರವರು ಎರ್ಮಾಳ್‌ಗೆ ಬಂದು ಅಲ್ಲಿಂದ ಪಿರ್ಯಾದಿದಾರರು ಜೊತೆಯಾಗಿ ಚಿಕಿತ್ಸೆಯ ಬಗ್ಗೆ ಸುರತ್ಕಲ್‌ಮುಕ್ಕದಲ್ಲಿರುವ ಶ್ರೀನಿವಾಸ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆಯಲ್ಲಿರುತ್ತಾ ದಿನಾಂಕ 17-12-2022 ರಂದು ರಾತ್ರಿ 12.15 ಗಂಟೆಗೆ ಚಿಕಿತ್ಸೆಗೆ ಸ್ಪಂದಿಸದೇ ಮೃತ ಪಟ್ಟಿರುವುದಾಗಿದೆ.
  • ಮಣಿಪಾಲ: ಪಿರ್ಯಾದಿ ಸೂರಜ್ ಶೆಟ್ಟಿ ಪ್ರಾಯ: 33 ವರ್ಷ ತಂದೆ: ವಿ ರಮ್ಮೋಹನ ಶೆಟ್ಟಿ ವಾಸ: ಹೆಚ್ ಆನಂದ ಶೆಟ್ಟಿ ಪ್ಲಾಟ್ ನಂ: ಎ2, ಜೆ ಕೆ ವಿನಾಯಖ ರೆಸಿಡೆನ್ಸಿ 6 ನೇ ಕ್ರಾಸ್ ಕಗ್ಗದಾಸಪುರ ಬೆಂಗಳೂರು ಇವರು ತಂದೆಯಾದ ವಿ ರಮ್ಮೋಹನ ಶೆಟ್ಟಿ  (:) 69  ಇವರಿಗೆ ಸುಮಾರು 12 ವರ್ಷದಿಂದ ಕಿಡ್ನಿ ಸಮಸ್ಯೆಯ ಖಾಯಿಲೆ ಇದ್ದು ಈ ಬಗ್ಗೆ ಚಿಕತ್ಸೆಯನ್ನು ಪಡೆಯುತ್ತಿದ್ದರು, ಪಿರ್ಯಾದಿದಾರರು ದಿನಾಂಕ: 11.12.2022 ರಂದು ಅವರ ತಂದೆ- ತಾಯಿಯೊಂದಿಗೆ ಅವರ ಅಜ್ಜಿ ಮನೆಯಾದ ಮಣಿಪಾಲದ ಅನಂತಕಲ್ಯಾಣ ಕ್ವೀನ್ಸ್ ಅಪಾರ್ಟಮೆಂಟ್ ಗೆ ಬಂದಿದ್ದು, ಮೃತರು ದಿನಾಂಕ:15.12.2022 ರಂದು ಮಧ್ಯರಾತ್ರಿ 01:30 ಗಂಟೆ ಸಮಯಕ್ಕೆ ಮೂತ್ರ ಮಾಡಲು ಟಾಯ್ಲಟೆ ಗೆ ಹೋಗಿರುವ ಸಮಯ ಅವರ ಎಡಕಾಲಿಗೆ ಯಾವುದೋ ಹುಳು ಕಚ್ಚಿದ ಪರಿಣಾಮ ಅವರಿಗೆ ಜ್ವರ ಬಂದಿದ್ದು, ಚಿಕಿತ್ಸೆಯ ಬಗ್ಗೆ ಕೆ ಎಂ ಸಿ ಮಣಿಪಾಲ ಆಸ್ಪತ್ರೆಗೆ  ಒಳರೋಗಿಯಾಗಿ ದಾಖಲು ಮಾಡಿದ್ದು, ದಿನಾಂಕ: 17.12.2022 ರಂದು ಮಧ್ಯರಾತ್ರಿ 12:00 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ  KMC ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್‌‌ನಂಬ್ರ 44/2022 ಕಲಂ: 174 ಸಿ ಆರ್ ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಶಿರ್ವಾ: ಪಿರ್ಯಾದಿ ಕೃಷ್ಣ ಪೂಜಾರಿ (83), ತಂದೆ: ದಿ ಕೊರಗ ಪೂಜಾರಿ,ವಾಸ: ಮಲ್ಲಮಾರು ಮನೆ, ಮಟ್ಟಾರು ಅಂಚೆ, ಶಿರ್ವ ಗ್ರಾಮ, ಕಾಪು ಇವರ ತಮ್ಮ ರಾಮ ಪೂಜಾರಿ(65)ರವರು ಹೆಂಡತಿಯೊಂದಿಗೆ ಮುಂಬೈಯಲ್ಲಿ ವಾಸವಿದ್ದು ಸುಮಾರು 15 ದಿನಗಳ ಹಿಂದೆ ಊರಿಗೆ ಬಂದಿದ್ದು ಪಿರ್ಯಾದಿದಾರರೊಂದಿಗೆ ವಾಸವಿದ್ದರು.  ದಿನಾಂಕ  17/12/2022 ರಂದು ರಾಮ ಪೂಜಾರಿರವರು ಬೆಳಿಗ್ಗೆ 06.45 ಗಂಟೆ ಸುಮಾರಿಗೆ ಮನೆಯಿಂದ ಹಲ್ಲು ಉಜ್ಜುತ್ತಾ ಗದ್ದೆ ಕಡೆಗೆ ಹೋದವರು  ಮನೆಗೆ ಬಾರದೇ ಇದ್ದು, ಹುಡುಕಾಡಿದಲ್ಲಿ ಸುಮಾರು 07.45 ಗಂಟೆಗೆ ಗದ್ದೆಯಲ್ಲಿ ಅಂಗಾತನೆ ಬಿದ್ದಿದ್ದು, ಉಸಿರಾಟ ನಿಂತು ಮೃತಪಟ್ಟಿರುತ್ತಾರೆ. ರಾಮ ಪೂಜಾರಿಯವರು ಹೃದಯ ಸಂಬಂದಿ ಕಾಯಿಲೆಯಿಂದಲೇ ಮೃತಪಟ್ಟಿದ್ದು ಇವರ  ಮರಣದಲ್ಲಿ  ಬೇರೆ  ಯಾವುದೇ  ಸಂಶಯ  ಇರುವುದಿಲ್ಲ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಯುಡಿಆರ್‌ 29/22,  ಕಲಂ 174  ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

 

ಇತ್ತೀಚಿನ ನವೀಕರಣ​ : 17-12-2022 06:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080