ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಪಡುಬಿದ್ರಿ: ದಿನಾಂಕ 16/11/2022 ರಂದು ಮದ್ಯಾಹ್ನ 12:45 ಗಂಟೆಗೆ ಬೆಳಪು ವಿನಯ ನಗರದ ನಿವಾಸಿ ಮೊಹಮ್ಮದ್ ಶರೀಫ್  KA-20-EW-3068 ನೇ ಬಜಾಜ್ ಪಲ್ಸರ್  ಮೊಟಾರು ಸೈಕಲಿನಲ್ಲಿ ಆಯಿಷಾ ನಿಹಾಲ ಎಂಬುವವರನ್ನು ಹಿಂದುಗಡೆ ಕುಳ್ಳಿರಿಸಿಕೊಂಡು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ರಾಷ್ಟ್ರೀಯ  ಹೆದ್ದಾರಿ  66 ರಲ್ಲಿ ಚಲಾಯಿಸಿ ಕೊಂಡು ಬರುತ್ತಾ ಕಾಪು ತಾಲೂಕು ಬಡಾ ಗ್ರಾಮ ಉಚ್ಚಿಲದ ಬ್ಲೂ ವೇವ್ ಕಟ್ಟಡದ ಎದುರು ತಲುಪಿದಾಗ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ KA-19-AD-0178 ಟಿಪ್ಪರ್ ಚಾಲಕನು ಟಿಪ್ಪರನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೊಹಮ್ಮದ್ ಶರೀಫ್ ರವರು ಚಲಾಯಿಸುತ್ತಿದ್ದ KA-20-EW-3068 ನೇ ಬಜಾಜ್ ಪಲ್ಸರ್ ಮೊಟಾರು ಸೈಕಲಿನ ಎಡಬಾಗದಿಂದ ಓವರ್ ಟೇಕ್ ಮಾಡಿ ಮುಂದೆ ಹೋಗುವಾಗ ಟಿಪ್ಪರಿನ ಹಿಂಬದಿಯ ಬಲಬದಿಯ ಟಯರ್ ಮೊಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಮೊಟಾರು ಸೈಕಲಿನಲ್ಲಿದ್ದ ಮೊಹಮ್ಮದ್ ಶರೀಫ್ ಹಾಗೂ ನಿಹಾಲ್ ರಸ್ತೆಗೆ ಬಿದ್ದು ಮೊಹಮ್ಮದ್ ಶರೀಫ್ ಎರಡೂ ಕೈ ಕಾಲುಗಳಿಗೆ ತರಚಿದ ಗಾಯಗಳಾಗಿದ್ದು, ಆಯಿಷಾ ನಿಹಾಲ ರವರಿಗೆ ಹೊಟ್ಟೆಗೆ ತೆರದ ಗಂಭೀರ ಗಾಯ ಉಂಟಾದವರನ್ನು ಅಂಬುಲೆನ್ಸ್ ನಲ್ಲಿ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಲುಪಿದಾಗ ಮದ್ಯಾಹ್ನ13:15 ಗಂಟೆಗೆ ವೈದ್ಯರು ಪರೀಕ್ಷಿಸುವ  ವೇಳೆ  ಆಯಿಷಾ ನಿಹಾಲ್ ಮೃತ ಪಟ್ಟಿರುವುದಾಗಿದೆ. ಗಾಯಗೊಂಡ ಮೊಟಾರು ಸೈಕಲ್ ಸವಾರ ಮೊಹಮ್ಮದ್ ಶರೀಫ್  ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 146/2022 ಕಲಂ: 279, 337, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಮಣಿಪಾಲ: ಪಿರ್ಯಾದಿದಾರರಾದ ವಸಂತ (29), ತಂದೆ: ದಿ. ಭಾಸ್ಕರ ದೇವಾಡಿಗ, ವಾಸ: ದೇವಸ್ಥಾನ ಬೆಟ್ಟು, ಕೆಳಪೇಟೆ, ಹೆಬ್ರಿ, ಹೆಬ್ರಿ ತಾಲೂಕು ಇವರು ದಿನಾಂಕ 14/11/2022 ರಂದು ತನ್ನ ತಾಯಿ ಮನೆಯಾದ ಉಡುಪಿಗೆ ಕೆಲಸದ ನಿಮಿತ್ತ ಬೆಳಿಗ್ಗೆ ಬೇಗ ಹೋಗಿದ್ದು, ಅಲ್ಲಿ ಕೆಲಸ ಮುಗಿಸಿ ವಾಪಾಸ್ಸು ಮನೆಯಾದ ಹೆಬ್ರಿಗೆ ತನ್ನ ಬುಲೆಟ್‌ ನಂಬ್ರ KA-20-ES- 0205ನೇದರಲ್ಲಿ ಹೊರಟು ಬೆಳಿಗ್ಗೆ 11:00 ಗಂಟೆಗೆ ಪೆರ್ಡೂರು ಜೋಗಿಬೆಟ್ಟು ಎಂಬಲ್ಲಿ ರಾಹೆ 169 ಎ ರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದಾಗ ಅಲ್ಲಿ ಒಂದು ಲಾರಿಯು ರಸ್ತೆಯ ದಕ್ಷಿಣ ಬದಿಯಲ್ಲಿ ಪೆರ್ಡೂರು ಕಡೆಗೆ ಮುಖಮಾಡಿ ನಿಂತುಕೊಂಡಿದ್ದು, ಆ ಸಮಯ ಹೆಬ್ರಿ ಕಡೆಯಿಂದ ಪೆರ್ಡೂರು ಕಡೆಗೆ ಒಂದು ಮಿನಿ ಟಿಪ್ಪರನ್ನು ಅದರ ಚಾಲಕ ಸಂತೋಷ್‌ ಶೆಟ್ಟಿ ಅತೀ ವೇಗ ಹಾಗೂ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಿಂತ ಲಾರಿಯನ್ನು ದಾಟಿ ರಸ್ತೆಯ ತೀರಾ ಬಲಭಾಗಕ್ಕೆ ಬಂದು ಫಿರ್ಯಾದಿದಾರರ ಬುಲೆಟ್‌ ಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಬುಲೆಟ್‌ ನಿಂದ ಕೆಳಗೆ ಬಿದ್ದು, ಅವರಿಗೆ ಎಡ ಕೈ ಹಾಗೂ ಎಡಕಾಲಿಗೆ ತೀವ್ರ ಸ್ವರೂಪದ ಮೂಳೆ ಮುರಿತದ ಪೆಟ್ಟಾಗಿರುತ್ತದೆ. ಅಲ್ಲದೇ ದೇಹದ ಇತರ ಭಾಗಗಳಿಗೆ ಸಣ್ಣಪುಟ್ಟ ತರಚಿದ ಗಾಯಗಳಾಗಿರುತ್ತದೆ.  ಗಾಯಗೊಂಡ ಪಿರ್ಯಾದಿದಾರರು ಚಿಕಿತ್ಸೆಗೆ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 75/2022  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಉಡುಪಿ: ದಿನಾಂಕ 16/11/2022ರಂದು ಪಿರ್ಯಾದಿದಾರರಾದ ಗಣೇಶ್.ಜೆ.ಪೂಜಾರಿ (51),ತಂದೆ: ಜಬ್ಬಪೂಜಾರಿ,ವಾಸ:  ಮನೆ ನಂ:1-45 ಇ, ಶ್ರೀ ಗುರುದಯ ನಿವಾಸ,ಅಂಬಲಪಾಡಿ ಅಂಚೆ,ಮೂಡನಿಡಂಬೂರು ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ತನ್ನ  KA-20-D-6460ನೇ ಅಟೋ ರಿಕ್ಷಾದಲ್ಲಿ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ರಾಷ್ಟ್ರೀಯ ಹೆದ್ದಾರಿ-169A ನೇ ಸಾರ್ವಜನಿಕ ರಸ್ತೆಯಲ್ಲಿ ಆದಿ ಉಡುಪಿಯಿಂದ ಬನ್ನಂಜೆ ಕಡೆಗೆ ಬರುತ್ತಿರುವಾಗ ಬೆಳಿಗ್ಗೆ11:45 ಗಂಟೆಗೆ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕಡೆಗೆ ತಿರುಗಿಸಲು ಸೂಚನೆಯನ್ನು ನೀಡಿ ಅಟೋ ರಿಕ್ಷಾವನ್ನುತಿರುಗಿಸುತ್ತಿರುವಾಗ ಕರಾವಳಿ ಕಡೆಯಿಂದ ಉಡುಪಿ ಕಡೆಗೆ KA-20-Y-0877 ನೇ ಮೋಟಾರ್ ಸವಾರ ಸತೀಶ್ ಬಂಗೇರಾ ತಾನು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್‌ನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಅಟೋ ರಿಕ್ಷಾದ ಹಿಂಭಾಗದ ಬಲಬದಿಗೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಮಗುಚಿ ಬಿದ್ದು ಪಿರ್ಯಾದಿದಾರರ ಎಡಕಾಲಿಗೆ ಬಿದ್ದ ಪರಿಣಾಮ ಎಡಕಾಲಿಗೆಮೂಳೆ ಮುರಿತದ ಗಂಬೀರ ಸ್ವರೂಪದ ಜಖಂ ಆಗಿರುತ್ತದೆ. ರಿಕ್ಷಾದಲ್ಲಿದ್ದ ಪ್ರಯಾಣಿಕರಾಗಲಿ, ಮೋಟಾರ್ ಸೈಕಲ್ ಸವಾರನಿಗಾಗಲಿ ಯಾವುದೇ ಗಾಯಗಳಾಗಿರುವುದಿಲ್ಲ. ಈ ಬಗ್ಗೆ ಪಿರ್ಯಾದಿದಾರರು ಉಡುಪಿ ಹೈಟೆಕ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.  ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 93/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿದಾರರಾದ ಬಿಜಯ್ ದಾಸ್, ತಂದೆ:ಭರತ್ ಚಂದ್ರ ಹಾಸ್, ವಾಸ:ಬೆಗುನಿಯಾಪಡ , ಮರ್ಡಾಕೋಟೆ, ಗಂಜಮ್ , ಒರಿಸ್ಸಾ ಇವರು ದಿನಾಂಕ 12/11/2022 ರಂದು ತೊಟ್ಟಂ ಪೇಟೆಗೆ ಮೆಡಿಕಲ್  ಗೆ  ತನ್ನ  ಸೈಕಲಿನಲ್ಲಿ ಹೋಗಿ  ವಾಪಸ್ಸು   ತೊಟ್ಟಂ  ನಿಂದ  ತನ್ನ  ಮನೆ ಕಡೆಗೆ  ಸೈಕಲನ್ನು ಸವಾರಿ  ಮಾಡಿಕೊಂಡು  ಹೊರಟು  ರಾತ್ರಿ 8:00 ಗಂಟೆಯ  ಸಮಯಕ್ಕೆ ತೊಟ್ಟಂ ಸೇತುವೆ  ಬಳಿ ತಲುಪುವಾಗ  ಪಿರ್ಯಾದಿದಾರರ  ಹಿಂದಿನಿಂದ  KA-25-C-0725  ನೇ  ‘ಶ್ರೀ  ಗಣೇಶ್‘  ಎಂಬ  ಹೆಸರಿನ  ಬಸ್ಸನ್ನು  ಅದರ  ಚಾಲಕ  ಅಜಾಗರೂಕತೆ  ಹಾಗೂ ನಿರ್ಲಕ್ಷತನದಿಂದ  ತೀರ ಎಡ ಬದಿಗೆ  ಚಲಾಯಿಸಿ ಕೊಂಡು ಬಂದು  ಪಿರ್ಯಾದಿದಾರರ ಸೈಕಲಿಗೆ  ಡಿಕ್ಕಿ  ಹೊಡೆದ  ಪರಿಣಾಮ  ಪಿರ್ಯಾದಿದಾರರು  ಸೈಕಲ್ ಸಮೇತ  ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲ ಕಾಲಿನ ಮೊಣಗಂಟಿನ  ಬಳಿ ಒಳ ಗುದ್ದಿದ ಗಾಯ , ಬಲ ಭುಜಕ್ಕೆ  ಒಳ ಗುದ್ದಿದ   ನೋವು, ಎದೆಯ ಬಲ  ಬಾಗಕ್ಕೆ  ಒಳ ಗುದ್ದಿದ ನೋವು  ಮತ್ತು ಬೆನ್ನಿಗೆ ಒಳ  ಗುದ್ದಿದ  ನೋವು  ಆಗಿರುತ್ತದೆ. ಈ  ಬಗ್ಗೆ  ಪಿರ್ಯಾದಿದಾರರು  ಮಂಗಳೂರು ವೆನ್ಲಾಕ್  ಆಸ್ಪತ್ರೆಯಲ್ಲಿ  ದಾಖಲಾಗಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 98/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 16/11/2022 ರಂದು ಪಿರ್ಯಾದಿದಾರರಾದ ಗುರುರಾಜ ಮಕ್ಕಿತ್ತಾಯ (55), ತಂದೆ: ಜನಾರ್ಧನ ಮಕ್ಕಿತ್ತಾಯ, ವಾಸ: ಕೆಳಕುಂಜಾಲು , ನೀಲಾವರ ಗ್ರಾಮ, ಬ್ರಹ್ಮಾವರ ತಾಲೂಕು ಇವರು ಸ್ನೇಹಿತ ಹರೀಶ್‌ ಆಚಾರ್ಯ ರೊಂದಿಗೆ ಮೋಟಾರ್‌ ಸೈಕಲ್‌ನಲ್ಲಿ ಬ್ರಹ್ಮಾವರದಿಂದ ಮಟಪಾಡಿಗೆ ಮಟಪಾಡಿ – ನೀಲಾವರ ರಸ್ತೆಯಲ್ಲಿ ಹೊರಟು ಅವರ ಎದುರಿನಲ್ಲಿ ಅಚ್ಯುತ್‌ ಆಚಾರ್ಯ ರವರು ಅವರ KA-19-E-7959 ನೇ ಮೋಟಾರ್‌ ಸೈಕಲ್‌ ನಲ್ಲಿ ಅವರ ಮಗ ಅರವಿಂದರವರನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ಸವಾರಿ ಮಾಡುತ್ತಾ ಹೋಗುತ್ತಿರುವಾಗ ಸಂಜೆ 5:00 ಗಂಟೆಗೆ ನೀಲಾವರ ಗ್ರಾಮದ, ನೀಲಾವರ ವಿಶ್ವಾಂಭರ ಗೇರು ಬೀಜದ ಕಾರ್ಖಾನೆ ಬಳಿ  ತಲುಪುವಾಗ, ಅವರ ಎದುರಿನಿಂದ  ನೀಲಾವರ ಕಡೆಯಿಂದ ಮಟಪಾಡಿ ಕಡೆಗೆ ಆರೋಪಿ  KL-32- M- 6711 ನೇ ಫಿಕಪ್‌ ವಾಹನ ವನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆಯ ಬಲಬದಿಗೆ ಬಂದು ಅಚ್ಯುತ್‌ ಆಚಾರ್ಯ ರವರು ಸವಾರಿ ಮಾಡುತ್ತಿದ್ದ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್‌ ಸೈಕಲ್‌ ಸಮೇತ ಅಚ್ಯುತ್‌ ಆಚಾರ್ಯ ಹಾಗೂ ಅವರ ಮಗ ಅರವಿಂದ ರಸ್ತೆಗೆ ಬಿದ್ದು, ಅಚ್ಯುತ್‌ ಆಚಾರ್ಯ ರವರ ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು ಹಾಗೂ ಅರವಿಂದ ರವರ ಎರಡೂ ಕಾಲುಗಳಿಗೆ ರಕ್ತಗಾಯವಾಗಿರುತ್ತದೆ. ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಾಗ ಪರೀಕ್ಷಿಸಿದ ವೈಧ್ಯರು ಅಚ್ಯುತ್‌ ಆಚಾರ್ಯ (60) ರವರು ಮೃತ ಪಟ್ಟಿರುವುದಾಗಿ ಸಂಜೆ 5:45 ಗಂಟೆಗೆ ತಿಳಿಸಿರುತ್ತಾರೆ. ಅರವಿಂದನಿಗೆ ಹೊರ ರೋಗಿ ಆಗಿ ಚಿಕಿತ್ಸೆ ನೀಡಿ ಬಿಡುಗಡೆ ಗೊಳಿಸಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 195/2022 ಕಲಂ : 279, 337 ಐಪಿಸಿ & 134 (A&B), 187 IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 17-11-2022 09:37 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080