ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ:  ಪಿರ್ಯಾದಿ ಗಣೇಶ್ ಪ್ರಾಯ (46) ತಂದೆ: ಗೋಪಾಲ ಪೂಜಾರಿ ವಾಸ: ಬಾಚನಬೈಲ್ ಮನೆ ನಂಬ್ರ 17/88, ಕೊಡವೂರು ಅಂಚೆ ಮತ್ತು ಗ್ರಾಮ ಇವರು ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ದಿನಾಂಕ 08/06/2022 ರಿಂದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಿಂದುಳಿದ ವರ್ಗಗಳ ಮೋರ್ಚಾ ಶ್ರೀ ಯಶ್‌ಪಾಲ್ ಎ ಸುವರ್ಣ ರವರ ಅಂಗರಕ್ಷಕನಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ದಿನಾಂಕ : 16/10/2022 ರಂದು ಸಂಜೆ ಕರ್ತವ್ಯದ ನಿಮಿತ್ತ ಮನೆಯಿಂದ ತನ್ನ  ಮೋಟಾರ್ ಸೈಕಲ್ ನಂಬ್ರ KA20X682 ನೇದರಲ್ಲಿ ತನ್ನ ಮನೆಯಿಂದ ಅಜ್ಜರಕಾಡುವಿನಲ್ಲಿರುವ ಶ್ರೀ ಯಶ್‌ಪಾಲ್ ಎ ಸುವರ್ಣ ರವರ ಮನೆಗೆ ಕರಾವಳಿ – ಅಂಬಲಪಾಡಿ ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿರುವಾಗ ಸಮಯ ಸುಮಾರು ಸಂಜೆ 4:50 ಗಂಟೆಗೆ ಅಂಬಲಪಾಡಿ ಗ್ರಾಮದ ಅಭಿನಂಧನಾ ಪೆಟ್ರೋಲ್ ಬಂಕ್‌‌ಗಿಂತ ಸ್ವಲ್ಪ ಹಿಂದೆ ರಾಹೆ-66 ನೇ ಸಾರ್ವಜನಿಕ ರಸ್ತೆಯಲ್ಲಿ ಅಂಬಲಪಾಡಿ ಕಡೆಯಿಂದ ಕರಾವಳಿ ಕಡೆಗೆ  KA20EW3131  ನೇ ಸ್ಕೂಟರ್ ಸವಾರ ರಾಹೀಲ್ ಅನ್ವರ್ ರವರು ತಾನು ಸವಾರಿ ಮಾಡುತ್ತಿದ್ದ ಸ್ಕೂಟರ್‌ನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಯಾವುದೇ ಸೂಚನೆಯನ್ನು ನೀಡದೇ ಏಕಾಏಕಿಯಾಗಿ ಒಮ್ಮಲೇ ಸರ್ವಿಸ್ ರಸ್ತೆಗೆ ಬಂದಿದ್ದರಿಂದ ಕರಾವಳಿ ಕಡೆಯಿಂದ ಅಂಬಲಪಾಡಿಗೆ ಸರ್ವಿಸ್ ರಸ್ತೆಯಲ್ಲಿ ಮೋಟಾರ್ ಸೈಕಲ್‌ನಲ್ಲಿ ಸವಾರಿ ಮಾಡಿಕೊಂಡು ಬರುತ್ತಿದ್ದ ಪಿರ್ಯಾಧಿದಾರರಿಗೆ ಮುಖಾಮುಖಿ ಡಿಕ್ಕಿ ಹೊಡೆದನು. ಪರಿಣಾಮ ಪಿರ್ಯಾದಿದಾರರು ಮೊಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಎಡಕೈಯ ಮೊಣಗಂಟಿನ ಕೆಳಗೆ ಮೂಳೆಮುರಿತದ ಜಖಂ ಆಗಿದ್ದು, ಅಲ್ಲದೇ ಬಲಕಾಲಿನ ಪಾದದ ಮೇಲೆ ತರಚಿದ ರಕ್ತಗಾಯ ಆಗಿರುತ್ತದೆ. ಅಲ್ಲದೇ ಆರೋಪಿ ಸ್ಕೂಟರ್ ಸವಾರನಿಗೆ ಕೂಡಾ ಸಣ್ಣಪುಟ್ಟ ಗಾಯವಾಗಿರುತ್ತದೆ. ಅಲ್ಲದೇ ಪಿರ್ಯಾಧಿದಾರರು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಠಾಣೆ  ಅಪರಾಧ ಕ್ರಮಾಂಕ 85/2022 ಕಲಂ: 279, 337,338 ಐ.ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಮಣಿಪಾಲ: ಪಿರ್ಯಾದಿ ಡಾ. ಅಕ್ಷತಾ ರಾವ್‌ ಪ್ರಾಯ :(29), ಗಂಡ: ಕೀರ್ತನ್‌ ಉಪಾಧ್ಯ, ವಾಸ: 7-143 , ಕೆ1, ಶ್ರೀ ರಕ್ಷಾ , ಮಹಾಲಿಂಗೇಶ್ವರ ದೇವಸ್ಥಾನ ರಸ್ತೆ,ಪರ್ಕಳ   ಉಡುಪಿ ಜಿಲ್ಲೆ.ಇವರು ದಿನಾಂಕ: 10.07.2022 ರಂದು ತನ್ನ  ಕೆಎ 20 ಎಂಎ 8686 ನೇ ಕಾರನ್ನು ಉಡುಪಿಯಿಂದ ಮಣಿಪಾಲ ಕಡೆಗೆ ಚಲಾಯಿಸಿಕೊಂಡು ಬರುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 9:15 ಗಂಟೆಗೆ ಇಂದ್ರಾಳಿ ಬ್ರಿಡ್ಜ್‌ ಸಮೀಪ  ಕೆಸ್‌ಆರ್‌ಟಿಸಿ ಬಸ್‌ನ ಚಾಲಕ ತನ್ನ ಕೆಎ 17 ಎಫ್‌ 1843 ನೇ ಬಸ್‌ನ್ನು ಯಾವುದೇ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೇ ನೀಡದೇ ಬಸ್‌ನ್ನು ಒಮ್ಮೇಲೆ ಬಲಭಾಗಕ್ಕೆ ತಿರುಗಿಸಿದ ಪರಿಣಾಮ ಬಸ್‌ನ ಬಲಭಾಗದ ಹಿಂಭಾಗ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿನ ಎಡ ಭಾಗಕ್ಕೆ ತಾಗಿ ಎದುರುಗಡೆ ಜಖಂಗೊಂಡಿರುತ್ತದೆ . ಈ ಬಗ್ಗೆ ಮಣಿಪಾಲ ಠಾಣೆ,  ಅಪರಾಧ ಕ್ರಮಾಂಕ  190/2022  ಕಲಂ: 279 ಐಪಿಸಿ ಮತ್ತು 134(ಬಿ) ಜೊತೆಗೆ 187 ಐ.ಎಂ.ವಿ ಕಾಯಿದೆ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಶಂಕರನಾರಾಯಣ: ಪಿರ್ಯಾದಿ ಶ್ರೀಮತಿ ಶೋಭಾ ಪ್ರಾಯ (29) ಗಂಡ:ಜಯರಾಮ ವಾಸ:ಕೌಲಾಳಿ ಶಂಕರನಾರಾಯಣ ಗ್ರಾಮ ಇವರ ಗಂಡ ಜಯರಾಮ ಪ್ರಾಯ 30 ವರ್ಷ ಎಂಬುವರು  ದಿನಾಂಕ 16/10/2022 ರಂದು ರಾತ್ರಿ ಊಟ ಮಾಡಿ 22:35ಗಂಟೆಗೆ ಪಿರ್ಯಾದಿದಾರರ ಜೊತೆ ಮೊಬೈಲ್ ನಲ್ಲಿ ಲೂಡ ಆಡುತ್ತಾ ಕುಳಿತುಕೊಂಡಿದ್ದವರು ಒಮ್ಮೆಲೆ ಅಡ್ಡಬಿದ್ದವರನ್ನು ಚಿಕಿತ್ಸೆಯ ಬಗ್ಗೆ 108 ವಾಹನದಲ್ಲಿ ಶಂಕರನಾರಾಯಣದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ವೈದ್ಯರು ತನ್ನ ಗಂಡ  ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್‌ ನಂಬ್ರ 34/2022 ,ಕಲಂ:174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಮಣಿಪಾಲ: ಪಿರ್ಯಾದಿ ಶಬ್ಬೀರ್‌ ಹುಸೈನ್‌ ಪ್ರಾಯ:60 ವರ್ಷ, ತಂದೆ: ಮುಮ್ತಾಜ್‌‌, ವಾಸ: 151, ದೌಡ್‌ ಕಂಪೌಂಡ್‌, ಶಾಂತಿ ನಗರ, ನಾಗ್ಪುರ ಸಿಟಿ, ಮಹಾರಾಷ್ಟ್ರ, ಇವರ ಮಗಳು ಝಹರಾ ಶಬ್ಬೀರ್‌ ಹುಸೈನ್‌ (24) ರವರು ಸ್ಕೂಲ್‌ ಆಫ್‌ ಲೈಸಪ್‌ ಸೈನ್ಸ್‌ ಕಾಲೇಜಿನ ವಿದ್ಯಾರ್ಥಿನಿಯಾಗಿರುತ್ತಾರೆ. ಝಹರಾ ರವರು ದಿನಾಂಕ: 24.09.2022 ರಂದು 00:15 ಗಂಟೆಗೆ ಮಣಿಪಾಲ ಎಂಐಟಿ ರಸ್ತೆಯಲ್ಲಿ ಮೋಟಾರ್‌ ಸೈಕಲ್‌ನಿಂದ ಬಿದ್ದು ಗಾಯಗೊಂಡು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ 7 ದಿನ ಇದ್ದು ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುತ್ತಾರೆ. ಆ ಬಳಿಕ ಕಾಲೇಜಿನ ಪರೀಕ್ಷೆ ಬರೆದು  ಸಂಪೂರ್ಣ ಚೇತರಿಸಿಕೊಂಡಿರುತ್ತಾರೆ. ಅವರಿಗೆ ಚಿಕ್ಕಂದಿನಿಂದ ಸಕ್ಕರೆ ಖಾಯಿಲೆಯಿದ್ದು ಪ್ರತೀ ದಿನ ಇನ್ಸುಲಿನ್‌ ತೆಗೆದುಕೊಳ್ಳುತ್ತಿದ್ದರು , ದಿನಾಂಕ:16.10.2022 ರಂದು ಬೆಳಿಗ್ಗೆ 10:45 ಗಂಟೆಗೆ ಅವರು ವಾಸವಿರುವ ನ್ಯೂ ಮಾರ್ಕ್ ಅಪಾರ್ಟ್ ಮೆಂಟ್‌ನಲ್ಲಿ ಅವರ ಕೋಣೆಯಲ್ಲಿ ಅಸ್ವಸ್ಥಗೊಂಡು ಮಲಗಿದ್ದವರನ್ನು ಅವರ ಸ್ನೇಹಿತರಾದ ಖುಷ್ಬೂ ಮತ್ತು ಇತರರು  ಆ್ಯಂಬುಲೆನ್ಸ್‌ ನಲ್ಲಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಬೆಳಿಗ್ಗೆ 11:20 ಗಂಟೆಗೆ ಕರೆ ತಂದಾಗ ವೈದ್ಯರು ಪರೀಕ್ಷಿಸಿ ಝಹರಾ ಶಬ್ಬೀರ್‌ ಹುಸೈನ್‌ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್‌‌ ನಂಬ್ರ 38/2022  ಕಲಂ: 174 ಸಿ ಆರ್ ಪಿಸಿ.ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕುಂದಾಪುರ:  ಪಿರ್ಯಾದಿ ರಾಜು ಮೊಗವೀರ, (56) ತಂದೆ: ದಿ. ಚಕ್ರಿ ಮೊಗವೀರ, ವಾಸ: ಮಂಜುಳ ನಿಲಯ, ಸೌಕೂರು ಕುದ್ರು, ಗುಲ್ವಾಡಿ ಗ್ರಾಮ ಇವರ  ಮಗ ಸೂರಜ್‌ (20)  ರವರಿಗೆ ತಲೆಯ ನರದ ಸಮಸ್ಯೆಯಿಂದ  ಬಳಲುತ್ತಿದ್ದವರಿಗೆ 4 ವರ್ಷ ಪ್ರಾಯದಲ್ಲಿ ಆಪರೇಶನ್‌ ಮಾಡಿದ್ದು ತದನಂತರ ಸೂರಜ್‌ರವರು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು ಯಾರ ಮಾತನ್ನು ಕೇಳದೇ ತನ್ನಷ್ಟಕ್ಕೆ ಇರುತ್ತಿದ್ದವನು ಸಣ್ಣ ಸಣ್ಣ ವಿಷಯಕ್ಕೆ ಕೋಪ ಮಾಡಿಕೊಂಡು ತನ್ನ ರೂಮ್‌ನ ಕೋಣೆಗೆ ಹೋಗಿ ಬಾಗಿಲ ಚಿಲಕ ಹಾಕಿಕೊಂಡು ಕೂರುತ್ತಿದ್ದು ಸ್ವಲ್ಪ ಸಮಯದ ನಂತರ ಹೊರಕ್ಕೆ ಬರುತ್ತಿದ್ದನು. ದಿನಾಂಕ 16.10.2022 ರಂದು 15:45 ಗಂಟೆಗೆ ಸೂರಜ್‌ನು ರೂಮ್‌ಗೆ ಹೋಗಿ ಬಾಗಿಲು ಹಾಕಿಕೊಂಡಿದ್ದು 18:00 ಗಂಟೆಯಾದರೂ ಹೊರಗೆ ಬಾರದೇ ಇದ್ದು ಪಿರ್ಯಾದಿದಾರರು ಹಾಗೂ ಪಿರ್ಯಾದಿದಾರರ ಮನೆಯವರು ಎಷ್ಟೆ ಬಾಗಿಲು ಬಡಿದರೂ ತೆಗೆಯದೇ ಇದ್ದು ನಂತರ ಕಿಟಕಿಯಲ್ಲಿ ನೋಡಿದಾಗ ಸೂರಜ್‌ನು ಮನೆಯ ಸ್ಲಾಬ್‌ನ ಹುಕ್ಕಿಗೆ ತೆಳುವಾದ ಬೆಡ್‌ಶೀಟ್‌ನ್ನು ಕಟ್ಟಿ ಅದರಿಂದ ನೇಣು ಬಿಗಿದು ಕೊಂಡಿರುವುದು ಕಂಡು ಬಂದಿದ್ದು ನಂತರ ಪಿರ್ಯಾದಿದಾರರು ಹಾಗೂ ಮನೆಯವರು ಮನೆಯ ಚಿಲಕವನ್ನು ಒಡೆದು ಒಳಕ್ಕೆ ಹೋಗಿ ಬೆಡ್‌ಶೀಟ್‌‌ನ್ನು ತುಂಡರಿಸಿ ನೋಡಿದಾಗ ಸೂರಜ್‌ನು ಮೃತಪಟ್ಟಿರುವುದಾಗಿದೆ.  ಈ ಬಗ್ಗೆಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ  ಯು.ಡಿ.ಆರ್. ನಂಬ್ರ 28/2022 ಕಲಂ 174 CRPC  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 17-10-2022 06:38 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080