ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ದಿನಾಂಕ 16/12/2021 ರಂದು ರಾತ್ರಿ ಪಿರ್ಯಾದಿದಾರರಾದ ಅದಂ (27), ತಂದೆ ಎಸ್‌‌‌‌‌‌‌‌. ಖಾದರ್‌‌‌, ಮ. ನಂ. 1/223,  ಅನಿಷಾ ಮಂಜಿಲ್‌‌‌, ಗೆಂಡೆಕೆರೆ,  ಸಾಲಿಗ್ರಾಮ, ಬ್ರಹ್ಮಾವರ ತಾಲೂಕು ಇವರು ತನ್ನ ಸ್ಕೂಟಿಯಲ್ಲಿ  ಕೋಟದಿಂದ ಸಾಲಿಗ್ರಾಮ ಕಡೆಗೆ ಹೋಗುತ್ತಿರುವಾಗ ಚಿತ್ರಪಾಡಿ ಗ್ರಾಮದ ಸಾಲಿಗ್ರಾಮ ಶ್ರೀ ಮಾರಿಕಾಂಬ  ದೇವಸ್ಥಾನದ ಬಳಿ ಅದಂ ಇವರ ಎದುರುಗಡೆ ಸಮಯ ಸುಮಾರು 21:45  ಘಂಟೆಗೆ ನಾಲ್ಕು ಚಕ್ರದ ಸ್ಕೂಟಿ ಸವಾರನು ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಸವಾರಿ  ಮಾಡಿಕೊಂಡು ಹೋಗುತ್ತಾ ರಾಷ್ಟ್ರೀಯ ಹೆದ್ದಾರಿ 66 ರಸ್ತೆ ಡಾಮಾರೀಕರಣ ಮಾಡುತ್ತಿದ್ದು, ಆ ಬಗ್ಗೆ ಇರಿಸಿದ್ದ  ರಿಫ್ಲೆಕ್ಟರ್‌‌‌‌‌‌‌‌‌‌‌ ಅಳವಡಿಸಿದ್ದ ಟ್ರಾಫಿಕ್‌‌‌‌‌‌‌‌ ಕೋನ್‌‌‌ಗೆ  ಡಿಕ್ಕಿ ಹೊಡೆದನು. ಆಗ ವಾಹನದ ನಿಯಂತ್ರಣ ತಪ್ಪಿ ರಸ್ತೆಗೆ  ಬಿದ್ದರು. 4 ಚಕ್ರದ ಸ್ಕೂಟಿ ಸವಾರ ಆರೋಪಿಯು ಅಂಗವಿಕಲನಾಗಿದ್ದು, ಆತನ ತಲೆಗೆ ಹಾಗೂ ಎಡಕೈಗೆ  ಗಂಭೀರ ರಕ್ತ ಗಾಯವಾಗಿರುತ್ತದೆ. ಆತನಿಗೆ ಪ್ರಜ್ಞೆ ತಪ್ಪಿದ್ದು, ಮಾತನಾಡುತ್ತಿರಲಿಲ್ಲ. ಆತನ ಹೆಸರು  ಮಂಜುನಾಥ (51) ಎಂಬುದಾಗಿದ್ದು, ನಾಲ್ಕು ಚಕ್ರದ ಸ್ಕೂಟಿ ಜಖಂಗೊಂಡಿದ್ದು, ಅದರ ನೊಂದಣಿ ನಂಬ್ರ  ಕೆಎ-20-ಇಕ್ಯೂ-2021  ಆಗಿರುತ್ತದೆ. ನಂತರ ಆತನನ್ನು ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ಕರೆದುಕೊಂಡು ಹೋಗಿ  ದಾಖಲಿಸಿರುವುದಾಗಿದೆ, ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 211/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ರಮೇಶ  (32) ತಂದೆ : ದಿ. ನರಂಗ  ಹಾಂಡ, ವಾಸ: ದೇವಗಿರಿ, 5 ಸೆಂಟ್ಸ್,  ಗೋವಿಂದೂರು, ಎರ್ಲಪಾಡಿ ಗ್ರಾಮ, ಕಾರ್ಕಳ ಇವರ ಅಣ್ಣ ಶ್ರೀಧರ ಕುಲಾಲ್, (45) ರವರು ಮದ್ಯಪಾನ ಮಾಡುವ ಅಭ್ಯಾಸ ಹೊಂದಿದ್ದು ಮದುವೆಯಾಗಿ 4 ವರ್ಷವಾದರು ಮಕ್ಕಳಿರದ ಕಾರಣ ಮಾನಸಿಕವಾಗಿ ನೊಂದಿದ್ದು ಇದೇ ಕಾರಣಕ್ಕಾಗಿ ಮದ್ಯಪಾನ ಮಾಡಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 17/12/2021 ರಂದು ಬೆಳಿಗ್ಗೆ 07:00 ಗಂಟೆಯಿಂದ 09:00 ಗಂಟೆಯ ಮಧ್ಯಾವದಿಯಲ್ಲಿ ಶ್ರೀಧರ ಕುಲಾಲ್ ರವರು ಕೆಲಸ ಮಾಡಿಕೊಂಡಿದ್ದ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಅಯ್ಯಪ್ಪನಗರದ ರಂಜಿತ್ ಬಾರ್ ನ ಮಹಡಿಯ ಕೋಣೆಯ ಮೇಲ್ಚಾವಣಿಗೆ ಹಾಕಿದ ಕಬ್ಬಿಣದ ರಾಡ್ ಗೆ ನೈಲಾನ್ ಹಗ್ಗ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 49/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣ

  • ಶಿರ್ವಾ: ದಿನಾಂಕ 17/12/2021 ರಂದು ಶ್ರೀಶೈಲ್‌ ಡಿ.ಎಂ. ಪಿಎಸ್‌ಐ ಶಿರ್ವ ಪೊಲೀಸ್ ಠಾಣೆ ಇವರಿಗೆ  ಮಜೂರು ನಿವಾಸಿ ಸಂಶುದ್ದೀನ್ ಎಂಬಾತನು ಮಜೂರು ಕಡೆಯಿಂದ ಶಿರ್ವಾ ಕಡೆಗೆ ಮೋಟಾರ್ ಸೈಕಲಿನಲ್ಲಿ ಅಕ್ರಮವಾಗಿ ದನದ ಮಾಂಸವನ್ನು ಸಾಗಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದ ಮೇರೆಗೆ ಇವರು ಇಲಾಖಾ ಜೀಪಿನಲ್ಲಿ ಠಾಣಾ ಸಿಬ್ಬಂದಿಯವರಾದ ಎ.ಎಸ್‌.ಐ. ವಿವೇಕಾನಂದ, ಚ್.ಸಿ. ಧರ್ಮಪ್ಪ ಕೆ.ಎನ್‌. ಮತ್ತು ರಘು ನೇರವರನ್ನು ಕರೆದು ಶಿರ್ವ  ಠಾಣಾ ಸರಹದ್ದಿನ ಸಮಯ ಬೆಳಿಗ್ಗೆ 09:30 ಗಂಟೆಗೆ ಶಿರ್ವ ಸೈಂಟ್‌ ಮೆರೀಸ್‌ ಜಂಕ್ಷನ್‌ ಬಳಿ ಹೋಗಿ ನಿಂತು ಕಾಯುತ್ತಿರುವಾಗ ಮಜೂರು ಕಡೆಯಿಂದ ಶಿರ್ವ ಕಡೆಗೆ ಓರ್ವ ಕೆಂಪು ಬಣ್ಣದ ಮೋಟಾರ್‌ ಸೈಕಲಿನಲ್ಲಿ ಸಂಶುದ್ದೀನ್ ಬರುತ್ತಿರುವುದನ್ನು ಖಚಿತ ಪಡಿಸಿಕೊಂಡು ಸಮಯ ಸುಮಾರು 9:45 ಗಂಟೆಗೆ ಸಿಬ್ಬಂದಿಯವರ ಸಹಾಯದಿಂದ ಮೋಟಾರ್ ಸೈಕಲನ್ನು ನಿಲ್ಲಿಸುವ ಸೂಚನೆ ನೀಡಿ ತಡೆದು ನಿಲ್ಲಿಸಿ ಆತನ ಮೋಟಾರ್ ಸೈಕಲ್ ನಂಬ್ರ ನೋಡಲಾಗಿ ಕೆಎ-20 ಇಇ-1255 ನೇ ಕೆಂಪು ಬಣ್ಣದ ಹೀರೋ Passion Expro ಮೋಟಾರ್ ಸೈಕಲ್ ಆಗಿದ್ದು, ಸದ್ರಿ ಮೋಟಾರ್ ಸೈಕಲಿನ ಎದುರುಗಡೆ ಪೆಟ್ರೋಲ್ ಟ್ಯಾಂಕಿನ ಮೇಲೆ ಒಂದು ನೈಲಾನ್‌ ಚೀಲದಲ್ಲಿ 10 ಪ್ಲಾಸ್ಟಿಕ್‌ ತೊಟ್ಟೆಯಲ್ಲಿ ಮಾಂಸವನ್ನು ನೋಡಿ ಆತನ ಬಳಿ  ವಿಚಾರಿಸಿದಾಗ ಆತನು ಅದು ದನದ ಮಾಂಸ ಎಂಬುದಾಗಿ ತಿಳಿಸಿ, ತಲಾ 10 ಪ್ಲಾಸ್ಟಿಕ್ ತೊಟ್ಟೆಯಲ್ಲಿ ತಲಾ ಒಂದೊಂದು ಕೆ.ಜಿ. ಮಾಂಸ ಇದ್ದು, ಇದನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ  ತಿಳಿಸಿರುತ್ತಾನೆ. ದನದ ಮಾಂಸ ಮಾರಾಟ ಮಾಡಲು ಪರವಾನಿಗೆ ಬಗ್ಗೆ ವಿಚಾರಿಸಿದಲ್ಲಿ ಯಾವುದೇ ಪರವಾನಿಗೆ  ಇರುವುದಿಲ್ಲ ಎಂಬುದಾಗಿ  ತಿಳಿಸಿದ್ದು,  ಅಲ್ಲದೆ ಮಾಂಸವನ್ನು  ಎಲ್ಲಿಂದ ತಂದಿರುವೇ ಎಂಬ ಬಗ್ಗೆ ವಿಚಾರಣೆ ಮಾಡಲಾಗಿ ಕರಂದಾಡಿ ನಿವಾಸಿಯಾದ ರಹೀಂ ಎಂಬಾತನಿಂದ ದನದ ಮಾಂಸವನ್ನು ತೆಗೆದುಕೊಂಡು ಮಾರಾಟ ಮಾಡಲು ಶಿರ್ವ ಕಡೆಗೆ ಹೋಗುತ್ತಿರುವುದಾಗಿ ತಿಳಿಸಿದ ಮೇರೆಗೆ ಆತನ ಹೆಸರು ವಿಳಾಸ ಕೇಳಲಾಗಿ ಸಂಶುದ್ದೀನ್‌, (63) ತಂದೆ: ದಿ: ಹಾಜಬ್ಬ ಗುಲಾಮ್‌, ವಾಸ: ಮನೆ ನಂಬ್ರ  2-49(2) ಮಾಷಾ ಅಲ್ಲಾ ಮಂಜಿಲ್‌, ಕರಂದಾಡಿ ಶ್ರೀರಾಮ ಶಾಲೆಯ  ಹತ್ತಿರ, ಮಜೂರು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಎಂದು ತಿಳಿಸಿದನು. ಈತನು ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ ದನದ ಮಾಂಸವನ್ನು ತಂದು ಮೋಟಾರ್‌ ಸೈಕಲಿನಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ತನ್ನ ತಪ್ಪಿನ ಬಗ್ಗೆ ತಿಳಿ ಹೇಳಲಾಗಿದೆ ಸದ್ರಿ ಸಂಶುದ್ದೀನ್‌ ಈತನು ಕರಂದಾಡಿ ನಿವಾಸಿಯಾದ ಅಶ್ರಫ್‌ ತೆಗೆದುಕೊಂಡು ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ದನದ ಮಾಂಸವನ್ನು ಮೋಟಾರ್ ಸೈಕಲ್‌ನಲ್ಲಿ ಮಾರಾಟ ಮಾಡಲು ಸಾಗಾಟ ಮಾಡುತ್ತಿರುವುದಾಗಿದೆ. ಮೋಟಾರ್‌ ಸೈಕಲ್‌ನ ಪೆಟ್ರೋಲ್‌ ಟ್ಯಾಂಕ್‌ನ ಮೇಲ್ಗಡೆ ಇದ್ದ ನೈಲಾನ್‌ ಚೀಲದ ಒಳಗೆ 10 ಪ್ಲಾಸ್ಟಿಕ್‌ ತೊಟ್ಟೆಯಲ್ಲಿದ್ದ ದನದ ಮಾಂಸ ಮತ್ತು ಸದ್ರಿ ಮಾಂಸವನ್ನು ಸಾಗಾಟ ಮಾಡುತ್ತಿದ್ದ ಮೋಟಾರ್ ಸೈಕಲ್‌ ಮೇಲ್ನೊಟಕ್ಕೆ  ಯಾವುದೇ ಜಖಂ ಆಗಿರುವುದು  ಕಂಡು  ಬಂದಿರುವುದಿಲ್ಲ ಇದರ  ಅಂದಾಜು  ಮೌಲ್ಯ  ಸುಮಾರು 60,000/- ಆಗಬಹುದು ಎಂದು ಪಂಚರು ಅಭಿಪ್ರಾಯ  ಪಡುತ್ತಾರೆ.  ಅಲ್ಲದೆ   ಮಾಂಸ ಕೊಂಡು ಹೋದ ನೈಲಾನ್‌ ಚೀಲ ಇದು ಕೆಂಪು, ಬಿಳಿ, ಕಪ್ಪು, ನೀಲಿ ಬಣ್ಣದ  ಗೆರೆಗಳಿರುವ  ನೈಲಾನ್‌ ಚೀಲವಾಗಿದ್ದು, ಬೆಲೆ ಬಾಳುವುದಿಲ್ಲ. ಈ ಎಲ್ಲಾ  ಸೊತ್ತುಗಳನ್ನು ಮುಂದಿನ ಕ್ರಮದ  ಬಗ್ಗೆ  ಪಂಚರ  ಸಮಕ್ಷಮ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 76/2021  ಕಲಂ: 4, 5, 7, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು  ಸಂರಕ್ಷಣಾ  ಅದ್ಯಾದೇಶ 2020 ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ದಿನಾಂಕ 17/12/2021 ರಂದು ಬೆಳಿಗ್ಗೆ 09:30 ಗಂಟೆಯ ವೇಳೆಗೆ ಪಿರ್ಯಾದಿದಾರರಾದ ಎ ಲಕ್ಷ್ಮೀ ಟಿ ರಾವ್, (70) ಗಂಡ: ಎಲ್. ತ್ಯಾಗರಾಜ ರಾವ್, ವಾಸ: ಅಲಂಗಾರ್ ಹೌಸ್, ಪಡುಬಿದ್ರಿ ಅಂಚೆ, ನಡ್ಸಾಲು ಗ್ರಾಮ, ಕಾಪು ಇವರ ಅಲಂಗಾರ್ ಎಂಬಲ್ಲಿರುವ ಸರ್ವೇ ನಂಬ್ರ 91/22 ನೇ ನಂಬ್ರದ ಜಾಗಕ್ಕೆ ದಿನೇಶ್ ಆಚಾರಿ ಎಂಬುವರು ಅಕ್ರಮ ಪ್ರವೇಶ ಮಾಡಿ ಜೆ.ಸಿ.ಬಿ ಯಲ್ಲಿ  ಎ ಲಕ್ಷ್ಮೀ ಟಿ ರಾವ್ ರವರ ಜಾಗದಲ್ಲಿ ರಸ್ತೆ ಅಗಲಗೊಳಿಸುತ್ತಿರುವುದನ್ನು ಎ ಲಕ್ಷ್ಮೀ ಟಿ ರಾವ್ ರವರು ತಡೆಯಲು ಹೋದಾಗ, ಆರೋಪಿ ದಿನೇಶ್ ಆಚಾರಿಯವರು ಇವರನ್ನು ಕೈಯಿಂದ ದೂಡಿದ ಪರಿಣಾಮ ಇವರು ಮುಳ್ಳಿನ ಪೊದೆಯ ಮೇಲೆ ಬಿದ್ದು, ಅವರ ಕಾಲಿಗೆ ಮತ್ತು ಕೈಗೆ ಪೆಟ್ಟಾಗಿದ್ದು, ನಂತರ ಎ ಲಕ್ಷ್ಮೀ ಟಿ ರಾವ್ ರವರನ್ನು ಅವರ ಸೊಸೆಯಂದಿರು ಉಪಚರಿಸಿ, ಪಡುಬಿದ್ರಿಯ ಸಿದ್ದಿವಿನಾಯಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ನಂತರ ಠಾಣೆಗೆ ಬಂದು ದೂರು ನೀಡಿರುವುದಾಗಿದೆ, ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 117/2021 ಕಲಂ: 447, 323, 354 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.      

ಇತ್ತೀಚಿನ ನವೀಕರಣ​ : 17-12-2021 05:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080