ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಪಡುಬಿದ್ರಿ:  ದಿನಾಂಕ 16/11/2021 ರಂದು 11:00 ಗಂಟೆಯ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀನಿವಾಸ ಭಟ್ (47), ತಂದೆ: ದಿ. ಸುಬ್ಬ ರಾವ್, ವಾಸ: ಅಕ್ಕಮ್ಮ ಹೌಸ್,ಬೆಂಗ್ರೆ, ನಡ್ಸಾಲು ಗ್ರಾಮ ಕಾಪು ತಾಲೂಕು ಇವರು ತನ್ನ ಮೊಟಾರು ಸೈಕಲ್ ನಲ್ಲಿ ಪಡುಬಿದ್ರಿ ಕೆಳಪೇಟೆಯಿಂದ  ಪಡುಬಿದ್ರಿ ಮೇಲ್‌ ಪೇಟೆಗೆ ಬರುತ್ತಿರುವ ಸಮಯ ಪಿರ್ಯಾದಿದಾರರ ಸಂಬಂಧಿ ಪಾದೆಬೆಟ್ಟು ಗ್ರಾಮದ ಬಾಲಕೃಷ್ಣ ಭಟ್ ರವರು ಕಾಪು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರಿ ಕೆಳಪೇಟೆಯಿಂದ ಪಡುಬಿದ್ರಿ ಡೌನ್‌ಟೌನ್ ಎದುರು ತಲುಪಿ ಅಲ್ಲಿಂದ ಹೆಜಮಾಡಿ ಕಡೆಗೆ ಹೋಗಲು ಸರ್ವಿಸ್ ರಸ್ತೆಯಿಂದಾಗಿ ತೆರೆದ ಡಿವೈಡರನ್ನು ದಾಟಿ ಮಂಗಳೂರು – ಉಡುಪಿ ರಾಷ್ಟ್ರೀಯ ಹೆದ್ದಾರಿ-66 ನ್ನು ತಲ್ಲುಪಿ, ಅಲ್ಲಿಂದ ಉಡುಪಿ – ಮಂಗಳೂರು ರಸ್ತೆಗೆ ತಲುಪಿ ಅಲ್ಲಿಂದ ಹೆಜಮಾಡಿ ಕಡೆಗೆ KA-20-EV-5752 ಸ್ಕೂಟಿಯನ್ನು ಚಲಾಯಿಸಿಕೊಂಡು  ಹೆಜಮಾಡಿ ಕಡೆಗೆ ಹೋಗುತ್ತಿರುವ ಸಮಯ ಉಡುಪಿ ಕಡೆಯಿಂದ ಹೆಜಮಾಡಿ ಕಡೆಗೆ  ಆರೋಪಿ KA-51-MN-2828 ಕಾರು ಚಾಲಕ  ಧನ್ವಿನ್ ಅವರೆಕಾಡು ಜಗದೀಶ್ ತನ್ನ ಕಾರನ್ನು ಅತೀ ವೇಗ ಹಾಗೂ ಅಜಾಗರೂತೆಯಿಂದ ಚಲಾಯಿಸಿಕೊಂಡು ಬಂದು ಬಾಲಕೃಷ್ಣ ಭಟ್ ರವರು ಚಲಾಯಿಸುತ್ತಿದ್ದ ಸ್ಕೂಟಿಯ ಹಿಂಭಾಗಕ್ಕೆ ಡಿಕ್ಕಿಹೊಡೆದ ಪರಿಣಾಮ ಬಾಲಕೃಷ್ಣ ಭಟ್‌ರವರು  ಸ್ಕೂಟಿ ಸಮೇತ ಕೆಳಗೆ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಪ್ರಜ್ಜಾಹೀನರಾದವರನ್ನು ಪಡುಬಿದ್ರಿ ಸಿದ್ದಿವಿನಾಯಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿಗೆ ಅಟೋರಿಕ್ಷಾ ಒಂದರಲ್ಲಿ ವೆಂಕಟೇಶ್ ರಾವ್ ಎಂಬವರ ಮುಖಾಂತರ ಕಳುಹಿಸಿಕೊಟ್ಟು, ಕೊಪ್ಪಲಂಗಡಿ ಎಂಬಲ್ಲಿಗೆ ತಲುಪಿದಾಗ ಅಲ್ಲಿಗೆ ಬಂದ 108 ಅಂಬುಲೆನ್ಸ್ ನಲ್ಲಿ ಬಾಲಕೃಷ್ಣ ಭಟ್ ರವರನ್ನು ಉಡುಪಿ ಆದರ್ಶ ಆಸ್ಪತ್ರೆಗೆ ಮದ್ಯಾಹ್ನ 12:00 ಗಂಟೆ ಸಮಯಕ್ಕೆ ಕರೆ ತಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಬಾಲಕೃಷ್ಣ ಭಟ್ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 108/2021 ಕಲಂ: 279, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ಎಸ್ ಶ್ರೀನಿವಾಸ ಶೆಟ್ಟಿ (71), ತಂದೆ: ಕೆ, ತಿಮ್ಮಪ್ಪ ಶೆಟ್ಟಿ, ವಾಸ: ಮರ್ಲು ಚಿಕ್ಕು ದೇನಸ್ಥಾನದ ಬಳಿ 28 ಹಾಲಾಡಿ ಗ್ರಾಮ ಕುಂದಾಪುರ ತಾಲೂಕು ಇವರ ಮಗಳು ರತಿರೇಖಾ (38) ಇವರು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಕುಂದಾಪುರದ ಮಾತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲದೆ ಅವರಿಗೆ ಹಾಗೂ ಗಂಡನ ನಡುವೆ ಸರಿಬಾರದ ಕಾರಣ  05 ವರ್ಷದ ಹಿಂದೆ ವಿವಾಹ ವಿಚ್ಚೇದನವಾಗಿದ್ದು, ತಂದೆ ಮತ್ತು ತಾಯಿ ಮಗನೊಂದಿಗೆ ವಾಸವಾಗಿದ್ದು ಅವರಿಗೆ ಇರುವ ಮಾನಸಿಕ ಕಾಯಿಲೆ ಹಾಗೂ ವಿವಾಹ ವಿಚ್ಚೇದನೆಯಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ 16/11/2021 ಬೆಳ್ಲಿಗೆ 06:30 ಗಂಟೆಗೆ ಮನೆಯ ಎದುರುಗಡೆ ಕುಂದಾಪುರ ತಾಲೂಕಿನ 28 ಹಾಲಾಡಿ ಗ್ರಾಮದ ಆದಿ ಮರ್ಲು ಚಿಕ್ಕು ದೇವಸ್ಥಾನ ಬಳಿ ಇರುವ ಮನೆ ಎದುರುಗಡೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 43/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.      

ಇತ್ತೀಚಿನ ನವೀಕರಣ​ : 17-11-2021 09:31 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080