ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾಧ ಸುಂದರ ಶೆಟ್ಟಿ (80) ತಂದೆ: ದಿ. ಶೀನ ಶೆಟ್ಟಿ ವಾಸ: ಪಂಜಿಮಾರು, ದೊಡ್ಡಮನೆ, ಶಿರ್ವ ಗ್ರಾಮ ಬಂಟಕಲ್ಲು ಅಂಚೆ, ಕಾಪು ತಾಲೂಕು ಉಡುಪಿ ಇವರು ದಿನಾಂಕ 16/12/2021 ರಂದು ಉಡುಪಿ ಟಿ.ಎಮ್.ಎ ಪೈ ಆಸ್ಪತ್ರೆ ಎದುರು ರಸ್ತೆ ಬದಿಯಲ್ಲಿ ನಿಂತಿರುವಾಗ ಬೆಳಿಗ್ಗೆ ಸಮಯ ಸುಮಾರು 09:45 ಗಂಟೆಗೆ ಕಿನ್ನಿಮುಲ್ಕಿ ಕಡೆಯಿಂದ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕಡೆಗೆ KA-20 AA-8588 ನೇ ಬಸ್ ಚಾಲಕ ಅಬ್ದುಲ್ ರಜಾಕ್ ಮಹಮ್ಮದ್ ಆಲಿ ಎಂಬಾತ ತನ್ನ ಬಸ್ಸನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ 76 ಬಡಗುಬೆಟ್ಟು ಗ್ರಾಮದ ಟಿ.ಎಮ್‌ಎ ಪೈ ಆಸ್ಪತ್ರೆ ಎದುರು ತೀರಾ ಎಡಬದಿಗೆ ಹೋಗಿ ರಸ್ತೆ ಬದಿಯಲ್ಲಿ ನಿಂತಿರುವ ಸುಂದರ ಶೆಟ್ಟಿ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಇವರು ರಸ್ತೆಗೆ ಬಿದ್ದು, ಬಸ್ಸಿನ ಎದುರಿನ ಚಕ್ರ ಎಡಕಾಲಿನ ಮೊಣಗಂಟಿನ ಕೆಳಗೆ ತಾಗಿ ಎಡಕಾಲು ಮೂಳೆ ಮುರಿತ ಉಂಟಾಗಿ ಗಂಭೀರ ಸ್ವರೂಪದ ಗಾಯವಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 90/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ರಾಜೆಶ್ವರಿ ಎನ್ (47) ತಂದೆ:ಪಟೇಲ್ ನೀಲಕಂಠಪ್ಪ ವಾಸ:ಎ3, ಮ.ನಂ:507, ಸ್ಪಂದನ ಅಪಾರ್ಟ್‌‌ಮೆಂಟ್, ಸಂತೆಕಟ್ಟೆ, ಉಡುಪಿ ಇವರು ದಿನಾಂಕ 16/12/2021 ರಂದು ಅಪರಾಹ್ನ 4:30 ಗಂಟೆಗೆ ಉಡುಪಿ ಲೋಕಾಯುಕ್ತ ಕಛೇರಿಗೆ ದಾಖಲೆಗಳನ್ನು ಸಲ್ಲಿಸಲು ತನ್ನ ಕಾರಿನಲ್ಲಿ ಕುಕ್ಕೆಹಳ್ಳಿ ಕೆ.ಜಿ ರೋಡ್‌ರಸ್ತೆಯಲ್ಲಿ ಬಂದು ಉಡುಪಿ ಕಡೆಗೆ ಬರುತ್ತಿರುವಾಗ ಕೆ.ಜಿ ರೋಡ್‌ ಜಂಕ್ಷನ್‌ನಲ್ಲಿ ಕುಂದಾಪುರ ಕಡೆಯಿಂದ ಒರ್ವ ಬೈಕ್‌ ಸವಾರ ಆತನ ಬೈಕ್‌ನಲ್ಲಿ ಇವರ ಕಾರ್‌ನ್ನು  ಹಿಂಬಾಲಿಸಿಕೊಂಡು ಬಂದು ಕೈ ಸನ್ನೆ ಮಾಡುತ್ತಾ ರಾಜೆಶ್ವರಿ ಎನ್ ರವರ ಕಾರಿಗೆ ಅಡ್ಡ ಬರುತ್ತಾ ಆತನ ಕಾಲನ್ನು ಎತ್ತಿ ಶೂ ಅನ್ನು ತೋರಿಸುತ್ತಾ ಹಿಂಬಾಲಿಸಿಕೊಂಡು ಉಡುಪಿ ಲೋಕಾಯುಕ್ತ ಕಛೆರಿಯವರೆಗೆ ಬಂದಿರುತ್ತಾನೆ. ರಾಜೆಶ್ವರಿ ಎನ್ ರವರು ತನ್ನ ಕಾರನ್ನು ಲೋಕಾಯುಕ್ತ ಕಛೇರಿ ಬಳಿ ನಿಲ್ಲಿಸಿದಾಗ ಆ ವ್ಯಕ್ತಿ ಹೋಗಿ ಕಂಪ್ಲೇಟ್‌ಕೊಡು ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿ ರಾಜೆಶ್ವರಿ ಎನ್ ರವರ ಬರುವಿಕೆಗಾಗಿ ಕಾಯುತಿದ್ದನು. ಆತನ ಬೈಕ್‌ನಂ ನೋಡಲಾಗಿ ಕೆಎ-20 ಇಬಿ-9970 ಆಗಿದ್ದು ಆ ವ್ಯಕ್ತಿ ಸುಮಾರು 30-35 ವರ್ಷ ಪ್ರಾಯದ ವ್ಯಕ್ತಿಯಾಗಿರುತ್ತಾನೆ ಈ ಘಟನೆ ನಡೆಯುವಾಗ ಸಂಜೆ 4:45 ರಿಂದ 5:15 ಗಂಟೆ ಒಳಗೆ ಆಗಿರುವುದಾಗಿದೆ. ಈ ಬಗ್ಗೆ ಮಹಿಳಾ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 56/2021 ಕಲಂ:341, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.      

ಇತ್ತೀಚಿನ ನವೀಕರಣ​ : 17-12-2021 11:39 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080